Homeಅಂಕಣಗಳುಪ್ಲಾಸ್ಮಾ: ಜೀವದ್ರವದ ಜರೂರತ್ತುಗಳು:`ತಬ್ಲೀಘಿ ಜಿಹಾದಿಗಳು, ತಬ್ಲೀಘಿ ಸೇನಾನಿಗಳು’ ಆಗಿದ್ದೇಗೆ?

ಪ್ಲಾಸ್ಮಾ: ಜೀವದ್ರವದ ಜರೂರತ್ತುಗಳು:`ತಬ್ಲೀಘಿ ಜಿಹಾದಿಗಳು, ತಬ್ಲೀಘಿ ಸೇನಾನಿಗಳು’ ಆಗಿದ್ದೇಗೆ?

- Advertisement -
- Advertisement -

ಸರಕಾರಿ ಆಸ್ಪತ್ರೆಯ ವೈದ್ಯರೊಳಗ ಒಂದು ಜೋಕು ಓಡಾಡತಾ ಇರತೇತಿ. ಅದೇನಪಾ ಅಂದರ ತುರ್ತು ಚಿಕಿತ್ಸಾ ಘಟಕದೊಳಗ ಏನಾದರ ಒಂದು ಕೇಸು ಬಂತು ಅಂದರ ಅದನ್ನ ನೋಡಾಕ ನೂರು ಜನಾ ಹೊರಗ ಗುಂಪು ಕಟ್ಟಿಕೊಂಡು ಬರತಾರ. ಹೋಗರಿ, ಡಾಕ್ಟರಿಗೆ ಕೆಲಸಾ ಮಾಡಾಕ ಬಿಡ್ರಿ ಅಂದರ ಹೋಗಂಗಿಲ್ಲ. ಅವರನ್ನ ಚದುರಿಸಬೇಕು ಅಂತ ಡಾಕ್ಟರು ಒಂದು ಉಪಾಯ ಕಂಡುಕೊಂಡಿರತಾರ. ಅದೇನಪಾ ಅಂದರ ರೋಗಿಗೆ ತುರ್ತಾಗಿ ರಕ್ತ ಬೇಕಾಗೇತಿ. ಯಾರರ ಕೊಡವರು ಇದ್ದರ ಮುಂದ ಬರ್ರಿ ಅಂತ ಹೇಳತಾರ. ಆವಾಗ ಎಲ್ಲಾ ಶೂರರೂ ಅಲ್ಲಿಂದ ಹೋಗಿ ಬಿಡತಾರಂತ.

ಯಾವಾಗಲೂ, ಎಲ್ಲಾದಕ್ಕೂ `ಯಾಕ’ ಅಂತ ಪ್ರಶ್ನೆ ಮಾಡೋ ಉತ್ತರ ಕುಮಾರರಿಂದ ತುಂಬಿ ಹೋಗಿರೋ ದೇಶ ನಮ್ಮದು. ಹಂಗ ಇದ್ದಾಗ ದೆಹಲಿ- ಮುಂಬೈ ಮುಂತಾದ ನಗರಗಳಲ್ಲಿ ಕೆಲವು ಜನ ರಕ್ತ ದಾನ ಮಾಡೋ ಸುದ್ದಿ ಇದ್ದಕ್ಕಿದ್ದಂಗ ಜೋರಾಗಿ ಬಿಟ್ಟದಲ್ಲಾ ಎನು ಕತಿ?

ಈ ಹಿನ್ನೆಲೆಯೊಳಗ ಒಂದು ಮಜಾ ನೀವು ನೋಡಿದಿರಾ? ನಮ್ಮ ಠೀವಿ ಚಾನೆಲ್ಲುಗಳು ಬಳಸೋ ಶಬ್ದಗಳು ರಾತ್ರೋರಾತ್ರಿ ಬದಲಾಗಿದ್ದು ನೋಡಿದಿರಾ?

