ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವೇ ನವಜಾತ ಹೆಣ್ಣುಮಗುವೊಂದನ್ನು ಪೊದೆಗೆ ಎಸೆದಿರುವ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಡೋರ್ನಕಲ್‌ನ ಬುರ್ಗುಪಹಾದ್ ಗ್ರಾಮದಲ್ಲಿ ನಡೆದಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಆ ಮಗುವಿನ ಜೀವ ಉಳಿದಿದೆ.
ಈಗ ಮಗುವಿಗೆ ಡೋರ್ನಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಡೋರ್ನಕಲ್ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ವಿ ಭದ್ರಿ ನಾಯಕ್, “ಪೊದೆಯಲ್ಲಿ ಪತ್ತೆಯಾಗುವ ಕೆಲವೇ ಗಂಟೆಗಳ ಮೊದಲು ಈ ಹೆಣ್ಣು ಮಗು ಜನಿಸಿದೆ. ಮಗುವಿನ ಕುಟುಂಬವು ಆ ಮಗುವನ್ನು ಪೊದೆಯಲ್ಲಿ ಬಿಟ್ಟು ಓಡಿಹೋಗಿರಬೇಕು ಎಂದು ಶಂಕಿಸಲಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಮಗೆ ಮಹಿಳೆಯರ ಬಗ್ಗೆ ಹೆಚ್ಚು ಗೌರವವಿದೆ: ವಿವಾದಾತ್ಮಕ ಹೇಳಿಕೆಯ ನಂತರ ಸ್ಪಷ್ಟನೆ ನೀಡಿದ ಸುಪ್ರೀಂ
ಮಗುವಿನ ಹೆತ್ತವರನ್ನು ಇನ್ನೂ ಪತ್ತೆಹಚ್ಚಿಲ್ಲ. ಆದರೆ ಮಗು ಡೋರ್ನಕಲ್ ನಲ್ಲಿ ಜನಿಸಿರಬೇಕು ಎನಿಸುತ್ತಿದೆ. ಹೆಣ್ಣು ಮಗುವಾಗಿರುವುದರಿಂದ ಬಹುಶಃ ಅದನ್ನು ಎಸೆಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ, ಪೊದೆಯಿಂದ ಮಗು ಅಳುತ್ತಿರುವ ಶಬ್ದವನ್ನು ಕೇಳಿದ ಗ್ರಾಮಸ್ಥರು ಮಗುವನ್ನು ರಕ್ಷಿಸಿದ್ದಾರೆ. ನಂತರ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶಿಶು ಸಹಾಯವಾಣಿಗೆ ತಿಳಿಸಿದರು. ಶಿಶು ಸಹಾಯವಾಣಿ ಅಧಿಕಾರಿಗಳು ಬಂದು ಮಗವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈಗ ಮಗು ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳ ಆರೈಕೆಯಲ್ಲಿದೆ.
ಇದನ್ನೂ ಓದಿ: Karnataka Budget-2021 | ರಾಜ್ಯದ ಸಾಲ 3 ಲಕ್ಷ ಕೋಟಿ; 2.5 ಲಕ್ಷ ಕೋಟಿ…


