HomeUncategorizedಇಸ್ರೇಲ್‌ ಯುದ್ಧ ಭೀಕರತೆ: ಮಕ್ಕಳ ಸ್ಮಶಾನವಾದ ಗಾಝಾ!

ಇಸ್ರೇಲ್‌ ಯುದ್ಧ ಭೀಕರತೆ: ಮಕ್ಕಳ ಸ್ಮಶಾನವಾದ ಗಾಝಾ!

- Advertisement -
- Advertisement -

ಇಸ್ರೇಲ್ ಬಾಂಬ್‌ ದಾಳಿಗೆ ಗಾಝಾದಲ್ಲಿ 24,00ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಹತ್ಯಾಕಾಂಡವನ್ನು ಇಸ್ರೇಲ್‌ ನಡೆಸಿದೆ. ಪದೇ ಪದೇ ಶಾಲೆಗಳನ್ನು, ನವಜಾತ ಶಿಶುಗಳ ಆರೈಕೆ ಕೇಂದ್ರಗಳನ್ನು ಕೇಂದ್ರೀಕರಿಸಿ ಇಸ್ರೇಲ್‌ ದಾಳಿ ನಡೆಸಿದ್ದು, ಈವರೆಗೆ 10,000ಕ್ಕೂ ಹೆಚ್ಚು ಪ್ಯಾಲೇಸ್ತೀನ್‌ನ ಅಮಾಯಕ ಮಕ್ಕಳು ಇಸ್ರೇಲ್‌ ದಾಳಿಯಿಂದ ಕೊಲ್ಲಲ್ಪಟ್ಟಿದ್ದಾರೆ.

ಯುರೋ-ಮೆಡ್ ಮಾನವ ಹಕ್ಕುಗಳ ಮಾನಿಟರ್ ಬಿಡುಗಡೆ ಮಾಡಿದ್ದ ವರದಿಯ ಪ್ರಕಾರ, ಇಸ್ರೇಲ್ 10,000 ಕ್ಕೂ ಹೆಚ್ಚು ಶಿಶುಗಳು ಮತ್ತು ಮಕ್ಕಳನ್ನು ಕೊಂದಿದೆ. ನೂರಾರು ಮಕ್ಕಳು ಪಾಳುಬಿದ್ದ ಕಟ್ಟಡಗಳ ಅವಶೇಷಗಳಡಿಯಲ್ಲಿ ಉಳಿದುಕೊಂಡಿರುವುದರಿಂದ ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ. ಸುಮಾರು 7,00,000 ಮಕ್ಕಳು ಇಸ್ರೇಲ್‌ನ ಗಾಝಾ ನರಮೇಧದಿಂದ ಪ್ರಭಾವಿತರಾಗಿದ್ದಾರೆ, ಇದರಲ್ಲಿ ಕೊಲ್ಲಲ್ಪಟ್ಟವರು, ಗಾಯಗೊಂಡವರು ಮತ್ತು ಆಂತರಿಕವಾಗಿ ಸ್ಥಳಾಂತರಗೊಂಡವರು ಸೇರಿದ್ದಾರೆ.

ಇಸ್ರೇಲ್‌ ದಾಳಿಯಲ್ಲಿ 18,000 ಪ್ಯಾಲೆಸ್ತೀನ್ ಮಕ್ಕಳು ಗಾಯಗೊಂಡಿದ್ದಾರೆ. ಇದರಲ್ಲಿ ಅನೇಕ ಮಕ್ಕಳು ಗಂಭೀರವಾಗಿದ್ದಾರೆ. ಡಜನ್‌ಗಟ್ಟಲೆ ಮಕ್ಕಳು ಅಂಗಾಂಗಳನ್ನು ಕಳೆದುಕೊಂಡಿದ್ದಾರೆ ಮತ್ತು ನೂರಾರು ಮ್ಕಕಳು ತಮ್ಮ ದೇಹದ ವಿವಿಧ ಭಾಗಗಳಿಗೆ ತೀವ್ರ ಸುಟ್ಟಗಾಯಗಳನ್ನು ಅನುಭವಿಸಿದ್ದಾರೆ. ಸ್ಥಳಾಂತರಗೊಂಡ ಮಕ್ಕಳಲ್ಲಿ 50 ಪ್ರತಿಶತದಷ್ಟು ಮಕ್ಕಳು ನಿರ್ಜಲೀಕರಣ, ಅಪೌಷ್ಟಿಕತೆ, ಉಸಿರಾಟ ಮತ್ತು ಚರ್ಮ ರೋಗಗಳು, ತೀವ್ರ ಶೀತದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ನವಜಾತ ಶಿಶುಗಳಿಗೆ ಲಸಿಕೆ ಸಿಗದೆ ಅಪಾಯದಲ್ಲಿದೆ.

