Homeಮುಖಪುಟಕೊರೋನವನ್ನಾದರೂ ಓಡಿಸಬಹುದು, ಈ ಅಸ್ಪೃಶ್ಯತೆಯನ್ನು ಓಡಿಸೋಕಾಗಲ್ಲ: ಶಕುಂತಲಾ ಕೊರಗ ನೇಜಾರ್

ಕೊರೋನವನ್ನಾದರೂ ಓಡಿಸಬಹುದು, ಈ ಅಸ್ಪೃಶ್ಯತೆಯನ್ನು ಓಡಿಸೋಕಾಗಲ್ಲ: ಶಕುಂತಲಾ ಕೊರಗ ನೇಜಾರ್

ಮೂರು ದಶಕಗಳ ಕಾಲ ಕೊರಗರ ಸ್ವಾಭಿಮಾನದ ಬದುಕಿಗಾಗಿ ದುಡಿದ ಮತ್ತು 2019ರ ವಿಶ್ವಸಂಸ್ಥೆ ಹ್ಯಾಬಿಟ್ಯಾಟ್ ಪ್ರಶಸ್ತಿ’ಯನ್ನು ಸ್ವೀಕರಿಸಿದ ಶಕುಂತಲಾ ಕೊರಗ ನೇಜಾರ್‌ರವರ ಮಾತುಗಳು.

- Advertisement -
- Advertisement -

ಎಲೆಮರೆ-30

  • ಅರುಣ್ ಜೋಳದಕೂಡ್ಲಿಗಿ.

ಫೆಬ್ರವರಿ 11, 2020 ರಂದು ಯುನೈಟೆಡ್ ಅರಬ್ ಎಮಿರೈಟ್ಸ್‌ನ ರಾಜಧಾನಿಯಾದ ಅರೇಬಿಯನ್ ಧ್ವೀಪವೊಂದರಲ್ಲಿರುವ ಅಬುದಾಬಿಯಲ್ಲಿ ನಡೆದ ವಿಶ್ವಸಂಸ್ಥೆಯ ಆಯೋಜನೆಯ ವರ್ಣರಂಜಿತ ಕಾರ್ಯಕ್ರಮದಲ್ಲಿ ಉಡುಪಿಯ ನೇಜಾರದ ಕೊರಗ ಸಮುದಾಯದ ಶಕುಂತಲಾ ಅವರು `2019ರ ವಿಶ್ವಸಂಸ್ಥೆ ಹ್ಯಾಬಿಟ್ಯಾಟ್ ಪ್ರಶಸ್ತಿ’ಯನ್ನು ಸ್ವೀಕರಿಸಿದರು. ಈ ಇದು ಕೊರಗ ಸಮುದಾಯದ ಇತಿಹಾಸದಲ್ಲಿ ಒಂದು ಮಹತ್ವದ ದಿನವಾಗಿ ದಾಖಲಾಯಿತು. ಕಾರಣ ಮೊದಲ ಬಾರಿಗೆ ಕೊರಗ ಸಮುದಾಯದ ಮಹಿಳೆಯೊಬ್ಬರು ವಿದೇಶಕ್ಕೆ ತೆರಳಿ ಇಂತಹದ್ದೊಂದು ಅಂತಾರಾಷ್ಟ್ರೀಯ ಪ್ರಶಸ್ತಿಯೊಂದನ್ನು ಸ್ವೀಕರಿಸಿದರು. ಈ ಪ್ರಶಸ್ತಿಯ ಜಾಡು ಹಿಡಿದು ಹಿಂದಕ್ಕೆ ನಡೆದರೆ 1987 ರಿಂದ ಕೊರಗ ಸಮುದಾಯದ ಅಭಿವೃದ್ಧಿಗಾಗಿ ದುಡಿದ ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆಯು ಕೊರಗ ಸಮುದಾಯದಲ್ಲಿ ಮೂಡಿಸಿದ ಸ್ವಾಭಿಮಾನದ ಕಥನವು ಬಿಚ್ಚಿಕೊಳ್ಳುತ್ತದೆ.

