Homeಮುಖಪುಟ‘ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ’ ಪೋಸ್ಟರ್: ಹಿಂದೂ ಯುವ ವಾಹಿನಿ ಸದಸ್ಯರ ಮೇಲೆ FIR

‘ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ’ ಪೋಸ್ಟರ್: ಹಿಂದೂ ಯುವ ವಾಹಿನಿ ಸದಸ್ಯರ ಮೇಲೆ FIR

ದೇವಸ್ಥಾನದಲ್ಲಿ ನೀರು ಕುಡಿದಿದ್ದಕ್ಕಾಗಿ ಮುಸ್ಲಿಂ ಹುಡುಗನ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ನಂತರದಲ್ಲಿ ಆ ಹಲ್ಲೆಯನ್ನು ಸಮರ್ಥಿಸಿಕೊಂಡು ಈ ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ.

- Advertisement -
- Advertisement -

ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ಮಾರ್ಚ್ 20 ಮತ್ತು 21 ರಂದು 150-200 ದೇವಾಲಯಗಳ ಹೊರಭಾಗದಲ್ಲಿ, ‘ಹಿಂದೂಗಳಲ್ಲದವರನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ’ ಎಂಬ ಪೋಸ್ಟರ್‌ಗಳನ್ನು ಹಾಕಿದ ಆರೋಪದಲ್ಲಿ ಹಿಂದೂ ಯುವ ವಾಹಿನಿ ಎಂಬ ಬಲಪಂಥೀಯ ಸಂಘಟನೆಯ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಉತ್ತರಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ದಾಸ್ನಾ ಊರಿನ ದೇವಸ್ಥಾನವೊಂದರಲ್ಲಿ ನಲ್ಲಿ ನೀರು ಕುಡಿದಿದ್ದಕ್ಕಾಗಿ ಮುಸ್ಲಿಂ ಹುಡುಗನ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ನಂತರದಲ್ಲಿ ಆ ಹಲ್ಲೆಯನ್ನು ಸಮರ್ಥಿಸಿಕೊಂಡಿದ್ದ ಈ ಸಂಘಟನೆ ಇತ್ತೀಚೆಗೆ ಈ ಪೋಸ್ಟರ್ ‘ಅಭಿಯಾನ’ ನಡೆಸಲು ನಿರ್ಧರಿಸಿದೆ.

ಕೊಟ್ವಾಲಿಯ ಠಾಣಾಣಾಧಿಕಾರಿ (ಎಸ್‌ಎಚ್‌ಒ) ಶಿಶುಪಾಲ್ ಸಿಂಗ್ ನೇಗಿ ಅವರು ಮಾರ್ಚ್ 21 ರ ಸಂಜೆ ಈ ವಿವಾದಾತ್ಮಕ ಪೋಸ್ಟರ್‌ಗಳನ್ನು ತೆಗೆದುಹಾಕಲು ಸಂಘಟನೆಯ ಸದಸ್ಯರೊಂದಿಗೆ ಮಾತನಾಡಲು ಪ್ರಯತ್ನಿಸಿದರು. ಅವರ ಸಭೆ ಮುಗಿದ ಕೂಡಲೇ ಹಿಂದೂ ಯುವ ವಾಹಿನಿಯ ಪ್ರಧಾನ ಕಾರ್ಯದರ್ಶಿ ಜೀತು ರಾಂಧವ ದಿ ಕ್ವಿಂಟ್ ವರದಿಗಾರರ ಜೊತೆ ಮಾತನಾಡಿದ್ದು, ‘ನಗರದಲ್ಲಿ ಇಂತಹ ಪೋಸ್ಟರ್‌ಗಳನ್ನು ಹಾಕದಂತೆ ಪೊಲೀಸರು ಬೆದರಿಕೆ ಹಾಕಿದ್ದಾರೆ. ಅವರು ಈ ರೀತಿ ಮುಸ್ಲಿಮರ ಪರವಾಗಿರಲು ಏಕೆ ಪ್ರಯತ್ನಿಸುತ್ತಿದ್ದಾರೆ? ಉತ್ತರಾಖಂಡದಂತಹ ಸ್ಥಳದಲ್ಲಿ ಇದು ನಡೆಯುತ್ತಿದೆ ಎಂದು ನಾನು ನಂಬಲು ಸಾಧ್ಯವಿಲ್ಲ. ಅವರು ನನ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡರೆ ನಾನೇನು ಹೆದರುವುದಿಲ್ಲ, ಆದರೆ ಉತ್ತರಾಖಂಡದ ಪ್ರತಿಯೊಂದು ದೇವಾಲಯದ ಹೊರಗೆ ಈ ಪೋಸ್ಟರ್‌ಗಳು ಇರುವುದನ್ನು ನಾನು ಖಚಿತಪಡಿಸಿಕೊಳ್ಳಲಿದ್ದೇನೆ ” ಎಂದು ಅವರು ಕೋಪದಿಂದ ಹೇಳಿದ್ದರು.

