Homeಮುಖಪುಟಪಿಎಂ ವಸತಿ ಯೋಜನೆ: 2.6 ಲಕ್ಷ ಫೇಕ್ ಅಕೌಂಟ್, 14 ಸಾವಿರ ಕೋಟಿ ರೂ ಗುಳುಂ!

ಪಿಎಂ ವಸತಿ ಯೋಜನೆ: 2.6 ಲಕ್ಷ ಫೇಕ್ ಅಕೌಂಟ್, 14 ಸಾವಿರ ಕೋಟಿ ರೂ ಗುಳುಂ!

ಪ್ರಧಾನ್‌ಮಂತ್ರಿ ಆವಾಸ್ ಯೋಜನಾ ಹಲವು ಕುಖ್ಯಾತ ಕಳ್ಳರ ಪಾಲಿಗೆ ಹುಲ್ಲುಗಾವಲು ಆಗಿತ್ತು ಎಂಬುದಕ್ಕೆ ಈಗ ಬೆಳಕಿಗೆ ಬಂದಿರುವ 14 ಸಾವಿರ ಕೋಟಿ ರೂ ಹಗರಣವೇ ಸಾಕ್ಷಿಯಾಗಿದೆ.

- Advertisement -
- Advertisement -

ಇತ್ತೀಚೆಗೆ ಫೆಬ್ರುವರಿ 25ರಂದು ‘ಆತ್ಮನಿರ್ಭರ್ ಬಂಗಾಳ’ ಹೆಸರಿನಲ್ಲಿ ಪ್ರಕಟವಾದ ಜಾಹಿರಾತಿನಲ್ಲಿ ಪ್ರಧಾನಿ ಚಿತ್ರದೊಂದಿಗೆ ಕಾಣಿಸಿಕೊಂಡಿದ್ದ ಬಂಗಾಳದ ಮಹಿಳೆ ಲಕ್ಷ್ಮಿದೇವಿ ಎಂಬುವವರು, ‘ಪಿಎಂ ವಸತಿ ಯೋಜನೆಯಿಂದಾಗಿ ತಲೆ ಮೇಲೊಂದು ಸೂರು ಸಿಕ್ಕಿತು’ ಎಂದು ಹೇಳಿದ್ದರು. ಆದರೆ ವಾಸ್ತವವಾಗಿ ಅವರು ಇರುವುದು ಒಂದು ಸಾದಾ ಬಾಡಿಗೆ ಮನೆಯಲ್ಲಿ!
ಪ್ರಧಾನ್‌ಮಂತ್ರಿ ಆವಾಸ್ ಯೋಜನಾ ಹಲವು ಕುಖ್ಯಾತ ಕಳ್ಳರ ಪಾಲಿಗೆ ಹುಲ್ಲುಗಾವಲು ಆಗಿತ್ತು ಎಂಬುದಕ್ಕೆ ಈಗ ಬೆಳಕಿಗೆ ಬಂದಿರುವ 14 ಸಾವಿರ ಕೋಟಿ ರೂ ಹಗರಣವೇ ಸಾಕ್ಷಿಯಾಗಿದೆ.

ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಗೆ ಸಂಬಂಧಿಸಿದ ಹಗರಣವನ್ನು ಸಿಬಿಐ ಬುಧವಾರ ಪತ್ತೆ ಹಚ್ಚಿದೆ. ಈಗಾಗಲೇ ಬಿಕ್ಕಟ್ಟಿನಲ್ಲಿರುವ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ನ ಪ್ರವರ್ತಕರು ಈ ಹಗರಣದ ಸೃಷ್ಟಿಕರ್ತರು ಮತ್ತು ಫಲಾನುಭವಿಗಳು ಎಂಬ ಸತ್ಯ ಹೊರಬಿದ್ದಿದೆ.

ವಂಚನೆ ಮತ್ತು ಹಣದ ಪ್ರಕರಣದಲ್ಲಿ ಜೈಲಿನಲ್ಲಿರುವ ಸಹೋದರರಾದ ಕಪಿಲ್ ಮತ್ತು ಧೀರಜ್ ವಾಧ್ವಾನ್ ವಸತಿ ಯೋಜನೆಯಲ್ಲಿ ’14 ಸಾವಿರ ಕೋಟಿ’ ನುಂಗಿದ ಫಲಾನುಭವಿಗಳಾಗಿದ್ದಾರೆ.

ಸಿಬಿಐ ಪ್ರಕಾರ, ಕಪಿಲ್ ಮತ್ತು ಧೀರಜ್ ವಾಧ್ವಾನ್ “ನಕಲಿ ಮತ್ತು ಕಾಲ್ಪನಿಕ” ಗೃಹ ಸಾಲ ಖಾತೆಗಳನ್ನು ಸೃಷ್ಟಿಸಿ ಭಾರತ ಸರ್ಕಾರದಿಂದ 1,880 ಕೋಟಿ ಬಡ್ಡಿ ಸಹಾಯಧನವನ್ನು ಪಡೆದಿದ್ದಾರೆ.

