ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಮುಖ್ಯಸ್ಥ ಸೀಮಾನ್ ಅವರು ಮತ್ತೆ ದ್ರಾವಿಡ ಚಳವಳಿ ಪಿತಾಮಹ ಪೆರಿಯಾರ್ ಇ.ವಿ. ರಾಮಸಾಮಿ ಅವರನ್ನು ಗುರಿಯಾಗಿಸಿಕೊಂಡಿದ್ದು, ಪೆರಿಯಾರ್ ಅಭಿಮಾನಿಗಳಿಗೆ ತಮ್ಮ ಪಕ್ಷದಲ್ಲಿ ಸ್ಥಾನವಿಲ್ಲ ಎಂದು ಸೋಮವಾರ ಹೇಳಿದ್ದಾರೆ.
ಪೆರಿಯಾರ್ ಅವರನ್ನು ಟೀಕಿಸುವುದನ್ನು ಮುಂದುವರಿಸುವುದಾಗಿ ಹೇಳಿರುವ ಸೀಮನ್, “ನಮಗೆ ಪೆರಿಯಾರ್ ಅಗತ್ಯವಿಲ್ಲ. ನನ್ನ ಅನುಯಾಯಿಗಳಿಗೆ ಪೆರಿಯಾರ್ ಅಗತ್ಯವಿದ್ದರೆ, ಅವರು (ಪಕ್ಷ)ದಿಂದ ಹೊರಬರಬಹುದು” ಎಂದು ಸೀಮನ್ ತಿರುಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪೆರಿಯಾರ್ ಅವರನ್ನು ಟೀಕಿಸುವಲ್ಲಿ ಸೀಮಾನ್ ಉತ್ತುಂಗಕ್ಕೆ ಹೋಗಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸೀಮಾನ್, “ಆರಂಭಿಕ ಹಂತದಲ್ಲೇ, ನಾನು ಪೆರಿಯಾರ್ ಅವರನ್ನು ಟೀಕಿಸುವಲ್ಲಿ ಉತ್ತುಂಗದಲ್ಲಿದ್ದೇನೆ” ಎಂದು ಸೀಮನ್ ಹೇಳಿದ್ದಾರೆ. ಪೆರಿಯಾರ್ ಅಭಿಮಾನಿಗಳಿಗೆ
ಈರೋಡ್ (ಪೂರ್ವ) ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶದ ಕುರಿತು ಮಾತನಾಡಿದ ಸೀಮಾನ್, ಡಿಎಂಕೆಯ ಹಣ ಬಲ ಮತ್ತು ಚುನಾವಣಾ ಅಕ್ರಮದ ಮೂಲಕ ಗೆಲುವು ಸಾಧಿಸಿದೆ ಎಂದು ಆರೋಪಿಸಿದ್ದಾರೆ. ಉಪಚುನಾವಣೆಯಲ್ಲಿ ಎನ್‌ಟಿಕೆ ಅಭ್ಯರ್ಥಿಯ ಸೋಲು ತಮ್ಮ ಪಕ್ಷದ ಉತ್ಸಾಹವನ್ನು ಕುಗ್ಗಿಸಿಲ್ಲ ಎಂದು ಅವರು ಹೇಳಿದ್ದಾರೆ.
“ನಾನು ಒಬ್ಬ ಯೋಧ. ನನ್ನ ಪಕ್ಷ ಏಕಾಂಗಿ ಹೋರಾಟ ನಡೆಸಿತು. ನಮ್ಮ ಅಭ್ಯರ್ಥಿ ಸುಮಾರು 25,000 ಮತಗಳನ್ನು ಪಡೆದಿದ್ದಾರೆ. ಈ ಸಂಖ್ಯೆಯ ಬದಲಾವಣೆಯನ್ನು ಬಯಸುವ ಜನರು ಇನ್ನೂ ಇದ್ದಾರೆ ಎಂಬುದನ್ನು ಸೂಚಿಸುತ್ತದೆ. ಈ ಎಲ್ಲಾ ಮತದಾರರು ಹಣ ಬಲ ಸೇರಿದಂತೆ ಯಾವುದೇ ಇತರ ಆಮಿಷಗಳಿಗೆ ಪ್ರಭಾವಿತರಾಗಿಲ್ಲ ಹೇಳಿದ್ದಾರೆ” ಎಂದು ಸೀಮಾನ್ ಹೇಳಿದ್ದಾರೆ.
“ನಮ್ಮ ಮತಗಳು ಬಿಜೆಪಿ ಬೆಂಬಲಿಗರದ್ದಲ್ಲ. ಅವು ಪ್ರಾಮಾಣಿಕ ಆಡಳಿತಕ್ಕೆ ಸಿಕ್ಕ ಮತಗಳಾಗಿದ್ದವು. ಪಡೆದ ಮತಗಳ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಅವು 2026 ರಲ್ಲಿ ನಮಗೆ ಹೆಚ್ಚಿನ ಭರವಸೆಯನ್ನು ನೀಡುತ್ತವೆ” ಎಂದು ಸೀಮಾನ್ ಪ್ರತಿಪಾದಿಸಿದ್ದಾರೆ.
ಇದನ್ನೂಓದಿ: ಟಿವಿ ಕಾರ್ಯಕ್ರಮದಲ್ಲಿ ಮಣಿಪುರ ರಾಜಕೀಯದ ಬಗ್ಗೆ ಮಾತನಾಡಿದ್ದ ಹಿರಿಯ ಪತ್ರಕರ್ತನ ಅಪಹರಣ
ಟಿವಿ ಕಾರ್ಯಕ್ರಮದಲ್ಲಿ ಮಣಿಪುರ ರಾಜಕೀಯದ ಬಗ್ಗೆ ಮಾತನಾಡಿದ್ದ ಹಿರಿಯ ಪತ್ರಕರ್ತನ ಅಪಹರಣ


