ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘನೆ ಮಾಡಿದ ಕುರಿತು ಪ್ರತಿಕ್ರಿಯಿಸಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬ ಮುಫ್ತಿ, ಭಾರತ ಮತ್ತು ಪಾಕಿಸ್ತಾನವು ಸಂವಾದದಲ್ಲಿ ತೊಡಗಿ ಈ ಸಮಸ್ಯೆಗಳನ್ನು ಬಗೆಹರಿಸಲು ಕೇಳಿಕೊಂಡರು. ಎರಡೂ ದೇಶಗಳ ವಾಸ್ತವಿಕ ಗಡಿಯಲ್ಲಿ ಸಾವು ನೋವುಗಳು ಹೆಚ್ಚಾಗುತ್ತಿರುವುದು ವಿಷಾದದ ಸಂಗತಿ ಎಂದು ಹೇಳಿದರು.
ಗುಂಡಿನ ದಾಳಿಯಿಂದ ಎರಡೂ ಕಡೆ ಪ್ರಾಣಹಾನಿ ಸಂಭವಿಸಿವೆ. ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಮತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ಒಪ್ಪಿ, ಜಾರಿಗೆ ತಂದ ಕದನ ವಿರಾಮ ನಿಯಮವನ್ನು ಪುನಃಸ್ಥಾಪಿಸಿ ಪ್ರಾರಂಭಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹೇಳಿದರು.
ಇದನ್ನೂ ಓದಿ: ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ: ನಾಲ್ವರು ಯೋಧರೂ ಸೇರಿ 8 ಮಂದಿ ಸಾವು
“ನಿಯಂತ್ರಣ ರೇಖೆಯ ಎರಡೂ ಬದಿಗಳಲ್ಲಿ ಹೆಚ್ಚುತ್ತಿರುವ ಸಾವುನೋವುಗಳನ್ನು ನೋಡಿಕೊಂಡಿರುವುದಕ್ಕೆ ಬೇಸರವಾಗುತ್ತಿದೆ. ಭಾರತೀಯ ಮತ್ತು ಪಾಕಿಸ್ತಾನದ ನಾಯಕತ್ವವು ತಮ್ಮ ರಾಜಕೀಯವನ್ನು ಬಿಟ್ಟು ಮುಂದೆ ಬರಲು ಮತ್ತು ಸಂವಾದವನ್ನು ಪ್ರಾರಂಭಿಸಲು ಸಾಧ್ಯವಾದರೆ, ವಾಜಪೇಯಿ ಜಿ ಮತ್ತು ಮುಷರಫ್ ಸಹಾಬ್ ಅವರ ಆಶಯದ ಕದನ ವಿರಾಮವನ್ನು ನಿಯಮವನ್ನು ಪುನಃ ಪ್ರಾರಂಭಿಸಲು ಇದು ಉತ್ತಮ ಸಮಯವಾಗಿದೆ” ಟ್ವೀಟ್ ಮಾಡಿದ್ದಾರೆ.
Sad to see mounting casualties on both sides of LOC. If only Indian & Pakistani leadership could rise above their political compulsions & initiate dialogue. Restoring the ceasefire agreed upon & implemented by Vajpayee ji & Musharaf sahab is a good place to start
— Mehbooba Mufti (@MehboobaMufti) November 14, 2020
ಗುರೇಜ್ ಸೆಕ್ಟರ್‌ನಿಂದ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ವರೆಗೆ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನ ಪಡೆಗಳು ನಡೆಸಿದ ಕದನ ವಿರಾಮ ಉಲ್ಲಂಘನೆಯಲ್ಲಿ ಬಿಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಭದ್ರತಾ ಪಡೆಗಳ ಸಿಬ್ಬಂದಿ ಶುಕ್ರವಾರ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ: ಆ ಯಮ್ಮ ಏನೂ ಕೆಲಸ ಮಾಡುವುದಿಲ್ಲ: ಸುಮಲತಾ ಅಂಬರೀಶ್ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆ…
ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ. ಉರಿಯ ಕಮಲ್‌ಕೋಟ್‌ನಲ್ಲಿ ಇಬ್ಬರು ಮತ್ತು ಬಾಲ್ಕೋಟ್‌ನಲ್ಲಿ ಇನ್ನೊಬ್ಬ ಮಹಿಳೆ ಸಹ ಸಾವನ್ನಪ್ಪಿದ್ದಾರೆ. ಆಕ್ರಮಣದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಒಂದು ವಾರದೊಳಗೆ ನಡೆದ ಎರಡನೇ ಒಳನುಸುಳುವಿಕೆ ಪ್ರಯತ್ನ ಇದಾಗಿದ್ದು. ನವೆಂಬರ್ 7- 8 ರ ಮಧ್ಯರಾತ್ರಿಯಲ್ಲಿ ಮಚಿಲ್ ವಲಯದಲ್ಲಿ ಈ ಹಿಂದೆ ನಡೆದ ದಾಳಿಯಲ್ಲಿ, ಮೂವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು.
ಇದನ್ನೂ ಓದಿ: `ಹುಸಿ ರಾಷ್ಟ್ರೀಯತೆ’ ಎದುರು ಕರ್ನಾಟಕದ ಸುದೀರ್ಘ ಸಂಘರ್ಷ: ಟಿ.ಎ.ನಾರಾಯಣಗೌಡ