ವಿಶ್ವಸಂಸ್ಥೆಯ ಹ್ಯಾಬಿಟ್ಯಾಟ್ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಹಾದುಬರುವುದು ಅಷ್ಟು ಸುಲಭವಲ್ಲ. 195 ದೇಶಗಳ 3000 ಸ್ವಯಂ ಸೇವಾ ಸಂಸ್ಥೆಗಳು ಈ ಪ್ರಶಸ್ತಿಗೆ ಪೈಪೋಟಿ ನಡೆಸಿದ್ದವು. ಅಂತಿಮ ಸುತ್ತಿಗೆ ಆಯ್ಕೆಯಾದ ಹತ್ತು ಸಂಸ್ಥೆಗಳ ಕಾರ್ಯಗಳ ಬಗ್ಗೆ ಸ್ವತಃ ವಿಶ್ವಸಂಸ್ಥೆಯ ಪ್ರತಿನಿಧಿಗಳು ಭೇಟಿನೀಡಿ ಜನರೊಟ್ಟಿಗೆ ಮಾತಾಡಿ, ಸುಧಾರಣ ಕೆಲಸಗಳನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ಈ ವರದಿಯನ್ನು ಆಧರಿಸಿ ಅಂತಿಮವಾಗಿ ನಾಲ್ಕು ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಜಾಗತಿಕ ದಕ್ಷಿಣ ವಿಭಾಗದಿಂದ `ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆ’ಗೆ ಗೋಲ್ಡನ್ ಪ್ರಶಸ್ತಿ ಲಭಿಸಿತು. ಭಾರತಕ್ಕೆ ಈತನಕ ನಾಲ್ಕು ಬಾರಿ ಮಾತ್ರ ವಿಶ್ವಸಂಸ್ಥೆಯ ಹ್ಯಾಬಿಟ್ಯಾಟ್ ಪ್ರಶಸ್ತಿ ಬಂದಿದೆ. ವಿಶೇಷವೆಂದರೆ ಈ ಪ್ರಶಸ್ತಿ ಕರ್ನಾಟಕಕ್ಕೆ ಸಿಕ್ಕಿರುವುದು ಇದೇ ಮೊದಲು.

ಹಾಗಾದರೆ ಇಂತಹ ಪ್ರಶಸ್ತಿಗೆ ಭಾಜನವಾದ ಸಂಸ್ಥೆಯ ಕೆಲಸವಾದರೂ ಎಂಥದು ಎನ್ನುವ ಪ್ರಶ್ನೆ ಎದುರು ನಿಲ್ಲುತ್ತದೆ. ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು 1987 ರಿಂದ ರಾಜ್ಯದ ಬುಡಕಟ್ಟು ಸಮುದಾಯಗಳ ಹಕ್ಕೊತ್ತಾಯಗಳ ಪರವಾಗಿ ಕೆಲಸ ಮಾಡುತ್ತಿದೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಚಿಕ್ಕ ಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಕೊರಗರು, ಹಲಸರು, ಗೊಂಡ, ಮಲೆಕುಡಿಯ, ಹಕ್ಕಿಪಿಕ್ಕಿ, ಜೇನುಕುರುಬ, ಬೆಟ್ಟಕುರುಬ, ಎರವ, ಸೋಲಿಗ, ಡೋಂಗ್ರಿ ಗರಾಸಿಯ ಈ ಸಮುದಾಯಗಳನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಜಾಗೃತಗೊಳಿಸಿ ಸ್ವಾಭಿಮಾನದ ಘನತೆಯ ಬದುಕು ರೂಪಿಸಲು ಶ್ರಮಿಸಿದ್ದಕ್ಕೆ ಈ ಪ್ರಶಸ್ತಿಯು ಲಭಿಸಿದೆ.

