ಮಂಗಳವಾರ (ಏ.22) ಕಾಶ್ಮೀರದ ಪಹಲ್ಗಾಮ್ ಬಳಿ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿಯ ಪ್ರಾಥಮಿಕ ತನಿಖೆಯಲ್ಲಿ, ಕನಿಷ್ಠ ನಾಲ್ವರು ಭಯೋತ್ಪಾದಕರು ಮಾರುವೇಷದಲ್ಲಿ ಬೈಸರನ್ ಹುಲ್ಲುಗಾವಲಿಗೆ ಬಂದು ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ಅಸಾಲ್ಟ್ ರೈಫಲ್‌ಗಳು ಮತ್ತು ಎಕೆ-47ಗಳಿಂದ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿರುವುದಾಗಿ indianexpress.com ವರದಿ ಮಾಡಿದೆ.
ಮಂಗಳವಾರ ಸಂಜೆಯವರೆಗೆ ಘಟನಾ ಸ್ಥಳದಿಂದ ಸುಮಾರು 50-70 ಬಳಸಿದ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾದೆ ಎಂದು ವರದಿ ತಿಳಿಸಿದೆ.
ಕೇಂದ್ರ ಸರ್ಕಾರದ ಘಟನೆಯ ತನಿಖೆಯನ್ನು ಜಮ್ಮು ಕಾಶ್ಮೀರ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸಲು ಯೋಜಿಸಿದೆ ಎಂದಿದೆ.
“ದಾಳಿಯ ಬಲಿಪಶುಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ನಾಲ್ವರು ಭಯೋತ್ಪಾದಕರು ಮಾರುವೇಷದಲ್ಲಿ ಬಂದಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಇಬ್ಬರು ವಿದೇಶಿ ಪ್ರಜೆಗಳಿದ್ದ ಶಂಕೆಯಿದೆ.”
“ಹುಲ್ಲುಗಾವಲು ತಲುಪಿದ ಬಳಿಕ, ಭಯೋತ್ಪಾದಕರು ಮೊದಲು ಪ್ರವಾಸಿಗರನ್ನು ಬಂದೂಕು ತೋರಿಸಿ ಒತ್ತೆಯಾಳಾಗಿ ಇಟ್ಟುಕೊಂಡರು. ನಂತರ ಎಲ್ಲಾ ಮಹಿಳೆಯರು ಮತ್ತು ಮಕ್ಕಳನ್ನು ದೂರವಿರಲು ಕೇಳಿಕೊಂಡರು. ನಂತರ ಪುರುಷರ ಗುರುತು ವಿಚಾರಿಸಿದ ಅವರಿಗೆ ಹತ್ತಿರದಿಂದ ಗುಂಡಿಕ್ಕಿದರು. ನಂತರ ಅವರು ಮನಸ್ಸೋ ಇಚ್ಚೆ ಗುಂಡು ಹಾರಿಸಿದರು” ಎಂದು ಮೂಲಗಳನ್ನು ಉಲ್ಲೇಖಿಸಿ indianexpress.com ತಿಳಿಸಿದೆ.
“ಕೆಲ ಪ್ರವಾಸಿಗರನ್ನು ಕೊಲ್ಲುವ ಮೊದಲು ಅವರಿಗೆ ವಸ್ತ್ರ ಕಳಚುವಂತೆ ಹೇಳಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಪೊಲೀಸರು ಈ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದಾರೆ. ದಾಳಿ ಸುಮಾರು 20-25 ನಿಮಿಷಗಳ ಕಾಲ ನಡೆದಿದೆ” ಎಂದಿದೆ.
“ಇಬ್ಬರು ಭಯೋತ್ಪಾದಕರು ಎಂ4 ಕಾರ್ಬೈನ್ ಅಸಾಲ್ಟ್ ರೈಫಲ್‌ಗಳನ್ನು ಹೊಂದಿದ್ದರೆ, ಇನ್ನಿಬ್ಬರು ಎಕೆ-47 ಗಳನ್ನು ಹೊಂದಿದ್ದರು. ಭದ್ರತಾ ಸಂಸ್ಥೆಗಳು ಮತ್ತು ಸ್ಥಳೀಯ ಪೊಲೀಸರು ಸ್ಥಳೀಯ ನಿವಾಸಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ದಾಳಿ ನಡೆಸಲು ಸಹಕರಿಸಿದವರು ಯಾರಾದರು ಇದ್ದಾರಾ? ಎಂದು ಕಂಡುಹಿಡಿಯಲು ಅವರು ಪ್ರಯತ್ನಿಸುತ್ತಿದ್ದಾರೆ. ದಾಳಿಯ ನಂತರ ಭಯೋತ್ಪಾದಕರು ಸ್ಥಳದಿಂದ ಪರಾರಿಯಾಗಿದ್ದಾರೆ” ಎಂದು ವರದಿ ಹೇಳಿದೆ.
“ಪ್ರಾಥಮಿಕವಾಗಿ ನೋಡಿದರೆ, ಭಯೋತ್ಪಾದಕರು ಕಿಶ್ತ್ವಾರ್ ದಾಟಿ ಕೊಕರ್ನಾಗ್ ಮೂಲಕ ಬೈಸರನ್ ತಲುಪಿದ್ದು ಸ್ಥಳೀಯರ ಸಹಾಯದಿಂದ ಎಂದು ತೋರುತ್ತದೆ. ಕೆಲವು ದಿನಗಳ ಹಿಂದೆ ಗುಪ್ತಚರ ಸಂಸ್ಥೆಗಳು ಭಯೋತ್ಪಾದಕ ಗುಂಪು ‘ಸ್ಥಳೀಯರಲ್ಲದವರ’ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ ಮತ್ತು ಐಇಡಿ ದಾಳಿಯ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿತ್ತು. ಆದರೆ, ವಿವರಗಳು ಸ್ಪಷ್ಟವಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ indianexpress.com ತಿಳಿಸಿದೆ.


