Homeಅಂಕಣಗಳುಪುಟಕ್ಕಿಟ್ಟ ಪುಟಗಳುಪತಂಜಲಿ ಯೋಗಸೂತ್ರ: ಧಾರ್ಮಿಕವೂ ಅಲ್ಲದ ಮೌಢ್ಯವೂ ಅಲ್ಲದ ತಂತ್ರ ಸಾಧನ

ಪತಂಜಲಿ ಯೋಗಸೂತ್ರ: ಧಾರ್ಮಿಕವೂ ಅಲ್ಲದ ಮೌಢ್ಯವೂ ಅಲ್ಲದ ತಂತ್ರ ಸಾಧನ

ತನ್ನ ಸೂತ್ರಗಳನ್ನು ವಿಶ್ವಾಸಿಸಿ ಎಂದು ಭ್ರಾಮಕ ಶ್ರದ್ಧೆಯನ್ನು ಉಂಟುಮಾಡುವ ಇರಾದೆ ಪತಂಜಲಿಗಿಲ್ಲ. ಪ್ರಯೋಗಿಸಿ ಅಭ್ಯಾಸ ಮಾಡಿ ಎನ್ನುತ್ತಾನೆ. ಅನುಷ್ಠಾನಕ್ಕೆ ತನ್ನಿ ಎಂದು ತಾಕೀತು ಮಾಡುತ್ತಾನೆ. ಅದರಿಂದ ಹೀಗಾಗತ್ತೆ ಹಾಗಾಗತ್ತೆ ಎಂದು ಫಲವನ್ನು ಪೂರ್ವಪಾಠದಲ್ಲಿ ಹೇಳಿ ಆಸೆ ಹುಟ್ಟಿಸುವುದಿಲ್ಲ.

- Advertisement -
- Advertisement -

ಯೋಗ ಎಂಬುದನ್ನು ಧಾರ್ಮಿಕತೆಗೆ ತಳುಕುಹಾಕುವ ಮತ್ತು ಅದನ್ನು ಮೌಢ್ಯವೆಂದು ತಳ್ಳಿ ಹಾಕುವುದು ಎರಡೂ ಪೂರ್ವಗ್ರಹದಿಂದ ಕೂಡಿದೆ. ಆದರೆ ಇವೆರಡಕ್ಕೂ ಹೊರತಾಗಿರುವ ಒಂದು ಸಾಧನ ತಂತ್ರ ಈ ಪತಂಜಲಿ ಯೋಗಸೂತ್ರ.