ಮುಖ್ಯವಾಗಿ ಸಮುದಾಯಗಳ ಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಹಕ್ಕು ಕೊಡಿಸುವುದು, ವಸತಿ ಸೌಲಭ್ಯ, ಜೀವನಾಧಾರಕ್ಕೆ ಮೂಲಭೂತ ಸೌಕರ್ಯ ಒದಗಿಸುವುದು, ಶಿಕ್ಷಣ, ಪೌಷ್ಠಿಕ ಆಹಾರ ಹಾಗೂ ಆರೋಗ್ಯದ ಸೌಲಭ್ಯಗಳನ್ನು ಕೊಡಿಸುವ ಕಾರ್ಯವನ್ನು ಈ ಪ್ರಶಸ್ತಿಯು ಎತ್ತಿ ಹಿಡಿದಿದೆ. ಈ ಕೆಲಸದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಜಂಟಿಯಾಗಿ ಶ್ರಮಿಸಿವೆ. ಇಂತಹ ಜಾಗೃತಿಯ ಚಳವಳಿಯಲ್ಲಿ ಬುಡಕಟ್ಟು ಸಮುದಾಯದ ಸದಸ್ಯರುಗಳು ತೊಡಗಿಸಿಕೊಂಡು ಮೇಲೆ ಬಂದವರಲ್ಲಿ ಶಕುಂತಲಾ ಕೊರಗ ನಜೇರು ಒಬ್ಬರು.

`ಬಾಲ್ಯದಿಂದಲೆ ಕಲ್ಯಾಣಪುರಿ ಗೊರಟ್ಟಿ ಆಸ್ಪತ್ರೆಯಲ್ಲಿ ನಾವು ಬೆಳೆದದ್ದು. ಅಮ್ಮ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದಳು. ಹಾಗಾಗಿ ಆಸ್ಪತ್ರೆಯಲ್ಲೆ ಒಂದು ರೂಮು ಕೊಟ್ಟಿದ್ರು. ಹಂಗಾಗಿ ನಾವು ಅಲ್ಲೇ ರ‍್ತಿದ್ವಿ. ಆಗ ಶಾಲೆಗೆ ಹೋಗೋದು ತೊಂದ್ರೆಯೇನು ಆಗಿರಲಿಲ್ಲ. ನಾವು ಒಂದು ದಿನ ಶಾಲೆಗೆ ಹೋಗದೆ ಇದ್ರೆ ಮನೇಲಿ ಯಾಕೆ ಶಾಲೆಗೆ ಹೋಗಿಲ್ಲ ಎಂದು ಕೇಳುತ್ತಿರಲಿಲ್ಲ. ಹಾಗಾಗಿ ಶಾಲೆಗೆ ಹೋಗೋಕೆ ಅಷ್ಟು ಆಸಕ್ತಿ ತೋರದೆ ಏಳನೆ ತರಗತಿ ಓದಿ ಅರ್ಧಕ್ಕೆ ಬಿಟ್ಟೆ. ನಂತರ ಬಾರ್ಕೂರ್ ನಲ್ಲಿ ಮದ್ವೆ ಆಯ್ತು. ಗಂಡ ಮೊದಲು ಉಡುಪಿಯಲ್ಲಿ ಸ್ಪೀಪರ್ ಕೆಲಸ ಮಾಡತಿದ್ರು. 1993 ರಲ್ಲಿ ದೊಡ್ಡ ಮಗನ ನಂತರ ಎರಡನೆ ಮಗ ಚಿಕ್ಕವನಿದ್ದ. ಆಗ ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆ ಬಾರ್ಕೂರಲ್ಲಿ ಸಂಘಟನೆ ಮಾಡೋಕೆ ಬಂದಿದ್ರು. ನಾವು ಮೊದಲು ಸಂಘಟನೆ ಅಂದ್ರೆ ಹೆರ‍್ತಾ ಇದ್ವಿ. ಗಂಡಸರನ್ನು ಮುಂದೆ ಬಿಟ್ಟು ನಾವು ಹಾಗೆ ಹಿಂದೆ ಇದ್ದುಕೊಂಡು ಸಂಘಟನೆಗೆ ಸೇರಿದೆ. ನಾವು ಒಂದೊAದು ಗ್ರಾಮದಲ್ಲಿ ಹತ್ ಮನೆ, ಇಪ್ಪತ್ ಮನೆಗಳಲ್ಲಿ ಮೀಟಿಂಗ್ ಮಾಡಿ ಅವರಲ್ಲಿ ಸಂಘಟನೆ ಮಾಡ್ತಾ ಇದ್ವಿ. ಮೊದಲು ಅಸ್ಪೃಶ್ಯತೆ ಹೋಗಲಾಡಿಸಲು ಜನರಲ್ಲಿ ಜಾಗೃತಿ ಮೂಡಿಸಿದೆವು’ ಎಂದು ಶಕುಂತಲಾ ಅವರು ತನ್ನ ಹೋರಾಟದ ಹಾದಿಯನ್ನು ನೆನೆಯುತ್ತಾರೆ.

