Homeಮುಖಪುಟತಪ್ಪು ಅನುವಾದದ ಭಗವದ್ಗೀತೆ ಶ್ಲೋಕ ಹಂಚಿಕೊಂಡ ಅಸ್ಸಾಂ ಸಿಎಂ; ವಿವಾದದ ನಂತರ ಕ್ಷಮೆಯಾಚನೆ

ತಪ್ಪು ಅನುವಾದದ ಭಗವದ್ಗೀತೆ ಶ್ಲೋಕ ಹಂಚಿಕೊಂಡ ಅಸ್ಸಾಂ ಸಿಎಂ; ವಿವಾದದ ನಂತರ ಕ್ಷಮೆಯಾಚನೆ

- Advertisement -
- Advertisement -

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಗವದ್ಗೀತೆಯ ಶ್ಲೋಕವನ್ನು ತಪ್ಪಾಗಿ ಭಾಷಾಂತರಿಸಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ ಮೂಲಕ ಶರ್ಮಾ ಅವರು ಜಾತಿ ವಿಭಜನೆಯನ್ನು ಉತ್ತೇಜಿಸುತ್ತಿದ್ದಾರೆ ಎಂದು ಹಲವಾರು ನಾಯಕರು ಆರೋಪಿಸಿದ್ದರು.

ಈ ಕುರಿತು ಕ್ಷಮೆಯಾಚಿಸಿರುವ ಶರ್ಮಾ, ‘ನನ್ನನ್ನು ಅನುಸರಿಸುವವರಿಗಾಗಿ ಪ್ರತಿದಿನ ಗೀತೆಯ ಒಂದು ಶ್ಲೋಕವನ್ನು ಹಂಚಿಕೊಳ್ಳುವ ಸಂಪ್ರದಾಯದ ಭಾಗವಾಗಿ ನನ್ನ ತಂಡವು ಎಕ್ಸ್ ಖಾತೆಯಲ್ಲಿ ಪದ್ಯವನ್ನು ಪೋಸ್ಟ್ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

‘ವಾಡಿಕೆಯಂತೆ ನಾನು ಪ್ರತಿದಿನ ಬೆಳಿಗ್ಗೆ ನನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಭಗವದ್ಗೀತೆಯ ಒಂದು ಶ್ಲೋಕವನ್ನು ಪೋಸ್ಟ್ ಮಾಡುತ್ತೇನೆ. ಇಲ್ಲಿಯವರೆಗೆ, ನಾನು 668 ಶ್ಲೋಕಗಳನ್ನು ಪೋಸ್ಟ್ ಮಾಡಿದ್ದು, ಇತ್ತೀಚೆಗೆ ನನ್ನ ತಂಡದ ಸದಸ್ಯರೊಬ್ಬರು ಅಧ್ಯಾಯ 18ರ 44 ಶ್ಲೋಕವನ್ನು ತಪ್ಪಾಗಿ ಅನುವಾದಿಸಿದ್ದಾರೆ. ತಪ್ಪು ಗಮನಕ್ಕೆ ಬಂದ ಕೂಡಲೇ ಟ್ವೀಟ್ ಡಿಲೀಟ್ ಮಾಡಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ತಪ್ಪನ್ನು ಗಮನಿಸಿದ ತಕ್ಷಣ ನಾನು ಪೋಸ್ಟ್ ಅನ್ನು ಅಳಿಸಿದ್ದೇನೆ. ಅಳಿಸಿದ ಪೋಸ್ಟ್ ಯಾರಿಗಾದರೂ ನೋಯಿಸಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ಗೀತೆಯ ಪ್ರಕಾರ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಎಂಬ ಇತರ ಮೂರು ಜಾತಿಗಳಿಗೆ ಸೇವೆ ಸಲ್ಲಿಸುವುದು ಶೂದ್ರರ ಕರ್ತವ್ಯ’ ಎಂದು ಪ್ರಕಟಿಸಿದ್ದ ಪೋಸ್ಟ್ ರಾಜಕೀಯ ಗದ್ದಲವನ್ನು ಹುಟ್ಟುಹಾಕಿದೆ.

ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ ಅವರು ‘ಪ್ರತಿ ಭಾರತೀಯ ಪ್ರಜೆಯನ್ನು ಸಮಾನವಾಗಿ ಕಾಣುವ ಪ್ರತಿಜ್ಞೆಯನ್ನು ಅವರು ಪೂರೈಸುತ್ತಿಲ್ಲ’ ಎಂದು ಶರ್ಮಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ಅಸ್ಸಾಂ ಸಿಎಂ ತಾವು ಡಿಲೀಟ್ ಮಾಡಿದ ಪೋಸ್ಟ್‌ನಲ್ಲಿ ತಮ್ಮ ಸಮಾಜದ ದೃಷ್ಟಿಕೋನವನ್ನು ವಿವರಿಸಿದ್ದಾರೆ. ಕೃಷಿ, ಹಸು ಸಾಕಣೆ ಮತ್ತು ವಾಣಿಜ್ಯವು ವೈಶ್ಯರ ನೈಸರ್ಗಿಕ ಕರ್ತವ್ಯಗಳು ಮತ್ತು ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರಿಗೆ ಸೇವೆ ಸಲ್ಲಿಸುವುದು ಶೂದ್ರರ ನೈಸರ್ಗಿಕ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ಸಾಂವಿಧಾನಿಕ ಸ್ಥಾನವನ್ನು ಹೊಂದಿರುವ ನಿಮ್ಮ ಪ್ರತಿಜ್ಞೆಯು ಪ್ರತಿಯೊಬ್ಬ ನಾಗರಿಕರನ್ನು ಸಮಾನವಾಗಿ ಪರಿಗಣಿಸುವುದಾಗಿದೆ. ಕಳೆದ ಕೆಲವು ವರ್ಷಗಳಿಂದ ಅಸ್ಸಾಂನ ಮುಸ್ಲಿಮರು ಎದುರಿಸುತ್ತಿರುವ ದುರದೃಷ್ಟಕರ ಕ್ರೌರ್ಯವನ್ನು ಇದು ಪ್ರತಿಬಿಂಬಿಸುತ್ತದೆ. ಹಿಂದುತ್ವವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯಕ್ಕೆ ವಿರುದ್ಧವಾಗಿದೆ’ ಎಂದು ಓವೈಸಿ ಹೇಳಿದ್ದಾರೆ.

ಇದನ್ನೂ ಓದಿ; ಇಡಿ, ಸಿಬಿಐ ಬಳಸಿ ಹಣ ಲೂಟಿ: ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read