Homeಮುಖಪುಟಗೆದ್ದೇ ಮನೆಗೆ ತೆರಳುತ್ತೇವೆ, ಇಲ್ಲವೆಂದರೆ ತ್ರಿವರ್ಣ ಧ್ವಜದಲ್ಲಿ ನಮ್ಮ ಮೃತದೇಹ ಹೋಗಲಿವೆ!

ಗೆದ್ದೇ ಮನೆಗೆ ತೆರಳುತ್ತೇವೆ, ಇಲ್ಲವೆಂದರೆ ತ್ರಿವರ್ಣ ಧ್ವಜದಲ್ಲಿ ನಮ್ಮ ಮೃತದೇಹ ಹೋಗಲಿವೆ!

- Advertisement -
- Advertisement -

“ನಾವು ರೈತರು. ಹೋರಾಟ ಎಂಬುದು ನಮ್ಮ ರಕ್ತದಲ್ಲೇ ಬಂದಿದೆ. ನನ್ನ ಇಡೀ ಕುಟುಂಬ ಈ ಆಂದೋಲನದಲ್ಲಿ ಭಾಗಿಯಾಗಿದೆ. ನನ್ನ 14 ವರ್ಷದ ಮೊಮ್ಮಗಳು ಕೂಡ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾಗಿದ್ದಾಳೆ. ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ಅದನ್ನು ಪಡೆದೇ ಇಲ್ಲಿಂದ ತೆರಳುತ್ತೇವೆ”.

ಇದು ಪಂಜಾಬ್‌ನ ಬಟಿಂಡಾ ಜಿಲ್ಲೆಯಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿರುವ ಬೆಹಮನ್ದವಾನಾ ಗ್ರಾಮದ 72 ವರ್ಷದ ರೈತ ಬಲ್ವಂತ್ ಸಿಂಗ್ ಅವರ ಮನದಾಳದ ಮಾತುಗಳು.

ಬಲವಂತ್ ಸಿಂಗ್, ಕಳೆದ 5 ತಿಂಗಳಿನಿಂದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಹಮನ್ ದವಾನಾ ಗ್ರಾಮದಲ್ಲಿ 12 ಎಕರೆ ಜಮೀನು ಹೊಂದಿರುವ ಇವರು, ಗೋಧಿ, ಭತ್ತ, ಹತ್ತಿ ಜೊತೆಗೆ ತರಕಾರಿಯನ್ನು ಬೆಳೆಯುತ್ತಾರೆ. ಸದ್ಯ ಹೊಲದಲ್ಲಿ ಗೋಧಿ ಬಿತ್ತನೆ ಮಾಡಿ, ಹೋರಾಟದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಫೇಸ್‌ಬುಕ್ ಲೈವ್ ನೋಡಿ: ಪಂಜಾಬ್‌ನಿಂದ ನಾನುಗೌರಿ ತಂಡದ ಮಮತ ಎಂ

Photo Courtesy: DNA India

ಮೊದಲಿಗೆ ತಮ್ಮ ಗ್ರಾಮದಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡ ಇವರು ನಂತರ ಬಟಿಂಡಾ, ಪಟಿಯಾಲ, ಪಂಜಾಬ್ಲ್ಲಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಟೋಲ್‌ಪ್ಲಾಜಾ ಬಂದ್, ರಿಲಯನ್ಸ್ ಪೆಟ್ರೋಲ್ ಬಂಕ್, ಮಾಲ್‌‌ಗಳನ್ನು ಬಂದ್ ಮಾಡಿ ಹೋರಾಟ ನಡೆಸಿದ್ದಾರೆ. ನಂತರ ನವೆಂಬರ್ 26 ರಂದು ದೆಹಲಿಗೆ ಬಂದು ಟಿಕ್ರಿ ಗಡಿ ಭಾಗದಲ್ಲಿ ತಮ್ಮ ಟ್ರ್ಯಾಲಿ, ಮತ್ತು ಲಂಗರ್‌‌ನೊಂದಿಗೆ ಹೋರಾಟದಲ್ಲಿ ಜೊತೆಯಾಗಿದ್ದಾರೆ.

ಒಬ್ಬ ಮಗ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ಇವರ ಮನೆಯ ಮೂಲ ಉದ್ಯೋಗ ಕೃಷಿ. ಮಗ ಕೂಡ ಕೃಷಿಯನ್ನೇ ಮಾಡುತ್ತಿದ್ದು, ಸದ್ಯ ಊರು ಮತ್ತು ಪ್ರತಿಭಟನಾ ಸ್ಥಳಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ.

