Homeಮುಖಪುಟಬಿಜೆಪಿಯ ಜಾಹೀರಾತಿನಲ್ಲಿ ಸಿಕ್ಕ ಮನೆ ಪತ್ರಿಕೆಗೆ ಮಾತ್ರ ಸೀಮಿತ- ವಾಸ್ತವದಲ್ಲಿ ಬಾಡಿಗೆ ಮನೆಯಲ್ಲಿರುವ ಮಹಿಳೆ!

ಬಿಜೆಪಿಯ ಜಾಹೀರಾತಿನಲ್ಲಿ ಸಿಕ್ಕ ಮನೆ ಪತ್ರಿಕೆಗೆ ಮಾತ್ರ ಸೀಮಿತ- ವಾಸ್ತವದಲ್ಲಿ ಬಾಡಿಗೆ ಮನೆಯಲ್ಲಿರುವ ಮಹಿಳೆ!

- Advertisement -
- Advertisement -

ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ವಸತಿ ಯೋಜನೆ) ಅಡಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 24 ಲಕ್ಷ ಕುಟುಂಬಗಳಿಗೆ ಮನೆಗಳನ್ನು ಒದಗಿಸಲಾಗಿದೆ ಎಂಬ ಜಾಹೀರಾತು ಫೆಬ್ರವರಿ 25 ರಂದು ಕೆಲವು ಬಂಗಾಳಿ ಪತ್ರಿಕೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮತ್ತೊಬ್ಬ ಮಹಿಳೆಯ ಚಿತ್ರ ಸಹಿತವಾಗಿ ಪ್ರಕಟಿಸಲಾಗಿತ್ತು.

‘ಆತ್ಮನಿರ್ಭಾರ ಭಾರತ್‌‌ ಆತ್ಮನಿರ್ಭರ್‌ ಬಂಗಾಳ’ ಎಂಬ ಶೀರ್ಷಿಕೆಯಿರುವ ಈ ಜಾಹೀರಾತಿನಲ್ಲಿ, ಪಿಎಂಎವೈ ಯೋಜನೆಯ ಅಡಿಯಲ್ಲಿ ಮಹಿಳೆಯೊಬ್ಬರು ತನಗೆ ಮನೆ ಸಿಕ್ಕಿದೆಯೆಂದು ಹೇಳಿಕೊಳ್ಳುವಂತೆ ಚಿತ್ರಿಸಲಾಗಿತ್ತು. ಆದರೆ ಆಶ್ಚರ್ಯಕರ ಸುದ್ದಿಯೇನೆಂದರೆ ಮೋದಿಯೊಂದಿಗೆ ಜಾಹೀರಾತಿನಲ್ಲಿರುವ ಮಹಿಳೆಯು ನಿಜ ಜೀವನದಲ್ಲಿ ಶೌಚಾಲಯವಿಲ್ಲದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ: ಹೆಚ್ಚು ಪಡಿತರಕ್ಕಾಗಿ 20 ಮಕ್ಕಳನ್ನು ಹೆರಬಾರದೆ..? ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ತಿರತ್ ಸಿಂಗ್!

ಜಾಹೀರಾತಿನಲ್ಲಿರುವ ಮಹಿಳೆಯನ್ನು ಕೋಲ್ಕತ್ತಾದ ಚಿತ್ತರಂಜನ್‌‌‌ ಅವೆನ್ಯೂದಲ್ಲಿನ ಯೋಗಯೋಗ್ ಭವನ ಬಳಿ ವಾಸಿಸುವ ಲಕ್ಷ್ಮಿ ದೇವಿ ಎಂದು ಗುರುತಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಜಾಹೀರಾತಿನಲ್ಲಿ ತೋರಿಸಿರುವಂತೆ ಲಕ್ಷ್ಮಿ ಅವರಿಗೆ ಯಾವುದೆ ಸವಲತ್ತು ಕೂಡಾ ಸಿಕ್ಕಿರಲಿಲ್ಲ. “ಚಿತ್ರದಲ್ಲಿರುವ ಮಹಿಳೆ ನಾನೇ. ಆದರೆ ಜಾಹೀರಾತಿನ ಬಗ್ಗೆ ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.

“ಕೇಂದ್ರ ಸರ್ಕಾರದ ಯೋಜನೆಯ ಮೂಲಕ ತನಗೆ ಮನೆ ಸಿಗಲಿಲ್ಲ. ನಾನು ಮತ್ತು ನನ್ನ ಕುಟುಂಬ ಒಂದೇ ಕೋಣೆಯಿರುವ ಮನೆಯಲ್ಲಿ 500 ರೂ. ಬಾಡಿಗೆ ನೀಡಿ ವಾಸಿಸುತ್ತಿದ್ದೇವೆ. ರಾತ್ರಿಯಲ್ಲಿ ಮಕ್ಕಳು ಒಳಗೆ ಮಲಗಿದರೆ, ನಾವು ರಸ್ತೆಯ ಬದಿಯಲ್ಲಿ ಮಲಗುತ್ತೇವೆ” ಎಂದು ಲಕ್ಷ್ಮಿ ಹೇಳಿದ್ದಾರೆ. ಆ ಒಂದು ಕೋಣೆಯ ಮನೆಯ ಒಳಗಡೆ ಇರುವ ಒಟ್ಟು ಆಸ್ತಿಯೆಂದರೆ ಹಾಸಿಗೆ ಮತ್ತು ರೆಫ್ರಿಜರೇಟರ್ ಆಗಿದೆ.

ತನಗೆ ಮನೆ ಸಿಕ್ಕಿದೆ ಎಂಬ ಸುದ್ದಿಯನ್ನು ನಿರಾಕರಿಸಿರುವ ಲಕ್ಷ್ಮಿ, ತನ್ನ ನೆರೆಹೊರೆಯವರು ಹೇಳಿದ ನಂತರ ಜಾಹೀರಾತಿನಲ್ಲಿ ತನ್ನ ಚಿತ್ರ ಬಂದಿದೆ ಎಂದು ತನಗೆ ತಿಳಿಯಿತು ಎಂದು ಅವರು ತಿಳಿಸಿದ್ದಾರೆ. ‘ಪತ್ರಿಕೆಯಲ್ಲಿ ನನ್ನ ಚಿತ್ರವನ್ನು ನೋಡಿದಾಗ ನನಗೆ ಭಯವಾಯಿತು. ಚಿತ್ರವನ್ನು ಯಾವಾಗ ಕ್ಲಿಕ್ ಮಾಡಲಾಯಿತು ಮತ್ತು ಯಾರು ಕ್ಲಿಕ್ ಮಾಡಿದರು ಎಂದು ನನಗೆ ಗೊತ್ತಿಲ್ಲ ಎಂದು ಲಕ್ಷ್ಮಿ ಹೇಳಿದ್ದಾರೆ.


 

ಇದನ್ನೂ ಓದಿ: ತುಮಕೂರು: ಸಮಾಧಿ ಗುಂಡಿಯಿಂದ ದಲಿತ ಶಿಶುವಿನ ಮೃತದೇಹ ಹೊರತೆಗೆಸಿ ಅಮಾನವೀಯತೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...