Homeಎಕಾನಮಿಅಶಿಸ್ತಿನ ಕ್ರಮ: ಅತಿ ಶ್ರೀಮಂತರಿಗೆ ಕೊರೊನಾ ತೆರಿಗೆ ವಿಧಿಸುವ IRS ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ

ಅಶಿಸ್ತಿನ ಕ್ರಮ: ಅತಿ ಶ್ರೀಮಂತರಿಗೆ ಕೊರೊನಾ ತೆರಿಗೆ ವಿಧಿಸುವ IRS ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ

ಇಂತಹ ‘ಕೆಟ್ಟ ಕಲ್ಪನೆಗಳನ್ನು’ ಸಾರ್ವಜನಿಕವಾಗಿ ಬರೆದಿದ್ದಕ್ಕಾಗಿ ಈ ಅಧಿಕಾರಿಗಳಿಂದ ವಿವರಣೆ ಪಡೆಯುವಂತೆ ಹಣಕಾಸು ಸಚಿವಾಲಯ ಸಿಬಿಡಿಟಿ ಅಧ್ಯಕ್ಷರಿಗೆ ನಿರ್ದೇಶನ ನೀಡಿದೆ.

- Advertisement -
- Advertisement -

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ನಿವಾರಿಸಲು ಸರ್ಕಾರವು ಅತಿ ಶ್ರೀಮಂತರಿಗೆ ತೆರಿಗೆಗಳನ್ನು ಹೆಚ್ಚಿಸಬೇಕು ಎಂದು ಭಾರತೀಯ ಕಂದಾಯ ಸೇವೆಯ ಅಧಿಕಾರಿಗಳು ಮಾಡಿದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಭಾನುವಾರ ತಿರಸ್ಕರಿಸಿದೆ.

ಫೋರ್ಸ್ (Fiscal Options and Response to Covid-19 Epidemic) ಎಂಬ ಶೀರ್ಷಿಕೆಯ 44 ಪುಟಗಳ ವರದಿಯಲ್ಲಿ, ತಮ್ಮನ್ನು “ಟೀಮ್ ಫೋರ್ಸ್” ಎಂದು ಕರೆದುಕೊಳ್ಳುವ ಅಧಿಕಾರಿಗಳು ಆದಾಯ ಉತ್ಪಾದನೆಗೆ ಹಲವಾರು ಗಂಭೀರ ಸಲಹೆಗಳನ್ನು ನೀಡಿದ್ದರು. ಅತಿ ಶ್ರೀಮಂತರ ಮೇಲಿನ ತೆರಿಗೆಯನ್ನು ಪ್ರಸ್ತುತ 30% ರಿಂದ 40% ಕ್ಕೆ ಹೆಚ್ಚಿಸುವುದು ಮತ್ತು ವಿದೇಶಿ ಕಂಪನಿಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದು ಇದರಲ್ಲಿ ಸೇರಿದೆ.

2019-2020ರ ಒಟ್ಟು ತೆರಿಗೆ ಆದಾಯದ ಅಂದಾಜು (gross tax revenue) ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ 24.6 ಲಕ್ಷ ಕೋಟಿ ರೂ.ಗಳಿಂದ 21.6 ಲಕ್ಷ ರೂ.ಗೆ ಕಡಿಮೆ ಪರಿಷ್ಕರಿಸಲಾಗಿದೆ” ಎಂದು ವರದಿ ತಿಳಿಸಿದೆ. ಮುಂಬರುವ 2020-’21ರ ಆರ್ಥಿಕ ವರ್ಷಕ್ಕೂ ಸಹ, ಒಟ್ಟು ತೆರಿಗೆ ಆದಾಯದಲ್ಲಿ 12% ಹೆಚ್ಚಳ ಅಂದರೆ 24.2 ಲಕ್ಷ ಕೋಟಿ ರೂ. ನಿರೀಕ್ಷಿಸುತ್ತಿದೆ. ಆದಾಗ್ಯೂ, ಕೋವಿಡ್ -19 ರೊಂದಿಗೆ ಆರ್ಥಿಕತೆಯ ಕುಸಿತವು ಆದಾಯ ಸಂಗ್ರಹಣೆಯನ್ನು ವಿಶೇಷವಾಗಿ ನೇರ ತೆರಿಗೆಯನ್ನು ಸಾಕಷ್ಟು ಕಡಿಮೆ ಮಾಡಲಿದೆ.

ಕೊರೊನಾ ಪರಿಹಾರ ಕಾರ್ಯಗಳಿಗೆ ಧನಸಹಾಯ ಹೆಚ್ಚು ಮಾಡಲು 10 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಉಳ್ಳವರಿಗೆ 4% ಕೋವಿಡ್ -19 ರಿಲೀಫ್ ಸೆಸ್ ವಿಧಿಸಲು ಅವರು ಸಲಹೆ ನೀಡಿದ್ದರು.

ಆದರೆ ಈ ವರದಿಯನ್ನು ಕೇಂದ್ರವು ತಿರಸ್ಕರಿಸಿದೆ. ಇದೊಂದು ಅಶಿಸ್ತಿನ ದುಷ್ಕೃತ್ಯ ಎಂದು ಕರೆದಿದ್ದು, ನಿಮ್ಮಿಂದ ಸಲಹೆಗಳನ್ನು ಕೋರಿಲ್ಲ ಮತ್ತು ಅದನ್ನು ಸಿದ್ಧಪಡಿಸುವುದು ಭಾರತೀಯ ಕಂದಾಯ ಸೇವೆಯ ಕರ್ತವ್ಯವಲ್ಲ ಎಂದು Income Tax India ಹೇಳಿದೆ.

ವರದಿಯನ್ನು ಸಲ್ಲಿಸಿದ ಕೇಂದ್ರ ನೇರ ತೆರಿಗೆ ಮಂಡಳಿಯ ಅಧ್ಯಕ್ಷರಿಗೆ ಸಂಘದ ಪದಾಧಿಕಾರಿಗಳಿಂದ ಈ ವಿಷಯದ ಬಗ್ಗೆ ವಿವರಣೆ ಪಡೆಯಲು ಕೋರಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಇದು ಸಹಜ. ಏಕೆಂದರೆ ಈ ಕೇಂದ್ರ ಸರ್ಕಾರ, ಯಾವತ್ತಿಗೂ ಶ್ರೀಮಂತರ ಪರವೇ ಹೊರತು ಬಡವರ ಪರ ಅಲ್ಲ.

    • ಹೌದು.
      ಬಡವರು ಹೊಟ್ಟೆಗೆ ಇಲ್ಲದೆ ಸಾಯುತ್ತಿರುವಾಗ.
      ಶ್ರೀಮಂತರ ಸಾಲವನ್ನು ಮಣ್ಣಮಾಡಿದೆಯಂತೆ.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...