Homeಮುಖಪುಟಹಿಂದಿ ಹೇರಿಕೆಗೆ ತೀವ್ರ ವಿರೋಧ: ಹಿಂದಿಗುಲಾಮಗಿರಿಬೇಡ ನ್ಯಾಷನಲ್ ಟ್ರೆಂಡಿಂಗ್‌!

ಹಿಂದಿ ಹೇರಿಕೆಗೆ ತೀವ್ರ ವಿರೋಧ: ಹಿಂದಿಗುಲಾಮಗಿರಿಬೇಡ ನ್ಯಾಷನಲ್ ಟ್ರೆಂಡಿಂಗ್‌!

ಡಾ.ಬಿ.ಆರ್ ಅಂಬೇಡ್ಕರ್, ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಜಿ.ಪಿ ರಾಜರತ್ನಂ ಸೇರಿದಂತೆ ಹಲವು ಮಹಾನೀಯರು ಹೇಳಿಕೆಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ.

- Advertisement -
- Advertisement -

ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕರೆ ನೀಡಿದ್ದ ಟ್ವಿಟರ್ ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ. ಕೇಂದ್ರ-ರಾಜ್ಯ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿರುವ ಕನ್ನಡಿಗರು ಹಿಂದಿಗುಲಾಮಗಿರಿಬೇಡ ಹೆಸರಿನಲ್ಲಿ ನ್ಯಾಷನಲ್ ಟ್ರೆಂಡಿಂಗ್ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸಮೀಪ ರಾಜ್ಯ ಸರ್ಕಾರದ ವತಿಯಿಂದ ನಡೆದ ಕ್ಷಿಪ್ರ ಕಾರ್ಯಪಡೆ ಬೆಟಾಲಿಯನ್ ಸ್ಥಾಪನೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಿ ಹಿಂದಿಯಲ್ಲಿ ಬ್ಯಾನರ್, ನಿರೂಪಣೆ ಸೇರಿದಂತೆ ಇಡೀ ಕಾರ್ಯಕ್ರಮ ನಡೆಸಿದ್ದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಅದನ್ನು ಖಂಡಿಸಿ #ಹಿಂದಿಗುಲಾಮಗಿರಿಬೇಡ #No‌ToHindiSlavery ಹ್ಯಾಷ್‌ಟ್ಯಾಗ್ ಹೆಸರಿನಲ್ಲಿ ಟ್ವಿಟರ್ ಟ್ರೆಂಡಿಂಗ್‌ಗೆ ಕರವೇ ಕರೆ ನೀಡಿತ್ತು. #ಹಿಂದಿಗುಲಾಮಗಿರಿಬೇಡ ಹ್ಯಾಷ್‌ಟ್ಯಾಗ್ ರಾಷ್ಟ್ರಮಟ್ಟದಲ್ಲಿಯೇ 3 ನೇ ಸ್ಥಾನದಲ್ಲಿ ಟ್ರೆಂಡಿಂಗ್‌ ಆಗುತ್ತಿದ್ದು, ಕೇವಲ ಒಂದೂವರೆ ಗಂಟೆ ಸಮಯದಲ್ಲಿಯೇ 16 ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳು ದಾಖಲಾಗಿವೆ.

ಭಾರತ ಬಹುಭಾಷಿಕರ ದೇಶ. ವಿವಿಧ ಭಾಷಾ‌ಸಮುದಾಯಗಳ ಮೇಲೆ ಹಿಂದಿಯನ್ನು ಹೇರುವುದು ದೇಶ ಒಡೆಯುವ ನೀಚತನ.‌ ಇದಕ್ಕಿಂತ ದೊಡ್ಡ ದೇಶದ್ರೋಹ ಇನ್ನೊಂದಿಲ್ಲ. ದೇಶ ಬಹುತ್ವದೊಂದಿಗೆ ಒಂದಾಗಿರಲು‌ ಬಿಡಿ. ಭಾರತ ಒಕ್ಕೂಟ ಬಲಗೊಳಿಸುವ ಕೆಲಸ ಮಾಡಿ. #ಹಿಂದಿಗುಲಾಮಗಿರಿಬೇಡ #No‌ToHindiSlavery ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡ ಟ್ವೀಟ್ ಮಾಡಿದ್ದಾರೆ.