`ತಬ್ಲೀಘಿ ಜಿಹಾದಿಗಳು’ ಅಂತಿದ್ದವರು `ತಬ್ಲೀಘಿ ಸೇನಾನಿಗಳು’ ಅಂತ ಕರೀಲಿಕ್ಕೆ ಶುರು ಮಾಡಿದ್ದು ಯಾಕ ಅಂತ ವಿಚಾರ ಮಾಡಿದಿರಾ?

ನೋಡ್ರಿ, ನಿಮಗ ಬರೇ ಬಣ್ಣದ ಚಿತ್ರ ತೋರಿಸಿ, ನಿಮ್ಮ ಹತ್ರ ಹೂಂ ಅನ್ನಿಸಿ, ನಿಮ್ಮಿಂದ ವಿಚಾರ ಶಕ್ತಿ ಕಿತ್ತುಕೊಳ್ಳೋ ಜಾದೂ ಠೀವಿಯವರ ಹತ್ರ ಐತಿ.

ಎಲ್ಲಾ ಇರಲಿ, ಅದರ ಹಿಂದಿನ ಹಕೀಕತ್ತು ಏನು ಒಂದೀಟು ತಿಳಕೊಳ್ಳೋಣು. ಅದು ಏನಪಾ ಅಂದರ ಪ್ಲಾಸ್ಮಾ ಥೆರಪಿ ಅಥವಾ ಜೀವದ್ರವ್ಯ ಚಿಕಿತ್ಸೆ. ಈ ಪ್ಲಾಸ್ಮಾ ಅಂದರ ಅದು ಮನುಷ್ಯರ ರಕ್ತದಾಗ ಇರೋ ದ್ರವ್ಯ. ಇದರಾಗನ ಕೆಂಪು ಮತ್ತು ಬಿಳಿ ರಕ್ತ ಕಣಗಳು ಈಜಾಡಿಕೊಂಡು ಇರತಾವು. ಆದರ ಇದರಾಗ ಇರೋ ಪ್ರಮುಖ ವಸ್ತು ಅಂದರ ರೋಗ ನಿರೋಧಕ ಕಣಗಳು ಅಥವಾ ಇಮ್ಯುನೋ ಗ್ಲೋಬುಲಿನ್. ಅವಕ್ಕ ಆಂಟಿಬಾಡಿ ಅಥವಾ ಪ್ರತಿಜೀವಿಗಳು ಅಂತಾರ. ಇವು ರೋಗ ಬಂದು ಗುಣವಾದ ಪ್ರತಿ ರೋಗಿಯ ದೇಹದಾಗ ಇರತಾವು. ಇವನ್ನ ರೋಗ ಇದ್ದವನಿಗೆ ಕೊಟ್ಟರ ಅವನ ದೇಹದಾಗ ಪ್ರತಿಜೀವಿಯ ಸಂಖ್ಯೆ ಜಾಸ್ತಿ ಆಗಿ, ಅವನ ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ಅವನ ರೋಗ ಕಮ್ಮಿ ಆಗುವ ಸಾಧ್ಯತೆ ಹೆಚ್ಚು ಆಗತೇತಿ.

ಒಂದು ರೀತಿಯೊಳಗ ಇದು ಲಸಿಕೆ ಇದ್ದಂಗ. ಯಾವ ರೋಗಾಣುವಿನ ವಿರುದ್ಧ ಲಸಿಕೆಯೊ ತಯಾರು ಮಾಡಬೇಕಾಗೇದೋ, ಅದರದ ಒಂದು ಸಣ್ಣ ಪ್ರಮಾಣದ ಸೋಂಕನ್ನು ತೊಗೊಂಡು ಒಂದು ಕುದುರೆ, ಎಮ್ಮೆ ಅಥವಾ ಇನ್ನೊಂದು ಅಂಥಾ ಪ್ರಾಣಿಯ ದೇಹದಾಗ ಹಾಕತಾರ. ಅದರ ದೇಹದಾಗ ಪ್ರತಿಜೀವಿ ತಯಾರು ಆದ ಮ್ಯಾಲೆ ಅದನ್ನ ತಗದು ಮನುಷ್ಯರಿಗೆ ನಿರೋಧಕ ಔಷಧಿ ಅಂತ ಕೊಡತಾರ.

