Homeಮುಖಪುಟಲಾಕ್‌ಡೌನ್ ಒಂದು ವರ್ಷ: ಪೂರ್ವಾಗ್ರಹಗಳಷ್ಟೇ, ಹೆಮ್ಮೆಯ ಲವಶೇಷವೂ ಇಲ್ಲ

ಲಾಕ್‌ಡೌನ್ ಒಂದು ವರ್ಷ: ಪೂರ್ವಾಗ್ರಹಗಳಷ್ಟೇ, ಹೆಮ್ಮೆಯ ಲವಶೇಷವೂ ಇಲ್ಲ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್) ನೀಡಿರುವ ಆತಂಕಕಾರಿ ಫಲಿತಾಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಇದು ಹೆಚ್ಚು ಮಹತ್ವದ್ದಾಗಿದೆ. ಅದರ ಪ್ರಕಾರ, ಮಕ್ಕಳ ಪೌಷ್ಟಿಕತೆಯಯ ಸೂಚ್ಯಂಕಗಳು 2015 ಮತ್ತು 2019ರ ನಡುವೆ ಸ್ಥಗಿತಗೊಂಡಿವೆ ಅಥವಾ ಹದಗೆಟ್ಟಿವೆ. ಸಾಂಕ್ರಾಮಿಕ ರೋಗವು ಇವುಗಳನ್ನು ಇನ್ನಷ್ಟು ಹದಗೆಡಿಸಿರಲಷ್ಟೇ ಸಾಧ್ಯ. ಪರಿಣಾಮವಾಗಿ, ಪಡಿತರವನ್ನು ಸಾರ್ವತ್ರಿಕಗೊಳಿಸುವ ತುರ್ತು ಅವಶ್ಯಕತೆಯಿದೆ. ಬದಲಾಗಿ, ಸರ್ಕಾರವು ತಾಂತ್ರಿಕ ಪರಿಹಾರಗಳನ್ನು ಅವಲಂಬಿಸಿದೆ

- Advertisement -
- Advertisement -

ಪ್ರಜ್ಞೆ ಮತ್ತು ಸಂವೇದನೆಗಳೂ ಕಣ್ಮರೆಯಾದ ವರ್ಷ

ಮಾರ್ಚ್ 24, ಮಹಾನ್ ರಾಷ್ಟ್ರದ ಅಸಮಾಧಾನವನ್ನು ಸರಿಪಡಿಸಲಾಗದಷ್ಟು ಭುಗಿಲೆಬ್ಬಿಸಿದ ದಿನದ ಮೊದಲ ವಾರ್ಷಿಕೋತ್ಸವವಾಗಿದೆ. ಒಂದು ಕೈಯಲ್ಲಿ ಬಹುಸಂಖ್ಯಾತ ದಂಡ ಮತ್ತು ಇನ್ನೊಂದು ಕೈಯಲ್ಲಿ ಏಕಪಕ್ಷೀಯ ನಿರ್ಧಾರಗಳೊಂದಿಗೆ, ಕೇಂದ್ರ ಸರ್ಕಾರವು ಅತಿ ಕೆಟ್ಟ ಯೋಜಿತ ರಾಷ್ಟ್ರೀಯ ಲಾಕ್‌ಡೌನ್ ಘೋಷಿಸಿತು. ಯಾವುದೇ ಸಾಮಾಜಿಕ ಭದ್ರತೆಯ ಅಸ್ತಿತ್ವದಲ್ಲಿಲ್ಲದ ಸುಮಾರು 500 ಮಿಲಿಯನ್ ಅನೌಪಚಾರಿಕ ವಲಯದ ಕಾರ್ಮಿಕರಿಗೆ ಭಾರತ ನೆಲೆಯಾಗಿದೆ. ಈ ಅರ್ಥದಲ್ಲಿಯೇ ಸರ್ಕಾರದ ನಿರ್ಧಾರವು ಬಹುಮತ ವಿರೋಧಿ, ಬಹುಜನ ವಿರೋಧಿ ಕ್ರಮವಾಗಿತ್ತು. ಈ ಆಘಾತದ ಹೊರೆ ಇನ್ನೂ ಮುಂದುವರಿಯುತ್ತಿದೆ.

ಇತ್ತೀಚಿನ ವರದಿಗಳ ಪ್ರಕಾರ, ಜಾರ್ಖಂಡ್ ಮೂಲದ 54 ವರ್ಷದ ವಲಸೆ ಕಾರ್ಮಿಕ ಬೆರ್ಜೋಮ್ ಪಹಡಿಯಾ ದೆಹಲಿಯಿಂದ ಜಾರ್ಖಂಡ್‌ಗೆ ಮರಳಲು 7 ತಿಂಗಳ ಅವಧಿಯಲ್ಲಿ 1,200 ಕಿಲೋಮೀಟರ್ ನಡೆದು ಹೋಗಬೇಕಾಯಿತು. ಈ ಪ್ರಯಾಣವು ಪೌರಾಣಿಕ ಒಡಿಸ್ಸಿಯಸ್ ಅನ್ನು ನೆನಪಿಸುತ್ತದೆ ಮಾತ್ರವಲ್ಲ, ವಾಸ್ತವವಾಗಿ ಕೆಲವು ವಿಲಕ್ಷಣ ರೀತಿಗಳಲ್ಲಿ ಅದನ್ನು ಪ್ರತಿಬಿಂಬಿಸುತ್ತದೆ. ಲಾಕ್‌ಡೌನ್ ಘೋಷಿಸಿದಾಗ, ಬೆರ್ಜೋಮ್ ದೆಹಲಿಯಲ್ಲಿ ಕೇವಲ ಒಂದು ತಿಂಗಳು ಕಳೆದಿದ್ದರು, ನಂತರ ಆತನ ಗುತ್ತಿಗೆದಾರನು ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೋದನು. ನಂತರ ಬೆರ್ಜೋಮ್ ಕಳೆದ ಆಗಸ್ಟ್‌ನಲ್ಲಿ ತಮ್ಮ ನಡಿಗೆಯನ್ನು ಪ್ರಾರಂಭಿಸಿದರು.

ಸಂತಾಲಿ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರಿಂದ ತನ್ನ ಸಂಕಷ್ಟಗಳಿಗೆ ಕೊನೆಯೇ ಇರಲಿಲ್ಲ ಹಾಗೂ ಉಳಿವಿಗಾಗಿ ಭಿಕ್ಷೆ ಬೇಡಬೇಕಾಗಿ ಬಂತು. ತನ್ನ ಪ್ರಯಾಣದ ಸಮಯದಲ್ಲಿ, ರೈಲ್ವೆ ಮಾರ್ಗದ ಬಳಿ ಹಸಿವಿನಿಂದಾಗಿ ಕುಸಿದು ಬಿದ್ದರು. ನಾಗರಿಕ ಸಮಾಜ ಸಂಘಟನೆಯೊಂದು ಅವರನ್ನು ರಕ್ಷಿಸಿ, ಇತ್ತೀಚೆಗೆ ತಮ್ಮ ಗ್ರಾಮಕ್ಕೆ ಹಿಂದಿರುಗಲು ಬೆರ್ಜೋಮ್‌ಗೆ ಸಹಾಯ ಮಾಡಿತು. ಅಂತಹ ಅಮಾನವೀಯ ಕಥೆಗಳಲ್ಲಿ, ಕರ್ನಾಟಕದ ಕಾರ್ಖಾನೆಯೊಂದರಲ್ಲಿ ಇಬ್ಬರು ಸಂತಾಲಿ ಮಹಿಳೆಯರ ಅಕ್ರಮ ಬಂಧನ ಮತ್ತು ಜೀತದ ಕತೆಯೂ ಇದೆ. ಅವರನ್ನು ಮೇ ತಿಂಗಳಲ್ಲಿ ನಿಕೋಲಸ್ ಮುರ್ಮು ಎಂಬ ಮತ್ತೊಬ್ಬ ಸಂತಾಲಿ ವಲಸೆ ಕಾರ್ಮಿಕರೊಬ್ಬರು ರಕ್ಷಿಸಿದ್ದನ್ನು.

