Homeಮುಖಪುಟಹೋಳಿಕಾ ದಹನ ಆಚರಣೆಯಲ್ಲಿ ಬೆಂಕಿ ಅವಘಡ; ಒಂದೇ ಕುಟುಂಬದ 3 ಮಕ್ಕಳು ಸಾವು

ಹೋಳಿಕಾ ದಹನ ಆಚರಣೆಯಲ್ಲಿ ಬೆಂಕಿ ಅವಘಡ; ಒಂದೇ ಕುಟುಂಬದ 3 ಮಕ್ಕಳು ಸಾವು

- Advertisement -
- Advertisement -

ಹೋಳಿ ಹಬ್ಬ ಆಚರಣೆಯ ‘ಹೋಳಿಕಾ ದಹನ್’‌‌‌‌‌‌‌‌ ಸಮಾರಂಭದಲ್ಲಿ ಉಂಟಾದ ಬೆಂಕಿ ಅವಘಡದಿಂದಾಗಿ ಬಿಹಾರದ ಬೋಧ್‌ ಗಯಾದ ಒಂದೇ ಕುಟುಂಬದ ಮೂವರು ಮಕ್ಕಳು ಸಾವಿಗೀಡಾಗಿರುವ ಘಟನೆ ಭಾನುವಾರ ನಡೆದಿದೆ.

ಘಟನೆಯಲ್ಲಿ ಮೂವರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೂ ಒಂದು ಮಗು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಸ್ಥಳೀಯರ ಪ್ರಕಾರ, ಹೋಲಿ ದಹನ ಮಾಡುತ್ತಿರುವಾಗ ಒಣಗಿದ ಹುಲ್ಲಿಗೆ ಬೆಂಕಿ ತಗುಲಿದ್ದು, ಮಕ್ಕಳು ಅದರೆಡೆಗೆ ಸಿಕ್ಕಿಹಾಕಿಕೊಂಡು ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ನಂದಿಗ್ರಾಮ: ವೀಲ್‌ಚೇರ್‌ನಲ್ಲಿಯೇ ರ್‍ಯಾಲಿ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕುಟುಂಬ ಸದಸ್ಯರು ಯಾರ ವಿರುದ್ಧವೂ ಯಾವುದೇ ದೂರು ದಾಖಲಿಸಿಲ್ಲ ಮತ್ತು ಅಂತಿಮ ವಿಧಿಗಳನ್ನು ಮಾಡಿ ಮುಗಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾಗಿ ವರದಿಯಾಗಿದೆ.

ಕೊರೊನಾ ಪ್ರಕರಣಗಳ ಉಲ್ಬಣದ ಮಧ್ಯೆ, ಹೋಲಿ ಆಚರಣೆಗಳು ಭಾನುವಾರ ಸಂಜೆಯಿಂದ ಪ್ರಾರಂಭವಾದವು. ಅನೇಕ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೋಳಿ ಹಬ್ಬದ ಸಾರ್ವಜನಿಕ ಆಚರಣೆಯನ್ನು ನಿಷೇಧಿಸಿವೆ.

ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ, ಬಿಹಾರ, ಜಾರ್ಖಂಡ್, ಗೋವಾ, ಉತ್ತರಾಖಂಡ, ಮಧ್ಯಪ್ರದೇಶ, ಮತ್ತು ಹರಿಯಾಣ ಸೇರಿದಂತೆ ರಾಜ್ಯಗಳು ಲಾಕ್‌ಡೌನ್ ವಿಧಿಸಿದ್ದು ಮತ್ತು ಹೋಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿವೆ.

ಇದನ್ನೂ ಓದಿ: ಆಸ್ಪತ್ರೆ ಸೇರಲಿರುವ ಶರದ್ ಪವಾರ್‌: ಎಲ್ಲಾ ಕಾರ್ಯಕ್ರಮ ರದ್ದು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read