ಮನುಷ್ಯ ತನ್ನ ಗ್ರಹಿಕೆ ಮತ್ತು ಅನುಭವಗಳ ಪರಿಮಿತಿಯಲ್ಲಿ ಇರುವ ತನ್ನ ಮನಸ್ಸು ಮತ್ತು ಶರೀರ ಸಂವೇದನೆಯನ್ನು ವಿಸ್ತರಿಸಿಕೊಂಡು ಕೈವಲ್ಯವನ್ನು ಪಡೆಯಲು ಮಾಡಿರುವ ಬೋಧನೆ ಇದು. ಯಾವುದೇ ದೇವತೆಗಳ ಗುಣಗಾನವಲ್ಲ, ಪ್ರಾರ್ಥನೆ, ಆರಾಧನೆಗಳಿಂದ ಫಲ ಪಡೆಯುವ ಭರವಸೆಯಲ್ಲ, ಹುಟ್ಟಿನಿಂದ ಶ್ರೇಷ್ಠರೋ ಕನಿಷ್ಟರೋ ಆಗಿದ್ದಾರೆಂಬ ಭ್ರಮೆಯಲ್ಲಿರುವ ಜಾತಿಯವರಿಗೆ ಸವಲತ್ತೋ, ಅನುಗ್ರಹವೋ ಅಲ್ಲವೇ ಅಲ್ಲ. ಯಾವೊಬ್ಬ ಮನುಷ್ಯನೂ ತನ್ನ ಸೀಮಿತ ಗ್ರಹಿಕೆಯಲ್ಲಿರುವ ಮನಸ್ಸಿನ ಸ್ವರೂಪ ಮತ್ತು ಚಟುವಟಿಕೆಗಳನ್ನು ಅರಿತುಕೊಂಡು, ಯಾದು ತನ್ನನ್ನು ಉದಾತ್ತಗೊಳಿಸುತ್ತದೆಯೋ ಅಥವಾ ನಿರ್ಬಂಧಗಳಿಂದ ಮುಕ್ತಗೊಳಿಸುತ್ತದೆಯೋ ಅಂತಹವನ್ನು ಸ್ವೀಕರಿಸುತ್ತಾ, ಯಾವುವು ತನ್ನನ್ನು ಹಿಂದಕ್ಕೆ ಎಳೆಯುತ್ತದೆಯೋ, ಬಂಧನದಲ್ಲಿ ಸಿಲುಕಿಸುತ್ತದೆಯೋ, ಆನಂದವನ್ನು ನೀಡುವುದಿಲ್ಲವೋ ಅಂತಹವನ್ನು ನಿಗ್ರಹಿಸುವ ತರಬೇತಿಗೆ ಅಗತ್ಯವಿರುವ ಫಾರ್ಮುಲಾಗಳು ಈ ಯೋಗಸೂತ್ರಗಳು.

ಅನುಮಾನಗಳನ್ನು ಹುಟ್ಟಿಹಾಕಿಕೊಂಡು, ಚರ್ಚೆಗಳನ್ನು ಮಾಡಿಕೊಂಡು, ಸಿದ್ಧಾಂತಗಳ ಶಾಖೆಗಳ ಮೂಸೆಗಳಲ್ಲಿ ಶೋಧಿಸಿಕೊಂಡು ಕಾಲಹರಣ ಮಾಡಬೇಡಿ. ಹೇಳಿದಷ್ಟು ಮಾಡಿ ಎನ್ನುವಷ್ಟು ಖಂಡಿತವಾದಿ ಈ ಪತಂಜಲಿ. “ಅಥ ಯೋಗಾನುಶಾಸನಂ” ಎಂದೇ ಪ್ರಾರಂಭಿಸುತ್ತಾರೆ. ಜಿಜ್ಞಾಸಾಶಾಸ್ತ್ರಗಳು “ಅಥಾತೋ ಬ್ರಹ್ಮಜಿಜ್ಞಾಸಾ” ಅಥವಾ “ಅಥಾತೋ ಧರ್ಮಜಿಜ್ಞಾಸಾ” ಎಂದು ಪ್ರಾರಂಭಿಸಿದರೆ ಅಲ್ಲಿ ನಿಮ್ಮ ಹೊಸ ಆಲೋಚನೆಗಳಿಗೆ ಮತ್ತು ಬೇರೆ ಬೇರೆ ಸಿದ್ಧಾಂತಗಳ ಒರೆಗಲ್ಲಿಗೆ ತಿಕ್ಕಿ ತೀಡಿ ಈ ವಿಷಯವು ಸರಿಯೋ, ತಪ್ಪೋ, ಸಮರ್ಪಕವೋ ಎಂದು ನೋಡುವ ಸಾಧ್ಯತೆಗಳಿರುತ್ತದೆ. ಆದರೆ ವಿಜ್ಞಾನದ ಸೂತ್ರಗಳಲ್ಲಿ ನಿರೂಪಿತ ವಿಷಯವು ದೃಢವಾಗಿದ್ದು, ಅದು ಬದಲಾಗುವುದಿಲ್ಲ. ಆದರೆ ಅದರಿಂದ ಈಚೆಗೂ ವಿಷಯಗಳು ಪ್ರಯೋಗಗಳಿಂದ ಮತ್ತಷ್ಟು ವಿಸ್ತಾರಗೊಳ್ಳುವವು. ಉದಾಹರಣೆಗೆ ಗುರುತ್ವಾಕರ್ಷಣೆಯ ನಿಯಮ. ಇದನ್ನು ಸಂದೇಹಿಸಲಾಗದು. ಈಗಾಗಲೇ ನಿರೂಪಿತವಾಗಿರುವುದು. ಅದನ್ನು ಪ್ರಯೋಗಗಳಿಗೆ ಒಳಪಡಿಸಬಹುದು. ಬೇರೆಬೇರೆ ವಿಷಯಗಳಲ್ಲಿ ಇದರ ವಿಸ್ತಾರವನ್ನು ಹೆಚ್ಚಿಸಬಹುದು. ಇದರ ನಿಯಮವನ್ನು ಭೂಮಿಯ ಮೇಲೆ ಮಾತ್ರವಲ್ಲದೇ ಅಂತರಿಕ್ಷದಲ್ಲಿ ಮಾಡುವ ಪ್ರಯೋಗಗಳವರೆಗೂ ವಿಸ್ತರಿಸಬಹುದು. ಗುರುತ್ವಾಕರ್ಷಣೆಯ ನಿಯಮವೆಂದರೆ ಅದೊಂದು ಮೂಲಭೂತ ವೈಜ್ಞಾನಿಕ ಸೂತ್ರ. ಪತಂಜಲಿಗೆ ಅಷ್ಟರಮಟ್ಟಿಗಿನ ವಿಶ್ವಾಸ ತನ್ನ ಸೂತ್ರಗಳಲ್ಲಿ.

