Homeಮುಖಪುಟಕೊರೊನಾ ಸೋಂಕಿತ ವ್ಯಕ್ತಿಯ ಜೊತೆಗೆ ಸಂಪರ್ಕಕ್ಕೆ ಬಂದವರಿಗೆ ಮುಂಬೈಗೆ ಪ್ರಯಣಿಸಲು ಪಾಸ್‌: ಬಿಜೆಪಿ ಮುಖಂಡನ ವಿರುದ್ಧ...

ಕೊರೊನಾ ಸೋಂಕಿತ ವ್ಯಕ್ತಿಯ ಜೊತೆಗೆ ಸಂಪರ್ಕಕ್ಕೆ ಬಂದವರಿಗೆ ಮುಂಬೈಗೆ ಪ್ರಯಣಿಸಲು ಪಾಸ್‌: ಬಿಜೆಪಿ ಮುಖಂಡನ ವಿರುದ್ಧ ದೂರು 

- Advertisement -
- Advertisement -

ಕೊರೊನಾ ಸೋಂಕಿತ ವ್ಯಕ್ತಿಯ ಜೊತೆಗೆ ಸಂಪರ್ಕಕ್ಕೆ ಬಂದ ಮಹಿಳೆಗೆ ಮುಂಬೈಗೆ ಪ್ರಯಣಿಸಲು ಪಾಸ್‌ ಕೊಡಿಸಲು ಮುಂದಾದ ಕೊಪ್ಪಳದ ಗುರುಬಸವ ಹೊಳಗುಂದಿ ಎಂಬ ವ್ಯಕ್ತಿ ವಿರುದ್ಧ ದೂರು ದಾಖಲಾಗಿದೆ. ಈ ಕುರಿತು ಕೊಪ್ಪಳ ಜಿಲ್ಲಾಧಿಕಾರಿಗಳು ಪತ್ರಿಕಾ ಹೇಳಿಕೆಯೊಂದನ್ನು ನೀಡಿದ್ದಾರೆ.

ಆರೋಪಿಯು ಕೊಪ್ಪಳದ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದು, ಬಿಜೆಪಿ ಮುಖಂಡರಾಗಿದ್ದಾರೆ. ತಮ್ಮ ರಾಜಕೀಯ ಪ್ರಭಾವ ಬಳಸಿ ಪಾಸ್‌ ಪಡೆಯಲು ಹೋಗಿ ಈ ಪ್ರಕರಣದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.

ಹೇಳಿಕೆಯಂತೆ ಕೊರೋನಾವೈರಾಣು ಸೊಂಕು ದೃಡಪಟ್ಟಿರುವ KA – P194 ಇವರು ಮಾರ್ಚ್‌ 19 ರಂದು VRL ಟ್ರಾವೆಲ್ಸ್ ಬಸ್ ಮೂಲಕ ಮುಂಬೈಯಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿರುತ್ತಾರೆ. ಅದೇ ದಿನ, ಅದೇ ಬಸ್‌ನಲ್ಲಿ  ಶಿಖಾ ಶೇಖ್ ಎಂಬುವವರು ಕೂಡ ಪ್ರಯಾಣಿಸಿದ್ದಾರೆ. ಅಂದರೆ ಶಿಖಾ ಶೇಕ್ ಇವರು ಸೋಂಕಿತರಾದ KA – P194 ಇವರೊಡನೆ ಪ್ರಾಥಮಿಕ ಸಂಪರ್ಕವನ್ನು (Primary Coolict ) ಹೊಂದಿರುತ್ತಾರೆ.

ಇದೇ ಶಿಖಾ ಶೇಖ್‌ರವರು ಮಾರ್ಚ್‌ 20 ರಂದು ಆಟೋ ಮೂಲಕ ಹುಬ್ಬಳ್ಳಿಯಲ್ಲಿ ಪರಿಚಯಸ್ಥರ ಮನೆಗೆ ತಲುಪಿ ಅಲ್ಲಿಯೇ ತಂಗಿದ್ದಾರೆ. ಆದರೆ ಅವರು ಮತ್ತೆ ಮುಂಬೈಗೆ ಹೋಗಬೇಕೆಂದುಕೊಂಡು ಏಪ್ರಿಲ್‌ 13ರಂದು ಸಾಯಂಕಾಲ 5–30ರ ಸಮಯದಲ್ಲಿ ತಮ್ಮ ಸ್ಕೂಟರ್ ವಾಹನದ ಜೊತೆಗೆ ಹಾಲಿನ ಡೈರಿ ವಾಹನದಲ್ಲಿ ಹುಬ್ಬಳಿಯಿಂದ ಪ್ರಯಾಣಿಸಿ, ರಾತ್ರಿ ಸುಮಾರು 08–30 ಗಂಟೆಗೆ ಕೊಪ್ಪಳಕ್ಕೆ ತಲುಪಿ ಶಾಂತಾರಾಮ, ಕದಂಬ ನಗರ, ಭಾಗ್ಯನಗರ ಇವರ ಮನೆಯಲ್ಲಿ ವಾಸ್ತವ್ಯ ಹೂಡಿರುತ್ತಾರೆ.

