Homeಮುಖಪುಟಮೇ 04ರಿಂದ ಕೈಗಾರಿಕೆ ತೆರೆಯಲು ಯೋಚನೆ; ನಾಳೆಯಿಂದ ಸಾರಿಗೆ ವ್ಯವಸ್ಥೆ

ಮೇ 04ರಿಂದ ಕೈಗಾರಿಕೆ ತೆರೆಯಲು ಯೋಚನೆ; ನಾಳೆಯಿಂದ ಸಾರಿಗೆ ವ್ಯವಸ್ಥೆ

- Advertisement -
- Advertisement -

ಪ್ರಧಾನಿ ಸೂಚನೆ ಮೇರೆಗೆ ಕೋವಿಡ್-19 ಹಿನ್ನೆಲೆಯಲ್ಲಿ ಕಂಟೋನ್ಮೆಂಟ್ ಜೋನ್‌ಗಳನ್ನು ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಮೇ 4ರಿಂದ ಕಾರ್ಖಾನೆಗಳನ್ನು ಆರಂಭಿಸಲು ಅನುಮತಿ ನೀಡಿದ್ದು ಈ ಮೂಲಕ ಆರ್ಥಿಕ ಪುನಶ್ಚೇತನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮದ್ಯ ಮಾರಾಟ ಮತ್ತು ಇತರೆ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಕುರಿತು ಮೇ 3ರ ನಂತರ ತೀರ್ಮಾನ ಕೈಗೊಳ್ಳಲಾಗುವುದು. ಹೋಟೆಲ್ ಗಳಲ್ಲಿ ಕೇವಲ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಕೊರೋನಾದಿಂದ ಜನರು ಆತಂಕ, ಭೀತಿ ಮತ್ತು ಖಿನ್ನತೆಗೆ ಒಳಗಾಗದಂತೆ ತಿಳುವಳಿಕೆ ಮೂಡಿಸಬೇಕು. ಜನರಲ್ಲಿ ಅತ್ಮಸ್ಥೈರ್ಯ ತುಂಬುವಂತಹ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಇದುವರೆಗೂ ಮಾಧ್ಯಮಗಳು ಸಾಕಷ್ಟು ಕೆಲಸ ಮಾಡಿವೆ ಎಂದು ಶ್ಲಾಘಿಸಿದರು.

ಕೊರೊನ ವ್ಯಾಪಕವಾದರೆ ಲಾಕ್ ಡೌನ್‌ 2-3 ತಿಂಗಳು ಮುಂದೂಡಿದರೂ ಅಚ್ಚರಿ ಇಲ್ಲ. ಆದರೂ ಆರ್ಥಿಕ ಚಟುವಟಿಕೆಗಳು ನಡೆಯಬೇಕು. ಎರಡನ್ನೂ ಒಟ್ಟೊಟ್ಟಿಗೆ ತೆಗೆದುಕೊಂಡು ಹೊಗುತ್ತೇವೆ. ಈ ಹಿನ್ನೆಲೆಯಲ್ಲಿ ಕೈಗಾರಿಕೆಗಳನ್ನು ಆರಂಭಿಸುವ ಸಂಬಂಧ ಗೃಹ ಕಚೇರಿ ಕೃಷ್ಣದಲ್ಲಿ ಸಂಜೆ ಕೈಗಾರಿಕೋದ್ಯಮಿಗಳ ಜೊತೆ ಸಮಾಲೋಚನೆ ಮಾಡುತ್ತೇವೆ ಎಂದು ತಿಳಿಸಿದರು.

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಲಾಕ್ ಡೌನ್ ನಲ್ಲಿ ಸಿಲುಕಿರುವವರು ತಮ್ಮ ಸ್ವಸ್ಥಾನಗಳಿಗೆ ತೆರಳಲು ಅನುಕೂಲವಾಗುವಂತೆ ಅಂತರ್‌ರಾಜ್ಯ ಮತ್ತು ಅಂತರ್ ಜಿಲ್ಲೆಗಳಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ವಲಸೆ ಕಾರ್ಮಿಕರು ತಮ್ಮ ಖರ್ಚಿನಲ್ಲಿ ತೆರಳಬಹುದು. ಬೇಕೆಂದರೆ ಬಸ್ ವ್ಯವಸ್ಥೆ ಕಲ್ಪಸಲಾಗುವುದು. ಹೀಗೆ ಪ್ರಯಾಣ ಮಾಡುವವರ ಸ್ಯಾಂಪಲ್ ಸಂಗ್ರಹಿಸುವುದು ಕಡ್ಡಾಯವಾಗಿದೆ. ನಾಳೆಯಿಂದಲೇ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಂಪು ವಲಯವನ್ನು ಹೊರತುಪಡಿಸಿ ಎಲ್ಲಾ ವಲಯಗಳಲ್ಲಿ ಬಸ್ ಸಂಚಾರ ಇರಲಿದೆ ಎಂದಿದ್ದಾರೆ.


ಇದನ್ನೂ ಓದಿ: ಅಶಿಸ್ತಿನ ಕ್ರಮ: ಅತಿ ಶ್ರೀಮಂತರಿಗೆ ಕೊರೊನಾ ತೆರಿಗೆ ವಿಧಿಸುವ IRS ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಪರಿಸರಕ್ಕೆ ಹಾನಿಕಾರಕ ವಾಗುವ ಕಾರ್ಖಾನೆಗಳು ಈಗೆನೇ ಮುಚ್ಚಿಕೊಂಡೇ ಇರಲಿ.
    ಅದನ್ನು ತೆರೆದು ಇನ್ನಷ್ಟು ರೋಗಿಗಳನ್ನು ನಿರ್ಮಿಸುವುದು ಬೇಡ.

  2. ಜಿಲ್ಲಯ ಯಾವುದೋ ಮೂಲೆಯಲ್ಲಿ ಕರೋನಾ ಸೋಂಕಿತರಿಂದ ಇಡಿ ಜಿಲ್ಲೆಯನ್ನು ರೆಡ್ ಜೋನ್ ಎಂದು ಸಾರುವುದು ತಪ್ಪು.
    ಎತ್ತುಗೆ, ನಂಜನಗೂಡಿನಿಂದಾಗಿ, ಪಿರಿಯಾಪಟ್ಟಣ… ಮುಂತಾದ ಊರುಗಳು ಮಯ್ಸೂರು ಜಿಲ್ಲೆಗೆ ಸೇರಿದ ಊರುಗಳು.
    ರೆಡ್ ಜೋನ್ ಗೆ ಬೇರೆ ಅಳತೆಗೋಲಿರಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...