ಸುರಕ್ಷತಾ ಮಾನದಂಡಗಳನ್ನು ಪಾಲಿಸದ ಕಾರಣ ಪ್ಯಾಕ್ ಮಾಡಿದ ಕೆಂಪು ಮೆಣಸಿನ ಪುಡಿಯ ಬ್ಯಾಚ್ ಅನ್ನು ಹಿಂಪಡೆಯಲು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು ಪತಂಜಲಿ ಫುಡ್ಸ್‌ಗೆ ಆದೇಶಿಸಿದೆ ಎಂದು ಕಂಪನಿಯು ಗುರುವಾರ ತಿಳಿಸಿದೆ. ಆಹಾರ ಸುರಕ್ಷತಾ ಪ್ರಾಧಿಕಾರವು ಜನವರಿ 13 ರಂದು ಸಂಪೂರ್ಣ ಕೆಂಪು ಮೆಣಸಿನ ಪುಡಿಯನ್ನು ಹಿಂಪಡೆಯಲು ಆದೇಶವನ್ನು ನೀಡಿದ್ದು, ಕಂಪನಿಯು ಜನವರಿ 16 ರಂದು ಆದೇಶವನ್ನು ಸ್ವೀಕರಿಸಿದೆ ವರದಿಯಾಗಿದೆ.
ಕೆಂಪು ಮೆಣಸಿನ ಪುಡಿಯ ಬ್ಯಾಚ್ ಆಹಾರ ಸುರಕ್ಷತೆ ಮತ್ತು ಮಾನದಂಡಗಳು (ಮಾಲಿನ್ಯಕಾರಕಗಳು, ವಿಷಗಳು ಮತ್ತು ಉಳಿಕೆಗಳು) ನಿಯಮಗಳು, 2011 ಅನ್ನು ಅನುಸರಿಸಲು ವಿಫಲವಾಗಿದೆ ಎಂದು ಆರೋಪಿಸಲಾಗಿದೆ. ಕಂಡುಬಂದ ಉಲ್ಲಂಘನೆಗಳ ಸ್ವರೂಪ ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಪತಂಜಲಿ ಫುಡ್ಸ್ ಕಂಪೆನಿಯು ಯೋಗ ಗುರು ರಾಮ್‌ದೇವ್ ನೇತೃತ್ವದ ಪತಂಜಲಿ ಆಯುರ್ವೇದ ಸಮೂಹದ ಭಾಗವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಏಪ್ರಿಲ್‌ನಲ್ಲಿ ಕೂಡಾ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು ದೇಶಾದ್ಯಂತದ ಎಲ್ಲಾ ಬ್ರಾಂಡ್‌ಗಳಿಂದ ಪುಡಿ ಮಾಡಿದ ಮಸಾಲೆಗಳ ಮಾದರಿಗಳನ್ನು ಅವುಗಳ ಗುಣಮಟ್ಟವನ್ನು ಪರಿಶೀಲಿಸಲು ಪ್ರಾರಂಭಿಸಿತ್ತು. ಪುಡಿ ಮಾಡಿದ ಮಸಾಲೆ ತಯಾರಕರಾದ ಎವರೆಸ್ಟ್ ಮತ್ತು MDH ಮಾರಾಟ ಮಾಡುವ ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್ ಇರುವ ಬಗ್ಗೆ ಹಾಂಗ್ ಕಾಂಗ್ ಮತ್ತು ಸಿಂಗಾಪುರ ಎಚ್ಚರಿಕೆ ನೀಡಿದ ನಂತರ ಪ್ರಾಧಿಕಾರವು ಈ ಪರಿಶೀಲನೆ ನಡೆಸಿದೆ.
ಏಪ್ರಿಲ್ 5 ರಂದು, ಹಾಂಗ್ ಕಾಂಗ್‌ನ ಆಹಾರ ಸುರಕ್ಷತಾ ಕೇಂದ್ರವು MDH ಮದ್ರಾಸ್ ಕರಿ ಪೌಡರ್, MDH ಸಾಂಬಾರ್ ಮಸಾಲ, MDH ಕರಿ ಪೌಡರ್ ಮತ್ತು ಎವರೆಸ್ಟ್ ಫಿಶ್ ಕರಿ ಮಸಾಲಗಳ ಮಾರಾಟವನ್ನು ನಿಷೇಧಿಸಿದ್ದು, ಅವುಗಳನ್ನು ಹಿಂಪಡೆದಿದೆ. ಮಾದರಿಗಳಲ್ಲಿ ಕೀಟನಾಶಕ ಎಥಿಲೀನ್ ಆಕ್ಸೈಡ್ ಇರುವುದು ಕಂಡುಬಂದ ನಂತರ ಈ ಕ್ರಮವನ್ನು ಕೈಗೊಂಡಿದೆ.
ಎವರೆಸ್ಟ್‌ನ ಫಿಶ್ ಕರಿ ಮಸಾಲೆ ಮಿಶ್ರಣವು ಅನುಮತಿಸಲಾದ ಮಟ್ಟಕ್ಕಿಂತ ಹೆಚ್ಚಿನ ಎಥಿಲೀನ್ ಆಕ್ಸೈಡ್ ಅನ್ನು ಹೊಂದಿದೆ ಎಂಬ ಕಾರಣಕ್ಕೆ ಸಿಂಗಾಪುರ್ ಆಹಾರ ಸಂಸ್ಥೆಯು ಅದನ್ನು ಹಿಂಪಡೆಯಿತು. ಉತ್ಪನ್ನಗಳ ಶೆಲ್ಫ್ ಜೀವಿತಾವಧಿಯನ್ನು ವಿಸ್ತರಿಸಲು ತಯಾರಕರು ಹೆಚ್ಚಾಗಿ ಎಥಿಲೀನ್ ಆಕ್ಸೈಡ್ ಅನ್ನು ಫ್ಯೂಮಿಗಂಟ್ ಮತ್ತು ಕ್ರಿಮಿನಾಶಕವಾಗಿ ಬಳಸುತ್ತಾರೆ, ಆದರೆ ಭಾರತದ ಆಹಾರ ಸುರಕ್ಷತಾ ನಿಯಂತ್ರಕವು ಅದರ ಬಳಕೆಯನ್ನು ಅನುಮತಿಸುವುದಿಲ್ಲ.
ಇದನ್ನೂಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್