ಗಾಝಾ ಪಟ್ಟಿಯಲ್ಲಿರುವ ಕನಿಷ್ಠ 25,000 ಮಕ್ಕಳು ಒಬ್ಬ ಅಥವಾ ಇಬ್ಬರ ಪೋಷಕರನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಮಕ್ಕಳು ಭವಿಷ್ಯವನ್ನು ಕಳೆದುಕೊಂಡಿದ್ದಾರೆ. ಗಾಝಾ ಪಟ್ಟಿಯಲ್ಲಿರುವ 217 ಶಾಲೆಗಳು ಇಸ್ರೇಲ್‌ ದಾಳಿಯ ಸಮಯದಲ್ಲಿ ಹಾನಿಗೊಳಗಾಗಿವೆ.

ಸೇವ್ ದಿ ಚಿಲ್ಡ್ರನ್ ಡೇಟಾ ಪ್ರಕಾರ, ಗಾಝಾದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಮಗುವನ್ನು ಕೊಲ್ಲಲಾಗುತ್ತಿದೆ. ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಯುನಿಸೆಫ್ ಪ್ರಾದೇಶಿಕ ನಿರ್ದೇಶಕ ಅಡೆಲೆ ಖೋಡ್ರ್ ಶನಿವಾರ ಹೇಳಿಕೆಯೊಂದರಲ್ಲಿ, ಗಾಝಾವು ಮಕ್ಕಳಿಗೆ ಪ್ರಪಂಚದಲ್ಲೇ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ. ವಿಶ್ವದೆಲ್ಲೆಡೆ ಮಕ್ಕಳು ಆಟವಾಡುತ್ತಿರುವಾಗ ಮತ್ತು ಶಾಲೆಗೆ ಹೋಗುತ್ತಿರುವಾಗ ಗಾಝಾ ಮಕ್ಕಳ ಅವಶೇಷಗಳ ರಾಶಿಯಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ.

ಅ.7ರಂದು ಯುದ್ಧ ಪ್ರಾರಂಭವಾದಾಗಿನಿಂದ ಸುಮಾರು ಒಂದು ಮಿಲಿಯನ್ ಮಕ್ಕಳನ್ನು ಈಗ ಬಲವಂತವಾಗಿ ಸ್ಥಳಾಂತರಿಸಲಾಗಿದೆ ಎಂದು UN ಮಕ್ಕಳ ಏಜೆನ್ಸಿಯ ಹೇಳಿದೆ. ನೀರು, ಆಹಾರ, ಅಥವಾ ರಕ್ಷಣೆಯಿಲ್ಲದೆ, ಉಸಿರಾಟದ ಸೋಂಕುಗಳು ಮತ್ತು ನೀರಿನಿಂದ ಹರಡುವ ರೋಗಗಳ ಅಪಾಯಗಳು ಹೆಚ್ಚಿದ್ದು, ಗಾಝಾ ಮಕ್ಕಳ ಸ್ಮಶಾನವಾಗಿದೆ ಎಂದು ಹೇಳಿದೆ.

ಪ್ಯಾಲೆಸ್ತೀನಿಯನ್‌ ನರಮೇಧವನ್ನು ಸಂಭ್ರಮಿಸಿ ಹಾಡು ಹಾಡಿದ್ದ ಇಸ್ರೇಲ್ ಮಕ್ಕಳು:

