Homeಅಂಕಣಗಳುನೂರರ ನೋಟ; ದೊಡ್ಡರಂಗೇಗೌಡರು ಆತ್ಮಾವಲೋಕನ ಮಾಡಿಕೊಳ್ಳಲಿ

ನೂರರ ನೋಟ; ದೊಡ್ಡರಂಗೇಗೌಡರು ಆತ್ಮಾವಲೋಕನ ಮಾಡಿಕೊಳ್ಳಲಿ

- Advertisement -
- Advertisement -

ಅಮೆರಿಕದಲ್ಲಿ ಒಂದು ಮಾತಿದೆ Get On, Get Honour, Get Honest ಎಂದು.

ಮೊದಲು Get On ಆಗಿ, ದೊಡ್ಡರಂಗೇಗೌಡರು ಸಾಹಿತಿ ಎನಿಸಿದರು. ಸಿನಿಮಾ ಹಾಡು ಬರೆಯುವುದರಲ್ಲೂ ಹೆಸರು ಮಾಡಿದರು.

ಮುಂದಿನ ಹೆಜ್ಜೆ Get Honour. ಬಿಜೆಪಿಯ ಮೇಲ್ಮನೆ ಸದಸ್ಯರಾದರು. ಸರ್ಕಾರದ ಪುಸ್ತಕಕೊಳ್ಳುವ ಸಮಿತಿಯ ಅಧ್ಯಕ್ಷರು ಆದರು. ಅನಾಯಾಸವಾಗಿ, ಬಿಜೆಪಿಯ ಸಹಕಾರದಿಂದ ಪದ್ಮಶ್ರೀ ಪ್ರಶಸ್ತಿಯೂ ದೊರೆಯಿತು.

ಇಷ್ಟೆಲ್ಲ ಗೌರವಗಳನ್ನು ಬಿಜೆಪಿ ಸರ್ಕಾರ ದೊಡ್ಡರಂಗೇಗೌಡರಿಗೆ ಬಳುವಳಿಯಾಗಿ ಕೊಟ್ಟಿರುವಾಗ ಅವರು ಬಿಜೆಪಿಗೆ ಪ್ರತ್ಯುಪಕಾರ ಮಾಡಿ ಸಾಲ ತೀರಿಸಬೇಡವೇ? ಕೃತಜ್ಞತೆ ಸಲ್ಲಿಸಬೇಡವೇ? ಈಗ ಅವರು Honest ಆಗುವ ಪ್ರಯತ್ನದಲ್ಲಿದ್ದಾರೆ. ಯಾರಿಗೆ Honest ಆಗುವುದು? ಬಿಜೆಪಿಗಲ್ಲದೆ ಬೇರೆ ಯಾರಿಗೆ Honest ಆಗುವುದು?

ಆದರೆ ಅವರು ಅದಕ್ಕಾಗಿ ಮೊದಲು ಆಯ್ಕೆಮಾಡಿದ್ದು ಹಿಂದಿ ಭಾಷೆಯನ್ನು ರಾಷ್ಟ್ರಭಾಷೆಯಾಗಿ ಒಪ್ಪಿಕೊಳ್ಳುವ ವಿಚಾರ ಪ್ರಸ್ತಾಪಿಸುವ ಮುಖಾಂತರ. ಕನ್ನಡಿಗರು ಹೆಮ್ಮೆ ಪಡಬಹುದಾದ, ಹಾವೇರಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ದಯಪಾಲಿಸಿತು. ಆ ಸುದ್ದಿ ತಿಳಿದ ಒಡನೆ ದೊಡ್ಡರಂಗೇಗೌಡರು ಮೊದಲಿಗೆ ಆಡಿದ ಮಾತು ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ನೀತಿಯನ್ನು ಸಮರ್ಥಿಸುವ ಮೂಲಕ ಕರ್ನಾಟಕ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಏಕೆ ಒಪ್ಪಿಕೊಳ್ಳಬಾರದು ಎನ್ನುವ ರೀತಿಯಲ್ಲಿ ಪ್ರಶ್ನಿಸಿದರು. ಅವರೇ ಹೇಳಿರುವಂತೆ ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಚಲಾವಣೆಯಲ್ಲಿಲ್ಲ.