“ಸರ್ಕಾರ ಈ ಕಾನೂನುಗಳನ್ನು ಜಾರಿ ಮಾಡಿದ ನಂತರ ಊರಿನಲ್ಲಿ ಹಲವು ಬದಲಾವಣೆಗಳು ಆರಂಭವಾದವು. ಮನೆಯಲ್ಲಿ ಎಲ್ಲರೂ ವಿದ್ಯಾವಂತರಾಗಿರುವುದರಿಂದ ಕಾನೂನುಗಳು ನಮ್ಮ ಮೇಲೆ ಹಿಡಿತ ಸಾಧಿಸುತ್ತವೆ ಎಂಬ ವಿಚಾರ ತಿಳಿಯಿತು. ಇದರ ಜೊತೆಗೆ ರೈತ ಸಂಘಟನೆಗಳು, ವಿದ್ಯಾವಂತ ಯುವಜನರು ಗ್ರಾಮಕ್ಕೆ ಬರತೊಡಿದರು. ಊರಿನಲ್ಲಿ ಸಭೆಗಳು ನಡೆದವು. ಸಭೆಗಳಲ್ಲಿ ಕಾನೂನುಗಳು ಹೇಗೆ ರೈತರನ್ನು ಕಡೆಗಣಿಸಿ, ಕಾರ್ಫೊರೇಟ್ ಕಂಪನಿಗಳಿಗೆ ವರದಾನವಾಗಲಿದೆ. ಇದರ ಜೊತೆಗೆ ಎಂಎಸ್ಪಿ ಹೇಗೆ ರೈತರಿಂದ ದೂರವಾಗಿಲಿದೆ ಎಂಬುದನ್ನು ತಿಳಿಸಿದರು. ಹಾಗಾಗಿ ಕಾನೂನುಗಳ ಅನಾನುಕೂಲಗಳ ಬಗ್ಗೆ ನಮಗೆ ತಿಳಿಯಿತು” ಎಂದು ಬಲ್ವಂತ್ ಸಿಂಗ್ ಹೇಳುತ್ತಾರೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಆಸರೆಯಾದ ಟೆಂಟ್ ಸಿಟಿ ಎಂಬ ಹೊಸ ನಗರ..!

“ಇಡೀ ಕುಟುಂಬ ಈ ಹೋರಾಟದಲ್ಲಿ ತೊಡಗಿಕೊಂಡಿದೆ. ಬಿಜೆಪಿ ಮುಖಂಡ ಸರ್ಜಿತ್ ಕುಮಾರ್ ಜಾನೆ ಮನೆಗೆ ಮಹಿಳೆಯರು ಮುತ್ತಿಗೆ ಹಾಕಿದವರಲ್ಲಿ ನನ್ನ 14 ವರ್ಷದ ಮೊಮ್ಮಗಳು ಕೂಡ ಇದ್ದಳು. ನನಗೆ ನನ್ನ ಮೊಮ್ಮಕ್ಕಳು ಓದುವುದು, ಬರೆಯುವುದನ್ನು ಕಲಿಸಿದ್ದಾರೆ. ಟಿಕ್ರಿ ಪ್ರತಿಭಟನಾ ಸ್ಥಳದಲ್ಲಿ ಹರಿಯಾಣದವರ ಜೊತೆ ಇರುವುದರಿಂದ ಹರಿಯಾಣಿ ಭಾಷೆ ಕೂಡ ಕಲಿಯುತ್ತಿದ್ದೇನೆ

ನಾನು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು)ನ ಉಗ್ರಾನ್ ಬಳಗದ ಸದಸ್ಯನಾಗಿದ್ದೇನೆ. ಜನವರಿ 26 ರ ಘಟನೆ ನಂತರ ಗೋಧಿ ಮೀಡಿಯಾ ನಮ್ಮ ಬಗ್ಗೆ ಹಲವು ರೀತಿಯಲ್ಲಿ ಅಪಪ್ರಚಾರ ಮಾಡಿದೆ. ಹಾಗೆಂದು ನಾವು ಕುಂದಿಲ್ಲ. ನಮ್ಮ ಜನ ಈ ಮಾಧ್ಯಮಗಳನ್ನು ಬಹಿಷ್ಕರಿಸಿದ್ದಾರೆ. ಆದರೆ, ಪ್ರತಿಭಟನಾ ಸ್ಥಳದಲ್ಲಿ ನಾವೇ ಭದ್ರತೆ ಹೆಚ್ಚಿಸಿಕೊಂಡಿದ್ದೇವೆ. ಟಿಕ್ರಿಯಲ್ಲಿ 25 ಕಿಲೋಮೀಟರ್ಗೂ ಹೆಚ್ಚಿನ ವಿಸ್ತಿರ್ಣ ಇದೆ. ಪ್ರತಿಭಟನಾ ನಿರತರ ರಕ್ಷಣೆ ಕೂಡ ಮುಖ್ಯವಾದರಿಂದ ನಾವು ಸ್ವಯಂಸೇವಕರನ್ನು ಹೆಚ್ಚು ಮಾಡಿಕೊಂಡು ಪಹರೇ ನಡೆಸುತ್ತಿದ್ದೇವೆ” ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ರೈತರನ್ನು ಬೆಂಬಲಿಸುವ ಖಲಿಸ್ತಾನಿ-ಪಾಕಿಸ್ತಾನಿ ಟ್ವಿಟ್ಟರ್‌ ಖಾತೆಗಳನ್ನು ಕಿತ್ತುಹಾಕಿ: ಟ್ವಿಟರ್‌ಗೆ ಕೇಂದ್ರ ತಾಕೀತು

