ವಿವಾದಿತ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ ಎಂದಿರುವ ರೈತ ಸಂಘಟನೆ ಚಳುವಳಿ ತೀವ್ರಗೊಳಿಸುತ್ತಿದೆ. 24 ಗಂಟೆಗಳ ರಸ್ತೆ ತಡೆ, ‘ಸಂವಿಧಾನ ದಿನ ಉಳಿಸಿ’, ‘ಕಿಸಾನ್ ಬಹುಜನ ಏಕತೆ ದಿನಗಳ ಮೂಲಕ ವಿಭಿನ್ನವಾಗಿ ಪಟ್ಟು ಬಿಡದ ಸರ್ಕಾರಕ್ಕೆ ಪೆಟ್ಟು ನೀಡಲು ಹೊರಟಿದೆ.

ನವೆಂಬರ್‌ 26 ರಿಂದ ಶುರುವಾದ ರೈತ ಹೋರಾಟ 135 ದಿನಗಳನ್ನು ದಾಟುತ್ತಿದೆ. ಈ ನಡುವೆ ನೂರಾರು ರೈತ ಹೋರಾಟಗಾರರು ಹುತಾತ್ಮರಾಗಿದ್ದಾರೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯನ್ನು ಕಾನೂನುಬದ್ಧಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಈಗ ಕೇಂದ್ರ ಸರ್ಕಾರ ರೈತರೊಂದಿಗೆ ಸಂಧಾನ  ಸಭೆಗಳನ್ನು ನಡೆಸುವುದನ್ನು ನಿಲ್ಲಿಸಿದೆ. ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಆಲಿಸಲು ಸರ್ಕಾರ ಸಿದ್ಧವಿಲ್ಲ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ (ಎಸ್‌ಕೆಎಂ) ಚಳುವಳಿಯನ್ನು ಮುಂದುವರಿಸಲು ಮತ್ತು ಅದನ್ನು ತೀವ್ರಗೊಳಿಸಲು ಹಲವು ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತಿದೆ. ಈ ಕುರಿತು ಪ್ರತಿಭಟನಾ ನಿರತ ರೈತಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಇಂದು, ಏಪ್ರಿಲ್ 10 ರಂದು, ಬೆಳಗ್ಗೆ 8 ರಿಂದ ಕುಂಡ್ಲಿ-ಮಾನೇಸರ್-ಪಲ್ವಾಲ್ (ಕೆಎಂಪಿ) -ಕುಂಡ್ಲಿ-ಗಾಜಿಯಾಬಾದ್-ಪಾಲ್ವಾಲ್ (ಕೆಜಿಪಿ) ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು 24 ಗಂಟೆಗಳ ಕಾಲ (ಏಪ್ರಿಲ್ 11 ರ ಬೆಳಿಗ್ಗೆ 8 ರ ವರೆಗೆ) ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಶಾಹಿನ್‌ಬಾಗ್‌‌ ಅನ್ನು ನಡೆಸಿಕೊಂಡಂತೆ ರೈತ ಹೋರಾಟಗಾರರನ್ನು ನಡೆಸದಿರಿ: ಕೇಂದ್ರಕ್ಕೆ ಟಿಕಾಯತ್‌

ಏಪ್ರಿಲ್ 13 ರಂದು ಖಾಲ್ಸಾ ಪಂಥದ ಅಡಿಪಾಯ ದಿನವನ್ನು ದೆಹಲಿಯ ಗಡಿಯಲ್ಲಿ ಆಚರಿಸಲಾಗುವುದು. ಜೊತೆಗೆ ಅದೇ ಸಮಯದಲ್ಲಿ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ವಾರ್ಷಿಕೋತ್ಸವದಂದು ಹುತಾತ್ಮರ ಗೌರವಾರ್ಥ ಕಾರ್ಯಕ್ರಮಗಳು ನಡೆಯಲಿವೆ. ಎಂದು ಎಸ್‌ಕೆಎಂ ತಿಳಿಸಿದೆ.

‘ಸಂವಿಧಾನ ದಿನ ಉಳಿಸಿ’ ಮತ್ತು ‘ಕಿಸಾನ್ ಬಹುಜನ ಏಕತೆ ದಿನ’ ದಿನವನ್ನು ಏಪ್ರಿಲ್ 14 ರಂದು ಆಚರಿಸಲಾಗುವುದು. ಈ ದಿನ, ಸಮುಕ್ತ ಕಿಸಾನ್ ಮೋರ್ಚಾದ ಎಲ್ಲಾ ಕಾರ್ಯಕ್ರಮಗಳನ್ನು ಬಹುಜನ ಸಮಾಜದ ಹೋರಾಟಗಾರರು ನಿರ್ವಹಿಸಲಿದ್ದಾರೆ. ವೇದಿಕೆಗಳು ಅವರಿಗಾಗಿ ಮೀಸಲಿರುತ್ತವೆ ಎಂದಿದ್ದಾರೆ.