PC : The Indian Forum

ಭಾರತದಲ್ಲಿ ಕಾರ್ಮಿಕ ವರ್ಗವನ್ನು ಐತಿಹಾಸಿಕವಾಗಿ ತಿರಸ್ಕಾರ ಮತ್ತು ನಿರಾಸಕ್ತಿಯಿಂದ ಕಾಣಲಾಗಿದೆ. ಹಲವಾರು ಸಮೀಕ್ಷೆಗಳು ಮತ್ತು ವರದಿಗಳು ಜೀವನೋಪಾಯಗಳನ್ನು ಕಳೆದುಕೊಂಡಿರುವ ವ್ಯಾಪ್ತಿ ಮತ್ತು ಅದರಿಂದ ಉಂಟಾದ ಹಸಿವಿನ ಪರಿಸ್ಥಿತಿಯನ್ನು ಎತ್ತಿ ತೋರಿಸಿವೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ರಾಷ್ಟ್ರೀಯ ಪ್ರಾತಿನಿಧಿಕ ದತ್ತಾಂಶಗಳ ಆಧಾರದ ಮೇಲೆ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ (ಎಪಿಯು) ನನ್ನ ಸಹೋದ್ಯೋಗಿಗಳು ಹಲವು ಅಂಶಗಳ ಕಡೆಗೆ ಗಮನ ಸೆಳೆದರು: 2020ರ ಏಪ್ರಿಲ್‌ನಲ್ಲಿ ಉದ್ಯೋಗ ಕಳೆದುಕೊಂಡ ಪುರುಷರಲ್ಲಿ, ಸುಮಾರು 68% ರಷ್ಟು ಕಾರ್ಮಿಕರು, ಡಿಸೆಂಬರ್ 2019 ಮತ್ತು ಆಗಸ್ಟ್ 2020ರ ನಡುವೆ ಆದಾಯದಲ್ಲಿ ಕುಸಿತ ಕಂಡಿದ್ದಾರೆ. ಮಹಿಳೆಯರ ಸ್ಥಿತಿ ಇನ್ನೂ ಚಿಂತಾಜನಕವಾಗಿದ್ದು, ಅವರಲ್ಲಿ 56% ಜನರು ಡಿಸೆಂಬರ್‌ನಲ್ಲೂ ನಿರುದ್ಯೋಗಿಗಳಾಗಿ ಮುಂದುವರಿದಿದ್ದರಿಂದ ಹೆಚ್ಚು ತೊಂದರೆ ಅನುಭವಿಸಿದರು.

