Homeಮುಖಪುಟಇಡಿ, ಸಿಬಿಐ ಬಳಸಿ ಹಣ ಲೂಟಿ: ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ

ಇಡಿ, ಸಿಬಿಐ ಬಳಸಿ ಹಣ ಲೂಟಿ: ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ

- Advertisement -
- Advertisement -

ಬಿಜೆಪಿ ಕಳ್ಳರ ಪಕ್ಷ ಎಂದು ಮಮತಾ ಬ್ಯಾನರ್ಜಿ ಹೇಳಿದ್ದು, ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಂತಹ ಏಜೆನ್ಸಿಗಳನ್ನು ಬಳಸಿಕೊಂಡು ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.

ಪ.ಬಂಗಾಳದ ಉತ್ತರ 24-ಪರಗಣಗಳ ಚಕ್ಲಾದಲ್ಲಿ ನಡೆದ ತೃಣಮೂಲ ಕಾಂಗ್ರೆಸ್‌ ಪಕ್ಷದ ಕಾರ್ಯಾಗಾರದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ,  ಬಿಜೆಪಿ ‘ಇಡಿ’ ಮತ್ತು ‘ಸಿಬಿಐ’ ಬಳಸಿ ಹಣ ಲೂಟಿ ಮಾಡುತ್ತಿದೆ. ವಶಪಡಿಸಿಕೊಂಡ ಎಲ್ಲ ಹಣವನ್ನು ಬಿಜೆಪಿಯ ಜೇಬಿಗೆ ಹಾಕಲಾಗುತ್ತಿದೆ. ಕೋವಿಡ್ ಪರಿಸ್ಥಿತಿಯ ಸಮಯದಲ್ಲಿ ಅವರು ಪಿಎಂ ಕೇರ್ಸ್ ಫಂಡ್ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಿದರು. ಆದರೆ ಅವರು ಎಷ್ಟು ಹಣವನ್ನು ಸಂಗ್ರಹಿಸಿದರು ಎಂಬುದು ಯಾರಿಗೂ ತಿಳಿದಿಲ್ಲ. ಪ್ರತಿ ಯೋಜನೆಯಲ್ಲಿ ಬಿಜೆಪಿ ನಾಯಕರು ಎಷ್ಟು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂಬುದು ನಿಮಗೆ ತಿಳಿದಿರಬೇಕು. ಆದರೆ ಅವರು ಭ್ರಷ್ಟಾಚಾರ ಎಂದು ತೃಣಮೂಲ ಕಾಂಗ್ರೆಸ್‌ನತ್ತ ಬೆರಳು ತೋರಿಸುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿಯನ್ನು “ಕಳ್ಳರ ಪಕ್ಷ” ಎಂದು ಕರೆಯುವುದರ ಹಿಂದಿನ ಕಾರಣಗಳನ್ನು ವಿವರಿಸಿದ  ಮಮತಾ ಬ್ಯಾನರ್ಜಿ,  ಪಕ್ಷಕ್ಕಾಗಿ ಕೆಲಸ ಮಾಡದಂತೆ ಬಾಲು (ಆಹಾರ ಮತ್ತು ಸರಬರಾಜು ಸಚಿವ ಜ್ಯೋತಿ ಪ್ರಿಯಾ ಮಲ್ಲಿಕ್) ಅವರನ್ನು ಬಂಧಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಲು ಸಾಧ್ಯವಾಗದಂತೆ ಅವರನ್ನು ಜೈಲಿನಲ್ಲಿಟ್ಟರು. ಆದರೆ ಹಣ ಲೂಟಿ ಮಾಡಿದ ಯಾವುದೇ ಬಿಜೆಪಿ ನಾಯಕನನ್ನು ಬಂಧಿಸಲಾಗಿಲ್ಲ ಎಂದು ಮಮತಾ ಆರೋಪಿಸಿದ್ದಾರೆ.