ದ್ವೇಷ ಮತ್ತು ವಿಭಜನೆಯ ಮನೋಭಾವ ಹರಡಲು, ರೈತರು ಮತ್ತು ಕಾರ್ಮಿಕರನ್ನು ಶತ್ರುಗಳೆಂದು ನಿರೂಪಿಸಲು ಬಿಜೆಪಿ ನಾಯಕರು ಹರಿಯಾಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮಾಡಬಹುದು. ಏಪ್ರಿಲ್ 14 ರಂದು ಹರಿಯಾಣದ ಉಪಮುಖ್ಯಮಂತ್ರಿ ಉದ್ದೇಶಪೂರ್ವಕವಾಗಿ ಕೈತಾಲ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ಹಾಗಾಗಿ ಶಾಂತಿಯುತವಾಗಿ ಇವರ ವಿರುದ್ಧ ಪ್ರತಿಭಟಿಸುವಂತೆ ನಾವು ಎಲ್ಲಾ ದಲಿತ-ಬಹುಜನರು ಮತ್ತು ರೈತರಲ್ಲಿ ಮನವಿ ಮಾಡುತ್ತೇವೆ ಎಂದಿದ್ದಾರೆ.

ಕಿಸಾನ್ ಆಂದೋಲನದಲ್ಲಿ ಸ್ಥಳೀಯ ಜನರ ಭಾಗವಹಿಸುವಿಕೆ ಮತ್ತು ಸಮರ್ಪಣೆಯನ್ನು ಗುರುತಿಸಿ, ಏಪ್ರಿಲ್ 18 ರಂದು ಸ್ಥಳೀಯ ಜನರನ್ನು ವೇದಿಕೆಗಳಲ್ಲಿ ಗೌರವಿಸಲಾಗುವುದು. ಅಂದು ವೇದಿಕೆಯ ನಿರ್ವಹಣೆಯ ಜವಾಬ್ದಾರಿಯನ್ನು ಸ್ಥಳೀಯ ಜನರಿಗೆ ನೀಡಲಾಗುವುದು ಎಂದಿದೆ.

ಗಾಜಿಪುರ್‌ ಗಡಿಯಲ್ಲಿರುವ ರೈತರ ಹುತಾತ್ಮ ಸ್ಮಾರಕ

ಏಪ್ರಿಲ್ 20 ರಂದು, ಧನ್ನಾ ಭಗತ್ ಅವರ ಜನ್ಮ ದಿನಾಚರಣೆಯಂದು, ಅವರ ಗ್ರಾಮ ದೋಹಾ ಕಲನ್‌ನಿಂದ ದೆಹಲಿಯ ಗಡಿಗೆ ಮಣ್ಣನ್ನು ತರಲಾಗುವುದು. ಅಂದು ಅವರ ನೆನಪಿಗಾಗಿ ಟಿಕ್ರಿ ಬಾರ್ಡರ್ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2021 ರ ಏಪ್ರಿಲ್ 24 ರಂದು ದೆಹಲಿ ಗಡಿಯಲ್ಲಿ ಈ ಚಳವಳಿಯ 150 ದಿನಗಳು ಪೂರ್ಣಗೊಳ್ಳುವ ಕಾರಣ, ವಾರ ಪೂರ್ತಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು, ಇದರಲ್ಲಿ ರೈತರು ಮತ್ತು ಕಾರ್ಮಿಕರು, ನೌಕರರು, ಯುವಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಮತ್ತು ಇತರ ಸಂಸ್ಥೆಗಳು ಸೇರಲು ಕರೆ ನೀಡಲಾಗುವುದು ಎಂದು ಎಸ್‌ಕೆಎಂ ತಿಳಿಸಿದೆ.


ಇದನ್ನೂ ಓದಿ: ರೈತ ಹೋರಾಟ: ಹುತಾತ್ಮ ಸ್ಮಾರಕಕ್ಕೆ ಸೇರಿದ ದೇಶದ 23 ರಾಜ್ಯಗಳ 1,500 ಹಳ್ಳಿಗಳ ಮಣ್ಣು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here