ಅನೌಪಚಾರಿಕ ವಲಯ ಕುರಿತು ಅಜೀಂ ಪ್ರೇಮ್‌ಜಿ ವಿವಿ (ಎಪಿಯು) ನಡೆಸಿದ ಮತ್ತೊಂದು ಸಮೀಕ್ಷೆಯು, ನವೆಂಬರ್‌ನಲ್ಲಿ ಗಳಿಕೆ ಅರ್ಧದಷ್ಟು ಕಡಿಮೆಯಾಗಿದೆ ಮತ್ತು ಆಹಾರ ಅಭದ್ರತೆ ಹೆಚ್ಚಾಗಿದೆ ಎಂದು ತೋರಿಸಿದೆ. ಲಾಕ್‌ಡೌನ್ ಸಮಯದಲ್ಲಿ 90% ರಷ್ಟು ಜನರ ಆಹಾರ ಸೇವನೆಯಲ್ಲಿ ಇಳಿಕೆ ಕಂಡುಬಂದಿದೆ, ಅದರಲ್ಲಿ ನವೆಂಬರ್‌ನಲ್ಲಿ ಕೇವಲ 30% ರಷ್ಟು ಜನರ ಆಹಾರ ಸೇವನೆಯು ಪೂರ್ವ-ಲಾಕ್‌ಡೌನ್ ಮಟ್ಟವನ್ನು ತಲುಪಿದೆ. ಈ ತರಹದ ಚಿಂತಾಜನಕ ಸ್ಥಿತಿಗಳ ಕತೆಗಳು ಇತರ ಅಧ್ಯಯನಗಳಲ್ಲಿಯೂ ಪ್ರತಿಫಲಿಸಿದೆ. 2020ರ ಅಕ್ಟೋಬರ್‌ನಲ್ಲಿ ಆಹಾರ ಹಕ್ಕು ಅಭಿಯಾನಕ್ಕೆ ಸಂಬಂಧಿಸಿದ ಸಂಸ್ಥೆಗಳ ಒಕ್ಕೂಟ ನಡೆಸಿದ ’ಹಂಗರ್ ವಾಚ್’ ಸಮೀಕ್ಷೆಯ ಪ್ರಕಾರ, ಭಾಗಿಯಾದ ಸುಮಾರು 48% ರಷ್ಟು ಜನರು ದಿನಕ್ಕೆ ಕನಿಷ್ಠ ಒಂದು ಹೊತ್ತಿನ ಊಟ ಮಾಡದೇ ಮಲಗಿದರು ಮತ್ತು ಸುಮಾರು 30% ಜನರು ’ಕೆಲವೊಮ್ಮೆ’ ಊಟವನ್ನೇ ಬಿಟ್ಟುಬಿಡಬೇಕಾಯಿತು ಅಥವಾ ತಿಂಗಳಲ್ಲಿ ’ಆಗಾಗ್ಗೆ’ ಊಟ ತೊರೆಯಬೇಕಾಯಿತು. ಪೌಷ್ಟಿಕ ಆಹಾರ ಸೇವನೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಎಲ್ಲಾ ಅಧ್ಯಯನಗಳಲ್ಲಿ ಕಂಡುಬಂದಿರುವಂತೆ ಮಹಿಳೆಯರ ಮೇಲೆ ಅಸಮಾನ ಪರಿಣಾಮವು ಒಂದು ಸಾಮಾನ್ಯ ಲಕ್ಷಣವಾಗಿದೆ. ಭಾರತದಲ್ಲಿ ಲಕ್ಷಾಂತರ ಜನರಿಗೆ, ಏಪ್ರಿಲ್ ಒಂದೇ ಕ್ರೂರ, ನಿರ್ದಯಿ ತಿಂಗಳಾಗಿರಲಿಲ್ಲ. ಈ ಕಾಲದಲ್ಲಿ ಅಘಾತವನ್ನು ಇಂಗಿದ ಸಂಸ್ಥೆಯೆಂದರೆ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್). ಇದರ ಮೂಲಕ ಲಕ್ಷಾಂತರ ಜನರು ಆಹಾರ ಧಾನ್ಯಗಳನ್ನು ಉಚಿತ / ಸಬ್ಸಿಡಿ ದರದಲ್ಲಿ ಪಡೆಯಲು ಸಮರ್ಥರಾಗಿದ್ದಾರೆ.

ಆದರೆ ಪ್ರಶ್ನೆ ಹೀಗಿದೆ:

ಇಂತಹ ಬಿಕ್ಕಟ್ಟನ್ನು ಹುಟ್ಟುಹಾಕಿದ ನಂತರ, ಸರ್ಕಾರವು ದೇಶದ ಬಹುಸಂಖ್ಯಾತರ ಬಗ್ಗೆ ಸಹಾನುಭೂತಿ ಮತ್ತು ನ್ಯಾಯ-ನೀತಿಗಳೊಂದಿಗೆ ಕಾರ್ಯ ನಿರ್ವಹಿಸಿತೇ? ಹಿಮಾಂಶು ಅವರ ಇತ್ತೀಚಿನ ಲೇಖನವೊಂದರ ಪ್ರಕಾರ, ಜನವರಿ 1, 2021 ರಂತೆ, ಭಾರತೀಯ ಆಹಾರ ನಿಗಮ (ಎಫ್‌ಸಿಐ) ಸಾಮಾನ್ಯ ಸಂದರ್ಭಗಳಿಗಿಂತ ನಾಲ್ಕು ಪಟ್ಟು ಬಫರ್ (ಉಳಿಕೆ) ಸ್ಟಾಕ್‌ಗಳನ್ನು ಹೊಂದಿದೆ. ಇದರ ಹೊರತಾಗಿಯೂ, ಕೇಂದ್ರ ಸರ್ಕಾರವು ಪಿಡಿಎಸ್ ಮೂಲಕ ಹೆಚ್ಚುವರಿ ಆಹಾರ ಧಾನ್ಯಗಳ ಸರಬರಾಜನ್ನು ನವೆಂಬರ್‌ನಲ್ಲಿ ನಿಲ್ಲಿಸಿತು. ಕಡುಬಡತನದ ಮಧ್ಯೆ, ಸಾಕಷ್ಟು ಸಂಗ್ರಹವಿದ್ದರೂ ಇಂತಹ ಸಮಯದಲ್ಲಿ ಆಹಾರ ಸಬ್ಸಿಡಿಗಳನ್ನು ಕಡಿಮೆ ಮಾಡಲು ನೀತಿ ಆಯೋಗ ಪ್ರಸ್ತಾಪಿಸುತ್ತಿರುವುದು ಆಶ್ಚರ್ಯಕರವಾಗಿದೆ.

ಇದನ್ನೂ ಓದಿ : ಲಾಕ್‌ಡೌನ್ 1 ವರ್ಷ: ಬೀದಿ ವ್ಯಾಪಾರಿಗಳಿಗೆ ಇನ್ನೂ ಕಾಡುತ್ತಿರುವ ಲಾಕ್‌ಡೌನ್ ಭೂತ

ನೀತಿ ಆಯೋಗದ ವರದಿಯೊಂದು, ಪಿಡಿಎಸ್ ವ್ಯಾಪ್ತಿಯನ್ನು ಗ್ರಾಮೀಣ ಪ್ರದೇಶಗಳಲ್ಲಿ 75% ರಿಂದ 60% ಮತ್ತು ನಗರ ಪ್ರದೇಶಗಳಲ್ಲಿ 50% ರಿಂದ 40% ಕ್ಕೆ ಇಳಿಸಲು ಪ್ರಸ್ತಾಪಿಸಿದೆ. ಆದಾಯ ಮತ್ತು ಮೂಲ ಆಹಾರದ ಕೊರತೆಯನ್ನು ಎದುರಿಸಿದಾಗ, ಪೌಷ್ಟಿಕ ಆಹಾರವನ್ನು ಸೇವಿಸುವುದು ಅಸಾಧ್ಯದ ಮಾತು. ಈ ಕೊರತೆಯು ಮಹಿಳೆಯರು ಮತ್ತು ಮಕ್ಕಳ ಪೌಷ್ಟಿಕತೆಯ ಮೇಲೆ ಮತ್ತಷ್ಟು ವಿನಾಶಕಾರಿ ಪರಿಣಾಮ ಬೀರುತ್ತದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್) ನೀಡಿರುವ ಆತಂಕಕಾರಿ ಫಲಿತಾಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಇದು ಹೆಚ್ಚು ಮಹತ್ವದ್ದಾಗಿದೆ, ಅದರ ಪ್ರಕಾರ, ಮಕ್ಕಳ ಪೌಷ್ಟಿಕತೆಯ ಸೂಚ್ಯಂಕಗಳು 2015 ಮತ್ತು 2019ರ ನಡುವೆ ಸ್ಥಗಿತಗೊಂಡಿವೆ ಅಥವಾ ಹದಗೆಟ್ಟಿವೆ.

