ಭಾನುವಾರದಂದು ಪೆಟ್ರೋಲ್ ದರವು ಲೀಟರ್‌ಗೆ 50 ಪೈಸೆ ಮತ್ತು ಡೀಸೆಲ್‌ಗೆ 55 ಪೈಸೆಗಳಷ್ಟು ಏರಿಕೆಯಾಗಿದೆ. ದೈನಂದಿನ ದರ ಪರಿಷ್ಕರಣೆ ಮತ್ತೆ ಪ್ರಾರಂಭಗೊಂಡ ನಂತರ ಪ್ರೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 3.70 ರೂ. ನಿಂದ 3.75 ರೂ.ವರೆಗೆ ಏರಿಕೆಯಾಗಿದೆ. ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ದರವು 98.61 ರೂ. ನಿಂದ 99.11 ರೂ.ಗೆ ಏರಿಕೆಯಾಗಿದೆ. ಡೀಸೆಲ್ ದರಗಳು ಲೀಟರ್‌ಗೆ 89.87 ರೂ. ನಿಂದ 90.42 ರೂ.ಗೆ ಏರಿಕೆಯಾಗಿದೆ.
ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದ್ದು, ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ದರಗಳು ಬದಲಾಗುತ್ತವೆ.
ದೇಶದಾದ್ಯಂತ ಬೆಲೆಗಳು ಹೆಚ್ಚಾಗುತ್ತಿದ್ದಂತೆ ರಾಜ್ಯದಲ್ಲೂ ಬೆಲೆಗಳು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ತಲಾ 53 ಪೈಸೆ ಹೆಚ್ಚಳವಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 104.46 ರೂ ಆಗಿದ್ದು, ಡೀಸೆಲ್ ಬೆಲೆ 88.67 ರೂ.ಗೆ ತಲುಪಿದೆ.
ಇದನ್ನೂ ಓದಿ: ನಾಲ್ಕು ತಿಂಗಳ ನಂತರ ಮತ್ತೆ ಪೆಟ್ರೋಲ್ ಬೆಲೆ ಏರಿಕೆ; ಗುಲ್ಬರ್ಗಾದಲ್ಲಿ 1.45, ಮೈಸೂರಿನಲ್ಲಿ 1 ರೂ. ಏರಿಕೆ!
ಈ ಬಾರಿಯ ಏರಿಕೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 1.66 ರೂ. ಹೆಚ್ಚಳವಾಗಿದೆ. ಇಲ್ಲಿ ಪೆಟ್ರೋಲ್ ಬೆಲೆ 106.13 ರೂ.ಗೆ ತಲುಪಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಡೀಸೆಲ್ ಬೆಲೆ ಕೂಡಾ 1.57 ರೂ. ಹೆಚ್ಚಳವಾಗಿದ್ದು, ಲೀಟರ್ ಡೀಸೆಲ್ ಬೆಲೆ 90.09 ರೂ. ಗೆ ತಲುಪಿದೆ.
ರಾಜ್ಯದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಹಚ್ಚಿರುವ ಜಿಲ್ಲೆಯಾಗಿ ಶಿವಮೊಗ್ಗ ಹೊರಹೊಮ್ಮಿದೆ. ಅಲ್ಲಿ ಪೆಟ್ರೋಲ್ ದರ 106.27 ರೂ.ಗೆ ತಲುಪಿದ್ದು, ಡೀಸೆಲ್ ದರ 90.22 ರೂ. ಗೆ ತಲುಪಿದೆ.
ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದ ಹಿನ್ನಲೆಯಲ್ಲಿ ಸುಮಾರು ನಾಲ್ಕುವರೆ ತಿಂಗಳು ಯಾವುದೆ ದರವನ್ನು ಹೆಚ್ಚಳ ಮಾಡಿರಲಿಲ್ಲ. ನಾಲ್ಕುವರೆ ತಿಂಗಳ ನಂತರ ಮಾರ್ಚ್ 22 ರಂದು ಮತ್ತೆ ದರ ಹೆಚ್ಚಳ ಪ್ರಾರಂಭವಾಗಿತ್ತು. ಇದು ಇದರ ನಂತರ ಮಾಡಲಾದ ಐದನೇ ದರ ಹೆಚ್ಚಳವಾಗಿದೆ. ಹಿಂದಿನ ಎಲ್ಲಾ ನಾಲ್ಕು ಸಂದರ್ಭಗಳಲ್ಲಿ, ಬೆಲೆಗಳನ್ನು ಲೀಟರ್‌ಗೆ 80 ಪೈಸೆಗಳಷ್ಟು ಹೆಚ್ಚಿಸಲಾಗಿತ್ತು.
ಒಟ್ಟಾರೆಯಾಗಿ ಕಳೆದ ಆರು ದಿನಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 3.70 ರೂ. ಹಾಗೂ ಡೀಸೆಲ್‌ಗೆ 3.75 ರೂ. ನಷ್ಟು ಏರಿಕೆಯಾಗಿದೆ.
ಇದನ್ನೂ ಓದಿ: ದಲಿತ ಯುವತಿಯನ್ನು ಪ್ರೀತಿಸಿ, ನಂತರ ಮದುವೆಗೆ ನಿರಾಕರಿಸಿ ಪೆಟ್ರೋಲ್ ಸುರಿದು ಹತ್ಯೆಗೈದ ಆರೋಪ: ಸವರ್ಣೀಯ ಯುವಕನ ವಿರುದ್ಧ ಪ್ರಕರಣ