ಶಕುಂತಲಾ ಅವರ ಗಂಡ ಸಂಜೀವ ಕೊರಗ ಕೂಡ ಕೊರಗ ಸಮುದಾಯದ ಜಾಗೃತಿಗಾಗಿ ಬದ್ಧತೆಯಿಂದ ಕೆಲಸ ಮಾಡಿದವರು. ಹಾಗಾಗಿ ಶಕುಂತಲಾ ಅವರ ಚಳವಳಿಯ ಸಾಂಗತ್ಯಕ್ಕೆ ಗಂಡ ಸಂಜೀವರು ಹೆಗಲು ಕೊಟ್ಟಿದ್ದಾರೆ. ಶಕುಂತಲಾ ಏಳನೆಯ ತರಗತಿಯ ತನಕ ಓದಿದರೂ, ಸಂಘಟನೆಗಳು ಕೊಟ್ಟ ಎಚ್ಚರದ ಪರಿಣಾಮ ಇಬ್ಬರು ಮಕ್ಕಳನ್ನು ಉತ್ತಮವಾಗಿ ಓದಿಸಿದ್ದಾರೆ. ದೊಡ್ಡ ಮಗ ಸಂದೀಪ್ ಫಿಸಿಕ್ಸ್ನಲ್ಲಿ ಎಂಎಸ್ಸಿ ಪದವಿ ಪಡೆದು ಈಗ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಉದ್ಯೋಗ ಮಾಡುತ್ತಿದ್ದರೆ, ಸಣ್ಣ ಮಗ ಸತೀಶ್ ಎಂಟೆಕ್ ಮಾಡಿ ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ದುಡಿಯುತ್ತಿದ್ದಾರೆ. ಇವರ ವಿದ್ಯಾಭ್ಯಾಸದ ಹಿಂದೆ ಶಕುಂತಲಾ ಮತ್ತು ಸಂಜೀವ್ ಅವರ ಅವಿರತ ಶ್ರಮವಿದೆ.

`ಶಕುಂತಲಾ ಸುಮಾರು 30 ವರ್ಷಗಳ ಕಾಲ ಕಲ್ಯಾಣಪುರಿ ಗೊರಟ್ಟಿ ಆಸ್ಪತ್ರೆಯಲ್ಲಿ ಆಯಾ ಕೆಲಸ ನಿರ್ವಹಿಸಿ ಈಗ ನಿವೃತ್ತಿ ಪಡೆದು ಪೂರ್ಣಕಾಲೀನ ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. 1990 ರಿಂದ ಶಕುಂತಲಾ ಅವರ ಕುಟುಂಬ ಕೊರಗರ ಚಳುವಳಿಯಲ್ಲಿ ತೊಡಗಿಸಿಕೊಂಡಿದೆ. ಬಹಳ ಮುಖ್ಯವಾಗಿ ಕೊರಗರ ಭೂಮಿ ಹೋರಾಟ, ಅಜಲು ನಿಶೇಧ ಕಾಯ್ದೆ ಬರುವುದಕ್ಕಾಗಿನ ಹೋರಾಟ, ಗುಣಮಟ್ಟದ ಪೌಷ್ಟಿಕ ಆಹಾರದ ಹೋರಾಟ, ಕುಡಿತ, ದುಶ್ಚಟಗಳ ವಿರುದ್ಧದ ಹೋರಾಟ, ಮಹಿಳೆಯರ ಸ್ವಾಭಿಮಾನದ ಚಳವಳಿ, ಶಿಕ್ಷಣ, ಆರೋಗ್ಯದ ಕೆಲಸಗಳಲ್ಲಿ ಶಕುಂತಲಾ ಮುಂಚೂಣಿಯಲ್ಲಿದ್ದರು’ ಎಂದು `ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆ’ಯ ಅಶೋಕ ಅವರು ಹೇಳುತ್ತಾರೆ.

