ಪೋಷಕ ಮಹಾಶಯರೇ,
ಜುಲೈ 15 ರಿಂದ ಶಾಲೆಗಳನ್ನು ತೆರೆಯಲು ಸರ್ಕಾರ ಆಲೋಚಿಸಿದೆ. ಇದು ಖಂಡಿತಾ ಅಪಾಯಕಾರಿ ನಡೆ. ಅದರಲ್ಲೂ ಎಲ್.ಕೆ.ಜಿ ಯಿಂದ ಏಳನೇ ತರಗತಿ ವರೆಗೆ ಶಾಲೆ ತೆಗೆಯುವುದು ಮಕ್ಕಳನ್ನು ನಾವೇ ಅಪಾಯಕ್ಕೆ ದೂಡಿದಂತೆ ಎಚ್ಚರ. ಸರಕಾರದ ಈ ನಿಲುವನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು. ಮಕ್ಕಳ ವಿಷಯದಲ್ಲಿ ಶಿಕ್ಷಣ ಸಚಿವರು ತಮ್ಮ ಅವಿವೇಕ ಮತ್ತು ಹಠಮಾರಿತನವನ್ನು ತೋರಬಾರದು.
ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಹೆಚ್ಚುತ್ತಲೇ ಇದೆ. ಮಕ್ಕಳು ಬೇಗ ಸೋಂಕಿಗೆ ಒಳಗಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ.
ಹಾಗಿರುವಾಗಲೂ ಈಗ ಶಾಲೆಗಳ ಅಗತ್ಯವೇನಿದೆ? ಪ್ರಾಣವನ್ನು ಒತ್ತೆ ಇಟ್ಟು ಮಕ್ಕಳು ಶಾಲೆಯಲ್ಲಿ ಕಲಿಯಬೇಕಾದ ಜರೂರೇನಿದೆ?
ಪೋಷಕ ಸಮುದಾಯ ಈ ವಿಷಯದಲ್ಲಿ ತುಂಬಾ ತುಂಬಾ ಎಚ್ಚರಿಕೆ ವಹಿಸಬೇಕು.
ಕೆಲವರಿಗೆ ಸುರಕ್ಷಿತವಾಗಿ ನೋಡಿಕೊಳ್ಳುವ ಸಾಮರ್ಥ್ಯ ಇರಬಹುದು. ಅದಕ್ಕಾಗಿ ಅವರಿಗೆ ಶಾಲೆ ಬೇಕೆನಿಸಬಹುದು. ಆದರೆ ಕೇವಲ ತಮ್ಮ ಹಿತವನ್ನು ಮಾತ್ರ ನೋಡದೆ, ಎಲ್ಲಾ ವರ್ಗದ ಮಕ್ಕಳ ಬಗ್ಗೆಯೂ ಆಲೋಚಿಸಬೇಕು.
ಕೆಲವು ಪೋಷಕರಿಗೆ ತಮ್ಮ ಮಕ್ಕಳಿಗೆ ಏನಾದರೂ ಚಿಂತೆಯಿಲ್ಲ, ಒಟ್ಟಿನಲ್ಲಿ ಅವರು ಶಾಲೆಗೆ ಹೋಗಬೇಕು…ಎಂಬ ತಹತಹಿಕೆ
ಅದಕ್ಕೆ ತರಾತುರಿಯಲ್ಲಿ ದೌಡಾಯಿಸಿ ಫೀಸ್ ಕಟ್ಟುತ್ತಾರೆ! ಅದೂ ಅಲ್ಲದೆ ಬೇಗ ಶಾಲೆ ಶುರುಮಾಡಿ ಅಂತ ಇವರೇ ದುಂಬಾಲು ಬೀಳ್ತಾರೆ.
ಪೋಷಕ ಮಹಾಶಯರೇ ಮಕ್ಕಳು ಶಾಲೆಗೆ ಹೋಗೋದರಿಂದ ಎಷ್ಟು ಅಪಾಯವಿದೆ ಗೊತ್ತಾ?
ಆಟೋದಲ್ಲಿ ಕುರಿಗಳ ತರ ತುಂಬುತ್ತಾರೆ…ಯಾವ ಡಿಸ್ಟೆನ್ಸ್ ಮಾಡ್ತಾರೆ, ಮಕ್ಕಳನ್ನು ಕಟ್ಟಿ ಹಾಕಲಾಗುತ್ತಾ?
ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಸೋಪು ಹಾಕಿ ಕೈ ತೊಳೆಸೋದು, ಸ್ಯಾನಿಟೈಸರ್ ಬಳಸೋದು ಮಾಡಿಸೋಕಾಗ್ತದಾ?
ಒಬ್ಬರಿಂದ ಒಬ್ಬರನ್ನ ಮಕ್ಕಳು ಶಾಲೆಯಲ್ಲಿ ಮೈದಾನದಲ್ಲಿ ದೂರವಿಡುತ್ತಾರೆಯೇ?
ಎಲ್ಲಾ ಮಕ್ಕಳ ಆರೋಗ್ಯ ಒಂದೇ ತರ ಇರುತ್ತಾ?
ಮಕ್ಕಳು ಮನೆಗೆ ರೋಗ ತರುವುದಿಲ್ಲವೇ?
ಮಕ್ಕಳಿಗೆ ಖಾಯಿಲೆ ಅಂಟಿಕೊಂಡರೆ ಅವರೊಬ್ಬರನ್ನೇ ಹೇಗೆ ಕ್ವಾರಂಟೈನ್ ಮಾಡೋದು?
ಹಾಗೆ ಪೋಷಕರಿಂದ ಮಕ್ಕಳನ್ನು ಕ್ವಾರಂಟೈನ್ ಹಾಕಿ ಇರಲು ಸಾಧ್ಯವೇ???
ಇದೆಲ್ಲಾ ಕಾಮನ್ ಸೆನ್ಸ್ ಸರ್ಕಾರಕ್ಕೆ ಇರಬೇಕು.
ಹತ್ತು ವರ್ಷದ ಒಳಗಿನ ಮಕ್ಕಳಿಗೆ ಈ ವರ್ಷ ಶಾಲೆ ಇಲ್ಲದೇ ಹೋದರೆ ಏನಾಗುತ್ತೆ??
ಓದಿ: ಶಾಲೆಗಳು ಸಮಾಜ ಒಡೆಯುತ್ತಿವೆ: ಶಿಕ್ಷಣ ವ್ಯವಸ್ಥೆಯನ್ನು ತಲೆಕೆಳಗು ಮಾಡಬೇಕಿದೆ.


