ಗುಜರಾತ್‌ನ ಮಹಿಸಾಗರ್ ಜಿಲ್ಲೆಯ ಜಿಲ್ಲಾಧಿಕಾರಿ ನೇಹಾ ಕುಮಾರಿ ದುಬೆ ಅವರು ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಧಿಕಾರಿ ನೇಹಾ ಅವರು ದಲಿತ ಕಾನೂನು ವಿದ್ಯಾರ್ಥಿಯ ಮುಂದೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ.
“ಶೇಖಡಾ 90ರಷ್ಟು ದೌರ್ಜನ್ಯ ಪ್ರಕರಣಗಳನ್ನು ‘ಬ್ಲ್ಯಾಕ್ ಮೇಲ್ ಸಾಧನಗಳಾಗಿ’ ಬಳಸಿಕೊಳ್ಳಲಾಗುತ್ತಿದೆ. ಹೆಚ್ಚಿನ ಮಹಿಳೆಯರು ಸೆಕ್ಷನ್ 498ಎ (ಕೌಟುಂಬಿಕ ದೌರ್ಜನ್ಯ) ಅಡಿಯಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಡಿಸಿ ನೇಹಾ ಅವರು ಹೇಳಿರುವುದು ವೈರಲ್ ವಿಡಿಯೋದಲ್ಲಿ ಇದೆ. ಅಲ್ಲದೆ, ಅವರು ವಕೀಲರು ಚಪ್ಪಲಿಯಿಂದ ಹೊಡೆಯಲು ಅರ್ಹರು ಎಂದಿದ್ದಾರೆ. ಇದು ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದಲಿತ ಸಮುದಾಯದ ಜನರ ಕೋಪಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಡಿಸಿ ವಿರುದ್ದ ದೌರ್ಜನ್ಯ ಪ್ರಕರಣ ದಾಖಲಿಸಬೇಕು, ಅವರನ್ನು ಅಮಾನತುಗೊಳಿಸಬೇಕು ಎಂಬ ಒತ್ತಾಯಿಸಲಾಗುತ್ತಿದೆ ಎಂದು ವರದಿಗಳು ಹೇಳಿವೆ.
देखिए, गुजरात की महिला IAS का जातिवादी चरित्र
90 परसेंट Atrocities के केस ( दलित आदिवासी) ब्लैकमेल के लिए करते है – एसा गुजरात के महीसागर जिले के महिला कलेक्टर नेहा कुमारी दुबे ने 3 लोगों की मौजूदगी में सरकारी कार्यक्रम के दौरान डायस पर से कहा, जिसका वीडियो आप सुन सकते है।… pic.twitter.com/IDeHoExmmI
— Jignesh Mevani (@jigneshmevani80) October 29, 2024
ಕ್ರಮಕ್ಕೆ ಆಗ್ರಹಿಸಿದ ಶಾಸಕ ಜಿಗ್ನೇಶ್ ಮೆವಾನಿ
ಜಿಲ್ಲಾಧಿಕಾರಿಯ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೆವಾನಿ,”ಜಿಲ್ಲಾಧಿಕಾರಿ ದಲಿತ, ಬುಡಕಟ್ಟು ಸಮುದಾಯದ ಜನರನ್ನು ಅವಮಾನಿಸಿದ್ದಾರೆ. ಅವರನ್ನು ತಕ್ಷಣ ಅಮಾನತುಗೊಳಿಸಬೇಕು. ಅವರ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
https://twitter.com/jigneshmevani80/status/1851528836829085801
ಮತ್ತೊಂದು ಎಕ್ಸ್ ಪೋಸ್ಟ್‌ನಲ್ಲಿ “ಜಿಲ್ಲಾಧಿಕಾರಿ ನೇಹಾ ಕುಮಾರಿ ದುಬೆ ವಿರುದ್ಧ ಲೂನವಾಡ ತಾಲೂಕು ಟೌನ್ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿದ್ದೇನೆ” ಎಂದು ದೂರಿನ ಪ್ರತಿ ಹಂಚಿಕೊಂಡಿದ್ದಾರೆ.