ಐಪಿಸಿಯ ಸೆಕ್ಷನ್ 153 ಎ ಅಡಿಯಲ್ಲಿ (ಧರ್ಮ, ಜನಾಂಗ, ಜನ್ಮಸ್ಥಳ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಹಿಂದೂ ಯುವ ವಾಹಿನಿ ಸದಸ್ಯರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಕ್ವಿಂಟ್ ಎಸ್‌ಎಚ್‌ಒ ನೇಗಿ ಮೂಲಕ ದೃಢಪಡಿಸಿಕೊಂಡಿದೆ.

ದಿ ಕ್ವಿಂಟ್ ಡೆಹ್ರಾಡೂನ್ ಎಸ್‌ಎಸ್‌ಪಿ ಕಚೇರಿಯನ್ನು ಸಂಪರ್ಕಿಸಿ, ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ಪ್ರದೀಪ್ ಸಿಂಗ್ ರಾವತ್ ಅವರೊಂದಿಗೆ ಮಾತನಾಡಿತ್ತು. ಆಗ ‘ಈ ಪೋಸ್ಟರ್‌ಗಳ ಸುದ್ದಿ ಬೆಳಕಿಗೆ ಬಂದಿದೆ, ಪರಿಸ್ಥಿತಿಯನ್ನು ಗಮನಿಸಲಾಗುತ್ತಿದೆ ಮತ್ತು ಮಾರ್ಚ್ 21 ರ ಮಧ್ಯಾಹ್ನದ ವೇಳೆಗೆ ಹಲವಾರು ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ ಎಂದು ರಾವತ್ ಹೇಳಿದ್ದರು.

ಎಲ್ಲಾ ಪೋಸ್ಟರ್‌ಗಳನ್ನು ತೆಗೆಯಲಾಗಿದೆಯೆ ಎಂದು ಪುನರ್ ದೃಢಪಡಿಸಿಕೊಳ್ಳಲು ನಾವು ಹಿಂದೂ ಯುವ ವಾಹಿನಿಯ ರಾಂಧವಾ ಅವರಿಗೆ ಕರೆ ಮಾಡಿದೆವು. ಕೆಲವು ಪೋಸ್ಟರ್‌ಗಳನ್ನು ತೆಗೆದಿರುವುದು ನಿಜ, ಆದರೆ ಅನೇಕರು ಪೋಸ್ಟರ್ ಹಾಕುವ ಕೆಲಸ ಮುಂದುವರೆಸಿದ್ದಾರೆ ಎಂದು ಹೇಳಿದರು. “ನನ್ನ ವಿರುದ್ಧದ ಪ್ರಕರಣಗಳ ಬಗ್ಗೆ ನಾನು ಹೆದರುವುದಿಲ್ಲ, ಪೋಸ್ಟರ್‌ಗಳನ್ನು ತೆಗೆಯದಂತೆ ನಾವು ನೋಡಿಕೊಳ್ಳುತ್ತೇವೆ. ನನ್ನ ಸಮುದಾಯದ ಜನರು ನನ್ನೊಂದಿಗೆ ನಿಲ್ಲುತ್ತಾರೆ, ಇಡೀ ಹಿಂದೂ ಸಮುದಾಯವು ನನ್ನೊಂದಿಗೆ ನಿಲ್ಲುತ್ತದೆ. ನೀವು ನೋಡುತ್ತೀರಿ!’ ಎಂದು ತಿಳಿಸಿದರು.

ಬ್ಯಾನರ್‌ಗಳನ್ನು ಏಕೆ ಹಾಕಲಾಯಿತು? ಇದಕ್ಕೆ ಪ್ರೇರಣೆ ಏನು?

“ಈ ತಾಣವು ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ, ಹಿಂದೂಗಳಲ್ಲದವರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ” ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ನ ದಾಸ್ನಾದ ದೇವಸ್ಥಾನದ ಎದುರು ಅಲ್ಲಿನ ಅರ್ಚಕ ನರಸಿಂಗಾನಂದ ಇಂಥದ್ದೇ ಪೋಸ್ಟರ್ ಹಾಕಿದ್ದಾರೆ. ಇದು 14 ವರ್ಷದ ಮುಸ್ಲಿಂ ಬಾಲಕನ ಮೇಲೆ ಕ್ರೂರ ಹಲ್ಲೆಗೆ ಕಾರಣವಾಯಿತು. ಈ ಘಟನೆಯ ನಂತರ ಹಿಂದೂ ಯುವ ವಾಹಿನಿ ಸದಸ್ಯರು ಮುಖ್ಯ ಅರ್ಚಕ ನರಸಿಂಗಾನಂದರನ್ನು ಭೇಟಿಯಾಗಿ ಬೆಂಬಲಿಸಿದ್ದರು.

ದೆಹಲಿ ಗಲಭೆ ಮತ್ತು ನರಸಿಂಗಾನಂದ ಸ್ವಾಮಿ

ದೆಹಲಿ ಗಲಭೆಯ ಅಸಲಿ ಪಿತೂರಿಕೋರರು ಭಾಗ 2ರಲ್ಲಿ ನಾನುಗೌರಿ.ಕಾಂ ದಿ ವೈರ್ ಉಲ್ಲೇಖಿಸಿ ಈ ಸ್ವಾಮಿಯ ಪ್ರಚೋದನೆ, ಪಾತ್ರಗಳ ಕುರಿತು ಬರೆದಿತ್ತು. ಈ ವರದಿಯಲ್ಲಿ, ತಾವು ಪೋಸ್ಟರ್ ಹಾಕಲು ನರಸಿಂಗಾನಂದ ಸ್ವಾಮಿಯೇ ಪ್ರೇರಣೆ ಎಂದು ಹಿಂದೂ ಯುವ ವಾಹಿನಿ ಹೇಳಿದೆ. ಯಾರೀತ? ಉತ್ತರಪ್ರದೇಶದ ದಾಸ್ನಾದ ದೇವಸ್ಥಾನದಲ್ಲಿ ನೀರು ಕುಡಿದಿದ್ದಕ್ಕೆ ಮುಸ್ಲಿಂ ಬಾಲಕನ ಮೇಲೆ ಹಲ್ಲೆ ಮಾಡಲಾಗಿತು. ಆ ದೇವಸ್ಥಾನದ ಪ್ರಧಾನ ಅರ್ಚಕ ಈ ನರಸಿಂಗಾನಂದ ಸ್ವಾಮಿಯೇ. ಈತನಿಗೆ ಬಿಜೆಪಿಯೊಂದಿಗೆ ನಿಕಟ ಸಂಪರ್ಕ ಇರುವುದುನ್ನು, ದೆಹಲಿ ಗಲಭೆಗೆ ಕಾರಣವಾದ ಪ್ರಚೋದನಾಕಾರಿ ಭಾಷಣಗಳ ವಿಡಿಯೋಗಳನ್ನು ಈತ ವೈರಲ್ ಮಾಡಿದ್ದನ್ನು ದಿ ವೈರ್ ಸಾಬೀತು ಮಾಡಿತ್ತು. ನಾನುಗೌರಿ ಕೂಡ ಅದನ್ನು ಪ್ರಕಟಿಸಿತ್ತು.

ಮಾರ್ಚ್ 20 ರಂದು ಅಭಿಯಾನ ಪ್ರಾರಂಭವಾಯಿತು ಎಂದು ಹಿಂದೂ ಯುವ ವಾಹಿನಿ ಅಧ್ಯಕ್ಷ 47 ವರ್ಷದ ಗೋವಿಂದ್ ವಾಧ್ವಾ ಹೇಳಿದ್ದಾರೆ. 150-200 ದೇವಾಲಯಗಳಲ್ಲಿ ಸ್ವಯಂಸೇವಕರು ಈಗಾಗಲೇ ಸ್ಥಳೀಯರ ಸಹಾಯದಿಂದ ಪೋಸ್ಟರ್‌ಗಳನ್ನು ಹಾಕಿದ್ದರು ಮತ್ತು ಮುಂದಿನ ವಾರದಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. “ಕೆಲವೊಮ್ಮೆ ನಮ್ಮ ವಿಗ್ರಹಗಳು ಒಡೆಯಲ್ಪಡುತ್ತವೆ, ಅಥವಾ ಜನರು ಶಿವ ವಿಗ್ರಹಗಳ ಮೇಲೆ ಇಣುಕಿ ನೋಡುತ್ತಾರೆ, ನೀವು ಇದನ್ನೆಲ್ಲಾ ನೋಡಿರಬೇಕು. ಅದು ಪದೇ ಪದೇ ಸಂಭವಿಸುತ್ತದೆ. ಇದನ್ನು ಹಿಂದೂ ಸಮುದಾಯದ ಸದಸ್ಯರು ಎಂದಿಗೂ ಮಾಡುವುದಿಲ್ಲ, ಆದರೆ ಹಿಂದೂಯೇತರರು ಮಾಡುತ್ತಾರೆ. ಅಂತಹ ಹಿಂದೂಯೇತರರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳಲ್ಲದವರು ಬರದಂತೆ ಮತ್ತು ದೇವಾಲಯಗಳ ಪಾವಿತ್ರ‍್ಯವು ಅಳಿಯದಂತೆ ನೋಡಿಕೊಳ್ಳಲು ಈ ಬ್ಯಾನರ್‌ಗಳನ್ನು ಹಾಕಿದ್ದೇವೆ’ ಎಂದರು.

ಹಿಂದೂಯೇತರರು ಆಕ್ಷೇಪಾರ್ಹವಾದುದನ್ನು ಮಾಡಿದ್ದಾರೆಯೇ ಮತ್ತು ಅಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿವೆಯೇ ಎಂಬ ಪ್ರಶ್ನೆಗೆ ವಾಧ್ವಾ, “ಇತ್ತೀಚೆಗೆ ಡೆಹ್ರಾಡೂನ್ ಅಥವಾ ಉತ್ತರಾಖಂಡದಲ್ಲಿ ಎಲ್ಲಿಯೂ ಈ ರೀತಿಯ ಪ್ರಕರಣಗಳು ಸಂಭವಿಸಿಲ್ಲ. ಆದರೆ ರಕ್ಷಣೆಯ ಉದ್ದೇಶದಿಂದ ನಾವು ಇದನ್ನು ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ತಪ್ಪು ಮಾಡಿಲ್ಲ” ಎಂದಿದ್ದಾರೆ.

ಡೆಹ್ರಾಡೂನ್‌ನ ದೇವಾಲಯಗಳಿಗಷ್ಟೇ ಇದು ಸಿಮೀತವಲ್ಲ ಎಂದು ವಾಧ್ವಾ ಹೇಳಿದ್ದಾರೆ. “ಉತ್ತರಾಖಂಡದಾದ್ಯಂತದ ನಾಲ್ಕು ಮಹತ್ವದ ದೇವಾಲಯಗಳಲ್ಲಿ ಒಂದೇ ರೀತಿಯ ಪೋಸ್ಟರ್‌ಗಳನ್ನು ಹಾಕುವ ಯೋಜನೆ ನಮ್ಮಲ್ಲಿದೆ. ಇದಕ್ಕಾಗಿ ನಾವು ಒಂದು ಯೋಜನೆಯನ್ನು ರೂಪಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಉತ್ತರಾಖಂಡದ ಸಿಎಂ ಅವರನ್ನು ಭೇಟಿ ಮಾಡಲಿದ್ದೇವೆ ಎನ್ನುವ ಅವರು, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದ್ರಿನಾಥ್ ನಾಲ್ಕು ಪವಿತ್ರ ಹಿಂದೂ ಕ್ಷೇತ್ರಗಳು ಎಂದು ಉಲ್ಲೇಖಿಸಿದರು.

