ಪಶ್ಚಿಮ ಬಂಗಾಳದಲ್ಲಿ ಒಂದು ಪ್ರಬಲ ಲೋಕಲ್ ಮುಖವಿಲ್ಲದೇ ಪರದಾಡುತ್ತಿರುವ ಬಿಜೆಪಿ ಕೊನೆಗೂ ‘ಕೋಬ್ರಾ’ ಒಂದನ್ನು ಕ್ಯಾಚ್ ಮಾಡಿದೆ. ‘ನಾನು ಪಕ್ಕಾ ಕೋಬ್ರಾ. ಒಂದ್ಸಲ ಕಚ್ಚಿದರೆ ಅಷ್ಟೇ, ಫಿನಿಷ್’ ಎಂದು ರವಿವಾರ ಬಹಿರಂಗ ವೇದಿಕೆಯಲ್ಲಿ ಹೇಳಿದ ಪುರಾತನ ನಟ ಮಿಥುನ್ ಚಕ್ರವರ್ತಿ ಈಗ ಬಿಜೆಪಿ ಪಾಲಿಗೆ ಸ್ಟಾರ್ ಪ್ರಚಾರಕ ಆಗಲಿದ್ದಾರೆ.

ಬಿಸಿಸಿಐ ಅಧ್ಯಕ್ಷ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯನ್ನು ಕ್ಯಾಚ್ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡಿ ಸೋತ ನಂತರ ಕೊನೆಗೂ ಒಂದು ಪುರಾತನ ಕೋಬ್ರಾ ಹಿಡಿದುಕೊಂಡು ಬಿಜೆಪಿ ಶೋ ಮಾಡುತ್ತಿದೆ.

‘ಐ ಯಾಮ್ ಎ ಡಿಸ್ಕೋ ಡ್ಯಾನ್ಸರ್’ ಎಂದು ಬಾಲಿವುಡ್‌ಗೆ ಬಂದ ಮಿಥುನ್ ಚಕ್ರವರ್ತಿ ನಂತರ ಹೊಡಿ-ಬಡಿ ಕಥಾನಕದ ಎರಡನೇ ದರ್ಜೆ ಸಿನಿಮಾಗಳಿಗಷ್ಟೇ ಸಿಮೀತವಾದರು. ಬಂಗಾಲಿ ಭಾಷೆ ಚಿತ್ರವೊಂದರ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಮಿಥುನ್, ಬಾಲಿವುಡ್‌ನಲ್ಲಿ ಚಿರಕಾಲ ನೆನಪಿನಲ್ಲಿಡುವ ನಟನಾಗಿಯೇನೂ ಬೆಳೆಯಲಿಲ್ಲ.

ಹದಿಹರೆಯದಲ್ಲಿ ನಕ್ಸಲಿಸಂ ಪರ ಒಲವು… ನಂತರ ಸಿಪಿಎಂ ನಂಟು… ಆಮೇಲೆ ಟಿಎಂಸಿ ಸ್ನೇಹ. ಟಿಎಂಸಿಯಿಂದ ರಾಜ್ಯಸಭೆ ಸದಸ್ಯರಾದರು. ಆದರೆ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಹೆಸರು ಕೇಳಿ ಬಂದ ನಂತರ ಎರಡೇ ವರ್ಷಕ್ಕೆ ರಾಜಿನಾಮೆ ನೀಡಿದರು.

ಈಗ ‘ಕೋಬ್ರಾ’ ಕಮಲ ಮುಡಿಗೇರಿಸಿಕೊಂಡಿದೆ. ‘ಏಕ್ ಛೊಬೊಲೆ ಛೋಬಿ’ (ಒಮ್ಮೆ ಕಚ್ಚಿದರೆ ನೀವ್ ಫೋಟೊ ಅಷ್ಟೇ) ಎಂಬ ಹೊಸ ಡೈಲಾಗ್ ಅನ್ನು ಮಿಥುನ್ ಉದುರಿಸುತ್ತಿದ್ದಾರೆ. ಇದಕ್ಕೆ ಸಾಕಷ್ಟು ವ್ಯಂಗ್ಯ ಮಾಡಿರುವ ನೆಟ್ಟಿಗರು, ವಿಷ ಕಕ್ಕುವ ಪಾರ್ಟಿಯಲ್ಲಿ ಕೋಬ್ರಾ ಇರುವುದು ತಪ್ಪಲ್ಲ ಬಿಡಿ ಎಂದಿದ್ದಾರೆ.

2016 ರ ಅಸೆಂಬ್ಲಿ ಚುನಾವಣೆಗಳಿಗಿಂತ ಭಿನ್ನವಾಗಿ, ಈ ಬಾರಿ ಬಿಜೆಪಿ ಸಾಧ್ಯವಾದಷ್ಟು ಪ್ರಸಿದ್ಧ ವ್ಯಕ್ತಿಗಳ, ವಿಶೇಷವಾಗಿ ಬಂಗಾಳಿ ಸಿನಿಮಾ ಮಂದಿಯ ಹಿಂದೆ ಬಿದ್ದಿದೆ. ರುದ್ರಾನಿಲ್ ಘೋಷ್, ಯಶ್ ದಾಸ್‌ಗುಪ್ತಾ, ಹಿರಾನ್ ಚಟರ್ಜಿ, ಪಾಯೆಲ್ ಸರ್ಕಾರ್, ಶ್ರಬಂತಿ ಚಟರ್ಜಿಯಿಂದ ರಾಜ್ಯದ ದೂರದರ್ಶನ ಉದ್ಯಮದ ಜನಪ್ರಿಯ ನಟರನ್ನು ಅದು ಸೇರಿಸಿಕೊಂಡಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಬಾಂಗ್ಲಾದೇಶದ ನಟ ಫಿರ್ದೌಸ್ ಕೂಡ ಟಿಎಂಸಿ ಪರ ಪ್ರಚಾರ ನಡೆಸಿದ್ದರು. ಈಗ ಮಿಥುನ್ ಚಕ್ರವರ್ತಿ ಬಿಜೆಪಿಯ ರ‍್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾರಿ ಜನಸಂದಣಿಯನ್ನು ಪಡೆಯುವ ನಿರೀಕ್ಷೆಯಿದೆ. ಆದರೆ, ಆರಂಭದಲ್ಲೇ ಅವರು ಕೋಬ್ರಾ ತರಹ ವಿಷ ಕಾರು ಮೂಲಕ ಅಡ್ಡ ದಾರಿ ತುಳಿದಂತಿದೆ. ಮಮತಾ ಎದುರು ಕೋಬ್ರಾ ಆಟ ಅಷ್ಟಕ್ಕಷ್ಟೇ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.


ಇದನ್ನೂ ಓದಿ: ರಾಮ ಮಂದಿರಕ್ಕೆ ದೇಣಿಗೆ ನೀಡಲು ನಿರಾಕರಣೆ: ಶಿಕ್ಷಕನನ್ನೇ ಶಾಲೆಯಿಂದ ಹೊರಹಾಕಿದ ಆಡಳಿತ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮಲ್ಲನಗೌಡರ್‌ ಪಿ.ಕೆ
+ posts

2 COMMENTS

  1. ಸಮಾಜದಲ್ಲಿ ಶಾಂತಿ ಹಾಳು ಮಾಡಲು BJP ಗೆ ಇಂತಹ ಕೋಬ್ರಾ ಗಳೇ ಬೇಕಾಗಿರುವುದು…
    ಸಮಾಜ ಘಾತುಕ BJP…

LEAVE A REPLY

Please enter your comment!
Please enter your name here