Homeಮುಖಪುಟಒಂದೇ ರೀತಿಯ ಪ್ರಕರಣ ಮೂರು ಭಿನ್ನ ತೀರ್ಪುಗಳು: ಅರ್ನಾಬ್ ಗೋಸ್ವಾಮಿಗೆ ಸಿಕ್ಕ ಅವಕಾಶ ಶಾರ್ಜೀಲ್ ಇಮಾಮ್,...

ಒಂದೇ ರೀತಿಯ ಪ್ರಕರಣ ಮೂರು ಭಿನ್ನ ತೀರ್ಪುಗಳು: ಅರ್ನಾಬ್ ಗೋಸ್ವಾಮಿಗೆ ಸಿಕ್ಕ ಅವಕಾಶ ಶಾರ್ಜೀಲ್ ಇಮಾಮ್, ಪೂನಿಯಾಗೇಕಿಲ್ಲ?

ಇದು ಅರ್ನಾಬ್, ಪೂನಿಯಾ ಮತ್ತು ಇಮಾಮ್ ಪ್ರಕರಣದಲ್ಲಿ ಇದ್ದ ಮೂರು ಬೇರೆಬೇರೆ ನ್ಯಾಯಪೀಠಗಳ ಸಮಸ್ಯೆಯಲ್ಲ. ಇದು ಇಡೀ ಸುಪ್ರೀಂಕೋರ್ಟ್ ಎದುರಿಸುತ್ತಿರುವ ರಾಚನಿಕ ಸಮಸ್ಯೆ.

- Advertisement -
- Advertisement -

ಇತ್ತೀಚಿನ ಮೂರು ಪ್ರಕರಣಗಳು ತೋರಿಸಿಕೊಟ್ಟಿರುವುದು ಏನೆಂದರೆ, ಕಾನೂನಿನ ಅನ್ವಯವು ಪ್ರಕರಣದಿಂದ ಪ್ರಕರಣಕ್ಕೆ ಬದಲಾಗಬಹುದಾದರೂ, ನ್ಯಾಯಾಧೀಶರಿಂದ ನ್ಯಾಯಾಧೀಶರಿಗೆ ತೀರ್ಪುಗಳು ಬದಲಾಗುವಾಗ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು.

ಸರೀಂ ನವೇದ್

ಸಾರಾನುವಾದ: ನಿಖಿಲ್ ಕೋಲ್ಪೆ

ಕಳೆದ ಮೇ 19ರಂದು ಸುಪ್ರೀಂಕೋರ್ಟ್ ಅರ್ನಾಬ್ ಗೋಸ್ವಾಮಿ ಪ್ರಕರಣದಲ್ಲಿ ಒಂದು ತೀರ್ಪು ನೀಡಿತು ಮತ್ತು ಒಂದು ಅಪರಾಧಕ್ಕಾಗಿ ಒಂದಕ್ಕಿಂತ ಹೆಚ್ಚು ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸುವಂತಿಲ್ಲ ಎಂಬುದನ್ನು ಎತ್ತಿಹಿಡಿಯಿತು. ಹಾಗಾಗಿ ಸಾರ್ವಜನಿಕ ಕ್ಷೋಭೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಎಫ್‌ಐಆರ್‌ಗಳಲ್ಲಿ ಆರೋಪಿಸಲಾಗಿರುವಂತಹ ಒಂದು ಪ್ರಕರಣದಲ್ಲಿ ಮೊದಲ ಎಫ್‌ಐಆರ್ ದಾಖಲಾದ ಸಂಬಂಧ ವಿಚಾರಣೆಯನ್ನು ಹೊರತುಪಡಿಸಿ, ಉಳಿದ ನ್ಯಾಯಾಲಯಗಳಲ್ಲಿ ವಿಚಾರಣೆಯಿಂದ ಆತ ಪಾರಾಗುವಂತಾಯಿತು.

Arnab Goswami, Maharashtra government, Supreme Court ,ರಿಪಬ್ಲಿಕ್ ಟಿವಿ, ಅರ್ನಾಬ್ ಗೋಸ್ವಾಮಿ
ಅರ್ನಾಬ್‌ ಗೋಸ್ವಾಮಿ

ಕೇವಲ ಹತ್ತು ದಿನಗಳ ನಂತರ, ಅಂದರೆ ಮೇ 29ರಂದು ಸುಪ್ರೀಂಕೋರ್ಟ್‌ನಲ್ಲಿ ಕಾಂಗ್ರೆಸ್ ನಾಯಕ ಪಂಕಜ್ ಪೂನಿಯಾ ದಾಖಲಿಸಿದಂತಹಾ ಇಂತದ್ದೇ ಅರ್ಜಿಯು ಮುಂದೆ ಬಂತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಮಾಡಿದ ಹೇಳಿಕೆಯ ಆರೋಪದಲ್ಲಿ ಅವರ ಮೇಲೆ ಹಲವಾರು ಕಡೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ, ಸುಪ್ರೀಂಕೋರ್ಟ್ ಈ ವಿಷಯದ ಕುರಿತು ವಿಚಾರಣೆ ನಡೆಸಲು ನಿರಾಕರಿಸಿ, ಪರಿಹಾರಕ್ಕಾಗಿ ಸಂಬಂಧಿತ ಹೈಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸುವಂತೆ ಪೂನಿಯಾ ಅವರಿಗೆ ಸೂಚಿಸಿತು.

ಇದು ಮೂವರು ಸದಸ್ಯರ ಪೀಠದ ತೀರ್ಮಾನವಾಗಿದ್ದು, ಅದಕ್ಕೆ ಇಬ್ಬರು ಸದಸ್ಯರ ಪೀಠದ ಅರ್ನಾಬ್ ಗೋಸ್ವಾಮಿ ಪ್ರಕರಣದ ತೀರ್ಮಾನವನ್ನು ಬದಿಗೆ ಸರಿಸುವ ಅಧಿಕಾರವಿತ್ತು ಎಂಬುದು ನಿಜ. ಆದರೆ, ಈ ಪೀಠವು ಸಾರಾಸಗಟಾಗಿ ಪೂನಿಯಾ ಅವರ ಅರ್ಜಿಯನ್ನು ಮೇಲ್ನೋಟಕ್ಕೇ ತಿರಸ್ಕರಿಸಿತು. ಅದು ಏನು ಹೇಳಿತು:

ಪೂನಿಯಾ

“ಸಂವಿಧಾನದ ವಿಧಿ 32ರ ಅನ್ವಯ ಸಲ್ಲಿಸಲಾದ ಈ ಅರ್ಜಿಯ ವಿಚಾರಣೆ ನಡೆಸಲು ನಮಗೆ ಮನಸ್ಸಿಲ್ಲ. ಅದಕ್ಕನುಗುಣವಾಗಿ ಈ ರಿಟ್ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಆದರೆ ಅರ್ಜಿದಾರರಿಗೆ ಸಂಬಂಧಿತ ಹೈಕೋರ್ಟ್‌ಗಳು/ ವೇದಿಕೆಗಳಿಗೆ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯವಿದೆ”.

ಮೇ 1ರಂದು ಸುಪ್ರೀಂಕೋರ್ಟ್ ಅದೇ ರೀತಿಯ ಭಾಷಣಗಳನ್ನು ಮಾಡಿದ್ದಕ್ಕಾಗಿ ಬೇರೆಬೇರೆ ಕಡೆ ಹೂಡಲಾದ ದಾವೆಗಳನ್ನು ಒಂದೆಡೆ ಸೇರಿಸಲು ಶಾರ್ಜೀಲ್ ಇಮಾಮ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿತ್ತು. ಇಮಾಮ್ ಪ್ರಕರಣದಲ್ಲಿ ಇರುವ ವ್ಯತ್ಯಾಸವೆಂದರೆ, ತಕ್ಷಣದ ಪರಿಹಾರ ಇರಲಿಲ್ಲ. ಅದೆಂದರೆ, ಗೋಸ್ವಾಮಿಗೆ ಮಾಡಿದಂತೆ ಮೊದಲ ಎಫ್‌ಐಆರ್ ಪ್ರಕರಣ ಹೊರತುಪಡಿಸಿ ಬೇರೆ ಎಫ್‌ಐಆರ್‌ಗಳಲ್ಲಿ ತನಿಖೆಗೆ ತಡೆ ಇರಲಿಲ್ಲ.

ಶಾರ್ಜೀಲ್ ಇಮಾಮ್

ಈ ಮೂರೂ ಪ್ರಕರಣಗಳನ್ನು ಮೂರು ಬೇರೆಬೇರೆ ಪೀಠಗಳು ವಿಚಾರಣೆ ನಡೆಸಿದ್ದವು. ಪ್ರಕರಣದಿಂದ ಪ್ರಕರಣಕ್ಕೆ ಕಾನೂನಿನ ಅನ್ವಯವು ಬದಲಾಗುತ್ತದೆ ಎಂಬುದು ಕಾನೂನು ರೂಢಿಯಲ್ಲಿ ಅರ್ಥವಾಗುವ ವಿಷಯ. ಆದರೆ, ಪ್ರತಿಯೊಂದು ಪ್ರಕರಣದ ವಿಶಿಷ್ಟತೆಗಳನ್ನು ಪರಿಗಣಿಸದೆಯೇ ಯಾಂತ್ರಿಕವಾಗಿ ಕಾನೂನನ್ನು ಅನ್ವಯಿಸುವ ಪರಿಸ್ಥಿತಿಯು ಅಪೇಕ್ಷಿತವಲ್ಲ ಮತ್ತು ಇದು ಸಾಕಷ್ಟು ಅನ್ಯಾಯದಲ್ಲಿ ಕೊನೆಗೊಳ್ಳುತ್ತದೆ.

