ಪ್ರಧಾನಿ ನರೇಂದ್ರ ಮೋದಿ ಅವರು ಮೇ 2022 ರಿಂದ ಡಿಸೆಂಬರ್ 2024 ರವರೆಗೆ ಮಾಡಿದ 38 ವಿದೇಶ ಪ್ರವಾಸಗಳಿಗೆ ಕೇಂದ್ರ ಸರ್ಕಾರ 258.9 ಕೋಟಿ ರೂ. ಖರ್ಚು ಮಾಡಿದೆ ಎಂದು ವರದಿಯಾಗಿದೆ. ಈ ಅವಧಿಯಲ್ಲಿ ಮೋದಿ ಅವರು ಜೂನ್ 2023 ರಲ್ಲಿ ಮಾಡಿದ ಅತ್ಯಂತ ದುಬಾರಿ ಪ್ರವಾಸ ಅಮೆರಿಕದ್ದಾಗಿದ್ದು, ಇದಕ್ಕೆ ರೂ. 22 ಕೋಟಿಗೂ ಹೆಚ್ಚು ವೆಚ್ಚವಾಗಿದೆ ಎಂದು ಸರ್ಕಾರ ಗುರುವಾರ ರಾಜ್ಯಸಭೆಗೆ ತಿಳಿಸಿದೆ. ಪ್ರಧಾನಿ ಮೋದಿ ವಿದೇಶ ಪ್ರವಾಸ
ಪ್ರಧಾನಿಯವರ ಸೆಪ್ಟೆಂಬರ್ 2024 ರ ಅಮೆರಿಕ ಭೇಟಿಗೆ ರೂ. 15 ಕೋಟಿಗೂ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಅದು ತಿಳಿಸಿದೆ. ಪ್ರಧಾನಿ ನಿಯೋಗದ ವಸತಿ, ಸಾರಿಗೆ, ಭದ್ರತೆ ಮತ್ತು ಹಾರ್ಡ್‌ವೇರ್, ಸ್ಥಳ ಶುಲ್ಕಗಳು ಮತ್ತು “ವಿವಿಧ” ಖರ್ಚು ವೆಚ್ಚಗಳು ಇದರಲ್ಲಿ ಸೇರಿದೆ ಎಂದು ಸರ್ಕಾರ ಹೇಳಿದೆ. ಅದಾಗ್ಯೂ, ವಿವಿಧ ವೆಚ್ಚಗಳು ಅಂದರೆ ಏನು ಎಂದು ವ್ಯಾಖ್ಯಾನಿಸಲಾಗಿಲ್ಲ.
2022 ರಲ್ಲಿ ಮೋದಿ ಜರ್ಮನಿ, ಡೆನ್ಮಾರ್ಕ್, ಫ್ರಾನ್ಸ್, ನೇಪಾಳ, ಯುನೈಟೆಡ್ ಅರಬ್ ಎಮಿರೇಟ್ಸ್, ಜಪಾನ್, ಉಜ್ಬೇಕಿಸ್ತಾನ್ ಮತ್ತು ಇಂಡೋನೇಷ್ಯಾಕ್ಕೆ ಭೇಟಿ ನೀಡಿದ್ದರು. 2023 ರಲ್ಲಿ, ಪಪುವಾ ನ್ಯೂಗಿನಿಯಾ, ಆಸ್ಟ್ರೇಲಿಯಾ, ಜಪಾನ್, ಯುಎಸ್, ಯುಎಇ, ಈಜಿಪ್ಟ್, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ ಮತ್ತು ಗ್ರೀಸ್ ದೇಶಗಳಿಗೆ ಪ್ರಧಾನಿ ಭೇಟಿ ನೀಡಿದ್ದರು.
2024 ರಲ್ಲಿ, ಪ್ರಧಾನ ಮಂತ್ರಿ ಯುಎಇ, ಭೂತಾನ್, ಕತಾರ್, ಇಟಲಿ, ಆಸ್ಟ್ರಿಯಾ, ರಷ್ಯಾ, ಪೋಲೆಂಡ್, ಉಕ್ರೇನ್, ಬ್ರೂನಿ ದಾರುಸ್ಸಲಾಮ್, ಅಮೆರಿಕ, ಸಿಂಗಾಪುರ, ಲಾವೋಸ್, ಬ್ರೆಜಿಲ್, ಗಯಾನಾ ಮತ್ತು ಕುವೈತ್‌ಗೆ ಪ್ರಯಾಣ ಬೆಳೆಸಿದ್ದರು.
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಶ್ನೆಗೆ ಲಿಖಿತ ಉತ್ತರವಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪಬಿತ್ರ ಮಾರ್ಗರಿಟಾ ಅವರು ಈ ಡೇಟಾವನ್ನು ಒದಗಿಸಿದ್ದಾರೆ. ಕಾಂಗ್ರೆಸ್ ಮುಖ್ಯಸ್ಥರಾದ ಖರ್ಗೆ ಅವರು ಪ್ರಧಾನಿಯವರ ವಿದೇಶ ಪ್ರವಾಸಗಳ ವ್ಯವಸ್ಥೆಗಾಗಿ ಭಾರತೀಯ ರಾಜತಾಂತ್ರಿಕ ಕಾರ್ಯಾಚರಣೆಗಳು ಮಾಡಿದ ವೆಚ್ಚದ ವಿವರಗಳನ್ನು ಕೋರಿದ್ದರು. ಪ್ರಧಾನಿ ಮೋದಿ ವಿದೇಶ ಪ್ರವಾಸ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಿಜೆಪಿಯ ಇಬ್ಬರು ಎಂಎಲ್‌ಸಿಗಳಿಗೆ ಕಾಂಗ್ರೆಸ್ ಸೇರುವಂತೆ ಸದನದಲ್ಲೆ ಆಫರ್ ನೀಡಿದ ಡಿ.ಕೆ. ಶಿವಕುಮಾರ್!
ಬಿಜೆಪಿಯ ಇಬ್ಬರು ಎಂಎಲ್‌ಸಿಗಳಿಗೆ ಕಾಂಗ್ರೆಸ್ ಸೇರುವಂತೆ ಸದನದಲ್ಲೆ ಆಫರ್ ನೀಡಿದ ಡಿ.ಕೆ. ಶಿವಕುಮಾರ್!

