ಮುಷ್ಕರದಲ್ಲಿ ತೊಡಗಿರುವ ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರು ಮತ್ತು ರೈತರನ್ನು ಭೇಟಿಯಾಗಲು ಬಂದಿದ್ದ ರೈತ ಮುಖಂಡ, ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ಶನಿವಾರ ಬೆಳಗಾವಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ರೈತರು ಮತ್ತು ಮುಷ್ಕರ ನಿರತ ನೌಕರರ ಭೇಟಿಗಾಗಿ ಅವರು ಬೆಳಗಾವಿಯ ಮಿಲನ್ ಹೋಟೆಲ್‌ನಲ್ಲಿ ತಂಗಿದ್ದರು. ಬೆಳಗಾವಿ ಪೊಲೀಸರು ಅವರನ್ನು ಅವರು ತಂಗಿದ್ದ ಹೊಟೆಲ್‌ನಿಂದಲೇ ವಶಕ್ಕೆ ಪಡೆದು, ಅಲ್ಲಿಂದ ಕರೆದೊಯ್ದಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಉದ್ದಟತನ ಬಿಟ್ಟು ಸಾರಿಗೆ ನೌಕರರ ಮನವೊಲಿಸಲಿ: ಕುಮಾರಸ್ವಾಮಿ ವಾಗ್ದಾಳಿ
ಚಂದ್ರಶೇಖರ್ ಅವರು ಸಾರಿಗೆ ನೌಕರರ ಮುಂದಿನ ಹೋರಾಟದ ಬಗ್ಗೆ ಚರ್ಚಿಸುವುದಕ್ಕಾಗಿ ಬೆಳಗಾವಿಯಲ್ಲಿ ಬೀಡುಬಿಟ್ಟಿದ್ದರು. ಆದರೆ ಸಾರಿಗೆ ನೌಕರರ ಮುಷ್ಕರದಿಂದಾಗಿ ಬೇಸತ್ತಿರುವ ಸರ್ಕಾರವು ಅವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದೆ.
ತಮ್ಮನ್ನು ಪೊಲೀಸರು ವಶಕ್ಕೆ ಪಡೆಯುವಾಗ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಪೊಲೀಸರು ಮುಂಜಾಗ್ರತಾ ಕ್ರಮ ಎನ್ನುತ್ತಿದ್ದಾರೆ. ಆದರೆ ಸಕಾರಣ ಗೊತ್ತಿಲ್ಲ. ಇದು ಸರಿಯಲ್ಲ, ಇದು ಚಳವಳಿಯನ್ನು ದಮನ ಮಾಡುವ ನೀತಿಯಾದೆ. ಬಂಧನವು ಅಕ್ರಮ ಮತ್ತು ದಮನಕಾರಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರವನ್ನು ಮುರಿಯಲು ಪ್ರಯತ್ನಿಸುತ್ತಿರುವ ಸರ್ಕಾರ?



ಈ ರೋಲ್ ಕಾಲ್ ಗಿರಾಕಿಗಳಿಂದ ಜನರಿಗೆ ಬಿಡುಗಡೆ ಯಾವಾಗ