ಈ ಪೋಸ್ಟರ್ ಹಾಕಲು ಅನುಮತಿ ಪಡೆದಿದ್ದೀರಾ ಎಂದು ಕೇಳಿದಾಗ, “ನನ್ನ ಮನೆಯನ್ನು ರಕ್ಷಿಸಲು ನನಗೆ ಪೊಲೀಸರಿಂದ ಅನುಮತಿ ಬೇಕೇ?” ಎಂದಿದ್ದಾರೆ. ‘ಈ ದೇವಾಲಯಗಳು ಯಾರ ವ್ಯಾಪ್ತಿಗೆ ಬರುತ್ತವೆ, ಅವು ಸರ್ಕಾರಿ ಸ್ವಾಮ್ಯದಲ್ಲಿವೆಯೇ ಅಥವಾ ಖಾಸಗಿ ಟ್ರಸ್ಟ್‌ನವರ ಕೈಯಲ್ಲಿವೆಯೇ?’ ಎಂದು ಕೇಳಿದಾಗ, “ಇದು ಹಿಂದೂ ಸಮುದಾಯದ ಆಸ್ತಿ ಮತ್ತು ಯಾವುದೇ ಒಬ್ಬ ವ್ಯಕ್ತಿಗೆ ಸೇರಿಲ್ಲ. ಇಲ್ಲಿ ಪೋಸ್ಟರ್ ಹಾಕಲು ಯಾವ ಅನುಮತಿಯೂ ಬೇಕಿಲ್ಲ’ ಎಂದಿದ್ದಾರೆ. ಅಲ್ಲದೇ ನಮ್ಮದು 2002 ರಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸ್ಥಾಪಿಸಿದ ಹಿಂದೂ ಯುವ ವಾಹಿನಿ ಅಲ್ಲ, ಇದೇ ಬೇರೆ ಎಂದು ವಾಧ್ವಾ ಸ್ಪಷ್ಟಪಡಿಸಿದರು.

ಪಶ್ಚಿಮ ಯುಪಿಯ ದಾಸ್ನಾದಲ್ಲಿ ದೇವಾಲಯದಲ್ಲಿ ಮುಸ್ಲಿಂ ಬಾಲಕನಿಗೆ ಥಳಿಸಿದ ನಂತರ, ಬಿಎಸ್ಪಿಯ ಧೌಲಾನಾ ಅಸ್ಲಂ ಚೌಧರಿ ದಾಸ್ನಾದಲ್ಲಿನ ದೇವಾಲಯವು ತನ್ನ ಪೂರ್ವಜರಿಗೆ ಸೇರಿದ್ದು ಮತ್ತು ಆಡಳಿತ ಮಂಡಳಿಯನ್ನು ತೆಗೆದುಹಾಕುತ್ತೇವೆ ಎಂದು ಹೇಳಿದ್ದಾರೆ. ಚೌಧರಿ ಹೀಗೆ ಹೇಳಿದ ನಂತರ, ವಾಧ್ವಾ ದಾಸ್ನಾದ ದೇವಾಲಯದ ಪ್ರಧಾನ ಅರ್ಚಕನನ್ನು ಭೇಟಿಯಾದರು ಮತ್ತು ಉತ್ತರಾಖಂಡದ ಇನ್ನೂ ಹಲವಾರು ದೇವಾಲಯಗಳ ಹೊರಗೆ ಇಂತಹ ಪೋಸ್ಟರ್‌ಗಳನ್ನು ಹಾಕುವುದಾಗಿ ಹೇಳಿದರು.

(ಕೃಪೆ: ದಿ ಕ್ವಿಂಟ್)


ಇದನ್ನೂ ಓದಿ: ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...