ಎಲ್ಲರಿಗೂ ವಸತಿ ಖಾತ್ರಿಪಡಿಸುವ ಕೇಂದ್ರ ಯೋಜನೆ ಪಿಎಂಎವೈ ಅನ್ನು ಅಕ್ಟೋಬರ್ 2015 ರಲ್ಲಿ ಘೋಷಿಸಲಾಯಿತು. ಯೋಜನೆಯಡಿಯಲ್ಲಿ ಆರ್ಥಿಕ ದುರ್ಬಲ ವಿಭಾಗಗಳ (ಇಡಬ್ಲ್ಯೂಎಸ್) ಮತ್ತು ಕಡಿಮೆ ಮತ್ತು ಮಧ್ಯಮ ಆದಾಯದ ಗುಂಪುಗಳಿಗೆ ನೀಡಲಾಗುವ ವಸತಿ ಸಾಲಗಳು ಕ್ರೆಡಿಟ್-ಸಂಬಂಧಿತ ಬಡ್ಡಿ ಸಹಾಯಧನಕ್ಕೆ ಅರ್ಹವಾಗಿವೆ.

ಈ ಸಾಲಗಳನ್ನು ಮಂಜೂರು ಮಾಡಿದ ಡಿಎಚ್‌ಎಫ್‌ಎಲ್‌ನಂತಹ ಹಣಕಾಸು ಸಂಸ್ಥೆಗಳಿಂದ ಸಬ್ಸಿಡಿಯನ್ನು ಪಡೆಯಬೇಕು. ಸಿಬಿಐ ಪ್ರಕಾರ, 2018 ರ ಡಿಸೆಂಬರ್‌ನಲ್ಲಿ ಡಿಎಚ್‌ಎಫ್‌ಎಲ್ ಹೂಡಿಕೆದಾರರಿಗೆ ಪಿಎಂಎವೈ ಅಡಿಯಲ್ಲಿ 88,651 ಸಾಲಗಳನ್ನು ಪ್ರಕ್ರಿಯೆಗೊಳಿಸಿದೆ ಮತ್ತು 539.4 ಕೋಟಿ ರೂ. ಸಬ್ಸಿಡಿಗಳನ್ನು ಪಡೆದುಕೊಂಡಿದೆ ಮತ್ತು ಇನ್ನೂ 1,347.8 ಕೋಟಿ ರೂ ಬಾಕಿ ಇದೆ ಎಂದು ಹೇಳಿಕೊಂಡಿದೆ.

2007-19ರ ನಡುವೆ ಡಿಎಚ್‌ಎಫ್‌ಎಲ್‌ನ ಕಪಿಲ್ ಮತ್ತು ಧೀರಜ್ ವಾಧ್ವಾನ್ ಅವರು ಮುಂಬೈನ ಅಸ್ತಿತ್ವದಲ್ಲೇ ಇಲ್ಲದ ಬಾಂದ್ರಾ ಶಾಖೆಯಲ್ಲಿ 2.6 ಲಕ್ಷ ನಕಲಿ ವಸತಿ ಸಾಲ ಖಾತೆಗಳನ್ನು ತೆರೆದಿದ್ದಾರೆ.

2007 ಮತ್ತು 2019 ರ ನಡುವೆ ಈ ಖಾತೆಗಳಿಗೆ 14,046 ಕೋಟಿ ಮೊತ್ತದ ವಸತಿ ಸಾಲಗಳನ್ನು ಈ ಖಾತೆಗಳಿಗೆ ಮಂಜೂರು ಮಾಡಲಾಗಿದೆ ಎಂದು ತೋರಿಸಲಾಗಿದೆ. ಅದರಲ್ಲಿ 11,755.79 ರೂ.ಗಳನ್ನು ಅನ್ನು ಇತರ ಕಾಲ್ಪನಿಕ ಸಂಸ್ಥೆಗಳಿಗೆ ರವಾನಿಸಲಾಗಿದೆ. ಈ ಮೊತ್ತವನ್ನು ಪಿಎಂ ವಸತಿ ಯೋಜನೆಯಲ್ಲಿ ನೀಡಲಾದ ಸಾಲಗಳು ಎಂದು ನಮೂದಿಸಿ, ಸಬ್ಸಿಡಿ ಹಣವನ್ನು ಗುಳುಂ ಮಾಡಲಾಗಿದೆ. ಈ ನಕಲಿ ಗೃಹಸಾಲ ವಿತರಣೆಗಾಗಿ ಈಗಾಗಲೇ ಡಿಎಚ್‌ಎಫ್‌ಎಲ್ 539.40 ಕೋಟಿ ರೂ ಬಡ್ಡಿ ಸಬ್ಸಿಡಿ ಪಡೆದುಕೊಂಡಿದೆ. ಇನ್ನೂ 1,347.80 ಕೋಟಿ ರೂ ಸಬ್ಸಿಡಿಗಾಗಿ ಕಾದು ಕೂತಿದೆ. ಒಟ್ಟು 1,887.20 ಕೋಟಿ ರೂ. ಸಬ್ಸಿಡಿ ಹಣ ಅದಕ್ಕೆ ದಕ್ಕಲಿದೆ. ಎಲ್ಲವೂ ಭಾರತ ಸರ್ಕಾರದ ಕೃಪೆ ಎಂಬ ಆರೋಪ ಕೇಳಿಬಂದಿದೆ.