ನವೆಂಬರ್‌ನಲ್ಲಿ ಇಸ್ರೇಲ್‌ನ ಸಾರ್ವಜನಿಕ ಬ್ರಾಡ್‌ಕಾಸ್ಟರ್ ಕಾನ್, ತನ್ನ ಅಧಿಕೃತ ಎಕ್ಸ್‌ಲ್ಲಿನ ಪೋಸ್ಟ್‌ನಲ್ಲಿ  ಇಸ್ರೇಲ್‌ ಮಕ್ಕಳು ಗಾಝಾದಲ್ಲಿ ಪ್ಯಾಲೆಸ್ತೀನಿಯನ್ನರು ನರಮೇಧವನ್ನು ಆಚರಿಸುವ ಹಾಡನ್ನು ಹಾಡುವ ವೀಡಿಯೊವನ್ನು ಅಪ್‌ಲೋಡ್ ಮಾಡಿದೆ. ಟೀಕೆಗೆ ಒಳಗಾದ ಬಳಿಕ ನಂತರ ವೀಡಿಯೊ ಕ್ಲಿಪ್‌ನ್ನು ಅಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಿಂದ ವೀಡಿಯೊವನ್ನು ಅಳಿಸಿದ ನಂತರವೂ, ಹಾಡು ಚರ್ಚೆ ಮತ್ತು ವಿವಾದದ ವಿಷಯವಾಗಿ ಉಳಿದಿದೆ. ಒಂದು ವರ್ಷದೊಳಗೆ ಇಡೀ ಗಾಝಾದ ಜನರನ್ನು ನಿರ್ಮೂಲನೆ ಮಾಡುವ ಬಗ್ಗೆ ಮಕ್ಕಳು ಸಂತೋಷದಿಂದ ಹಾಡುವುದನ್ನು ನೋಡಿ ಪ್ರಪಂಚದಾದ್ಯಂತದ ಅನೇಕರು ಆಘಾತಕ್ಕೊಳಗಾಗಿದ್ದರು.

ರಾಫಾದಲ್ಲಿ ನಾಗರಿಕರ ಪರಿಸ್ಥಿತಿಗಳು ಗಂಭೀರ:

ದಕ್ಷಿಣ ಗಾಝಾ ಪಟ್ಟಿಯಲ್ಲಿರುವ ರಾಫಾದಲ್ಲಿ ನಾಗರಿಕರ ಪರಿಸ್ಥಿತಿಗಳು ಅತ್ಯಂತ ಭೀಕರವಾಗಿವೆ ಎಂದು ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್ ಕ್ರಾಸ್ (ICRC) ಹೇಳಿಕೊಂಡಿದೆ. ರಾಫಾ ಈಜಿಪ್ಟ್‌ನ ಗಡಿಯ ಸಮೀಪದಲ್ಲಿದೆ ಮತ್ತು ಲಕ್ಷಾಂತರ ಮಂದಿ ಅಲ್ಲಿ ಆಶ್ರಯವನ್ನು ಪಡದುಕೊಂಡಿದ್ದಾರೆ.

ರಾಫಾದಲ್ಲಿ ನಿರಾಶ್ರಿತ ಜನರ ಅಗತ್ಯಗಳನ್ನು ಪೂರೈಸಲು ನಮ್ಮಲ್ಲಿ ಸಾಕಷ್ಟು ಪರಿಹಾರ ಸಾಮಗ್ರಿಗಳಿಲ್ಲ.ಸಾಕಷ್ಟು ನೀರು ಇಲ್ಲ, ಸಾಕಷ್ಟು ನೈರ್ಮಲ್ಯವಿಲ್ಲ, ಮತ್ತು ಜನರಿಗೆ ಆಹಾರ, ವೈದ್ಯಕೀಯ ಹಾರೈಕೆ ಸಿಗುತ್ತಿಲ್ಲ ಎಂದು ICRC ಕ್ಷಿಪ್ರ ನಿಯೋಜನೆ ಸಂಯೋಜಕ ಸ್ಟೀಫನ್ ರಯಾನ್ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಗಾಝಾದ ಜನಸಂಖ್ಯೆಯನ್ನು ಎದುರಿಸುತ್ತಿರುವ ಗಂಭೀರ ಅಪಾಯವನ್ನು ನಿವಾರಿಸಲು ಮತ್ತು ಗಾಯಗಳು, ತೀವ್ರವಾದ ಹಸಿವಿನಿಂದ ಬಳಲುತ್ತಿರುವ ಜನರಿಗೆ ತುರ್ತು ಸಹಾಯ ಮಾಡುವಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಆಸ್ಪತ್ರೆಗಳಿಗೆ ಔಷಧಗಳು, ವೈದ್ಯಕೀಯ ಸರಬರಾಜುಗಳು ಮತ್ತು ಇಂಧನವನ್ನು ಪೂರೈಸುವ ಸಾಮರ್ಥ್ಯವು ಸೀಮಿತವಾಗಿದೆ. ಇತ್ತೀಚಿನ WHO ಮೌಲ್ಯಮಾಪನಗಳ ಪ್ರಕಾರ ಗಾಝಾದಲ್ಲಿ 13 ಭಾಗಶಃ ಕಾರ್ಯನಿರ್ವಹಿಸುವ ಆಸ್ಪತ್ರೆಗಳನ್ನು ಹೊಂದಿದೆ ಮತ್ತು 21 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದೆ. ನಾಗರಿಕರನ್ನು ಮತ್ತಷ್ಟು ಹಿಂಸಾಚಾರದಿಂದ ರಕ್ಷಿಸಲು ಮತ್ತು ಮತ್ತು ಶಾಂತಿ ಸ್ಥಾಪನೆಗೆ ಕದನ ವಿರಾಮ ಒಂದೇ ದಾರಿಯಾಗಿದೆ ಎಂದು ಟೆಡ್ರೊಸ್ ಹೇಳಿದರು.