ಉತ್ತರ ಭಾರತದ ರಾಜ್ಯಗಳು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಒಪ್ಪಿರುವ ಮಾತ್ರಕ್ಕೆ, ನಾವು, ಹಿಂದಿಯ ಗಂಧವೇ ಇಲ್ಲದ ದಕ್ಷಿಣ ಭಾರತದ ಜನ ಇದನ್ನು ಯಾಕೆ ಒಪ್ಪಬೇಕು ಎಂದು ಜನರು ಕೇಳಲಾರಂಭಿಸಿದರು. ದೊಡ್ಡರಂಗೇಗೌಡರ ಬಾಯಿ ಕಟ್ಟಿಹೋಯ್ತು. ಸಮ್ಮೇಳನದ ಸಮಯದಲ್ಲಿ ಕನ್ನಡಿಗರು ಒಕ್ಕೊರಲಿನಿಂದ ಸಮ್ಮೇಳಾನಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಂಬ ಮತ್ತು ಬೆವರಿಳಿಸುತ್ತಾರೆಂಬ ಭಯ ದೊಡ್ಡರಂಗೇಗೌಡರನ್ನು ಕಾಡಲು ಆರಂಭವಾಯಿತು. ಸರ್ಕಾರಕ್ಕೂ ಈ ಭಯ ತಾಕಿ ಸಮ್ಮೇಳನವನ್ನೇ ಮುಂದಕ್ಕೆ ಹಾಕುವ ತೀರ್ಮಾನ ಕೈಗೊಂಡಿತು. ಸಂಬಂಧಪಟ್ಟ ಮಂತ್ರಿಗಳು ಸಮ್ಮೇಳನವನ್ನು ಮುಂದಕ್ಕೆ ಹಾಕಿರುವ ಸುದ್ದಿ ಪ್ರಕಟಿಸಿದರು.

ಈ ಮಧ್ಯೆ ದೊಡ್ಡರಂಗೇಗೌಡರು, ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆ ನಂತರ ಇನ್ನೊಂದು ಸಂದರ್ಭದಲ್ಲಿ ತಮ್ಮ ನಿಲುವನ್ನು ಬದಲಾಯಿಸಿರುವುದಾಗಿ ಹೇಳಿದರು. ಬಹುಶಃ ಸಮ್ಮೇಳನದಲ್ಲಿ ಎಲ್ಲ ಕನ್ನಡಿಗರ ಒಕ್ಕೊರಲಿನ ಪ್ರಕೋಪಕ್ಕೆ ಒಳಗಾಗಬಹುದು ಎಂಬ ಹೆದರಿಕೆ ಅವರನ್ನು ಕಾಡಿರಬಹುದು.

ಸಮ್ಮೇಳನ ಮುಂದಕ್ಕೆ ಹೋಯಿತು. ತಮಗೆ ಮೋದಿ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದ್ದು ದೊಡ್ಡರಂಗೇಗೌಡರಿಗೆ ಮತ್ತೆ ಜ್ಞಾಪಕಕ್ಕೆ ಬಂದಿರಬೇಕು. ಬಿಜೆಪಿಗೆ ಕೃತಜ್ಞತೆ ಸಲ್ಲಿಸುವುದನ್ನು ಮರೆಯಬಾರದು ಎಂದುಕೊಂಡು, ಹಿಂದುತ್ವ ಪ್ರತಿಪಾದಕರ Hidden Agendaವನ್ನು ಒಂದೊಂದಾಗಿ ಸಮರ್ಥಿಸುವುದು ತಮ್ಮ ಕರ್ತವ್ಯ ಎಂದುಕೊಂಡು ಈಗ ಸಂವಿಧಾನವನ್ನು ಬದಲಿಸುವ ಪ್ರಸ್ತಾಪ ಮಾಡಿದ್ದಾರೆ. ಸಂವಿಧಾನದಲ್ಲಿ ಅಥವಾ ರಾಜ್ಯಾಂಗದಲ್ಲಿ ಏನೇನು ಬದಲಾವಣೆ ತರಬೇಕು ಎಂಬುದನ್ನು ವಿವರಿಸುವ ಧೈರ್ಯ ಅವರು ಮಾಡಲಿಲ್ಲ. ಮುಗುಮ್ಮಾಗಿ ಸಂವಿಧಾನದಲ್ಲಿ ಬದಲಾವಣೆಗೆ ತರಬೇಕು ಎಂದು ಸಾಹಿತ್ಯ ಸಮ್ಮೇಳನ ಒಂದರಲ್ಲಿ ಪ್ರಸ್ತಾಪಿಸಿದ್ದಾರೆ. ಈ ಮಾತಿಗೂ ಸಾಕಷ್ಟು ಪ್ರತಿಭಟನೆ ವ್ಯಕ್ತವಾಗಿದೆ. ಹಾವೇರಿ ಸಮ್ಮೇಳನ ನಡೆಯುವುದೇ ಆದರೆ ಕನ್ನಡಿಗರು ದೊಡ್ಡರಂಗೇಗೌಡರಿಗೆ ಚಾರಿತ್ರಿಕ ಪ್ರತಿಭಟನೆ ತೋರುತ್ತಾರೆ. ಬಿಜೆಪಿಯ ವಕ್ತಾರನಾಗಲು ಬಯಸುವ ನಾನು ಯಾಕಾದರು ಈ ಸಮ್ಮೇಳನಾಧ್ಯಕ್ಷ ಪದವಿಯನ್ನು ಒಪ್ಪಿಕೊಂಡೆ ಎಂದು ಪರಿತಪಿಸುತ್ತಾರೆ.