ಅದರ ರೀತಿಯೊಳಗನ ಇರೋದು ಇದು ಪ್ಲಾಸ್ಮಾ ಥೆರಪಿ ಅಥವಾ ಜೀವದ್ರವ್ಯ ಚಿಕಿತ್ಸೆ. ಇದನ್ನ ಯಾರು ರೋಗದಿಂದ ಗುಣಾ ಆಗಿರತಾರೋ ಅವರ ದೇಹದಿಂದ ತೊಗೋಬೇಕಾಗತದ. ಭಾರತದಾಗ ರಕ್ತ ದಾನ ಸ್ವಯಂ ಆಸಕ್ತಿಯಿಂದ ಮಾತ್ರ ಕೊಡಬಹುದಾದ್ದರಿಂದ, ರಕ್ತದಾಗ ಇರೋ ಜೀವದ್ರವ್ಯವನ್ನ ಸಹಿತ ದಾನಿಗಳ ಸಮ್ಮತಿಯಿಂದ ಮಾತ್ರ ತೊಗೋಬಹುದು.

ಆದರ ಈಗ ಈ ಜೀವದ್ರವ್ಯದ ಜರೂರತ್ತು ಬರೇ ಯಾರೋ ಕೆಲವರ ಆರೋಗ್ಯ ರಕ್ಷಣೆಯ ಕಾರಣಗಳಿಗೆ ಬೇಕಾಗಿಲ್ಲ. ಸಮಾಜದ ಸ್ವಾಸ ಕಾಪಾಡೋ ಸಲುವಾಗಿ ಬೇಕಾಗೇತಿ.

ತಮ್ಮ ರಕ್ತದೊಳಗಿನ ಪ್ಲಾಸ್ಮಾ ತೊಗೊಳ್ಳಲಿಕ್ಕೆ ದೆಹಲಿ- ಮುಂಬಯಿ ಸೇರಿದಂತೆ 300 ಜನ ತಬ್ಲೀಘ ಜಮಾತ ಸದಸ್ಯರು ಸಮ್ಮತಿ ಕೊಟ್ಟಾರ ಅನ್ನೋ ಸುದ್ದಿ ಬಂದಕೂಡಲೇ ಕೆಲವರು ವಿರೋಧ ಮಾಡಲಿಕ್ಕೆ ಸುರು ಮಾಡಿದರು. ನನಗ ಕೊರೋನಾ ಬಂದು, ನಾನು ಸತ್ತರೂ ಸತ್ತೆ, ಗದ್ದಾರುಗಳ ರಕ್ತ ತೊಗೊಳ್ಳೋದಿಲ್ಲಾ ಅಂತ ಘೋಷಣೆ ಮಾಡಿಕೊಂಡರು.

ಇನ್ನ ಕೆಲವರು ನೋಡ್ರಿ ಅವರು ದೇವರಂಥಾವರು. ರೋಗಿಗಳಿಗೆ ತಮ್ಮ ರಕ್ತ ಕೊಟ್ಟು ಉಳಿಸಿಕೊಳ್ಳಾಕ ಹತ್ಯಾರು, ಅಂತ ಹೇಳಿದರು. ಆದರ ಸತ್ಯ ಅನ್ನೋದು ಈ ಎರಡು ವಿಪರೀತಗಳ ನಡುವೆ ಐತಿ.