ಕಳೆದ 24 ಗಂಟೆಗಳ ಅವಧಿಯಲ್ಲಿ ಗಾಝಾದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಸುಮಾರು 210 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು 325 ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ತೀನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಇಸ್ರೇಲ್‌ ಮಿಲಿಟರಿ ಕ್ಲಿಯರೆನ್ಸ್ ಆದೇಶಗಳ ನಂತರ ಕನಿಷ್ಠ 1,00,000 ಸ್ಥಳಾಂತರಗೊಂಡ ಜನರು ರಾಫಾದಲ್ಲಿ ಸೇರಿದ್ದಾರೆ.

ಇದನ್ನು ಓದಿ: ಲೋಕಸಭೆ ಚುನಾವಣೆಗೆ ಮುನ್ನ ಇವಿಎಂ ಸರಿಪಡಿಸದಿದ್ದರೆ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಬಹುದು: ಸ್ಯಾಮ್ ಪಿತ್ರೋಡಾ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಡಿಶಾ : ಗಣರಾಜ್ಯೋತ್ಸವ ದಿನ ಮಾಂಸ, ಮೊಟ್ಟೆ, ಮೀನು ಮಾರಾಟ ನಿಷೇಧಿಸಿದ ಜಿಲ್ಲಾಡಳಿತ!

ಗಣರಾಜ್ಯೋತ್ಸವದಂದು ಜಿಲ್ಲೆಯಾದ್ಯಂತ ಮಾಂಸಾಹಾರಿ ವಸ್ತುಗಳ ಮಾರಾಟವನ್ನು ನಿಷೇಧಿಸಿ ಒಡಿಶಾದ ಕೊರಾಪುಟ್ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜನವರಿ 26, ಗಣರಾಜ್ಯೋತ್ಸವದಂದು ಮಾಂಸ, ಕೋಳಿ, ಮೊಟ್ಟೆ, ಮೀನು ಮತ್ತು ಇತರ ಮಾಂಸಾಹಾರಿ ವಸ್ತುಗಳ...

ಮೋದಿ ಸ್ವಾಗತಿಸುವ ಫ್ಲೆಕ್ಸ್ ಬೋರ್ಡ್‌; ದಂಡ ವಿಧಿಸಿದ ಬಿಜೆಪಿ ಆಡಳಿತದ ತಿರುವನಂತಪುರಂ ಮಹಾನಗರ ಪಾಲಿಕೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಗೆ ಸಂಬಂಧಿಸಿದಂತೆ ನಗರದಲ್ಲಿನ ಪಾದಚಾರಿ ಮಾರ್ಗಗಳಲ್ಲಿ ಫ್ಲೆಕ್ಸ್ ಬೋರ್ಡ್‌ಗಳನ್ನು ಅಳವಡಿಸಿದ್ದಕ್ಕಾಗಿ ಬಿಜೆಪಿ ಆಡಳಿತವಿರುವ ತಿರುವನಂತಪುರಂ ಮಹಾನಗರ ಪಾಲಿಕೆ ತನ್ನದೇ ಪಕ್ಷಕ್ಕೆ ದಂಡ ವಿಧಿಸಿದೆ. ಪೊಲೀಸ್ ಠಾಣೆಯಲ್ಲಿ ದೂರು...