મહિસાગર જિલ્લા કલેકટર IAS નેહા કુમારી દુબે વિરુદ્ધમાં મારા દ્વારા લુણાવાડા તાલુકા ટાઉન પોલીસ સ્ટેશનમાં એટ્રોસિટી એક્ટ હેઠળ ગુનો દાખલ કરવા ફરિયાદ કરવામાં આવી. pic.twitter.com/FEnoALB2xP
— Jignesh Mevani (@jigneshmevani80) October 30, 2024
ಗುಜರಾತ್ ಪರಿಶಿಷ್ಟ ಜಾತಿಗಳ ಕಾಂಗ್ರೆಸ್ ಅಧ್ಯಕ್ಷ ಹಿತೇಂದ್ರ ಪಿಠಾರಿಯಾ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಜಿಲ್ಲಾಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ದಿ ಮೂಕನಾಯಕ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಪಿಠಾರಿಯಾ, “ಆಡಳಿತಾತ್ಮಕ ಸ್ಥಾನದಲ್ಲಿರುವ ಜನರು ಇಂತಹ ಜಾತಿವಾದಿ ಮನಸ್ಥಿತಿಯನ್ನು ಹೊಂದಿರುವಾಗ, ಅವರು ದಲಿತರು ಮತ್ತು ಬುಡಕಟ್ಟು ಜನಾಂಗದವರನ್ನು ಹೇಗೆ ನಡೆಸಿಕೊಳ್ಳಬಹುದು ಎಂಬುವುದನ್ನು ಊಹಿಸಲು ದುಃಖವಾಗುತ್ತದೆ. ಜಿಲ್ಲಾಧಿಕಾರಿ ನೇಹಾ ಕುಮಾರಿ ಅವರನ್ನು ಕೂಡಲೇ ಅಮಾನತು ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರಕರಣದ ಕುರಿತು ಮಾತನಾಡಿರುವ ದಲಿತ ಸಮುದಾಯದ ಕಾನೂನು ವಿದ್ಯಾರ್ಥಿ ವಿಜಯ್ ಪಾರ್ಮರ್, “ತಾನು ಸಮಸ್ಯೆಯೊಂದರ ಬಗ್ಗೆ ಹೇಳಿಕೊಳ್ಳಲು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದಾಗ, ಶೇ.90ರಷ್ಟು ದೌರ್ಜನ್ಯ ಪ್ರಕರಣಗಳನ್ನು ಬ್ಲ್ಯಾಕ್ ಮೇಲ್ ಸಾಧನವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಈ ಹೇಳಿಕೆಯು ಜಿಲ್ಲಾಧಿಕಾರಿಯ ಜಾತಿವಾದಿ ಮನಸ್ಥಿತಿಯನ್ನು ಬಿಂಬಿಸುತ್ತದೆ. ದಲಿತರ ವಿರುದ್ದದ ಸ್ಪಷ್ಟವಾದ ಪೂರ್ವಾಗ್ರಹವನ್ನು ತೋರಿಸುತ್ತದೆ” ಎಂದಿದ್ದಾರೆ.
ದಲಿತರ ಮೇಲಿನ ದೌರ್ಜನ್ಯಗಳಲ್ಲಿ ಹೆಚ್ಚಳ
ಗುಜರಾತ್‌ನಲ್ಲಿ ದಲಿತ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ವರದಿಗಳ ನಡುವೆಯೇ ಜಿಲ್ಲಾಧಿಕಾರಿ ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿಯ ಪ್ರಕಾರ, ದೇಶದಲ್ಲಿ 2022ರಲ್ಲಿ, 57,582 ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 2021ಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ. 13.1 ಹೆಚ್ಚಳವಾಗಿದೆ. ಗುಜರಾತ್‌ನಲ್ಲಿ ಮಾತ್ರ 2022ರಲ್ಲಿ 1,425 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಅಹಮದಾಬಾದ್‌ನಲ್ಲಿ ಅತಿ ಹೆಚ್ಚು (189) ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ ಕೊಲೆ, ಅತ್ಯಾಚಾರ ಮತ್ತು ಗಂಭೀರ ಗಾಯಗಳಂತಹ ಘಟನೆಗಳು ಸೇರಿವೆ. ಇದು ದೌರ್ಜನ್ಯ ಪ್ರಕರಣಗಳನ್ನು ಕೇವಲ ‘ಬ್ಲ್ಯಾಕ್‌ಮೇಲ್’ ಸಾಧನವಾಗಿ ಬಳಸಲಾಗುತ್ತಿದೆ ಎಂಬ ಜಿಲ್ಲಾಧಿಕಾರಿಯ ಹೇಳಿಕೆ ತದ್ವಿರುದ್ದವಾಗಿದೆ.
ಇದನ್ನೂ ಓದಿ : ದಲಿತ ಬಾಲಕನಿಗೆ ಥಳಿಸಿ, ಮೂತ್ರ ಕುಡಿಸಿದ ಪೊಲೀಸರು : ಆರೋಪ