ರಕ್ತ ಸ್ರಾವದಿಂದ ಸಾಯುವವರನ್ನ ರಕ್ತ ಮರುಪೂರಣೆಯಿಂದ ರಕ್ಷಣೆ ಮಾಡೋ ತಂತ್ರಜ್ಞಾನ ಇವತ್ತಿನದಲ್ಲ. ಎರಡನೇ ಮಹಾ ಯುದ್ಧದಿಂದನೂ ಈ ಪದ್ಧತಿ ನಡೆಯುತ್ತಾ ಬಂದೇತಿ. ಭಾರತದೊಳಗ ಸ್ವಾತಂತ್ರ ಪೂರ್ವದಾಗೂ ರಕ್ತದಾನದ ಉದಾಹರಣೆಗಳು ಇದ್ದಾವ. ಪ್ರತಿ ಸಲೆ ನಮ್ಮ ತಂಗಿಯೋ, ಹೆಂಡತಿಯೋ, ಮಗಳೋ, ರಕ್ತ ಹೀನತೆಯಿಂದ ಬಳಲುವಾಗ, ಯಾರಿಗರ ನಮ್ಮವರಿಗೆ ಅಪಘಾತ ಆದಾಗ, ಅವರಿಗೆ ರಕ್ತ ಹೊಂದಿಸಲು ನಾವು ಹುಡುಕಾಡಿರುತೇವಿ. ರಕ್ತ ದಾನಿ ಸಿಕ್ಕರ ಸಾಕು ಅಂತ ಆಗಿರತೇತಿ. ಅವರ ಮತ, ಜಾತಿ ಕೇಳಾಕ ಹೋಗೋದಿಲ್ಲ. ಇದು ನಮಗ ಮಾನವ ಕುಲದ ಏಕತೆಯ ಪಾಠ ಆಗಿರತದೋ ಇಲ್ಲೋ. ಇಂಥಾ ಪರಿಸ್ಥಿತಿಯೊಳಗ `ಮಾನವ ಜಾತಿ ತಾನು ಒಂದೇ ವಲಂ’ ಅಂದರ ಅಲ್ಲಂ ಅಂತ ಯಾರರ ಹೇಳತೇವೇನು?

ಇನ್ನ ತಿಂಗಳಾನುಗಟ್ಟಲೆ ಕೊರೋನಾ ಜಿಹಾದು- ಭಯೋತ್ಪಾದನೆ ಅಂತ ಹೀಯಾಳಿಸಿಕೊಂಡ ತಬ್ಲೀಘು ಜಮಾತು ಸದಸ್ಯರು ರಕ್ತದಾನಕ್ಕೆ ತಯಾರಾದ ತಕ್ಷಣ ಅವರನ್ನು ಕೊರೊನಾ ಸೇನಾನಿಗಳು ಅಂತ ಮಾಡಿದವರು ಯಾರು? ಅವರಿಗೆ `ನಾನು ನಿನ್ನೆ ಏನು ಮಾತಾಡಿದ್ದೆ?- ಇವತ್ತು ಏನು ಮಾತಾಡಾಕ ಹತ್ತೇನಿ’ ಅಂತ ನೆನಪು ಇರತೈತೋ ಇಲ್ಲೋ?

ಅವರಿಗೆ ಇರಲಿ ಬಿಡಲಿ, ನಮಗರ ಅಷ್ಟು ಬುದ್ಧಿ ಅದನೋ ಇಲ್ಲೋ? ರಾಜಕಾರಣಿಗಳು ಮಾಧ್ಯಮ ದುರುಪಯೋಗ ಪಡಿಸಿಕೊಳ್ಳೋದು, ಮಾಧ್ಯಮದವರು ರಾಜಕಾರಣ ಮಾಡೋದು ನಮಗ ಗೊತ್ತು ಆಗತೇತೋ ಇಲ್ಲೋ? ಈ ಪ್ರಶ್ನೆಗಳ ಉತ್ತರಗಳೇ ನಮ್ಮ ನಾಳೆಗಳನ್ನ ನಿರ್ಧರಿಸತಾವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...