ಲಂಚ ಪ್ರಕರಣ : ಅದಾನಿಗೆ ಸಮನ್ಸ್ ತಲುಪಿಸಲು ಎರಡು ಬಾರಿ ನಿರಾಕರಿಸಿದ ಕೇಂದ್ರ

ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರಿಗೆ ಕಾನೂನು ಸಮನ್ಸ್ ಕಳುಹಿಸಿತ್ತು. ಆದರೆ, ಭಾರತದ ಕಾನೂನು ಮತ್ತು ನ್ಯಾಯ ಸಚಿವಾಲಯ ಈ...

ನಕಾರಾತ್ಮಕ ಪರಿಣಾಮ ಕಡಿಮೆ ಮಾಡಲು ಸಾಮಾಜಿಕ ಮಾಧ್ಯಮ ನಿಯಂತ್ರಣ ಅಗತ್ಯ: ಕೈಲಾಶ್‌ ಸತ್ಯಾರ್ಥಿ

ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಅವರು ಅಪ್ರಾಪ್ತರಿಗೆ ಸಾಮಾಜಿಕ ಮಾಧ್ಯಮದ ನಿಯಂತ್ರಣ ನಿರ್ಧಾರವನ್ನು ಬೆಂಬಲಿಸಿದ್ದಾರೆ. 'ಇದರ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡಲು, ಸಕಾರಾತ್ಮಕವಾಗಿ ನೈತಿಕ ಮೌಲ್ಯಗಳನ್ನು ಹರಡಲು ಮತ್ತು ಸಮುದಾಯಗಳನ್ನು...

ನ್ಯೂಸ್ ಲಾಂಡ್ರಿ ಸಂಪಾದಕಿ ಬಗ್ಗೆ ತಪ್ಪು ವರದಿ: ದೆಹಲಿ ಹೈಕೋರ್ಟ್ ಅಸಮಾಧಾನ

ನ್ಯೂಸ್ ಲಾಂಡ್ರಿ ವ್ಯವಸ್ಥಾಪಕ ಸಂಪಾದಕಿ ಮನೀಷಾ ಪಾಂಡೆ ಅವರ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ, ಕೋರ್ಟ್‌ನ ಮೌಖಿಕ ಅವಲೋಕನಗಳ ಕುರಿತು ಕೆಲ ಮಾಧ್ಯಮಗಳ ವರದಿ ಮಾಡಿದ ರೀತಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಅಸಮಾಧಾನ...

ಇಬ್ಬರು ಬಂಗಾಳಿ ವಲಸೆ ಕಾರ್ಮಿಕರ ಶವ ಪತ್ತೆ : ಒಬ್ಬರನ್ನು ಹಿಂದುತ್ವ ಗುಂಪು ಥಳಿಸಿ ಕೊಂದಿರುವ ಆರೋಪ

ಪ್ರತ್ಯೇಕ ರಾಜ್ಯಗಳಲ್ಲಿ ಇಬ್ಬರು ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದು, ದೇಶದಲ್ಲಿ ಬಂಗಾಳಿ ಮಾತನಾಡುವ ಕಾರ್ಮಿಕರ ವಿರುದ್ದ ಹೆಚ್ಚುತ್ತಿರುವ ಹಿಂಸಾಚಾರದ ಭಾಗವಾಗಿ ಇಬ್ಬರನ್ನೂ ಕೊಲ್ಲಲಾಗಿದೆ ಎಂದು ಅವರ ಕುಟುಂಬಗಳು ಆರೋಪಿಸಿವೆ. ಆಂಧ್ರ ಪ್ರದೇಶದ...