ತೃಣಮೂಲ ನಾಯಕರನ್ನು “ಚೋರ್” ಎಂದು ಕರೆಯುವುದರ ವಿರುದ್ಧ ಸುವೇದು ಅಧಿಕಾರಿಯನ್ನು ಹೆಸರಿಸದೆ ವಾಗ್ಧಾಳಿ ನಡೆಸಿದ ಮಮತಾ ಬ್ಯಾನರ್ಜಿ, ದೇಶದ್ರೋಹಿಗಳು ಯಾವುದೇ ಚಿಕ್ಕ ಕಳ್ಳರು ಅಲ್ಲ, ಅವರು ದರೋಡೆಕೋರರು. ನೀವು ಅವರನ್ನು ಕಂಡಾಗ, ‘ಚೋರ್, ಚೋರ್’ ಎಂದು ಕೂಗಿ ಎಂದು ಟಿಎಂಸಿ ಕಾರ್ಯಕರ್ತರಿಗೆ ಹೇಳಿದ್ದಾರೆ.

ಅವರು ತೃಣಮೂಲ ಕಾರ್ಯಕರ್ತರನ್ನು ಒಗ್ಗಟ್ಟಿನಿಂದ ಇರುವಂತೆ ಕೇಳಿಕೊಂಡರು. ನಾನು ಯಾವುದೇ ಸ್ಥಳೀಯ ಮಟ್ಟದ ಜಗಳಕ್ಕೆ ಅವಕಾಶ ನೀಡುವುದಿಲ್ಲ. ನಾನು ಜನರಿಗಾಗಿ 365 ದಿನ ಕೆಲಸ ಮಾಡುತ್ತೇನೆ. ಆದರೆ ಯಾರಾದರೂ ತನ್ನನ್ನು ತಾನು ದೊಡ್ಡ ನಾಯಕ ಎಂದು ಪರಿಗಣಿಸಿದರೆ ಮತ್ತು ಪಕ್ಷಕ್ಕಿಂತ ಹೆಚ್ಚಾಗಿ ತನ್ನನ್ನು ತಾನು ಪ್ರೀತಿಸಿದರೆ, ಅವನು ಅಥವಾ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ತೃಣಮೂಲವು ಜನ ಸೇವೆ ಮಾಡಲು, ಸ್ವ ಸೇವೆಗೆ ಅಲ್ಲ ಎಂದು ಅವರು ಕಾರ್ಯಕರ್ತರಿಗೆ ಹೇಳಿದ್ದಾರೆ.

ಜಿಲ್ಲೆಯ ಕೆಲವು ಪ್ರಮುಖ ನಾಯಕರ ನಡುವೆ ಇತ್ತೀಚೆಗೆ ನಡೆದ ಬಹಿರಂಗ ಸಂಘರ್ಷದ ಘಟನೆಗಳ ಬಗ್ಗೆ ಸ್ಪಷ್ಟವಾದ ಉಲ್ಲೇಖವನ್ನು ನೀಡದೆ, ಎಲ್ಲರಿಗೂ ಮಮತಾ ಎಚ್ಚರಿಕೆ ನೀಡಿದರು. ಕೆಲವು ಪ್ರದೇಶಗಳಲ್ಲಿ, ಕೆಲವು ನಾಯಕರು ತಮ್ಮನ್ನು ತಾವು ದೊಡ್ಡವರು ಎಂದು ಭಾವಿಸಲು ಪ್ರಾರಂಭಿಸಿದರು ಎಂದು ನಾನು ಕೇಳಿದ್ದೇನೆ.  ಅವರು ತಮ್ಮ ಹಿತಾಸಕ್ತಿಗಳಿಗಾಗಿ ಪಕ್ಷವನ್ನು ಮರೆತಿದ್ದಾರೆ. ತನ್ನನ್ನು ತಾನು ಶ್ರೇಷ್ಠ ಎಂದು ಪರಿಗಣಿಸಿ ಇತರರನ್ನು ಕಡೆಗಣಿಸಬಾರದು. ತೃಣಮೂಲ ಮುಖಂಡರು ಹಾಗೂ ಬೆಂಬಲಿಗರು ಹಿರಿಯರು ಹಾಗೂ ಹಿರಿಯ ಮುಖಂಡರನ್ನು ಕಡೆಗಣಿಸದೆ ಸಂಘಟಿತರಾಗಿ ವಿದ್ಯಾರ್ಥಿಗಳು ಹಾಗೂ ಯುವಕರನ್ನು ಪಕ್ಷದ ಚಟುವಟಿಕೆಗಳಲ್ಲಿ ಮುಂಚೂಣಿಗೆ ತರಬೇಕು ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಆಹಾರ ಮತ್ತು ಸರಬರಾಜು ಸಚಿವ ಜ್ಯೋತಿ ಪ್ರಿಯಾ ಮಲ್ಲಿಕ್ ಅವರನ್ನು ಪಡಿತರ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ ಬಳಿಕ ಕಳೆದೆರಡು ತಿಂಗಳುಗಳಲ್ಲಿ ಬಂಗಾಳ ರಾಜಕೀಯದಲ್ಲಿ ‘ಚೋರ್’ ಪದದ ವ್ಯಾಪಕ ಬಳಕೆ ಕಂಡು ಬಂದಿದೆ. ಬಿಜೆಪಿ ಕಾರ್ಯಕರ್ತರು, ವಿಶೇಷವಾಗಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಮಮತಾ ಸೇರಿದಂತೆ ತೃಣಮೂಲ ನಾಯಕರ ಮೇಲೆ ಪದೇ ಪದೇ ಈ ಪದ ಬಳಕೆ ಮಾಡಿದ್ದರು.