ಗುಜರಾತಿನ ಕಾರ್ಯಕ್ರಮದಲ್ಲಿ ಗುಜರಾತಿ ಭಾಷೆಯನ್ನು, ತಮಿಳುನಾಡಿನಲ್ಲಿ ತಮಿಳು ಭಾಷೆಯಲ್ಲಿ ಬ್ಯಾನರ್ ಮತ್ತು ಕಾರ್ಯಕ್ರಮ ನಡೆಸುವುದಾರೆ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ನಡೆಸಲು ಏಕೆ ಸಾಧ್ಯವಿಲ್ಲ ಎಂದು ಅನಂತ್ ಮಹಾಜನ್ ಪ್ರಶ್ನಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ನಮ್ಮ ಭಾಷೆಯಲ್ಲಿ ಮಾತನಾಡಲು ಮತ್ತು ಜೀವಿಸುದಕ್ಕಾಗಿ ಹೋರಾಟ ಮಾಡಬೇಕಿರುವುದು ದುರಂತ. ಕರ್ನಾಟಕದಲ್ಲಿದ್ದಾಗ ಕನ್ನಡ ಕಲಿಯಿರಿ ಮತ್ತು ಮಾತನಾಡಿ. ಇದು ಕೇವಲ ಭಾವನೆಗಳ ವಿಷಯ ಮಾತ್ರವಲ್ಲ, ಹಿಂದಿ ಹೇರಿಕೆಯಿಂದಾಗಿ ಕಳೆದುಹೋದ ಉದ್ಯೋಗಗಳಿಗಾಗಿಯೂ ನಮ್ಮ ಹೋರಾಟದವಿದೆ ಎಂದು ಲಾವಣ್ಯ ಬಲ್ಲಾಳ್‌ರವರು ಟ್ವೀಟ್ ಮಾಡಿದ್ದಾರೆ.

ನೆಹರೂ ಕನ್ನಡಕ್ಕಿಂತ ದೊಡ್ಡವರಲ್ಲ. ಅವರು ಬೇಕಿದ್ದರೆ ಕನ್ನಡ ಕಲಿಯಲಿ ಅಥವಾ ಅವರ ಭಾಷಣಗಳನ್ನು ಕನ್ನಡಕ್ಕೆ ಭಾಷಾಂತರಿಸಲಿ ಎಂಬ ಕುವೆಂಪು ಹೇಳಿಕೆಯನ್ನು ಉಲ್ಲೇಖಿಸಿ ದಿನೇಶ್ ಕುಮಾರ್ ದಿನೂ ಟ್ವೀಟ್‌ ಮಾಡಿದ್ದಾರೆ. ಅದೇ ರೀತಿಯಾಗಿ ಡಾ.ಬಿ.ಆರ್ ಅಂಬೇಡ್ಕರ್, ಪೂರ್ಣಚಂದ್ರ ತೇಜಸ್ವಿ, ಜಿ.ಪಿ ರಾಜರತ್ನಂ ಸೇರಿದಂತೆ ಹಲವು ಮಹಾನೀಯರು ಹೇಳಿಕೆಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಆರ್ಟಿಕಲ್ 343 ಒಕ್ಕೂಟ ಸರ್ಕಾರದ ಅಧಿಕೃತ ಭಾಷೆ ದೇವನಾಗರಿ ಲಿಪಿಯಲ್ಲಿ ಹಿಂದಿಯಾಗಿರಬೇಕು ಎಂದು ಹೇಳುತ್ತದೆ. ಕೇವಲ ಹಿಂದಿ ಮಾತ್ರವೇ ಏಕೆ? ಆರ್ಟಿಕಲ್ 343 ಅನ್ನು ತಿದ್ದುಪಡಿ ಮಾಡಿ ಮತ್ತು ಎಲ್ಲಾ ಭಾರತೀಯ ಭಾಷೆಗಳನ್ನು 8 ನೇ ಶೆಡ್ಯೂಲ್‌ನಲ್ಲಿ ಅಧಿಕೃತ ಭಾಷೆಯಾಗಿ ಗುರುತಿಸಬೇಕು ಎಂದು ಅರುಣ್ ಜಾವಗಲ್ ಒತ್ತಾಯಿಸಿದ್ದಾರೆ.

ಕೆಲವು ಗಮನ ಸೆಳೆದ ಟ್ವೀಟ್‌ಗಳು ಇಲ್ಲಿವೆ.


ಇದನ್ನೂ ಓದಿ: ಹಿಂದಿ ಹೇರಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ: ಬಿಎಸ್‌ವೈ, ಅಮಿತ್‌ ಶಾ ವಿರುದ್ಧ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...