ಡಿಜಿಟಲ್ ಅರೆಸ್ಟ್‌ನಲ್ಲಿ ಬರೋಬ್ಬರಿ 23 ಕೋಟಿ ರೂ. ಕಳೆದುಕೊಂಡ ವ್ಯಕ್ತಿ : ಹಣ ಮರುಪಾವತಿ, ವಂಚನೆ ತಡೆಗೆ ಮಾರ್ಗಸೂಚಿ ಕೋರಿ ಸುಪ್ರೀಂ ಮೊರೆ

ಸೈಬರ್ ವಂಚನೆಯಾದ ಡಿಜಿಟಲ್ ಅರೆಸ್ಟ್‌ನಲ್ಲಿ ಬರೋಬ್ಬರಿ 23 ಕೋಟಿ ರೂಪಾಯಿ (22.92 ಕೋಟಿ) ಕಳೆದುಕೊಂಡ 82 ವರ್ಷದ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್...

ಒಡಿಶಾ| ಗುಂಪು ಹಲ್ಲೆಯ ನಂತರ ಪಾದ್ರಿ ಕುಟುಂಬ ವಾಸವಿದ್ದ ಬಾಡಿಗೆ ಮನೆ ಖಾಲಿ ಮಾಡುವಂತೆ ಒತ್ತಡ

ಈ ತಿಂಗಳ ಆರಂಭದಲ್ಲಿ ಗುಂಪೊಂದು ಹಲ್ಲೆ ನಡೆಸಿ ಸಾರ್ವಜನಿಕವಾಗಿ ಅವಮಾನಿಸಿತ್ತು ಎನ್ನಲಾದ ಒಡಿಶಾ ಪಾದ್ರಿ ಕುಟುಂಬ ಎಂಟು ವರ್ಷಗಳ ಕಾಲ ವಾಸಿಸುತ್ತಿದ್ದ ಮನೆಯಿಂದ ಖಾಲಿ ಮಾಡುವಂತೆ ಒತ್ತಾಯಿಸಲಾಗಿದೆ. ಇದರಿಂದಾಗಿ ಅವರ ಕುಟುಂಬ ಭಯಭೀತರಾಗಿ...

ಆಧಾರ್ ಕಾರ್ಡ್‌ ಇಲ್ಲದೆ ದಾಖಲಿಸಿಕೊಳ್ಳದ ವೈದ್ಯರು : ಹೆರಿಗೆಗೆ ಆಸ್ಪತ್ರೆ ಸಿಗದೆ ಅಲೆಮಾರಿ ಮಹಿಳೆ ಪರದಾಟ

ಆಧಾರ್ ಕಾರ್ಡ್‌ ಇಲ್ಲದ ಕಾರಣ ವೈದ್ಯರು ದಾಖಲಿಸಿಕೊಳ್ಳಲು ನಿರಾಕರಿಸಿದ್ದು, ಪರಿಣಾಮ ಹೆರಿಗೆಗೆ ಆಸ್ಪತ್ರೆ ಸಿಗದೆ ಅಲೆಮಾರಿ ಸಮುದಾಯದ ಮಹಿಳೆಯೊಬ್ಬರು ಪರದಾಡುತ್ತಿರುವ ಬಗ್ಗೆ ತೆಲಂಗಾಣದ ಕರೀಂನಗರ ಜಿಲ್ಲೆಯಿಂದ ವರದಿಯಾಗಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ...

ಲ್ಯಾಂಡ್‌ಲಾರ್ಡ್: ಜಮೀನ್ದಾರಿ ವ್ಯವಸ್ಥೆ, ಜಾತಿ ಪ್ರಶ್ನೆ ಮತ್ತು ಸಂವಿಧಾನ – ಕನ್ನಡ ಚಿತ್ರರಂಗದ ಒಂದು ಮಹತ್ವದ ತಿರುವು

ಕನ್ನಡ ಮುಖ್ಯವಾಹಿನಿ ಸಿನೆಮಾ ಅಪರೂಪಕ್ಕೊಮ್ಮೆ ಮಾತ್ರ ಸಮಾಜದ ಮೂಲಭೂತ ಪ್ರಶ್ನೆಗಳತ್ತ ನೇರವಾಗಿ ಮುಖ ಮಾಡುತ್ತದೆ. ಜಾತಿ, ಭೂಮಿ, ಅಧಿಕಾರ ಎಲ್ಲವನ್ನು ಒಟ್ಟಿಗೆ ಹಿಡಿದು ಪ್ರಶ್ನಿಸುವ ಚಿತ್ರಗಳು ಇನ್ನೂ ವಿರಳ. ನಿರ್ದೇಶಕ–ಕಥಾಲೇಖಕ ಜಡೆಶ್ ಕೆ....