ತನ್ನ ಸೂತ್ರಗಳನ್ನು ವಿಶ್ವಾಸಿಸಿ ಎಂದು ಭ್ರಾಮಕ ಶ್ರದ್ಧೆಯನ್ನು ಉಂಟುಮಾಡುವ ಇರಾದೆ ಪತಂಜಲಿಗಿಲ್ಲ. ಪ್ರಯೋಗಿಸಿ ಅಭ್ಯಾಸ ಮಾಡಿ ಎನ್ನುತ್ತಾನೆ. ಅನುಷ್ಠಾನಕ್ಕೆ ತನ್ನಿ ಎಂದು ತಾಕೀತು ಮಾಡುತ್ತಾನೆ. ಅದರಿಂದ ಹೀಗಾಗತ್ತೆ ಹಾಗಾಗತ್ತೆ ಎಂದು ಫಲವನ್ನು ಪೂರ್ವಪಾಠದಲ್ಲಿ ಹೇಳಿ ಆಸೆ ಹುಟ್ಟಿಸುವುದಿಲ್ಲ. ಆ ರೀತಿಯಲ್ಲಿ ಆಸೆ ಹುಟ್ಟಿಸುವುದು ಅಥವಾ ಭಯ ಹುಟ್ಟಿಸುವುದು ಪತಂಜಲಿಯ ಯೋಗ ಮಾರ್ಗದಲ್ಲಿ ನಿಷೇಧವೂ ಹೌದು.

