Homeಮುಖಪುಟಲಾಕ್‌ಡೌನ್‌ನಿಂದಾಗಿ ಸಿಕ್ಕಿಕೊಂಡಿರುವ ಕಾರ್ಮಿಕರು ಮನೆ ತಲುಪುವಂತೆ ನಿಯಮ ರಚಿಸಿ: ಕೇಂದ್ರ

ಲಾಕ್‌ಡೌನ್‌ನಿಂದಾಗಿ ಸಿಕ್ಕಿಕೊಂಡಿರುವ ಕಾರ್ಮಿಕರು ಮನೆ ತಲುಪುವಂತೆ ನಿಯಮ ರಚಿಸಿ: ಕೇಂದ್ರ

- Advertisement -
- Advertisement -

ಲಾಕ್‌ಡೌನ್‌ನಿಂದಾಗಿ ಸಿಕ್ಕಿಬಿದ್ದಿರುವ ವಲಸಿಗ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಪ್ರವಾಸಿಗರು ಈಗಲೇ ಅವರ ಮನೆಗೆ ಹೋಗುವಂತಹ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೇಳಿದೆ.

ಕೊರೊನಾ ವೈರಸ್ ರೋಗಲಕ್ಷಣಗಳಿಲ್ಲದ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹೋಗಬಹುದು ಎಂದು ಕೇಂದ್ರ ಸರ್ಕಾರ ಹೇಳಿ ಇದಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಲಾಕ್‌ಡೌನ್ ಅಂತ್ಯಗೊಳ್ಳುವ ಒಂದು ವಾರಕ್ಕಿಂತ ಮೊದಲು ಈ ಮಾರ್ಗಸೂಚಿಗಳು ಜಾರಿಗೆ ಬರುತ್ತವೆ.

ಕೇಂದ್ರ ಗೃಹ ಸಚಿವಾಲಯದ ಈ ಆದೇಶವು ರಾಜ್ಯಗಳ ನೋಡಲ್ ಸಂಸ್ಥೆಗಳಿಗೆ ವಲಸಿಗರ ವಾಪಾಸಾತಿಗೆ ನಿಯಮಗಳನ್ನು ರಚಿಸುವಂತೆ ಹಾಗೂ ಅದರ ಪ್ರೋಟೋಕಾಲ್‌ಗಳನ್ನು ರೂಪಿಸುವಂತೆ ಕೇಳಿದೆ.

ತಮ್ಮ ಸ್ಥಳಗಳಿಗೆ ಹೊರಡುವ ವ್ಯಕ್ತಿಗಳನ್ನು ಪರೀಕ್ಷಿಸಿ ನಂತರ ಅವರು ಕೊರೊನಾ ವೈರಸ್ ಸೋಂಕಿನ ಲಕ್ಷಣಗಳನ್ನು ಹೊಂದಿಲ್ಲ ಎಂದು ಕಂಡು ಬಂದರೆ ಅವರನ್ನು ಮುಂದುವರೆಯಲು ಅನುಮತಿ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತನ್ನ ಆದೇಶದಲ್ಲಿ ಹೇಳಿದೆ.

ಕೊರೊನಾ ಲಾಕ್‌ಡೌನ್ ನಂತರ ದೇಶದಾದ್ಯಂತ ವಲಸೆ ಕಾರ್ಮಿಕರ ಮಹಾವಲಸೆ ಪ್ರಾರಂಭವಾಗಿತ್ತು. ಊರಿಗೆ ತಲುಪಲು ಸಾರಿಗೆ ವ್ಯವಸ್ಥೆಯಿಲ್ಲದೆ ಕಾಲ್ನಡಿಗೆಯಲ್ಲಿ ಹೊರಟ ಲಕ್ಷಾಂತರ ಕಾರ್ಮಿಕರ ಕಥೆಗಳು ದೇಶದಾದ್ಯಂತ ಅನುಕಂಪವನ್ನು ಉಂಟುಮಾಡಿತ್ತು. ಈ ವಲಸೆಯಿಂದಾಗಿ ಮನೆ ತಲುಪುವುದಕ್ಕಿಂತ ಮುಂಚೆಯೇ ನೂರರು ಕಾರ್ಮಿಕರು ಸಾವಿಗೀಡಾಗಿದ್ದರು.

ಕಾರ್ಮಿಕರ ಬವಣೆಗಳಿಗೆ ಕೇಂದ್ರ ಸರ್ಕಾರ ಕಿವಿಕೊಡಬೇಕೆಂದು ಹಲವಾರು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ರಾಜಕೀಯ ನಾಯಕರು ಒತ್ತಾಯಿಸಿದ್ದರು.


ಇದನ್ನು ಓದಿ: ಕಾರ್ಮಿಕರ ಮಹಾವಲಸೆ – ಬಡಜನತೆಯ ನಡು ಮುರಿದ ಮೋದಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...