ಸಾಂಕ್ರಾಮಿಕ ರೋಗವು ಇವುಗಳನ್ನು ಇನ್ನಷ್ಟು ಹದಗೆಡಿಸಿರಲಷ್ಟೇ ಸಾಧ್ಯ. ಪರಿಣಾಮವಾಗಿ, ಪಡಿತರವನ್ನು ಸಾರ್ವತ್ರಿಕಗೊಳಿಸುವ ತುರ್ತು ಅವಶ್ಯಕತೆಯಿದೆ. ಬದಲಾಗಿ, ಸರ್ಕಾರವು ತಾಂತ್ರಿಕ ಪರಿಹಾರಗಳನ್ನು ಅವಲಂಬಿಸಿದೆ. ಉದಾಹರಣೆಗೆ, ಒನ್ ನೇಷನ್ ಒನ್ ರೇಷನ್ (ಒಎನ್‌ಒಆರ್) ಕಾರ್ಡ್ ಅನ್ನು ಪ್ರಚಾರ ಮಾಡುವಲ್ಲಿ ಅದಕ್ಕೆ ಆತುರವಿದೆ. ಇದು ಸಿದ್ಧಾಂತದಲ್ಲಿ ಉತ್ತಮವೆಂದು ತೋರುತ್ತದೆಯಾದರೂ, ಇದು ಹಲವಾರು ಸಮಸ್ಯೆಗಳಿಂದ ಕೂಡಿದೆ. ಉದಾಹರಣೆಗೆ, ವಿಭಿನ್ನ ಪಡಿತರ ಅಂಗಡಿಗಳಿಗೆ ಸರಿಯಾದ ಪ್ರಮಾಣದ ಧಾನ್ಯಗಳನ್ನು ಪೂರೈಸುವುದು ವ್ಯವಸ್ಥಾಪಕರಿಗೆ ದುಃಸ್ವಪ್ನವಾಗಬಹುದು. ಇದಲ್ಲದೆ, ಭ್ರಷ್ಟ ಪಡಿತರ ವಿತರಕರು ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಒಎನ್‌ಒಆರ್ ಸುಲಭವಾದ ಅವಕಾಶ/ನೆಪಗಳನ್ನು ನೀಡುತ್ತದೆ, ಏಕೆಂದರೆ ಅವರು, ತಮ್ಮ ಮನೆಯಿಂದ ವಲಸೆ ಹೋದವರು ಬೇರೆಡೆ ಪೂರ್ಣ ಪ್ರಮಾಣದ ಪಡಿತರವನ್ನು ಪಡೆದಿದ್ದಾರೆ ಎಂದು ಹೇಳಿಕೊಳ್ಳಬಹುದು. ರೀತಿಕಾ ಖೇರಾ ಇಲ್ಲಿ ONOR ನಲ್ಲಿನ ಕಳವಳಗಳನ್ನು ಸೂಕ್ಷ್ಮವಾಗಿ ನಿರೂಪಿಸುತ್ತಾರೆ (https://tinyurl.com/yf8o95l2)

PC : Scroll.in

ಸುರಕ್ಷಿತ ಉದ್ಯೋಗ ಮತ್ತು ಉತ್ತಮ ಜೀವನೋಪಾಯದ ಅವಕಾಶಗಳು – ವಿಶೇಷವಾಗಿ ಮಹಿಳೆಯರಿಗೆ – ಅತ್ಯಗತ್ಯ. ಆವರ್ತಕ ಕಾರ್ಮಿಕ ಪಡೆಯ (ಪಿಎಲ್‌ಎಫ್‌ಎಸ್ 2018-19) ಪ್ರಕಾರ, ಕೆಲಸ ಮಾಡಲು ಸಿದ್ಧರಿರುವ ಐದು ಗ್ರಾಮೀಣ ಮಹಿಳೆಯರಲ್ಲಿ ನಾಲ್ವರು ನಿರುದ್ಯೋಗಿಗಳಾಗಿದ್ದಾರೆ. ಮಹಿಳೆಯರನ್ನು ಮಾತ್ರ ಕಾರ್ಮಿಕರು ಮತ್ತು ಸಹಾಯಕರನ್ನಾಗಿ ನೇಮಿಸುವ ಅಂಗನವಾಡಿ ಕೇಂದ್ರಗಳು ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ಅನುಷ್ಠಾನಕ್ಕೆ ತಳಪಾಯವಾಗಿವೆ. ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರ (ಆಶಾ) ಜೊತೆಗೆ, ಮಹಿಳಾ ಕಾರ್ಮಿಕರು- ಈ ತ್ರಿಮೂರ್ತಿಗಳು ಮುಂಚೂಣಿಯ ಬಲವನ್ನು ರೂಪಿಸುತ್ತವೆ ಮತ್ತು ಮಾನವ ಅಭಿವೃದ್ಧಿಯನ್ನು ಮೂಲಭೂತವಾಗಿ ಸುಧಾರಿಸುವಲ್ಲಿ ಸಂಕೀರ್ಣ ಪಾತ್ರಗಳನ್ನು ನಿರ್ವಹಿಸುತ್ತಿವೆ.