ಹಾಗಂತ ಪತಂಜಲಿಯ ಯೋಗಸೂತ್ರವು ಋಷಿಮುನಿಯೊಬ್ಬನೋ ಅಥವಾ ಯೋಗಿಯೊಬ್ಬನೋ ತಾನು ಮೋಡಗಳ ಆಚೆಯಿಂದಲೋ ಅಥವಾ ಬೆಟ್ಟಗಳ ಮರೆಯಿಂದಲೋ ದೇವರ ಬಾಯಿಂದ ಕೇಳಿಸಿಕೊಂಡು ಬರೆದಿರುವಂತಹುದೇನಲ್ಲ. ಸುಮಾರು ಕ್ರಿಸ್ತಪೂರ್ವ 150ರ ಆಸುಪಾಸುಗಳಲ್ಲಿ ರಚಿಸಲ್ಪಟ್ಟಿರಬಹುದಾದ ಈ ಕೃತಿ ಶತಶತಮಾನಗಳ ಹಿಂದಿನ ಅನೇಕ ಪ್ರಯೋಗಗಳನ್ನು, ಅಭ್ಯಾಸಗಳನ್ನು, ತಂತ್ರ ಸಾಧನೆಗಳನ್ನು ಗಮನಿಸಿಕೊಂಡು, ವಿವಿಧ ಸಿದ್ಧಾಂತಗಳ ಶಾಲೆಗಳ ಧ್ವನಿಗಳನ್ನು ಕೇಳುತ್ತಾ, ಅದರಿಂದಾಚೆಗಿರುವ ಮರ್ಮವನ್ನು ಅರಿಯಲು ಯತ್ನಿಸುತ್ತಾ ಕ್ರೋಢೀಕರಿಸುವಂತಹ ಸೂತ್ರಗಳಾಗಿವೆ. ನೂರಾರು ವರ್ಷಗಳು ಬರಿಯ ಮೌಖಿಕವಾಗಿಯೇ ಇದ್ದ ಈ ಸೂತ್ರಗಳು ನಂತರದ ಕಾಲಘಟ್ಟದಲ್ಲಿ ಬರವಣಿಗೆಯ ರೂಪಕ್ಕೆ ತರಲಾಯಿತು.

ವಿಷ್ಣುವೋ, ಇಂದ್ರನೋ, ಶಿವನೋ, ಒಬ್ಬ ದೇವರ ಅಧೀನದಲ್ಲಿದ್ದು ಅವನ ಆಗ್ರಹ ಮತ್ತು ಅನುಗ್ರಹಗಳಿಗೆ ತಕ್ಕಂತೆ ನಮ್ಮ ಬದುಕಿನ ನಡೆಗಳು ಒಡಮೂಡುವುದು ಎಂದು ನಂಬುವ ಧಾರ್ಮಿಕ ಶ್ರದ್ಧೆ ಪತಂಜಲಿಯದ್ದಲ್ಲ. ಮನಸ್ಸು ಮತ್ತು ದೇಹಕ್ಕೆ ಅಗತ್ಯವಿರುವ ‘ಅಭ್ಯಾಸ’ ಮಾಡುತ್ತಾ, ತನ್ನನ್ನು ತಾನು ತರಬೇತಿಗೊಳಿಸಿಕೊಳ್ಳುತ್ತಾ ಕೈವಲ್ಯವನ್ನು ಪಡೆಯುವುದು – ಮನಸ್ಸು ಮತ್ತು ದೇಹವನ್ನು ಶಿಸ್ತಿಗೆ ಒಳಪಡಿಸಿ, ನಮ್ಮ ಚೈತನ್ಯವನ್ನು ಕೇಂದ್ರೀಕರಿಸಿ ಔನ್ನತ್ಯವನ್ನು ಹೊಂದುವುದು ಅವನ ಮಾರ್ಗ. ಇಲ್ಲಿ ಆತ್ಮವೆಂದರೆ ವ್ಯಕ್ತಿಗತವಾದ ಚೈತನ್ಯ. ಪರಮಾತ್ಮವೆಂದರೆ ವ್ಯಕ್ತಿಗತವಾಗಿರುವುದನ್ನು ಮೀರಿರುವ ವಿಶ್ವದಸ್ತಿತ್ವದ ಮಹಾಚೈತನ್ಯ. ಒಂದು ನೀರಿನ ಹನಿಯಲ್ಲಿರುವ ಅಣುಗಳ ಸಂಯೋಜನೆ ಮತ್ತು ಗುಣಗಳೇ ಸಮುದ್ರದಲ್ಲಿಯೂ ಇರುವುದು. ಆದರೆ ಈ ಎರಡರ ನಡುವೆ ಭೌತಿಕ ವ್ಯತ್ಯಾಸವಿದೆ. ನೀರಿನ ಹನಿಯು ಸಾಗರವನ್ನು ಸೇರಿ ಅಗಾಧತೆಯಲ್ಲಿ ಒಂದಾಗಿ ತಾನೂ ಆ ಅಗಾಧಶಕ್ತಿಯಲ್ಲಿ ಒಂದಾಗುವ ಸಾಧ್ಯತೆಯೂ ಇದೆ. ಈ ಸಾಧ್ಯತೆಯನ್ನು ಮನುಷ್ಯನ ಜೀವ ಎಂಬ ಚೈತನ್ಯವು ಪರಮ ಎಂಬ ಮಹಾ ಚೈತನ್ಯದೊಡನೆ ಸೇರಿಸುವ ಪ್ರಕ್ರಿಯಲ್ಲಿ ಕಂಡುಕೊಳ್ಳುವ ಪ್ರಯತ್ನಕ್ಕೆ ಒಂದು ಶಿಸ್ತಿನ ಬೋಧನೆ ಈ ಪತಂಜಲಿಯದು.

