Homeಚಳವಳಿರೈತ ಹೋರಾಟಕ್ಕೆ ಒಂದು ವರ್ಷ: ಗಡಿಗಳಲ್ಲಿ ಹೆಚ್ಚಿದ ರೈತರ ಸಂಖ್ಯೆ

ರೈತ ಹೋರಾಟಕ್ಕೆ ಒಂದು ವರ್ಷ: ಗಡಿಗಳಲ್ಲಿ ಹೆಚ್ಚಿದ ರೈತರ ಸಂಖ್ಯೆ

- Advertisement -

ಇಂದು (ಶುಕ್ರವಾರ) ರೈತ ವಿರೋಧಿ ಕಾನೂನು ಆಂದೋಲನದ ಮೊದಲ ವಾರ್ಷಿಕೋತ್ಸವ ನಡೆಯುತ್ತಿದೆ. ಈ ಹಿನ್ನೆಲೆ ಪಂಜಾಬ್ ಮತ್ತು ಹರಿಯಾಣದ ಸಾವಿರಾರು ರೈತರು ಪ್ರತಿಭಟನಾ ನಿರತ ಸಿಂಘಿ, ಟಿಕ್ರಿ, ಗಾಝಿಪುರ್‌, ಶಹಜಾನ್‌ಪುರ್‌ ಗಡಿಗಳಿಗೆ ಬಂದಿದ್ದಾರೆ.

ನವೆಂಬರ್‌ 29 ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅಂದಿನಿಂದ ಸಂಸತ್ ಬಳಿ ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಇದರಲ್ಲಿ ಭಾಗವಹಿಸಲು ಭಾರಿ ಸಂಖ್ಯೆಯಲ್ಲಿ ರೈತರು ದೆಹಲಿಯ ಟಿಕ್ರಿ ಮತ್ತು ಸಿಂಘು ಗಡಿಗಳಿಗೆ ಮರಳಿದ್ದಾರೆ.

ಕೃಷಿ ಕಾನೂನುಗಳ ರದ್ದತಿಯನ್ನು ಆಚರಿಸಲು ರೈತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಆದರೆ, ಎಂಎಸ್‌ಪಿ ಕಾನೂನು ಜಾರಿಗೊಳಿಸಲು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಮಂಡನೆಯಾಗಲಿವೆ 26 ಹೊಸ ಮಸೂದೆ: ಇಲ್ಲಿದೆ ಸಂಕ್ಷಿಪ್ತ ವಿವರ

ಸಾವಿರಾರು ಸಂಖ್ಯೆಯಲ್ಲಿ ರೈತರು ಗಡಿಗಳಿಗೆ ಮರಳಿರುವುದರಿಂದ ನಗರದ ಗಡಿಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ ಎಂದು ದೆಹಲಿ ಪೊಲೀಸರು ಗುರುವಾರ ಹೇಳಿದ್ದಾರೆ. ಎಂಎಸ್‌ಪಿಗೆ ಕಾನೂನು ಜಾರಿಗೊಳಿಸುವ ಜೊತೆಗೆ ಇತರ ಬೇಡಿಕೆಗಳ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲು ಸಂಯುಕ್ತ ಕಿಸಾನ್ ಮೋರ್ಚಾದ ನಿರ್ದೇಶನದವರೆಗೆ ರೈತರು ಗಡಿಯಲ್ಲಿ ಉಳಿಯಲು ಸಿದ್ಧರಾಗಿದ್ದಾರೆ. “ಈ ಚಳಿಯನ್ನು ನಿಭಾಯಿಸಲು ನಾವು ಕಳೆದ ಚಳಿಗಾಲದಲ್ಲಿ ಮಾಡಿಕೊಂಡಿದ್ದ ತಯಾರಿಯನ್ನೇ ಈಗಲೂ ಮಾಡಿಕೊಂಡಿದ್ದೇವೆ” ಎಂದು ರೈತ ಪ್ರೀತ್ಪಾಲ್ ಸಿಂಗ್ ಹೇಳಿದರು.

ಮುಖ್ಯ ಕಾರ್ಯಕ್ರಮ ನಡೆಸಲು ಟಿಕ್ರಿ ಗಡಿಯ ಪಕೋರಾ ಚೌಕ್‌ನಲ್ಲಿ ದೊಡ್ಡ ಟೆಂಟ್ ಹಾಕಲಾಗುತ್ತಿದೆ. ಸಿಂಗು ಗಡಿಯಲ್ಲಿ ಮತ್ತೊಂದು ಮುಖ್ಯ ವೇದಿಕೆಯನ್ನು ನಿರ್ಮಿಸಲಾಗಿದೆ. ರೈತ ಸಂಘಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವನ್ನೂ ಆರಂಭಿಸಿವೆ.


ದೆಹಲಿಯ ಗಡಿಗಳು, ರಾಜ್ಯ ರಾಜಧಾನಿಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತಾನು ನೀಡಿರುವ ತನ್ನ ಕರೆಗೆ ರೈತರು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಎಸ್‌ಕೆಎಂ ಹೇಳಿದೆ.

ಇದನ್ನೂ ಓದಿ: ಎಂಸ್‌ಪಿಯತ್ತ ರೈತರ ಚಿತ್ತ: ದೆಹಲಿ ಗಡಿಗಳತ್ತ ಮುನ್ನುಗ್ಗುತ್ತಿರುವ ಪ್ರತಿಭಟನಾಕಾರರ ದಂಡು

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial