Homeಮುಖಪುಟಜೈಲಿನಿಂದ ಚಿದಂಬರಂಗಿಲ್ಲ ಮುಕ್ತಿ: ಸಿಬಿಐ ಬಲೆಯಿಂದ ಇಡಿ ಕಂಟಕದತ್ತ ಕಾಂಗ್ರೆಸ್ ನಾಯಕ

ಜೈಲಿನಿಂದ ಚಿದಂಬರಂಗಿಲ್ಲ ಮುಕ್ತಿ: ಸಿಬಿಐ ಬಲೆಯಿಂದ ಇಡಿ ಕಂಟಕದತ್ತ ಕಾಂಗ್ರೆಸ್ ನಾಯಕ

- Advertisement -

ಐಎನ್‍ಎಕ್ಸ್ ಮೀಡಿಯಾ ಪ್ರಕರಣ ಸಂಬಂಧ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಬಂಧಿಸಲು ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯ ಅನುಮತಿ ನೀಡಿದೆ.

ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಚಿದಂಬರಂರನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಇಡಿ ಮನವಿ ಮಾಡಲಾಗಿತ್ತು. ಅದಕ್ಕೆ ಕೋರ್ಟ್ ಇಂದು ಎರಡು ಆಯ್ಕೆ ನೀಡಿದ್ದು, ಒಂದು ಚಿದಂಬರಂ ಅವರನ್ನು 30 ನಿಮಿಷಗಳ ಕಾಲ ಕೋರ್ಟ್ ಆವರಣದಲ್ಲೆ ವಿಚಾರಣೆ ನಡೆಸಿ ನಂತರ ಕಸ್ಟಡಿ ಅರ್ಜಿಯ ಜೊತೆಗೆ ಮುಂದುವರೆಯುವುದು, ಅಥವಾ ಚಿದಂಬರಂರನ್ನು ಸದ್ಯ ತಿಹಾರ್ ಜೈಲಿಗೆ ಕಳಿಸಿ ಅಲ್ಲಿ ಅವರನ್ನು ಬಂಧನ ಮಾಡುವುದು. ಇದರಲ್ಲಿ ಇಡಿ ಎರಡನೇ ಆಯ್ಕೆಯನ್ನು ಒಪ್ಪಿಕೊಂಡಿದೆ.

ಇಡಿ ನಾಳೆ ಬೆಳಿಗ್ಗೆ ಚಿದಂಬರಂ ಅವರನ್ನು ಅರೆಸ್ಟ್ ಮಾಡಲಿದ್ದು, ನಂತರ ಸಂಜೆ 4 ಗಂಟೆಗೆ ಕೋರ್ಟ್ ಮುಂದೆ ಹಾಜರುಪಡಿಸಿ ಕಸ್ಟಡಿ ತೆಗೆದುಕೊಳ್ಳಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ನಿರಾಕರಣೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

0
ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಕೇರಳ ಸರ್ಕಾರ ಕಳುಹಿಸಿದ್ದ ಪ್ರಸ್ತಾಪವನ್ನು ಒಕ್ಕೂಟ ಸರ್ಕಾರ ನಿರಾಕರಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.  ಕೇರಳವು ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ...
Wordpress Social Share Plugin powered by Ultimatelysocial