ಮನುಷ್ಯನ ಮನಸ್ಸು ಮತ್ತು ಅದರ ರಚನೆ, ಕಾರ್ಯ ಚಟುವಟಿಕೆಗಳು, ಸಾಮರ್ಥ್ಯಗಳು, ದೌರ್ಬಲ್ಯಗಳು, ಈ ಎಲ್ಲವೂ ಪತಂಜಲಿಯ ಗಮನದಲ್ಲಿದೆ. ಅದು ಈ ಮನುಷ್ಯನ ಜೈವಿಕ, ಸಾಮಾಜಿಕ ಪರಿಸರಗಳು ವಿಧಿಸಿರುವ ನಿರ್ಬಂಧಗಳಿಂದ ಸೀಮಿತ ಚೌಕಟ್ಟಿನ ವಸ್ತುವಾಗಿದೆ ಎಂಬ ಅರಿವು ಇದೆ. ಅದನ್ನು ಎಲ್ಲಾ ಬಗೆಯ ಬಂಧನಗಳಿಂದ ಮುಕ್ತವಾಗಿಸುವ ಕಾಳಜಿ ಇದೆ. ಈ ಕಾಳಜಿಯು ಯಾರನ್ನೂ ದ್ವೇಷಿಸದಿರಲು, ಆಲೋಚನೆಯಲ್ಲಿಯೂ ಹಿಂಸೆ ಮಾಡದಿರಲು ಎಚ್ಚರಿಕೆಯನ್ನು ನೀಡುತ್ತದೆ.

