ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಂಕಿಅಂಶಗಳ ಪ್ರಕಾರ 2013-2023ರ ನಡುವೆ ರಾಜಕೀಯ ಪಕ್ಷಗಳು 7,726 ಕೋಟಿ ರೂ. ಎಲೆಕ್ಟೋರಲ್ ಬಾಂಡ್ ರಹಿತವಾಗಿ ದೇಣಿಗೆಯಾಗಿ ಪಡೆದಿವೆ ಎಂದು ಬಿಸಿನೆಸ್‌ಲೈನ್ ವರದಿ ಮಾಡಿದೆ. ಚುನಾವಣಾ ಬಾಂಡ್ ಮೂಲಕ ಬಿಜೆಪಿ ಒಟ್ಟು ನಿಧಿಯ 50% ದೇಣಿಗೆ ಪಡೆದಿರುವುದು ಬಯಲಾಗತ್ತು, ಇದೀಗ ಎಲೆಕ್ಟೋಲ್ ಬಾಂಡ್‌ಗಳಲ್ಲಿ ಇತರ ದೇಣಿಗೆಗಳ ಮೂಲಕ ಬಿಜೆಪಿ ಅತಿ ಹೆಚ್ಚು ನಿಧಿಯನ್ನು ಪಡೆದುಕೊಂಡಿರುವುದು ಬಯಲಾಗಿದೆ.
7,726 ಕೋಟಿ ರೂ.ಗಳಲ್ಲಿ ಬಿಜೆಪಿ ಸುಮಾರು 5,000 ಕೋಟಿ ಅಥವಾ 64.7% ಪಡೆದರೆ, ಕಾಂಗ್ರೆಸ್ (10.7%), ಭಾರತ್ ರಾಷ್ಟ್ರ ಸಮಿತಿ (3.3%) ಮತ್ತು ಆಮ್ ಆದ್ಮಿ ಪಕ್ಷ (3.1%) ದೇಣಿಗೆಯನ್ನು ಪಡೆದಿದೆ. ಈ ದೇಣಿಗೆಗಳನ್ನು ರಾಜಕೀಯ ನಿಧಿಯ ಪಾರದರ್ಶಕ ವಿಧಾನಗಳ ಮೂಲಕ ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
2018ರಲ್ಲಿ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಪರಿಚಯಿಸುವ ಮೊದಲು, ಭಾರತೀಯ ಜನತಾ ಪಾರ್ಟಿ ನೇತೃತ್ವದ ಸರ್ಕಾರವು 2003ರಲ್ಲಿ ಜಾರಿಗೆ ತಂದ ರಾಜಕೀಯ ಹಣಕಾಸು ಕಾನೂನುಗಳ ಅಡಿಯಲ್ಲಿ 20,000 ರೂಪಾಯಿಗಳನ್ನು ಮೀರಿದ ದೇಣಿಗೆಯನ್ನು ಘೋಷಿಸಬೇಕಾಗಿತ್ತು. ಈ ದೇಣಿಗೆಗಳು, 100% ತೆರಿಗೆ ವಿನಾಯಿತಿಯನ್ನು ಹೊಂದಿದ್ದವು. ವರ್ಷಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿತು, 2014ರ ಆರ್ಥಿಕ ವರ್ಷದಲ್ಲಿ 309 ಕೋಟಿಗಳಿಂದ 2020ರ ಆರ್ಥಿಕ ವರ್ಷದಲ್ಲಿ 1,247 ಕೋಟಿ ರೂ.ಗೆ ಗಣನೀಯವಾಗಿ ಹೆಚ್ಚಳವಾಗಿದೆ. ಆದರೆ 2023ರ ಆರ್ಥಿಕ ವರ್ಷದಲ್ಲಿ ದೇಣಿಗೆಗಳು 1,101 ಕೋಟಿ ರೂ.ಗೆ ಇಳಿದಿದ್ದು, 2020ರ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಸ್ವಲ್ಪ ಇಳಿಕೆ ಕಂಡಿವೆ ಎಂದು ವರದಿ ತಿಳಿಸಿದೆ.
ಕಾರ್ಪೊರೇಟ್ ದೇಣಿಗೆಗಳು ಸಹ ಮಹತ್ವದ ಪಾತ್ರವನ್ನು ವಹಿಸುತ್ತವೆ, ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ (ಪಿಇಟಿ) ನಂತಹ ಘಟಕಗಳು ಪ್ರಮುಖ ಕೊಡುಗೆದಾರರಾಗಿದ್ದಾರೆ. 2023ರಲ್ಲಿ PET ಬಿಜೆಪಿಗೆ 256 ಕೋಟಿ ರೂಪಾಯಿಗಳನ್ನು ಮತ್ತು ಬಿಆರ್‌ಎಸ್‌ಗೆ 90 ಕೋಟಿ ರೂಪಾಯಿಗಳನ್ನು ನೀಡಿದೆ. ಹೆಚ್ಚುವರಿಯಾಗಿ, M/S MKJ ಎಂಟರ್‌ಪ್ರೈಸಸ್ ಲಿಮಿಟೆಡ್ ಕಾಂಗ್ರೆಸ್‌ಗೆ 45 ಕೋಟಿ ರೂ.ವನ್ನು ನೀಡಿದೆ. B.G. ಶಿರ್ಕೆ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಬಿಜೆಪಿಗೆ 35 ಕೋಟಿ ದೇಣಿಗೆ ನೀಡಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ಮುಖ್ಯಸ್ಥ ಅನಿಲ್ ವರ್ಮಾ, ಭಾರತದಲ್ಲಿ ಪಕ್ಷ ರಾಜಕೀಯವು ಸ್ಪರ್ಧಾತ್ಮಕವಾಗಿದೆ, ಇದು ಚುನಾವಣೆಗಳಿಗಾಗಿ ಪಕ್ಷದ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಹೆಚ್ಚುತ್ತಿರುವ ವೆಚ್ಚಗಳನ್ನು ಪೂರೈಸಲು, ಪಕ್ಷಗಳು ಹೆಚ್ಚಾಗಿ ಕಾರ್ಪೊರೇಟ್ ವಲಯ ಸಂಪನ್ಮೂಲಗಳನ್ನು ಅವಲಂಬಿಸುತ್ತದೆ. ಯಾವ ರಾಜಕೀಯ ಪಕ್ಷ ಅಧಿಕಾರದಲ್ಲಿದೆ, ಅವರು ತಮ್ಮ ಅನುಕೂಲಕ್ಕಾಗಿ ನಿಧಿಯ ಕಾರ್ಯವಿಧಾನಗಳನ್ನು ಬಳಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಪೊಲಿಟಿಕಲ್ ಫೈನಾನ್ಸ್ ಇನ್ ಇಂಡಿಯಾದ ಲೇಖಕರಾದ ಈಶ್ವರನ್ ಶ್ರೀಧರನ್ ಮತ್ತು ಮಿಲನ್ ವೈಷ್ಣವ್ ಅವರ ಪ್ರಕಾರ, ಆರು ರಾಷ್ಟ್ರೀಯ ಪಕ್ಷಗಳು ಸ್ವೀಕರಿಸಿದ ಸುಮಾರು 75% ಹಣವು 20,000ರೂ. ಮಿತಿಗಿಂತ ಕಡಿಮೆ ಇರುವ ಅನಾಮಧೇಯ ದೇಣಿಗೆಗಳ ಮೂಲಕ ಬರುತ್ತದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಟಿಎಂ ಕೃಷ್ಣಗೆ ‘ಸಂಗೀತ ಕಲಾನಿಧಿ’ ಪ್ರಶಸ್ತಿಗೆ ವಿರೋಧ: ಬಲಪಂಥೀಯ ದ್ವೇಷದ ಭಾಗ?


