ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಮಸ್ಕರಿಸುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಮೆರಾಗಳನ್ನು ನೋಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಆಮ್ ಆದ್ಮಿ ಪಕ್ಷದ ನಾಯಕರೊಬ್ಬರು ಟ್ವೀಟ್ ಮಾಡಿದ ವೀಡಿಯೊ ಈಗ ಪರವಿರೋಧದ ಚರ್ಚೆಗೆ ಕಾರಣವಾಗಿದೆ.
ಎಎಪಿ ನಾಯಕ ಸಂಜಯ್ ಸಿಂಗ್ ಅವರು ಮಾಡಿರುವ ಪೋಸ್ಟ್ ತಪ್ಪುದಾರಿಗೆಳೆಯುವಂತಿದೆ ಎಂದು ಬಿಜೆಪಿ ಟೀಕಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮೂಲ ವೀಡಿಯೋದಲ್ಲಿ ಪ್ರಧಾನಮಂತ್ರಿಯವರು ರಾಷ್ಟ್ರಪತಿಗಳ ನಮನಕ್ಕೆ ಪ್ರತಿಕ್ರಿಯೆ ನೀಡಿದ ಬಳಿಕ ಕ್ಯಾಮೆರಾದತ್ತ ನೋಡುತ್ತಿರುವುದು ದಾಖಲಾಗಿದೆ. ಆದರೆ ಎಡಿಟ್ ಮಾಡಿದ ಬಳಿಕ ವಿಡಿಯೊವನ್ನು ಹರಿಬಿಡಲಾಗಿದೆ.
ಸಂಜಯ್ ಸಿಂಗ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋಕ್ಕೆ ವಿರುದ್ಧವಾಗಿ ರಾಷ್ಟ್ರಪತಿ ಕೋವಿಂದ್ ಅವರಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಹೇಳಿದ್ದಾರೆ.
Shame on @SanjayAzadSln for sharing cropped video to insult outgoing President.
PM had greeted Ram Nath Kovind ji.
AAP edited that part and starts video after he crossed Modiji. https://t.co/uYFhBWsFJS pic.twitter.com/LKLZ4kYmqT
— Ankur Singh (@iAnkurSingh) July 24, 2022
ಟ್ವೀಟ್ ಮಾಡಿರುವ ಸಂಜಯ್ ಸಿಂಗ್, “ನಿರ್ಗಮಿತ ರಾಷ್ಟ್ರಪತಿಗೆ ಅವಮಾನ ಮಾಡಲಾಗಿದೆ. ಇದಕ್ಕಿಂತ ದುರದೃಷ್ಟಕರ ಸಂಗತಿ ಬೇರೊಂದಿಲ್ಲ. ನಿಮ್ಮ ಅವಧಿ ಮುಗಿದ ಬಳಿಕ ನಿಮ್ಮ ಕಡೆ ಇವರು ತಿರುಗಿಯೂ ನೋಡುವುದಿಲ್ಲ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿರಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯರ ಕೆಲಸವನ್ನು ಮಾಧ್ಯಮಗಳೇ ಮಾಡುತ್ತಿವೆ: ಜುಬೇರ್
“ಎಡಿಟ್ ಮಾಡಿದ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ. ಸಾರ್ವಜನಿಕ ಡೊಮೈನ್‌ನಲ್ಲಿ ಪ್ರಧಾನಿ ಮೋದಿ ರಾಷ್ಟ್ರಪತಿಗಳಿಗೆ ಶುಭಾಶಯ ಕೋರುತ್ತಿರುವ ಚಿತ್ರಗಳಿವೆ. ಆದರೂ, ಅಂತಹ ಆರೋಪ ಹೊರಿಸಲಾಗಿದೆ, ಉದ್ದೇಶವೇನು?” ಎಂದು ಪೂನವಾಲ ಪ್ರಶ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಎಡಿಟ್ ಮಾಡಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಬಿಜೆಪಿ ಈ ಹಿಂದೆ ಹಲವು ವಿಡಿಯೊಗಳನ್ನು ತಿರುಚಿ ಹಂಚಿಕೊಂಡ ಉದಾಹರಣೆಗಳಿವೆ. ಆದರೆ ಪ್ರತಿಪಕ್ಷಗಳೂ ಕೆಲವೊಮ್ಮೆ ಈ ಆರೋಪಕ್ಕೆ ಗುರಿಯಾಗಿವೆ.
ಇತ್ತೀಚೆಗೆ ಕರ್ನಾಟಕ ರಾಜ್ಯ ಬಿಜೆಪಿ ಘಟಕವು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಯನ್ನು ತಿರುಚಿ ಪೋಸ್ಟ್ ಮಾಡಿತ್ತು. ರಮೇಶ್ ಕುಮಾರ್ ಮಾತನಾಡಿದ್ದೇ ಬೇರೆಯ ವಿಷಯವಾಗಿತ್ತು.
ಪ್ರತಿಭಟನಾ ರ್‍ಯಾಲಿಯಲ್ಲಿ ಮಾತನಾಡಿದ ರಮೇಶ್ ಕುಮಾರ್, “ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಟ್ಟಿದ್ದೇವೆ. ಈಗ ನಮಗೆ ಅದರ ಋಣ ತೀರಿಸುವ ಸಮಯ ಬಂದಿದೆ, ಈ ಕಿಂಚಿತ್ ತ್ಯಾಗಕ್ಕೆ ತಯಾರಾಗದೆ ಹೋದ್ರೆ ನಾವು ಇನ್ನಮುಂದೆ ತಿನ್ನುವ ಅನ್ನದಲ್ಲಿ ಹುಳ ಬೀಳುತ್ತೆ” ಎಂದು ಹೇಳಿದ್ದರು. ಆದರೆ ಬಿಜೆಪಿ ಪೋಸ್ಟ್ ಮಾಡಿದ್ದ ವಿಡಿಯೊದಲ್ಲಿ “3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ” ಎಂದಾಗಿತ್ತು.