ಸೃಷ್ಟಿಕರ್ತ ಎಂಬ ಭ್ರಮೆಯನ್ನು ಒಮ್ಮಿಂದೊಮ್ಮೆಲೇ ತಳ್ಳಿ ಹಾಕುತ್ತದೆ. ಯಾರೂ ಸೃಷ್ಟಿಸಿದ್ದಲ್ಲದ ಈ ಪ್ರಕೃತಿಯು ಯಾವಾಗಲೂ ಇತ್ತು. ಕಾಲದಿಂದ ಕಾಲಕ್ಕೆ ನಿರಂತರವಾಗಿ ರೂಪಾಂತರಗೊಳ್ಳುತ್ತಲೇ ಇರುತ್ತದೆ ಎಂಬ ಸ್ಪಷ್ಟತೆ ಪತಂಜಲಿಗೆ ಇದೆ. ಅದಕ್ಕೆ ಅದರದೇ ಆದಂತಹ ಗುಣಗಳಿವೆ, ಕ್ರಮಗಳಿವೆ. ಇದರ ಸೃಷ್ಟಿಯೇ ಆಗಿರುವ ಮನುಷ್ಯನ ಶರೀರಕ್ಕೂ ಮತ್ತು ಅವನ ಮನಸ್ಸಿಗೂ ಅದೇ ಗುಣಧರ್ಮಗಳಿವೆ. ಹಾಗಾಗಿ ಅರಿತು ಅಭ್ಯಾಸ ಮಾಡಿರೆಂದು ಪತಂಜಲಿ ಬೋಧಿಸುತ್ತಾನೆ. ಈ ಯೋಗ ಸೂತ್ರವು ಬೇಡುವುದು ಶ್ರದ್ಧೆಯನ್ನು, ನಂಬಿಕೆಯನ್ನಲ್ಲ. ಚೈತನ್ಯ, ಆಲೋಚನೆ, ಏಕಾಗ್ರತೆ ಮತ್ತು ಅರಿವು ಯೋಗದ ಗುರಿಯನ್ನು ಸಾಧಿಸುವುದು. ಸ್ಥೂಲ ಪರಿಸರವು ಮನುಷ್ಯನ ಮನಸ್ಸನ್ನು ತನ್ನ ಪ್ರಭಾವಕ್ಕೆ ವಶಪಡಿಸಿಕೊಂಡು ಚಂಚಲವನ್ನು ಉಂಟುಮಾಡುತ್ತದೆ. ಆದರೆ ಅವನು ಎಚ್ಚೆತ್ತುಕೊಂಡು ಅವುಗಳನ್ನು ಮೀರಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣೆ, ಧ್ಯಾನ ಮತ್ತು ಸಮಾಧಿ ಎಂಬ ಯೋಗದ ಎಂಟು ಅಂಗಗಳನ್ನು ಅನುಷ್ಠಾನ ಮಾಡಿದರೆ ಮನುಷ್ಯನ ಮನಸ್ಸು ಮತ್ತು ಶರೀರವು ತಾನು ಒಳಪಟ್ಟಿರುವ ಅಶುದ್ಧಿಯಿಂದ ಮುಕ್ತವಾಗುತ್ತದೆ ಎಂಬುದು ಇದರ ಧೋರಣೆ. ಇವುಗಳಲ್ಲಿ ಇರುವುದಾದರೂ ಏನು: ಅಹಿಂಸೆ, ಸತ್ಯ, ಕದಿಯದಿರುವುದು, ಅಪಹರಿಸದಿರುವುದು, ಶಕ್ತಿಯನ್ನು ಪೋಲು ಮಾಡಿಕೊಳ್ಳದಿರುವಂತಹ ಬ್ರಹ್ಮಚರ್ಯವೇ ಯಮ ಅಥವಾ ರೀತಿಗಳು. ಹೀಗೆ ಮನುಷ್ಯನು ತನ್ನ ಮನಸ್ಸನ್ನು ಮುಕ್ತವಾಗಿಯೂ ಮತ್ತು ಆರೋಗ್ಯವಾಗಿಯೂ ಇಟ್ಟುಕೊಂಡು ಔನ್ನತ್ಯಕ್ಕೆ ಬೇಕಾದುದಕ್ಕೆ ತನ್ನ ಚಟುವಟಿಕೆಗಳನ್ನು ಕೇಂದ್ರೀಕರಿಸಿಕೊಳ್ಳಲು ಸೂತ್ರಗಳನ್ನು ಒದಗಿಸುವುದು ಇದರ ಇರಾದೆ.

ಯಾರು ಅಭ್ಯಾಸ ಮಾಡುತ್ತಾರೋ ಅವರಿಗೆ ಈ ಯೋಗಸಾಧನೆಯು ಲಭ್ಯ. ಒಂದೊಂದು ಸೂತ್ರವೂ ಮನೋವೈಜ್ಞಾನಿಕವಾಗಿ ಮತ್ತು ಸೈದ್ಧಾಂತಿಕವಾಗಿ ತಮ್ಮದೇ ಮನಸ್ಸನ್ನು ಅರಿಯಲು ಮತ್ತು ಸಶಕ್ತಗೊಳಿಸಿಕೊಳ್ಳಲು ನೆರವಾಗುವ ಮಾರ್ಗಸೂತ್ರಗಳೇ ಮತ್ತು ಒಳನೋಟಗಳೇ.