ಆನಂತರ ಏಪ್ರಿಲ್‌ 14ರಂದು ಸದ್ಯ ಆರೋಪಿಯಾಗಿರುವ ಗುರುಬಸವ ಹೊಳಗುಂದಿಯವರು ಶಿಖಾ ಶೇಖ್‌ ಇವರನ್ನು ಸ್ಕೂಟಿ ವಾಹನದಲ್ಲಿ ಕರೆದುಕೊಂಡು ಪೊಲೀಸ್ ಕೇಂದ್ರ ಕಛೇರಿಗೆ ಬಂದಿರುತ್ತಾರೆ . ಈ ಕುರಿತು ಶಿಖಾ ಶೇಖ್ ಇವರನ್ನು ವಿಚಾರಿಸಲಾಗಿ ಗುರುಬಸವ ಹೊಳಗುಂದಿ ಇವರು ಮುಂಬೈಗೆ ಹೋಗಲು ಪಾಸ್ ಕೊಡಿಸುವುದಾಗಿ ತಿಳಿಸಿರುವ ಹಿನ್ನಲೆಯಲ್ಲಿ ಕೊಪ್ಪಳಕ್ಕೆ ಬರುವಂತಾಯಿತು ಎಂದಿದ್ದಾರೆ.

ಪಾಸ್‌ ಕೊಡಲು ನಿರಾಕರಿಸಿದ ಪೊಲೀಸರು ಅವರಿಬ್ಬರನ್ನು ಆಸ್ಪತ್ರೆಗೆ ತೆರಳಲು ತಿಳಿಸಿರುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿಪ್ರಾಯದಂತೆ ಶಿಖಾ ಶೇಖ್‌ರವರ್‍ನು Institutional Quaintine ಕೇಂದ್ರದಲ್ಲಿ ಇಡಲಾಗಿದೆ. ಶಾಂತಾರಾಮ ಹಾಗೂ ಅವರ ಕುಟುಂಬದ ಸದಸ್ಯರನ್ನು ಸಹ Institutional Quarantirve ಮಾಡಲಾಗಿದೆ. ಆದರೆ ಗುರುಬಸವ ಹೊಳಗುಂದಿ ಇವರನ್ನು Institutional QUAurantine ಮಾಡಲು ಹೋದಾಗ ಪ್ರತಿರೋಧಿಸಿರುತ್ತಾರೆ. ಆದ್ದರಿಂದ ಇವರನ್ನು Institutional Quarantine ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಅನುಮತಿ ಪಡೆಯದೇ Primary Contact ಸಂಪರ್ಕವಿರುವ ವ್ಯಕ್ತಿಗಳನ್ನು ಕೊಪ್ಪಳಕ್ಕೆ ಕರೆತಂದಿರುವುದು ಅಪರಾಧವಾಗಿದ್ದು, ಈ ಬಗ್ಗೆ ಗುರುಬಸವ ಹೊಳಗುಂದಿ ಇವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲು ತಹಶೀಲ್ದಾರ ಕೊಪ್ಪಳ / ವೈದ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಹೆಚ್ಚಿನ ತನಿಖೆಗೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ಕಾರಣ ಮೇಲ್ಕಾಣಿಸಿದ ಸದಸ್ಯರ ಹಾಗೂ ಅವರ ಕುಟುಂಬದ ಸದಸ್ಯರ ಜೊತೆಗೆ ಯಾವುದೇ ಸಂಪರ್ಕ ಹೊಂದಿದ್ದಲ್ಲಿ ಅಂತಹ ವ್ಯಕ್ತಿಗಳು ತಮ್ಮ ಮನೆಯಿಂದ ಹೊರಗೆ ಬಾರದೇ ಕಡ್ಡಾಯವಾಗಿ ಮನೆಯಲ್ಲಿಯೇ ಇರತಕ್ಕದ್ದು, ಹಾಗೂ ಕೆಮ್ಮು, ನೆಗಡಿ, ಉಸಿರಾಟ ಸಂಬಂಧಿ ಖಾಯಿಲೆಗಳ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆಯನ್ನು ಪಡೆಯತಕ್ಕದ್ದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಕೊರೊನಾಗೆ ಪ್ರಸ್ತುತ ಭಾರತದಲ್ಲಿ 414 ಬಲಿಯಾಗಿದ್ದು 10 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಯಾರೂ ಕೂಡ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸದೇ ಎಚ್ಚರಿಕೆಯಿಂದಿರಬೇಕಾಗಿದೆ.


ಇದನ್ನೂ ಓದಿ: ಮೋದಿ ಭಾಷಣದಲ್ಲಿದ್ದ ಮೂರು ಮಹಾ ಸುಳ್ಳುಗಳು : ಶಿವಸುಂದರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...