Homeಮುಖಪುಟಒಂದಿಬ್ಬರ ಅಹಂನಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ: ಕೇಂದ್ರದ ವಿರುದ್ಧ ಕಿಡಿಕಾರಿದ ಮೇಘಾಲಯ ರಾಜ್ಯಪಾಲ

ಒಂದಿಬ್ಬರ ಅಹಂನಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ: ಕೇಂದ್ರದ ವಿರುದ್ಧ ಕಿಡಿಕಾರಿದ ಮೇಘಾಲಯ ರಾಜ್ಯಪಾಲ

ದೆಹಲಿಯಲ್ಲಿ ಹೋರಾಡುತ್ತಿರುವ ರೈತರು ಖಾಲಿ ಕೈಯಲ್ಲಿ ಹಿಂದಿರುಗುವುದಿಲ್ಲ. ಅವರು ಹೋರಾಟದಲ್ಲಿ ಯಶಸ್ವಿಯಾಗಿಯೇ ಹಿಂದಿರುಗುತ್ತಾರೆ.

- Advertisement -
- Advertisement -

ಮತ್ತೆ ರೈತ ಹೋರಾಟವನ್ನು ಬೆಂಬಲಿಸಿ ಹೇಳಿಕೆ ನೀಡಿರುವ ಮೇಘಾಲಯ ರಾಜ್ಯಪಾಲರಾದ ಸತ್ಯಪಾಲ್ ಮಲ್ಲಿಕ್ “ನಾಯಿ ಕಚ್ಚಿ ಸತ್ತವರಿಗೂ ಸಂತಾಪ ಸೂಚಿಸುವವರಿಗೆ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿ ಮಡಿದ 600ಕ್ಕೂ ಹೆಚ್ಚು ರೈತರು ಕಾಣದಿರುವುದು ದುರಂತ” ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಜೈಪುರದಲ್ಲಿ ಜಾಟ್ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕೇಂದ್ರ ಸರ್ಕಾರದಲ್ಲಿ ಬಹಳಷ್ಟು ಮಂದಿ ರೈತರ ಪರವಾಗಿದ್ದಾರೆ. ಆದರೆ ಒಂದಿಬ್ಬರ ಅಹಂನಿಂದಾಗಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ” ಎಂದಿದ್ದಾರೆ.

ನನ್ನನ್ನು ರಾಜ್ಯಪಾಲ ಹುದ್ದೆಯಿಂದ ಕೆಳಗಿಳಿದರೂ ಯೋಚಿಸುವುದಿಲ್ಲ. ನಾನು ಸತ್ಯದ ಪರ ಮಾತನಾಡುತ್ತೇನೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ಸಿಖ್ ಸಮುದಾಯವನ್ನು ಎದುರು ಹಾಕಿಕೊಂಡಿರುವವರು ಇಂದಿರಾ ಗಾಂಧಿಯವರ ಹತ್ಯೆಯನ್ನು ಮರೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ದೆಹಲಿಯಲ್ಲಿ ಹೋರಾಡುತ್ತಿರುವ ರೈತರು ಖಾಲಿ ಕೈಯಲ್ಲಿ ಹಿಂದಿರುಗುವುದಿಲ್ಲ. ಅವರು ಹೋರಾಟದಲ್ಲಿ ಯಶಸ್ವಿಯಾಗಿಯೇ ಹಿಂದಿರುಗುತ್ತಾರೆ. ನಾನು ರೈತ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಅದಕ್ಕಾಗಿ ದೆಹಲಿ ನಾಯಕರು ನನ್ನನ್ನು ರಾಜ್ಯಪಾಲ ಹುದ್ದೆಯಿಂದ ಕೆಳಗಿಳಿಸಿದರೂ ಚಿಂತೆಯಿಲ್ಲ ಎಂದು ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ.