ಮಾನಸಿಕ ಸಶಕ್ತತೆಗೆ ಮತ್ತು ಸ್ವಾಸ್ಥ್ಯಕ್ಕೆ ಒಂದೆರಡು ಸೂತ್ರಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.

ಮೈತ್ರೀಕರುಣಾಮುದಿತೋಪೇಕ್ಷಾಣಾಂಸುಖದುಃಖಪುಣ್ಯಾಪುಣ್ಯವಿಷಯಾಣಾಂ ಭಾವನಾತಶ್ಚಿತ್ತಪ್ರಸಾದನಮ್ (1.33)

ಸುಖದೊಂದಿಗೆ ಮೈತ್ರಿ, ದುಃಖದೊಂದಿಗೆ ಕರುಣೆ, ಪುಣ್ಯದಲ್ಲಿ ಹರ್ಷ, ಪಾಪದಲ್ಲಿ ಉಪೇಕ್ಷೆಗಳ ಭಾವನೆಗಳನ್ನು ಬೆಳೆಸಿಕೊಂಡಲ್ಲಿ ಚಿತ್ತಪ್ರಸಾದವಾಗುವುದು.

ಅಹಿಂಸೆಯನ್ನು ಮಹಾವ್ರತವನ್ನಾಗಿಸಿಕೊಳ್ಳುವ ಬಗೆ ಇದು ಹೇಳುವುದನ್ನು ನೋಡಿ, “ಜಾತಿದೇಶಕಾಲಸಮಯಾನವಚ್ಛಿನ್ನಾಃ ಸಾರ್ವಭೌಮ ಮಹಾವ್ರತಮ್” (2.31) ಒಂದು ಜೀವಕ್ಕೆ ಹಾನಿ ಮಾಡುವುದಿಲ್ಲ ಎಂದರೆ ಅದು ಯಾವ ಜಾತಿಯದೇ ಆಗಿರಲಿ, ಯಾವ ಪ್ರದೇಶದ್ದೇ ಆಗಿರಲಿ, ಯಾವುದೇ ಸಂದರ್ಭವೇ ಆಗಿರಲಿ ಮಾಡಕೂಡದು. ಯಾವುದೇ ರೀತಿಯ ಪರಿಮಿತಿಗಳಿಲ್ಲದ ಅಹಿಂಸೆಯು ಮಹಾವ್ರತವಾಗುತ್ತದೆ. ಸ್ವಜನರಿಗೆ ಕರುಣೆ, ಮತ್ತೊಬ್ಬರಿಗೆ ಕ್ರೌರ್ಯ ಎಂಬುದನ್ನು ನೇರವಾಗಿ ವಿರೋಧಿಸುತ್ತಾ ಪತಂಜಲಿ ಜೀವಪರವಾಗುತ್ತಾನೆ. ಮನುಷ್ಯನ ಮನಸ್ಸು ಜೀವಪರವಾಗಿರಬೇಕೆಂದು ಸ್ಪಷ್ಟವಾಗಿ ಪ್ರತಿಪಾದಿಸುತ್ತಾನೆ.

