Homeಕರ್ನಾಟಕಬಿಜೆಪಿಗೂ, ಪ್ರಧಾನಿ ಮೋದಿಗೂ ಒಂದಷ್ಟು ಮಾನಸಿಕ ಚಿಕಿತ್ಸೆಯ ಅಗತ್ಯವಿದೆ: ಕಾಂಗ್ರೆಸ್ ತೀವ್ರ ವಾಗ್ದಾಳಿ

ಬಿಜೆಪಿಗೂ, ಪ್ರಧಾನಿ ಮೋದಿಗೂ ಒಂದಷ್ಟು ಮಾನಸಿಕ ಚಿಕಿತ್ಸೆಯ ಅಗತ್ಯವಿದೆ: ಕಾಂಗ್ರೆಸ್ ತೀವ್ರ ವಾಗ್ದಾಳಿ

- Advertisement -
- Advertisement -

ಫೇಕ್ ಫ್ಯಾಕ್ಟರಿ ಎಂದೇ ಕುಖ್ಯಾತಿ ಗಳಿಸಿರುವ ಬಿಜೆಪಿಗೂ, ಪ್ರಧಾನಿ ಮೋದಿಗೂ ಒಂದಷ್ಟು ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ರಾಜ್ಯ ಕಾಂಗ್ರೆಸ್ ಶನಿವಾರದಂದು ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದೆ.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಪರಸ್ಪರ ವಾಗ್ದಾಳಿ ನಡೆಸುತ್ತಿವೆ. ಇಂದು ