‘ಮಿಸ್ ಯೂನಿವರ್ಸ್-2021’ ಹರ್ನಾಜ್ ಸಂಧು ಅವರು ಹಿಜಾಬ್ ವಿಷಯ ಸೇರಿದಂತೆ ಹುಡುಗಿಯರನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸುವಂತೆ ಸಮಾಜಕ್ಕೆ ಮನವಿ ಮಾಡಿದ್ದಾರೆ. ‘ಮಹಿಳೆಯರು ಆಯ್ಕೆಮಾಡಿದ ರೀತಿಯಲ್ಲಿ ಬದುಕಲು ಬಿಡಿ’ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಅವರು ನೀಡಿರುವ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಿಜಾಬ್ ಕುರಿತು ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಸಂಧು ಅವರು ತಮ್ಮ ಅಭಿಪ್ರಾಯಗಳನ್ನು ಈ ವಿಡಿಯೊದಲ್ಲಿ ಹೇಳಿದ್ದಾರೆ. ‘ಮಿಸ್ ಯೂನಿವರ್ಸ್ 2021’ ರ ಹೋಮ್‌ಕಮಿಂಗ್ ಗೌರವಾರ್ಥವಾಗಿ ಮಾರ್ಚ್ 17 ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇದನ್ನೂ ಓದಿ: ಉಡುಪಿ: ಹಿಜಾಬ್ ತೀರ್ಪಿನ ಬಳಿಕ 400ಕ್ಕೂ ಹೆಚ್ಚು ಮುಸ್ಲಿಂ ಹೆಣ್ಣುಮಕ್ಕಳು ತರಗತಿಯಿಂದ ಹೊರಕ್ಕೆ!
ಅವರು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸುವ ಮೊದಲು, ಸಂಘಟಕರು ಮಧ್ಯಪ್ರವೇಶಿಸಿ ವರದಿಗಾರರಿಗೆ ಯಾವುದೇ ರಾಜಕೀಯ ಪ್ರಶ್ನೆಗಳನ್ನು ಕೇಳದಂತೆ ಹಾಗೂ ಅವರ ಸಾಧನೆ ಬಗ್ಗೆ ಪ್ರಶ್ನಿಸುವಂತೆ ಕೇಳಿಕೊಂಡರು. ಆದರೂ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಮಾಜದಲ್ಲಿ ಹುಡುಗಿಯರು ಅದೆಷ್ಟು ಬಾರಿ ಗುರಿಯಾಗುತ್ತಾರೆ ಎಂದು ತನ್ನ ವೇದನೆಯನ್ನು ವ್ಯಕ್ತಪಡಿಸಿದರು.
“ಪ್ರಾಮಾಣಿಕವಾಗಿ, ನೀವು ಯಾವಾಗಲೂ ಹುಡುಗಿಯರನ್ನು ಏಕೆ ಟಾರ್ಗೆಟ್ ಮಾಡುತ್ತೀರಿ? ಈಗಲೂ ನೀವು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ. ಹಾಗೆ, ಹಿಜಾಬ್ ವಿಷಯದಲ್ಲೂ ಹುಡುಗಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹುಡುಗಿಯರು ಅವರು ಆಯ್ಕೆ ಮಾಡಿದ ರೀತಿಯಲ್ಲಿ ಬದುಕಲಿ. ಅವರು ತನ್ನ ಗುರಿಯನ್ನು ತಲುಪಲಿ. ಹುಡುಗಿಯರು ಹಾರಾಡಲಿ, ಅವರ ರೆಕ್ಕೆಗಳನ್ನು ಕತ್ತರಿಸಬೇಡಿ” ಎಂದು ಸಂಧು ಹೇಳಿದ್ದಾರೆ.
Miss Universe Harnaaz Sandhu on the #HijabControversy pic.twitter.com/jsaLUHibm5
— Neha Khanna (@nehakhanna_07) March 26, 2022
ಶಿಕ್ಷಣ ಸಂಸ್ಥೆಗಳ ತರಗತಿ ಕೊಠಡಿಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ನ ತ್ರಿಸದಸ್ಯ ಪೀಠವು ಇತ್ತೀಚೆಗೆ ವಜಾಗೊಳಿಸಿತ್ತು. ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಉಡುಗೆ ನಿಯಮವನ್ನು ಅನುಸರಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ: ಹಿಜಾಬ್ ನಿಷೇಧ ಕುರಿತು ಹಿರೇಮಗಳೂರು ಕಣ್ಣನ್ ಆಕ್ಷೇಪಾರ್ಹ ಹೇಳಿಕೆ; ಆಕ್ರೋಶ
ಪುಕ್ಕಟೆಯಾಗಿ ಈ ರೀತಿಯಲ್ಲಾದರೂ ಪಬ್ಲಿಸಿಟಿ ಪಡೆಯೋಕ್ಕೆ ಇಂತಹ ಹೇಳಿಕೆಗಳನ್ನ ಕೊಡುತ್ತಿರುವುದು ನಾಚಿಕೆಗೇಡಿನ