ನಮ್ಮ ನಾಯಕರನ್ನು ಕಳ್ಳರು ಎಂದು ಕರೆಯುವ ಬಿಜೆಪಿಯ ಸಂಘಟಿತ ಪ್ರಚಾರದ ವಿರುದ್ಧ ‘ಚೋರ್‌’ ಪದವನ್ನು ಪ್ರತಿಯಾಗಿ ಬಳಸಲು ದೀದಿ ನಮಗೆ ಸಲಹೆ ನೀಡಿದ್ದಾರೆ. ಇದನ್ನು ರಾಜ್ಯಾದ್ಯಂತ ಬಳಸಲಾಗುವುದು ಎಂದು ಸಭೆಯ ನಂತರ ತೃಣಮೂಲ ನಾಯಕರೊಬ್ಬರು ಹೇಳಿದ್ದಾರೆ.

ಮಾಟುವಾ ಸಮುದಾಯದ ಹೆಚ್ಚಿನ ಜನ ಪ್ರಾಬಲ್ಯವಿರುವ ಉತ್ತರ 24-ಪರಗಣ ಜಿಲ್ಲೆಯಲ್ಲಿ ಬಿಜೆಪಿ ಈಗಾಗಲೇ ಚುನಾವಣೆ ಪ್ರಚಾರ ಮಾಡುತ್ತಿದೆ. ಮಟುವಾ ಸಮುದಾಯದ ಮತದ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಇದಕ್ಕೆ ಪ್ರತಿಯಾಗಿ ಉತ್ತರ-24 ಪರಗಣಗಳಲ್ಲಿ ತೃಣಮೂಲ ಸಂಘಟನೆಯನ್ನು ನೋಡಿಕೊಳ್ಳಲು, ಪ್ರತಿ 10 ದಿನಗಳಿಗೊಮ್ಮೆ ಪಕ್ಷದ ಚಟುವಟಿಕೆಗಳನ್ನು ಪರಿಶೀಲಿಸಲು ಮತ್ತು ಅವರಿಗೆ ವರದಿಯನ್ನು ಸಲ್ಲಿಸಲು ನಿರ್ಮಲ್ ಘೋಷ್ ನೇತೃತ್ವದ 20 ಸದಸ್ಯರ ಕೋರ್ ಕಮಿಟಿಯನ್ನು ಮಮತಾ ರಚಿಸಿದ್ದಾರೆ.

ಇದನ್ನು ಓದಿ: ಲೋಕಸಭೆ ಚುನಾವಣೆಗೆ ಮುನ್ನ ಇವಿಎಂ ಸರಿಪಡಿಸದಿದ್ದರೆ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಬಹುದು: ಸ್ಯಾಮ್ ಪಿತ್ರೋಡಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...