ನ್ಯಾಯಾಧೀಶರು ಮತ್ತು ಕಾನೂನಿನ ಅನ್ವಯ

ಆದರೆ, ನ್ಯಾಯಾಧೀಶರಿಂದ ನ್ಯಾಯಾಧೀಶರಿಗೆ ತೀರ್ಪುಗಳು ಬದಲಾದಾಗ ಕಾನೂನಿನ ಅನ್ವಯದ ವಿಷಯವನ್ನು ಗಂಭೀರವಾಗಿ ಪರಿಶೀಲಿಸಬೇಕು. ಬೇರೆಬೇರೆ ನ್ಯಾಯಾಧೀಶರು ಕಾನೂನಿನ ಬಗ್ಗೆ ಬೇರೆಬೇರೆ ದೃಷ್ಟಿಕೋನ ಹೊಂದಿರುತ್ತಾರೆ ಎಂಬುದು ನಿಜ. ಅವರು ಬೇರೆ ವ್ಯಾಖ್ಯಾನಗಳನ್ನೂ ಹೊಂದಿರುತ್ತಾರೆ.

ಮೇಲಿನ ಮೂರೂ ಪ್ರಕರಣಗಳು ಸಂವಿಧಾನದ ವಿಧಿ 32ರ ಪ್ರಕಾರ ಸಲ್ಲಿಸಲಾದ ರಿಟ್ ಅರ್ಜಿಗಳಾಗಿವೆ. ಅದು ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ನೇರವಾಗಿ ಸುಪ್ರೀಂಕೋರ್ಟಿನ ಬಾಗಿಲು ತಟ್ಟುವ ಅವಕಾಶ ನೀಡುತ್ತದೆ. ಇದರ ವಿಚಾರಣೆ ನಡೆಸಬೇಕೋ ಬೇಡವೋ ಎಂಬುದು ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಷಯ ಎಂಬುದು ಸರ್ವವಿಧಿತ. ಆದರೆ, ಈ ಕುರಿತು ಏಕರೂಪದ ನಿಲುಮೆ ಇರಬೇಕೆಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ.

ಒಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹಲವು ಎಫ್‌ಐಆರ್‌ಗಳಲ್ಲಿ ಮೊದಲ ಎಫ್‌ಐಆರ್ ಹೊರತುಪಡಿಸಿ ಉಳಿದವುಗಳಲ್ಲಿ ತಡೆ ನೀಡುವುದಾದಲ್ಲಿ (ಗೋಸ್ವಾಮಿ ಪ್ರಕರಣ), ಇಂತದ್ದೇ ಪ್ರಕರಣಗಳಲ್ಲಿ ಇತರ ವ್ಯಕ್ತಿಗಳಿಗೆ ಅಂತದ್ದೇ ಪರಿಹಾರ ನೀಡಬೇಕು- ಒಂದು ವೇಳೆ ಪರಿಸ್ಥಿತಿಯು ಬೇರೆಯಾಗಿದೆ ಎಂದು ನ್ಯಾಯಾಲಯವು ಭಾವಿಸಿದ ಸಂದರ್ಭವನ್ನು ಹೊರತುಪಡಿಸಿ. ಈ ನಿರ್ಧಾರವನ್ನು ತೀರ್ಪಿನಲ್ಲೇ ದಾಖಲಿಸಬೇಕು. ಇಲ್ಲವಾದಲ್ಲಿ ಕಾನೂನಿನ ಅನ್ವಯವು ಮನಸೋಇಚ್ಛೆ ನಡೆಯುತ್ತಿದೆ ಎಂಬಂತೆ ಕಾಣುತ್ತದೆ.