ರೈತ ಹೋರಾಟವು ಸೈನ್ಯದ ಮೇಲೂ ಭಾರೀ ಪ್ರಭಾವ ಬೀರಿದೆ. ರೈತರ ಮಕ್ಕಳು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅನ್ಯಾಯ ನಡೆದಾಗ ಒಂದು ದಿನ ಜನರು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಸರ್ಕಾರಕ್ಕೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್‌ರವರ ಹೆಲಿಕ್ಯಾಪ್ಟರ್‌ ಎಲ್ಲಿಯೂ ಇಳಿಯಲು ಬಿಡುತ್ತಿಲ್ಲ ಎಂದರೆ ರೈತರ ಪ್ರತಿರೋಧವನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಕನಿಷ್ಟ ಬೆಂಬಲ ಬೆಲೆ ಖಾತ್ರಿ ನೀಡುವ ಮೂಲಕ ರೈತರ ಸಮಸ್ಯೆಯನ್ನು ಬಗೆಹರಿಸಬಹುದು. ಕೃಷಿ ಕಾಯ್ದೆಗಳು ಸಂಸತ್ತಿನಲ್ಲಿ ಜಾರಿಯಾಗುವ ಮೊದಲೇ ಹರಿಯಾಣದಲ್ಲಿ ಅದಾನಿ ಗೌಡೋನ್‌ಗಳು ಸ್ಥಾಪನೆಯಾಗಿವೆ ಎಂದು ಅವರು ಈ ಕಾಯ್ದೆಗಳ ಅಪಾಯದ ಕುರಿತು ಮಾತನಾಡಿದ್ದಾರೆ.

ಸೆಂಟ್ರಲ್ ವಿಸ್ತಾ ಯೋಜನೆಯನ್ನು ವಿರೋಧಿಸಿದ ಅವರು, ದೇಶದಲ್ಲಿ ಶಿಕ್ಷಣದ ಕೊರತೆಯಿದೆ. ಹಾಗಾಗಿ ಹೊಸ ಸಂಸತ್ ಭವನ ನಿರ್ಮಿಸುವ ಬದಲು ವಿಶ್ವದರ್ಜೆಯ ಕಾಲೇಜುಗಳನ್ನು ಸ್ಥಾಪಿಸಿದರೆ ಉಪಯೋಗ ಎಂದು ಸಲಹೆ ನೀಡಿದ್ದಾರೆ.


ಇದನ್ನೂ ಓದಿ: ಆರ್‌ಎಸ್‌ಎಸ್‌, ಬಿಜೆಪಿಯಲ್ಲಿ ಭಾರೀ ಭ್ರಷ್ಟಾಚಾರ: ಮೇಘಾಲಯ ರಾಜ್ಯಪಾಲರ ಗಂಭೀರ ಆರೋಪ


ಜಮ್ಮು ಕಾಶ್ಮೀರ ಮತ್ತು ಗೋವಾದ ಮಾಜಿ ರಾಜ್ಯಪಾಲರೂ ಆಗಿರುವ ಸತ್ಯಪಾಲ್ ಮಲ್ಲಿಕ್ ಕಳೆದ ಒಂದು ವರ್ಷದಿಂದ ನಿರಂತರವಾಗಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ.

ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ಆಹಾರ ವಿತರಿಸುವ ವೇಳೆ ಕೋಟ್ಯಾಂತರ ರೂ ಗುಳುಂ ಮಾಡಿದ್ದಾರೆ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸತ್ಯ ಪಾಲ್ ಮಲ್ಲಿಕ್ ಆರೋಪಿಸಿದ್ದರು.

ನಾನು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲನಾಗಿದ್ದ ವೇಳೆ ಎರಡು ಕಡತಗಳು ನನ್ನ ಮುಂದೆ ಬಂದಿದ್ದವು. ಒಂದು ಮುಖೇಶ್ ಅಂಬಾನಿಗೆ ಸೇರಿದ್ದರೆ ಮತ್ತೊಂದು ಆರ್‌ಎಸ್‌ಎಸ್‌ ನಾಯಕನಿಗೆ ಸೇರಿತ್ತು. ಅದಕ್ಕೆ ಸಹಿ ಹಾಕಿದರೆ 300 ಕೋಟಿ ಲಂಚ ಕೊಡುವುದಾಗಿ ಆಮಿಷವೊಡ್ಡಿದ್ದರು. ಆದರೆ ನಾನು ಆ ಕೆಲಸ ಮಾಡಲಿಲ್ಲ ಬದಲಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ವಿಷಯ ತಿಳಿಸಿದ್ದೆ ಎಂದು ಮಲ್ಲಿಕ್ ಹೇಳಿದ್ದರು.


ಇದನ್ನೂ ಓದಿ: ‘ನನ್ನನ್ನು ಕಿತ್ತು ಹಾಕಿದರೂ ನಾನು ಮಾತನಾಡುತ್ತೇನೆ’-ರೈತರನ್ನು ಮತ್ತೆ ಬೆಂಬಲಿಸಿದ ಮೇಘಾಲಯ ರಾಜ್ಯಪಾಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...