“ವಿತರ್ಕಭಾಧನೇ ಪ್ರತಿಪಕ್ಷಭಾವನಮ್” (2.33) ವ್ಯಕ್ತಿತ್ವ ವಿಕಸನದ ನವೀನ ತರಬೇತಿಗಳು ಈ ಸೂತ್ರವನ್ನು ಪಾಸಿಟಿವ್ ಥಿಂಕಿಂಗ್ ಎಂದು ಮುಂದಿಡುತ್ತವೆ. ‘ಮನಸ್ಸು ವ್ಯತಿರಿಕ್ತವಾದ ಉದ್ದೇಶಗಳಿಂದ ತಡೆಯಲ್ಪಟ್ಟಾಗ ಅವುಗಳ ವಿರೋಧ ಪಕ್ಷಗಳನ್ನು ಭಾವಿಸಿಕೊಳ್ಳಬೇಕು’ ಎಂದು ಸೂತ್ರ ಹೇಳುತ್ತದೆ. ನನಗೆ ಸೋಲಿನ ಭೀತಿ ಆವರಿಸಿದಾಗ ಜಯವನ್ನು ಭಾವಿಸುವುದು, ಸಾವಿನ ಭಯ ಬಾಧಿಸುವಾಗ ಬದುಕಿನ ಇಚ್ಛೆಯನ್ನು ಭಾವಿಸುವುದು, ದ್ವೇಷದಿಂದ ಮನಸ್ಸು ಕುದಿಯುವಾಗ ಪ್ರೇಮವನ್ನು ದ್ವೇಷದ ಬದಲಾಗಿ ತಂದುಕೊಳ್ಳುವ ಅಭ್ಯಾಸವನ್ನು ಸೂತ್ರ ಸೂಚಿಸುತ್ತದೆ.

“ಅಹಿಂಸಾಪ್ರತಿಷ್ಠಾಯಾಂ ತತ್ಸನ್ನಿಧೌ ವೈರತ್ಯಾಗಃ” (2.35)

ಅಹಿಂಸೆಯಲ್ಲಿ ಮನುಷ್ಯನು ಪ್ರತಿಷ್ಠಾಪಿತನಾದ ಮೇಲೆ ಅವನ ಸಾನ್ನಿಧ್ಯದಲ್ಲಿ ವೈರವು ಇರುವುದಿಲ್ಲ. ಅಂದರೆ ಸೂತ್ರವು ಹೇಳುವಂತೆ ವ್ಯಕ್ತಿಯು ಅಹಿಂಸೆಯನ್ನು ಮಹಾವ್ರತವನ್ನಾಗಿ ಸ್ವೀಕರಿಸಿ ತಾನು ಇರುವ ಎಡೆಯನ್ನೆಲ್ಲಾ ವೈರತ್ವದಿಂದ ಮುಕ್ತ ಮಾಡಲಿ ಎಂದು.

ವೀರ್ಯ ಎಂದರೆ ಶಕ್ತಿ ಎಂದೂ, ಈಶ್ವರನೆಂದರೆ ಇಡೀ ಅಸ್ತಿತ್ವವೆಂದೂ, ಆತ್ಮವೆಂದರೆ ವ್ಯಕ್ತಿಗತವಾದ ಚೈತನ್ಯವೆಂದೂ ಹೀಗೆ ಹಲವು ಸರಳ ಅರ್ಥಗಳಲ್ಲಿ ಸೂತ್ರಗಳನ್ನು ಗ್ರಹಿಸುತ್ತಾ ಹೋದರೆ ತನ್ನ ಮನಸ್ಸನ್ನು ಮತ್ತು ಬದುಕನ್ನು ಸಶಕ್ತವಾಗಿ ಸುಂದರಗೊಳಿಸಿಕೊಳ್ಳಲು ಪತಂಜಲಿ ಯೋಗಸೂತ್ರವು ಮಾರ್ಗದರ್ಶಿಯೇ ಸರಿ.

ಮೈತ್ರ್ಯಾದಿಷು ಬಲಾನಿ (4.23) ಮೈತ್ರಿಯಲ್ಲಿ ಬಲವುಂಟಾಗುತ್ತದೆ ಎಂಬುದು ಕೂಡ ಅಷ್ಟೇ ಸರಳ ಮತ್ತು ಸತ್ಯದ ಮಾತು.


ಇದನ್ನು ಓದಿ: ದೇವತಾ ಪ್ರತಿಮೆಗಳು ವಿಕಾಸವಾದುದ್ದು ಹೇಗೆ? ಅದರ ಹಿಂದಿನ ರಾಜಕೀಯವೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...