ಸಂವಿಧಾನದ ವಿಧಿ 141 ಹಿಂದಿನ ತೀರ್ಪುಗಳಿಂದ ಬೇರೆಯಾದ ತೀರ್ಪುಗಳನ್ನು ನೀಡಲು ಸುಪ್ರೀಂಕೋರ್ಟಿಗೆ ಅವಕಾಶ ನೀಡುತ್ತದೆ ಎಂಬುದು ನಿಜ. ಆದರೆ, ಚಿಕ್ಕ ಅವಧಿಯಲ್ಲಿ ಬೇರೆ ಬೇರೆ ನ್ಯಾಯಾಧೀಶರುಗಳು ಪೀಠದಲ್ಲಿ ಇದ್ದರು ಎಂಬ ಕಾರಣಕ್ಕಾಗಿ ಬೇರೆಬೇರೆ ತೀರ್ಪುಗಳು ಬರುವುದು ಅಪೇಕ್ಷಣೀಯವಲ್ಲ.

ಇದು ಅರ್ನಾಬ್, ಪೂನಿಯಾ ಮತ್ತು ಇಮಾಮ್ ಪ್ರಕರಣದಲ್ಲಿ ಇದ್ದ ಮೂರು ಬೇರೆಬೇರೆ ನ್ಯಾಯಪೀಠಗಳ ಸಮಸ್ಯೆಯಲ್ಲ. ಇದು ಇಡೀ ಸುಪ್ರೀಂಕೋರ್ಟ್ ಎದುರಿಸುತ್ತಿರುವ ರಾಚನಿಕ ಸಮಸ್ಯೆ. ಸುಪ್ರೀಂಕೋರ್ಟ್‌ನಲ್ಲಿ ಎಲ್ಲಾ ನ್ಯಾಯಾಧೀಶರು ಸಮನರು; ಆದುದರಿಂದ ಒಂದು ಸುಪ್ರೀಂಕೋರ್ಟ್ ತೀರ್ಮಾನಕ್ಕೆ ಮೇಲ್ಮನವಿ ಸಲ್ಲಿಸುವುದು ಆ ನಿಟ್ಟಿನಲ್ಲಿ ಸಾಧ್ಯವಿಲ್ಲ. ಯಾವ ಪೀಠದ ಮುಂದೆ ಪ್ರಕರಣ ಇದೆಯೋ, ಅದರ ತೀರ್ಪಿನಂತೆ ಪ್ರಕರಣದ ಕತೆ ಮುಗಿಯುತ್ತದೆ.

ಉದಾಹರಣೆಗೆ ಕೆಲವು ನ್ಯಾಯಾಧೀಶರು ಉಳಿದ ನ್ಯಾಯಾಧೀಶರುಗಳಿಗಿಂತ ಹೆಚ್ಚಾಗಿ ಜಾಮೀನು ನೀಡುತ್ತಾರೆ. ಕೆಲವರು ಕೆಲವು ಕಾನೂನುಗಳಲ್ಲಿ- ಉದಾಹರಣೆಗೆ ತೆರಿಗೆ ಕಾನೂನುಗಳಲ್ಲಿ ನಿಷ್ಣಾತರಾಗಿರುತ್ತಾರೆ. ಇದರ ಅರ್ಥವೆಂದರೆ, ಸುಪ್ರೀಂಕೋರ್ಟ್ ಒಂದೇ ನ್ಯಾಯಾಲಯವಲ್ಲ. ಅದು 16 ಬೇರೆಬೇರೆ ನ್ಯಾಯಾಲಯಗಳು. ಪೀಠದಲ್ಲಿರುವ ನ್ಯಾಯಾಧೀಶರುಗಳ ಸಂಖ್ಯೆಗೆ ಅನುಗುಣವಾಗಿ ಅವರವರು ಕಾನೂನನ್ನು ಮತ್ತು ಹಿಂದಿನ ತೀರ್ಪುಗಳನ್ನು ಹೇಗೆಹೇಗೆ ವ್ಯಾಖ್ಯಾನ ಮಾಡುತ್ತಾರೋ, ಅವುಗಳಿಗೆ ಅನುಗುಣವಾಗಿಯೇ ತೀರ್ಪುಗಳು ಇರುತ್ತವೆ! ಇದಕ್ಕೆ ಪರಿಹಾರವನ್ನೂ ಸುಪ್ರೀಂಕೋರ್ಟೇ ಕಂಡುಕೊಳ್ಳಬೇಕು.

(ಲೇಖಕ ಸರೀಂ ನವೇದ್ ಅವರು ದಿಲ್ಲಿಯಲ್ಲಿ ವಕೀಲರು)

ಕೃಪೆ: ದಿ ವೈರ್


ಇದನ್ನೂ ಓದಿ: ಎರಡು ವಾರಗಳಲ್ಲಿ ಪಿಎಂ ಕೇರ್ಸ್ ವಿವರ ನೀಡಿ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ತಾಕೀತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...