ಅಸ್ಸಾಂ ವಿಧಾನಸಭಾ ಚುನಾವಣೆ ಎಪ್ರಿಲ್ 6 ರಂದು ಮುಗಿದಿದ್ದು, ಬಿಜೆಪಿಯಿಂದ ‘ಆಪರೇಷನ್ ಕಮಲ’ ನಡೆಯುತ್ತದೆ ಎಂಬ ಭೀತಿಗೆ ಚುಣಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಸುಮಾರು 20 ಅಭ್ಯರ್ಥಿಗಳನ್ನು ಶುಕ್ರವಾರ ಜೈಪುರಕ್ಕೆ ಕರೆತಲಾಗಿದೆ.
ಮೂಲಗಳ ಪ್ರಕಾರ, ಹೆಚ್ಚಿನ ಅಭ್ಯರ್ಥಿಗಳು ಕಾಂಗ್ರೆಸ್ ಮಿತ್ರಪಕ್ಷವಾದ ಆಲ್-ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಗೆ ಸೇರಿದವರಾಗಿದ್ದಾರೆ.
ಅವರನ್ನು ಜೈಪುರದ ಹೊರವಲಯದಲ್ಲಿರುವ ಹೋಟೆಲ್ ಫೇರ್‌ಮಾಂಟ್‌ಗೆ ಕರೆದೊಯ್ಯಲಾಗಿದೆ. ಕಳೆದ ವರ್ಷ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಪಕ್ಷದ ಮುಖಂಡ ಸಚಿನ್ ಪೈಲಟ್ ದಂಗೆಯೆದ್ದಾಗ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಕೂಡಾ ರಾಜಸ್ಥಾನದ ಕಾಂಗ್ರೆಸ್ ಶಾಸಕರನ್ನು ಇದೇ ಹೋಟೆಲ್‌ನಲ್ಲಿ ಇರಿಸಲಾಗಿತ್ತು.
ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೆ ನೋಟಿಸ್ ನೀಡಿದ ಚುನಾವಣಾ ಆಯೋಗ!
“ಅಸ್ಸಾಂನಿಂದ ಇಂದು ಸುಮಾರು 20 ಅಭ್ಯರ್ಥಿಗಳನ್ನು ಜೈಪುರಕ್ಕೆ ಸ್ಥಳಾಂತರಿಸಲಾಗಿದೆ” ಎಂದು ರಾಜಸ್ಥಾನ ಕಾಂಗ್ರೆಸ್ ಮುಖಂಡ ಮಹೇಶ್ ಜೋಶಿ ಹೇಳಿದ್ದಾರೆ.
“ಬಹುಮತ ಹೊಂದಿದ್ದರೂ ಬಿಜೆಪಿಯ ಕುದುರೆ ವ್ಯಾಪಾರದಿಂದಾಗಿ ಪಕ್ಷವು ಸರ್ಕಾರ ರಚಿಸಲು ಸಾಧ್ಯವಾಗದಂತೆ ನಡೆದ ಹಲವಾರು ಘಟನೆಗಳ ದೃಷ್ಟಿಯಲ್ಲಿಟ್ಟುಕೊಂಡು, ಮುನ್ನೆಚ್ಚರಿಕೆ ಕ್ರಮವಾಗಿ ಅಭ್ಯರ್ಥಿಗಳನ್ನು ಇಲ್ಲಿಗೆ ಕರೆತರಲಾಯಿತು” ಎಂದು ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡರು ಹೇಳಿದ್ದಾರೆ.
ಬಿಜೆಪಿ ಅವರ ಯಾವುದೆ ಪ್ರಭಾವ ಬೀರದೆ ಇರಲು ಬೇಕಾಗಿ ಅಭ್ಯರ್ಥಿಗಳನ್ನು ಜೈಪುರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮೂರು ಹಂತದ ಅಸ್ಸಾಂ ವಿಧಾನಸಭಾ ಚುನಾವಣೆ ಏಪ್ರಿಲ್ 6 ರಂದು ಮುಕ್ತಾಯಗೊಂಡಿದ್ದು, ಫಲಿತಾಂಶ ಮೇ 2 ರಂದು ಹೊರಬರಲಿದೆ.
ಇದನ್ನೂ ಓದಿ: ರಸಗೊಬ್ಬರ ಬೆಲೆ ಏರಿಕೆ ಪ್ರಶ್ನಿಸದ ರಾಜ್ಯ ಸರ್ಕಾರ, ಬಿಜೆಪಿ ಸಂಸದರು ಹೇಡಿಗಳು- ಸಿದ್ದರಾಮಯ್ಯ