`ನಾವು ಮೂವತ್ತು ವರ್ಷದಿಂದ ಸಂಘಟನೆಯಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಕೆಲಸ ಮಾಡಿದರೂ, ಇನ್ನೂ ಹಳ್ಳಿ ಕಡೆಗಳಲ್ಲಿ ಕೊರಗರನ್ನು ಅಸ್ಪೃಶ್ಯರನ್ನಾಗಿಯೇ ನೋಡಲಾಗುತ್ತಿದೆ. ಅಸ್ಪೃಶ್ಯತೆಯನ್ನು ಜನರು ಒಳ್ಳೆ ಮೈಂಡಲ್ಲಿ ಇಟ್ಕೊಂಡಿದಾರೆ. ಅದು ಹೇಗೆ ನಾಟಿದೆ ಅಂದರೆ ಈ ಕೊರೋನಾ ಬೇಕಾದರೆ ಓಡಿಸಬಹುದು. ಆದರೆ ಅಸ್ಪೃಶ್ಯತೆಯನ್ನು ಓಡಿಸೋಕೆ ಆಗಲ್ಲ. ಆದರೆ ಸಂಘಟನೆಯ ಆರಂಭಕ್ಕೂ ಮುನ್ನ ಮೂರು ದಶಕಗಳ ಹಿಂದಿನ ಕೊರಗರ ಬದುಕನ್ನು ಹೋಲಿಸಿಕೊಂಡರೆ ಸಂಘಟನೆಗಳ ಕೆಲಸದಿಂದ ತುಂಬಾ ಬದಲಾವಣೆಯಾಗಿದೆ. ಡ್ರಾಪ್‌ಔಟ್ ಆದ ಸಬಿತಾ ಎನ್ನುವ ಕೊರಗರ ಹುಡುಗಿಯೊಬ್ಬಳು ಆಶ್ರಮದ ಹಾಸ್ಟೆಲ್‌ನಲ್ಲಿ ಓದು ಮುಂದುವರಿಸಿ ಇಂದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದಾರೆ. ಹೀಗೆ ಸಂಘಟನೆಗಳು ಕೊರಗ ಸಮುದಾಯದಲ್ಲಿ ಜಾಗೃತಿ ಮೂಡಿಸಿವೆ. ಹತ್ತಾರು ಜನರು ಸೇರಿ ಈ ಸಂಘಟನೆಗಳ ಕೆಲಸದಲ್ಲಿ ದುಡಿದಿದ್ದೇವೆ, ಅದರಲ್ಲಿ ನನ್ನ ಸಣ್ಣ ಪಾಲಿದೆ. ನಾನು ಸಂಘಟನೆಯಲ್ಲಿದ್ದರೂ ಈತನಕ ಅಧ್ಯಕ್ಷೆ ಆಗಿರಲಿಲ್ಲ. ಎರಡು ವರ್ಷಕ್ಕೊಮ್ಮೆ ಸಂಘಟನೆಯ ಅಧ್ಯಕ್ಷಗಿರಿ ಬದಲಾಗೋದ್ರಿಂದ ಎಲ್ಲರ ಒತ್ತಾಯದ ಮೇರೆಗೆ ನಾನು ಅಧ್ಯಕ್ಷೆಯಾದೆ, ನಾನು ಅಧ್ಯಕ್ಷೆಯಾದ ಸಂದರ್ಭದಲ್ಲಿಯೇ ಇಂತಹದ್ದೊಂದು ದೊಡ್ಡ ಪ್ರಶಸ್ತಿ ಬಂದಿದೆ. ಅದು ಈತನಕದ ಎಲ್ಲರ ದುಡಿಮೆಗೆ ಸಿಕ್ಕ ಫಲ ಎಂದು ಶಕುಂತಲಾ ಅವರು ಹೇಳುತ್ತಾರೆ. ತಮ್ಮ ಹೋರಾಟ, ಕೊರಗರ ಬದುಕಿನಲ್ಲಾದ ಬದಲಾವಣೆಯ ಬಗ್ಗೆ ನನಗೆ ಅಷ್ಟು ಗೊತ್ತಾಗಲ್ಲ ಸರ್ ಎನ್ನುವ ಮುಗ್ಧತೆಯಲ್ಲಿಯೇ ಮಾತನಾಡುವ ಶಕುಂತಲಾ ಅವರು ಕೊರಗ ಸಮುದಾಯದ ಈಗಿನ ಯುವಜನತೆಗೆ ಮಾದರಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...