ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾದ ‘ಒಂದು ದೇಶ ಒಂದು ಚುನಾವಣೆ’ಯ ಎರಡು ಮಸೂದೆಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಸಂಸತ್ತಿನ ಜಂಟಿ ಸಮಿತಿಯ ಬಲವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಈಗಾಗಲೆ ವಿವಿಧ ಪಕ್ಷಗಳ 31 ಸಂಸದರ ಸಮಿತಿಯನ್ನು ರಚಿಸಲಾಗಿದ್ದು, ಹೆಚ್ಚಿನ ಪಕ್ಷಗಳಿಗೆ ಪ್ರಾತಿನಿಧ್ಯ ಒದಗುವಂತೆ ಸಮಿತಿಯ ಬಲವನ್ನು 39ಕ್ಕೆ ಏರಿಸಲಾಗುತ್ತದೆ ಎಂದು ವರದಿಯಾಗಿದೆ. ಒಂದು ದೇಶ ಒಂದು ಚುನಾವಣೆ
ಸರ್ಕಾರವು ಈಗ ಪ್ರಸ್ತಾಪಿಸಿರುವ ಲೋಕಸಭಾ ಸಂಸದರ ಪಟ್ಟಿಯಲ್ಲಿ ಶಿವಸೇನೆ (ಯುಬಿಟಿ), ಸಿಪಿಐ(ಎಂ) ಮತ್ತು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮತ್ತು ಸಮಾಜವಾದಿ ಪಕ್ಷಗಳ ತಲಾ ಒಬ್ಬ ಸದಸ್ಯರು, ಬಿಜೆಪಿಯ ಇಬ್ಬರು ಸದಸ್ಯರು ಇದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಶುಕ್ರವಾರದ ಸದನದ ವ್ಯವಹಾರಗಳ ಪಟ್ಟಿಯು, ಲೋಕಸಭೆಯ 27 ಸದಸ್ಯರು ಮತ್ತು ರಾಜ್ಯಸಭೆಯ 12 ಸದಸ್ಯರು ಸೇರಿದಂತೆ ಎರಡು ಮಸೂದೆಗಳನ್ನು ಜಂಟಿ ಸಮಿತಿಗೆ ಉಲ್ಲೇಖಿಸಲು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರ ಪ್ರಸ್ತಾಪವನ್ನು ಒಳಗೊಂಡಿದೆ.
ಬಿಜೆಪಿಯಿಂದ ಬೈಜಯಂತ್ ಪಾಂಡಾ ಮತ್ತು ಸಂಜಯ್ ಜೈಸ್ವಾಲ್, ಎಸ್‌ಪಿಯ ಛೋಟೇಲಾಲ್, ಶಿವಸೇನೆಯ (ಯುಬಿಟಿ) ಅನಿಲ್ ದೇಸಾಯಿ, ಎಲ್‌ಜೆಪಿಯ ಶಾಂಭವಿ ಮತ್ತು ಸಿಪಿಐ(ಎಂ)ನ ಕೆ. ರಾಧಾಕೃಷ್ಣನ್ ಸಮಿತಿಯ ಭಾಗವಾಗಲು ಪ್ರಸ್ತಾಪಿಸಲಾದ ಹೊಸ ಲೋಕಸಭಾ ಸಂಸದರಾಗಿದ್ದಾರೆ.
ಈ ಸಮಿತಿಯು ಎರಡು ಮಸೂದೆಗಳಾದ ‘ಒಂದು ದೇಶ ಒಂದು ಚುನಾವಣೆ’ (ONOE) ಮಸೂದೆಗಳನ್ನು ಪರಿಶೀಲಿಸುತ್ತದೆ. ಈ ಮಸೂದೆಯು ಸಂವಿಧಾನ ತಿದ್ದುಪಡಿಯನ್ನು ಬಯಸುತ್ತದೆ.
ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಮತ್ತು ಪಿಪಿ ಚೌಧರಿ, ಭರ್ತೃಹರಿ ಮಹತಾಬ್ ಮತ್ತು ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಮಿತಿಗೆ ಪ್ರಸ್ತಾಪಿಸಿದ ಲೋಕಸಭೆ ಸದಸ್ಯರಲ್ಲಿ ಸೇರಿದ್ದಾರೆ. ಲೋಕಸಭಾ ಸದಸ್ಯರ ಪೈಕಿ ಬಿಜೆಪಿಯ 12 ಮಂದಿ ಸೇರಿದಂತೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ 17 ಮಂದಿ ಇದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ ಟೇಕ್ ಹೋಮ್ ಪಡಿತರ ಯೋಜನೆ: 2018-21ರಿಂದ ₹428 ಕೋಟಿ ಅಕ್ರಮ
ಮಧ್ಯಪ್ರದೇಶ ಟೇಕ್ ಹೋಮ್ ಪಡಿತರ ಯೋಜನೆ: 2018-21ರಿಂದ ₹428 ಕೋಟಿ ಅಕ್ರಮ