ಇದಕ್ಕಾಗಿ ವಾಧ್ವಾನ್ ಸಹೋದರರು ಸರ್ಕಾರದ ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ನ ಕೆಲವರೊಂದಿಗೆ ಶಾಮೀಲಾಗಿ ಈ ಕೃತ್ಯ ಎಸಗಿದ್ದಾರೆ. ಡಿಎಚ್‌ಎಫ್‌ಎಲ್‌ನಂತಹ ಕಂಪನಿಗಳು ವಸತಿ ಸಾಲ ನೀಡುತ್ತವೆ. ಸರ್ಕಾರದ ಸಬ್ಸಿಡಿ ಹಣವು ಅವುಗಳಿಗೆ ಪಾವತಿಯಾಗುತ್ತದೆ. ಆದರೆ ಫೇಕ್ ಅಕೌಂಟುಗಳನ್ನು ತೆರೆದ ಡಿಎಚ್‌ಎಫ್‌ಎಲ್ ತೆರಿಗೆದಾರರ ಹಣವನ್ನು ಸಬ್ಸಿಡಿ ರೂಪದಲ್ಲಿ ನುಂಗಿ ಕುಳಿತಿದೆ. ಹೀಗಾಗಿ ಕೊಲ್ಕೊತ್ತದ ಲಕ್ಷ್ಮಿದೇವಿಯಂತಹವರಿಗೆ ಮನೆ ಎಂಬುದು ಮರೀಚಿಕೆಯಾಗಿಯೇ ಉಳಿಯುತ್ತದೆ.

ಪಕ್ಕಾ ವಂಚಕರು!

ಕಳೆದ ವರ್ಷ ಜೂನ್‌ನಲ್ಲಿ ಸಿಬಿಐ ವಾಧ್ವಾನ್ ಸಹೋದರರು ಮತ್ತು ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು, ಕಪೂರ್ ಅವರ ಕುಟುಂಬವು ಡಿಎಚ್‌ಎಫ್‌ಎಲ್‌ನಲ್ಲಿ ಹೂಡಿಕೆ ಮಾಡಿದ್ದಕ್ಕಾಗಿ ಕಿಕ್‌ಬ್ಯಾಕ್ ಪಡೆದಿದೆ ಎಂದು ಚಾರ್ಜ್‌ಶೀಟ್ ನಲ್ಲಿ ಆರೋಪಿಸಲಾಗಿತ್ತು.

ಆ ಹಗರಣದಲ್ಲಿ 2018 ರ ಏಪ್ರಿಲ್ ಮತ್ತು ಜೂನ್ ನಡುವೆ ಯೆಸ್ ಬ್ಯಾಂಕ್ 3,700 ಕೋಟಿ ರೂ, ಸಾರ್ವಜನಿಕ ಹಣವನ್ನು ಡಿಎಚ್‌ಎಫ್‌ಎಲ್‌ನ ಅಲ್ಪಾವಧಿಯ ಡಿಬೆಂಚರ್‌ಗಳಲ್ಲಿ ಹೂಡಿಕೆ ಮಾಡಿತು. ಇದಕ್ಕೆ ಪ್ರತಿಯಾಗಿ, ವಾಧ್ವಾನ್‌ಗಳು ಕಪೂರ್ ಅವರ ಪತ್ನಿ ಮತ್ತು ಹೆಣ್ಣುಮಕ್ಕಳಿಂದ ನಿಯಂತ್ರಿಸಲ್ಪಡುವ ಸಂಸ್ಥೆಗೆ ಸಾಲ ರೂಪದಲ್ಲಿ 600 ಕೋಟಿ ರೂ. ಕಿಕ್ ಬ್ಯಾಕ್ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ವಾಧ್ವಾನ್ ಸಹೋದರರನ್ನು ಬಂಧಿಸಲಾಗಿತ್ತು. ಕಪೂರ್ ಅವರನ್ನು ಮಾರ್ಚ್‌ನಲ್ಲಿ ಬಂಧಿಸಲಾಯಿತು.


ಇದನ್ನೂ ಓದಿ: ಬಿಜೆಪಿಯ ಜಾಹೀರಾತಿನಲ್ಲಿ ಸಿಕ್ಕ ಮನೆ ಪತ್ರಿಕೆಗೆ ಮಾತ್ರ ಸೀಮಿತ- ವಾಸ್ತವದಲ್ಲಿ ಬಾಡಿಗೆ ಮನೆಯಲ್ಲಿರುವ ಮಹಿಳೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...