- Advertisement -
- Advertisement -
ಐಎನ್‍ಎಕ್ಸ್ ಮೀಡಿಯಾ ಪ್ರಕರಣ ಸಂಬಂಧ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಬಂಧಿಸಲು ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯ ಅನುಮತಿ ನೀಡಿದೆ.
ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಚಿದಂಬರಂರನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಇಡಿ ಮನವಿ ಮಾಡಲಾಗಿತ್ತು. ಅದಕ್ಕೆ ಕೋರ್ಟ್ ಇಂದು ಎರಡು ಆಯ್ಕೆ ನೀಡಿದ್ದು, ಒಂದು ಚಿದಂಬರಂ ಅವರನ್ನು 30 ನಿಮಿಷಗಳ ಕಾಲ ಕೋರ್ಟ್ ಆವರಣದಲ್ಲೆ ವಿಚಾರಣೆ ನಡೆಸಿ ನಂತರ ಕಸ್ಟಡಿ ಅರ್ಜಿಯ ಜೊತೆಗೆ ಮುಂದುವರೆಯುವುದು, ಅಥವಾ ಚಿದಂಬರಂರನ್ನು ಸದ್ಯ ತಿಹಾರ್ ಜೈಲಿಗೆ ಕಳಿಸಿ ಅಲ್ಲಿ ಅವರನ್ನು ಬಂಧನ ಮಾಡುವುದು. ಇದರಲ್ಲಿ ಇಡಿ ಎರಡನೇ ಆಯ್ಕೆಯನ್ನು ಒಪ್ಪಿಕೊಂಡಿದೆ.
ಇಡಿ ನಾಳೆ ಬೆಳಿಗ್ಗೆ ಚಿದಂಬರಂ ಅವರನ್ನು ಅರೆಸ್ಟ್ ಮಾಡಲಿದ್ದು, ನಂತರ ಸಂಜೆ 4 ಗಂಟೆಗೆ ಕೋರ್ಟ್ ಮುಂದೆ ಹಾಜರುಪಡಿಸಿ ಕಸ್ಟಡಿ ತೆಗೆದುಕೊಳ್ಳಲಿದೆ.


