2018ರ ಜೂನ್ 6 ರಂದು ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಕಾರ್ಯಕರ್ತ ರೋಣಾ ವಿಲ್ಸನ್‌ರವರ ಕಂಪ್ಯೂಟರ್‌ನಲ್ಲಿ ಅವರ ಬಂಧನಕ್ಕೂ ಒಂದು ವರ್ಷದ ಮೊದಲೇ ಹ್ಯಾಕರ್ “ದೋಷಾರೋಪಣೆ” ಫೈಲ್‌ಗಳನ್ನು ಸೇರಿಸಲಾಗಿತ್ತು ಮತ್ತು ಅವರ ಮೊಬೈಲ್ ಮೇಲೆ ಪೆಗಾಸಸ್ ಗೂಢಚರ್ಯೆ ನಡೆಸಲಾಗಿತ್ತು ಎಂದು ಯುಎಸ್ ಮೂಲದ ಡಿಜಿಟಲ್ ಫೊರೆನ್ಸಿಕ್ಸ್ ಕಂಪನಿಯ ಹೊಸ ವರದಿಯು ತಿಳಿಸಿದೆ.
ಈ ಸಾಕ್ಷ್ಯಗಳನ್ನೇ ಬಳಸಿಕೊಂಡು ರೋಣಾ ವಿಲ್ಸನ್ ಮತ್ತು ವಕೀಲರು, ಶಿಕ್ಷಣ ತಜ್ಞರು ಮತ್ತು ಕಲಾವಿದರು ಸೇರಿದಂತೆ ಇತರ 15 ಜನರನ್ನು ಮೂರು ವರ್ಷಗಳಿಂದ ಜಾಮೀನು ಇಲ್ಲದೆ ಬಂಧಿಸಿ ಜೈಲಿಗೆ ಹಾಕಲಾಗಿದೆ.
ಮ್ಯಾಸಚೂಸೆಟ್ಸ್ ಮೂಲದ ಡಿಜಿಟಲ್ ಫೋರೆನ್ಸಿಕ್ಸ್ ಸಂಸ್ಥೆ ಆರ್ಸೆನಲ್ ಕನ್ಸಲ್ಟಿಂಗ್ ಅಂತಿಮ ವರದಿಯಲ್ಲಿ ವಿಲ್ಸನ್‌ರವರ ಆಪಲ್ ಫೋನ್ ಅನ್ನು ಇಸ್ರೇಲ್ ಮೂಲದ ಎನ್‌ಎಸ್‌ಒ ಗ್ರೂಪ್ ಮಾತ್ರವಲ್ಲದೇ ಹಲವು ಕಂಪನಿಗಳು ಗೂಢಾಚರ್ಯೆ ನಡೆಸಿದ್ದವು ಎಂದು ತಿಳಿಸಿದೆ. ಪೆಗಾಸಸ್ ಅನ್ನು ಆಯ್ಕೆಯಾದ ಸರ್ಕಾರಗಳಿಗೆ ಮಾತ್ರ ಮಾರಲಾಗುತ್ತದೆ ಎನ್ನುವುದನ್ನು ಈ ಸಂದರ್ಭದಲ್ಲಿ ನಾನು ಗಮನಿಸಬಹುದಾಗಿದೆ.
ಭೀಮಾ ಕೊರೆಗಾವ್ ಪ್ರಕರಣದಲ್ಲಿ ವಿಲ್ಸನ್ ಮೊದಲ ಟಾರ್ಗೆಟ್ ಆಗಿದ್ದರು. 2017ರ ಮಧ್ಯಭಾಗದಿಂದಲೇ ರೋಣಾ ವಿಲ್ಸನ್‌ರವರ ಮೇಲೆ ಪೆಗಾಸಸ್ ಗೂಢಾಚರ್ಯೆ ನಡೆಸಲಾಗಿದೆ. ಜೊತೆಗೆ ಅವರ ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸುಳ್ಳು ಸಾಕ್ಷಿಗಳನ್ನು ತುರುಕಲಾಗಿದೆ. ಈ ಫೈಲ್‌ಗಳನ್ನು 15 ನವೆಂಬರ್ 2018 ರಿಂದ, ಆರಂಭದಲ್ಲಿ ಪುಣೆ ಪೊಲೀಸರು ಮತ್ತು ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಮುಖ ಸಾಕ್ಷಿಯಾಗಿ ಉಲ್ಲೇಖಿಸಲಾಗಿದೆ. ಆದರೆ ಅವರ ಮೊಬೈಲ್ ಮತ್ತು ಲ್ಯಾಪ್ ಟಾಪ್ ಎನ್‌ಐಎ ಪೊಲೀಸರ ವಶದಲ್ಲಿರುವುದರಿಂದ ಫೋರೆನ್ಸಿಕ್ಸ್ ತನಿಖೆ ನಡೆಸಲಾಗುತ್ತಿಲ್ಲ.
ಜುಲೈ 5, 2017 ರಿಂದ ಏಪ್ರಿಲ್ 10, 2018ರವರೆಗೆ ಪೆಗಾಸಸ್ ಬಳಸಿ ಐಫೋನ್ 6S ನಿಂದ ಎರಡು ಐಟ್ಯೂನ್ಸ್ ಬ್ಯಾಕಪ್‌ಗಳಲ್ಲಿ ವಿಲ್ಸನ್ ಕಂಪ್ಯೂಟರ್‌ನ ವಿಂಡೋಸ್ ವಾಲ್ಯೂಮ್‌ನಲ್ಲಿ ದೋಷಾರೋಪಣೆಗಳನ್ನು ಸೇರಿಸಲಾಗಿದೆ ಎಂದು ಆರ್ಸೆನಲ್ ಕನ್ಸಲ್ಟಿಂಗ್ ಹೇಳಿದೆ.
ಇದನ್ನೂ ಓದಿ: ಅಜೀವಪರ್ಯಂತ ಮಾನವಹಕ್ಕುಗಳ ಹೋರಾಟಗಾರ ರೋಣ ವಿಲ್ಸನ್