“ಶಾಂತಿಯುತವಾಗಿ ಹೋರಾಡುತ್ತಿದ್ದವರನ್ನು ಬೇರೆ ರೀತಿಯಲ್ಲಿ ಮಾಧ್ಯಮ ತೋರಿಸಿದೆ. ಈಗ ನಾವು ಗೆಲ್ಲುವವರೆಗೂ ಹೋರಾಟ ನಡೆಸುತ್ತೇವೆ. ಕುಟುಂಬದ ಮೂಲ ಆದಾಯ ಕೃಷಿಯಾಗಿದೆ. ಅದೇ ನಮ್ಮ ಕೈತಪ್ಪಿದರೇ ಜೀವನ ನಡೆಸುವುದಾದರೂ ಹೇಗೆ..? ಹಾಗಾಗಿ ನಾವು ಗೆದ್ದು ಹೋಗುತ್ತೇವೆ ಅಥವಾ ಭಾರತದ ತ್ರಿವರ್ಣ ಧ್ವಜದಲ್ಲಿ ನಮ್ಮ ಮೃತದೇಹವನ್ನು ಸುತ್ತಿಕೊಂಡು ಹೋಗುತ್ತೇವೆ” ಎಂದು ಅವರು ಹೇಳುತ್ತಾರೆ.

ರೈತ ಹೋರಾಟ: ಟಿಕ್ರಿ ಗಡಿಯಲ್ಲಿ ಡೆತ್ ನೋಟ್ ಬರೆದಿಟ್ಟು ರೈತ ಸಾವು
ಸಾಂದರ್ಭಿಕ ಚಿತ್ರ PC: PTI

“ಒಟ್ಟಿನಲ್ಲಿ ನಾವು ಇಲ್ಲಿಂದ ಕದಲುವ ಮಾತೇ ಇಲ್ಲ. ಈಗಂತೂ ಜನಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಹರಿಯಾಣದಿಂದ ಬರುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು, ಪ್ರತಿಭಟನಾ ಸ್ಥಳ ಮತ್ತಷ್ಟು ವಿಸ್ತರಿಸಲಿದೆ” ಎಂದು ಬಲ್ವಂತ್ ಸಿಂಗ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಹರಿಯಾಣ ಮತ್ತು ಪಂಜಾಬ್ ರೈತರನ್ನು ಬೇರೆ ಮಾಡಲು ಸರ್ಕಾರ ಪ್ರಯತ್ನ ನಡಸಿತು. ಆದರೆ, ಅದು ಸಫಲವಾಗಿಲ್ಲ. ನಾವೆಲ್ಲಾ ಇಲ್ಲಿ ಸಹೋದರರಂತೆ ಇದ್ದೇವೆ. ಇಲ್ಲಿಗೆ ಹರಿಯಾಣದಿಂದ ಹಾಲು ಬರುತ್ತಿದೆ. ಸಂಘಟನೆಗಳು ಬೇರೆ ಬೇರೆ, ರಾಜ್ಯ, ಊರುಗಳು ಬೇರೆ ಬೇರೆ ಆದರೆ ಒಂದು ಒಳ್ಳೆಯ ಕಾರಣಕ್ಕೆ ನಾವೇಲ್ಲಾ ಒಂದಾಗಿದ್ದೇವೆ. ಹಾಗಾಗಿ ಈ ಹೋರಾಟದಲ್ಲಿ ಗೆಲುವು ನಮ್ಮದು ಎನ್ನುತ್ತಾರೆ ಬಂಟಿಡಾ ಜಿಲ್ಲೆಯ ಬಲ್ವಂತ್ ಸಿಂಗ್.

ಇದನ್ನೂ ಓದಿ: ಐತಿಹಾಸಿಕ ರೈತ ಹೋರಾಟದ ತವರಿನಲ್ಲಿ ಹೆಚ್ಚುತ್ತಲೇ ಇದೆ ಹುಮ್ಮಸ್ಸು..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...

ಬೆಂಗಳೂರು ಚಲೋ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಚಿವ ಮಹದೇವಪ್ಪ: ಸಿಎಂ ಜೊತೆ ಚರ್ಚಿಸುವ ಭರವಸೆ 

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’...

ಛತ್ತೀಸ್‌ಗಢ : ಬಿಜಾಪುರದಲ್ಲಿ 41 ಮಾವೋವಾದಿಗಳು ಶರಣಾಗತಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 26) 41 ಮಂದಿ ನಕ್ಸಲರು ಶರಣಾಗಿದ್ದು, ಈ ಪೈಕಿ 32 ಮಂದಿಯ ತಲೆಗೆ ಒಟ್ಟು 1.19 ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ವರದಿಯಾಗಿದೆ. ಸರ್ಕಾರದ ಹೊಸ...