Homeಮುಖಪುಟಬಂಗಾಳದಲ್ಲಿ ಐವರು ಟಿಎಂಸಿ ಕಾರ್ಯಕರ್ತರಿಗೆ ಗುಂಡಿಕ್ಕಿ ಹತ್ಯೆ-ಆರೋಪ

ಬಂಗಾಳದಲ್ಲಿ ಐವರು ಟಿಎಂಸಿ ಕಾರ್ಯಕರ್ತರಿಗೆ ಗುಂಡಿಕ್ಕಿ ಹತ್ಯೆ-ಆರೋಪ

- Advertisement -
- Advertisement -

ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ನಲ್ಲಿ ಐವರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಆಡಳಿತ ಪಕ್ಷ ಟಿಎಂಸಿ ಆರೋಪಿಸಿದೆ. ಬಂಗಾಳದಲ್ಲಿ ಇಂದು (ಶನಿವಾರ) ವಿಧಾನಸಭಾ ಚುನಾವಣೆಗೆ ರಾಜ್ಯದ 44 ಸ್ಥಾನಗಳಿಗೆ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ.

ಸಿತಾಲ್ಕುಚಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ ನಂತರ ಗುಂಡಿನ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿತಾಲ್ಕುಚ್ಚಿ ಕ್ಷೇತ್ರದಲ್ಲಿಯೇ ಮತದಾನ ಮಾಡಲು ಪತಗಟ್ಟೆಯ ಬಳಿ ನಿಂತಿದ್ದ ಮತದಾರನಿಗೆ ಟಿಎಂಸಿ ಕಾರ್ಯಕರ್ತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಮೃತ ಆನಂದ್ ಬರ್ಮನ್ ಕುಟುಂಬದವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಆಪರೇಷನ್ ಕಮಲ ಭೀತಿ: ಕಾಂಗ್ರೆಸ್ ಮೈತ್ರಿಕೂಟದ 20 ಅಭ್ಯರ್ಥಿಗಳು ಜೈಪುರ ರೆಸಾರ್ಟ್‌ಗೆ!

ಘಟನೆಗಳ ಕುರಿತು ಚುನಾವಣಾ ಆಯೋಗ ವರದಿ ಕೋರಿದೆ.

ನಾಲ್ಕನೇ ಹಂತದಲ್ಲಿ ಸುಮಾರು 16,000 ಮತಗಟ್ಟೆಗಳ ರಕ್ಷಣೆಗೆ ಚುನಾವಣಾ ಆಯೋಗವು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಯಿಂದ ಸುಮಾರು 80,000 ಸಿಬ್ಬಂದಿಯನ್ನು ನೇಮಿಸಿದೆ. ಪ್ರತಿ ತುಕಡಿಯಲ್ಲಿ 100 ಸಿಬ್ಬಂದಿ ಇರುವ ಸಿಎಪಿಎಫ್‌ನ 187 ತುಕಡಿಗಳನ್ನು ಕೂಚ್ ಬೆಹಾರ್‌ನಲ್ಲಿ ನಿಯೋಜಿಸಿದೆ. ಆದರೂ ಕೂಡ ಬಿಜೆಪಿ ಮತ್ತು ಟಿಎಂಸಿ ಬೆಂಬಲಿಗರ ನಡುವೆ ಘರ್ಷಣೆ ಕಡಿಮೆಯಾಗುತ್ತಿಲ್ಲ.

ಚುನಾವಣೆ ಆರಂಭವಾದಾಗಿನಿಂದಲೂ ಬೂತ್‌ಗಳ ಬಳಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಟಿಎಂಸಿ ಮತ್ತು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿವೆ. ಅತಿ ಹೆಚ್ಚು ದೂರುಗಳನ್ನು ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತ ಪಕ್ಷ ನೀಡಿದೆ. ಆದರೆ ಯಾವ ದೂರನ್ನು ಚುನಾವಣಾ ಆಯೋಗ ಪರಿಗಣಿಸಿಲ್ಲ. ಆದರೆ, ಮಮತಾ ಬ್ಯಾನರ್ಜಿಯವರಿಗೆ ನೋಟಿಸ್ ನೀಡಲಾಗಿದೆ.

ಕಳೆದ ತಿಂಗಳು 27 ರಂದು ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ಆರಂಭವಾಗಿದೆ. ಸುಧೀರ್ಘ ಎಂಟು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಮೇ 2 ರಂದು ಫಲಿತಾಂಶ ಹೊರ ಬೀಳಲಿದೆ.


ಇದನ್ನೂ ಓದಿ: ಬೀದಿಬದಿ ವಾಸಿಸುವ ಬಾಲಕಿಯರಿಗೆ ಸಿಎಎ, ಎನ್‌ಆರ್‌ಸಿ ಪಾಠ ಮಾಡಿದ್ದಕ್ಕೆ ದೇಶದ್ರೋಹ ಪ್ರಕರಣ ದಾಖಲು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...