ಆದರೆ, ಈ ಕಾರ್ಮಿಕರನ್ನು “ಸ್ವಯಂಸೇವಕರು” ಎಂದು ಪರಿಗಣಿಸಲಾಗುತ್ತದೆ. ಅತ್ಯಂತ ಅಗತ್ಯವಾದ ಕೆಲಸಗಳನ್ನು ಮಾಡಿದರೂ ಅವರ ವೇತನವು ತೀರಾ ಕಡಿಮೆಯಾಗಿದೆ. ದೀಪಾ ಸಿನ್ಹಾ, ಮೋಹಿನಿ ಗುಪ್ತಾ ಮತ್ತು ದೀಕ್ಷಾ ಶ್ರೀಯಾನ್ ಅವರ ಇತ್ತೀಚಿನ ಅಧ್ಯಯನವು, ಅವರ ರಚನಾತ್ಮಕ ಸಮಸ್ಯೆಗಳನ್ನು ವಿವರಿಸಿ, ಈ ವರ್ಗದ ಮಹಿಳೆಯರ ಕೆಲಸದ ಮೌಲ್ಯವನ್ನು ಕಡೆಗಣಿಸಲಾಗಿದೆ ಮತ್ತು ಕಡಿಮೆ ವೇತನಕ್ಕೆ ಒಳಪಡಿಸಲಾಗಿದೆ ಎನ್ನುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ಅವರು ಅನೇಕ ಹೆಚ್ಚುವರಿ ಕರ್ತವ್ಯಗಳನ್ನು ಮಾಡಿದ್ದಾರೆ. ಆದರೆ ಅವರ ವೇತನ ಪಾವತಿಗಳು ವಿಳಂಬವಾಗುತ್ತವೆ. ಈ ಅಧ್ಯಯನದ ಲೇಖಕರು ವಾದಿಸಿದಂತೆ, ಅವರ ಕೊಡುಗೆಯನ್ನು ಗುರತಿಸಿ, ಅವರ ಉದ್ಯೋಗವನ್ನು ಕನಿಷ್ಠ ಪಕ್ಷ ಔಪಚಾರಿಕವಾಗಿ ಖಾಯಂಗೊಳಿಸುವುದರ ಮೂಲಕ ಮತ್ತು ಈಗ ನೀಡುತ್ತಿರುವ ಅಲ್ಪ ಗೌರವಧನಗಳಿಗೆ ಬದಲಾಗಿ ಅವರಿಗೆ ಉತ್ತಮ ಸಂಬಳ ಮತ್ತು ಘನತೆಯನ್ನು ನೀಡುವ ಸಮಯ ಬಂದಿದೆ ಎನ್ನುತ್ತಾರೆ.

ಸಾಂಕ್ರಾಮಿಕ ಸಮಯದಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಕೊಂಚ ಮೇಲೆತ್ತುವ ಮತ್ತೊಂದು ಪ್ರಮುಖ ಆಧಾರಸ್ತಂಭವೆಂದರೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ). ಆದರೆ ಇಲ್ಲೂ ಈ ಕಾರ್ಯಕ್ರಮಕ್ಕಾಗಿ ಅಸಮರ್ಪಕವಾಗಿ ಬಜೆಟ್ ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದಲ್ಲದೆ, 2021-22ರ ಆರ್ಥಿಕ ವರ್ಷದಲ್ಲಿ ನರೇಗಾ ವೇತನ ದರದಲ್ಲಿ ಹೆಚ್ಚಳವು ಹೆಚ್ಚಿನ ರಾಜ್ಯಗಳಲ್ಲಿ 5% ಕ್ಕಿಂತ ಕಡಿಮೆಯಿದೆ ಮತ್ತು ಅನುದಾನದ ಅಸಮರ್ಪಕತೆಯಿಂದಾಗಿ ಈ ಸಮಯದಲ್ಲೂ ವೇತನ ಪಾವತಿ ವಿಳಂಬವಾಗಿದೆ. ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಪ್ರತಿ ಮನೆಗೆ ವಾರ್ಷಿಕ 200 ದಿನಗಳವರೆಗೆ ಕೆಲಸದ ಅರ್ಹತೆಯನ್ನು ಹೆಚ್ಚಿಸುವ ಮೂಲಕ ನರೇಗಾವನ್ನು ಬಲಪಡಿಸುವುದು, ವೇತನ ದರವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕೆಳಮಟ್ಟದಲ್ಲಿ ಬಳಕೆ-ಕೊಳ್ಳುವಿಕೆಯನ್ನು ಹೆಚ್ಚಿಸಲು ನಗರ ಉದ್ಯೋಗ ಕಾರ್ಯಕ್ರಮವನ್ನು ಪರಿಚಯಿಸುವುದು ಅಗತ್ಯವಾಗಿದೆ.