ದೊಡ್ಡರಂಗೇಗೌಡರು ಇನ್ನು ಮುಂದೆ ಕನ್ನಡಿಗರ ಹಿತವನ್ನು ಕಾಪಾಡುವವರಲ್ಲ. ಅವರು ಬಿಜೆಪಿಯ ಬಾಯಿ ಹರುಕ ಶಾಸಕರಂತೆ ತಾವೂ ಒಬ್ಬ ವಕ್ತಾರರಾಗಿ ಪರಿವರ್ತನೆಗೊಳ್ಳುವವರು ಎಂಬುದನ್ನು ಸಾಬೀತುಮಾಡಿದ್ದಾರೆ.
ಮನುಷ್ಯ ಎಷ್ಟೇ ಬುದ್ಧಿವಂತನಾಗಿರಲಿ, ಬದ್ಧತೆಯನ್ನುಳ್ಳವನಾಗಿರಲಿ ಸರ್ಕಾರ ನೀಡುವ ಬಿರುದು ಬಾವಲಿ ಸ್ಥಾನಮಾನಗಳಿಗೆ ಮನ ಸೋತರೆ ಎಷ್ಟು ಕ್ರೂರನಾಗಬಲ್ಲ, ದಾಸನಾಗಬಲ್ಲ ಎಂಬುದಕ್ಕೆ ಜ್ವಲಂತ ಉದಾಹರಣೆ ದೊಡ್ಡರಂಗೇಗೌಡರು.

ದೊಡ್ಡರಂಗೇಗೌಡರನ್ನು ಅನೇಕ ವರ್ಷಗಳಿಂದ ಬಲ್ಲವನು ನಾನು. ಅವರನ್ನು ಕಂಡರೆ ನನಗೆ ತುಂಬ ಗೌರವ, ಮೆಚ್ಚುಗೆ. ಅವರಿಗೆ ತಮ್ಮ ಹೆಸರು ಬೆಳಗಬೇಕು ಎಂಬ ಆಸೆ ಇತ್ತು. ಅದನ್ನೂ ನಾನು ಬಲ್ಲೆ. ಆದರೆ ಅವರು For a pot of Porridgeಗೋಸ್ಕರ ತಮ್ಮ soulಅನ್ನೇ ಮಾರಿಕೊಳ್ಳುವವರು ಎಂದು ನಾನು ಭಾವಿಸಿರಲಿಲ್ಲ. ಕನ್ನಡಿಗರೆಲ್ಲರ ಹೃನ್ಮನಗಳನ್ನು ಗೆದ್ದಿದ್ದ ಅವರಿಗೆ ಪದ್ಮಭೂಷಣ ಎಂಬ ಚಿನ್ನದ ಉರುಳು ಜನರ ಮನ್ನಣೆಗಿಂತ ಹೆಚ್ಚಾಯಿತೇ? What a fall my Countrymen!

ಕನ್ನಡದ ಜನತೆಗೆಲ್ಲರಿಗೂ ಬೇಕಾಗಿದ್ದ ಅವರು ಈಗ ಹಿಂದುತ್ವ ಪ್ರತಿಪಾದಕರ ಸಣ್ಣ ಪಂಗಡದ ಅಡಿಯಾಳಾದರೇಕೆ ಎಂಬುದು ನನ್ನನ್ನು ಬಾಧಿಸುವ ಪ್ರಶ್ನೆ.


ಇದನ್ನೂ ಓದಿ: “ಹಿಂದಿ ನಮ್ಮ ರಾಷ್ಟ್ರ ಭಾಷೆ”: ದೊಡ್ಡರಂಗೇಗೌಡರ ಹೇಳಿಕೆಗೆ ಕನ್ನಡಿಗರ ವಿರೋಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...