ಸಾಮಾಜಿಕ ಸಂರಕ್ಷಣಾ ಕ್ರಮಗಳನ್ನು ಪುನರಾವರ್ತಿತವಾಗಿ ಮತ್ತು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿರುವುದು, ವಲಸೆಯು ಲಕ್ಷಾಂತರ ಕಾರ್ಮಿಕರಿಗೆ ಹಾಬ್ಸನ್ (ಅನಿವಾರ್ಯ) ಆಯ್ಕೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಹೊಸ ಕಾರ್ಮಿಕ ಸಂಹಿತೆಗಳು – ಸಂಸತ್ತಿನಲ್ಲಿ ರಹಸ್ಯವಾಗಿ ಅಂಗೀಕರಿಸಲ್ಪಟ್ಟವು – ಹಲವಾರು ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸುವ ಮೂಲಕ ಬೆರ್ಜೋಮ್ ಪಹಡಿಯಾ ಅವರಂತಹವರ ಸಂಕಷ್ಟ, ಅವಮಾನವನ್ನು ಇನ್ನೂ ಹೆಚ್ಚಿಸುತ್ತವೆ. ಆದರೆ ಅವರ ಪ್ರಯಾಣವು ಏಕರೂಪವಾಗಿ, ಹೋರಾಟದ ಮನೋಭಾವದ ಸಂಕೇತವಾಗಿ ಪರಿಣಮಿಸುತ್ತದೆ, ಮತ್ತು ಇದು ನೈತಿಕ, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪರಿಗಣಿಸಲಾಗುವುದಿಲ್ಲ. ಸುಧಾರಿತ ಸಾಮಾಜಿಕ ಭದ್ರತೆಯ ಅನುಪಸ್ಥಿತಿಯಲ್ಲಿ, ಕಳೆದ ವರ್ಷ ಕೇವಲ ಪೂರ್ವಾಗ್ರಹಳಿಂದ ಕೂಡಿತ್ತು ಮತ್ತು ಹೆಮ್ಮೆಯ ಲವಶೇಷವೂ ಇರಲಿಲ್ಲ ಮತ್ತು ಇದು ಪ್ರಜ್ಞೆ ಮತ್ತು ಸಂವೇದನೆ ಇಲ್ಲದ ವರ್ಷವೂ ಆಗಿತ್ತು.

ಕನ್ನಡಕ್ಕೆ: ಮಲ್ಲನಗೌಡರ್

ರಾಜೇಂದ್ರನ್ ನಾರಾಯಣನ್

ರಾಜೇಂದ್ರನ್ ನಾರಾಯಣನ್
ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಬೋಧಿಸುವ ರಾಜೇಂದ್ರನ್ ಅವರು ಲಿಬ್‌ಟೆಕ್ ಇಂಡಿಯಾದ ಜೊತೆಗೂ ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ಲಾಕ್‌ಡೌನ್‌ಗೆ 1 ವರ್ಷ: ಇನ್ನೂ ಚೇತರಿಸಿಕೊಳ್ಳದ ಹೋಟೆಲ್ ಉದ್ಯಮ: ವಿಶೇಷ ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...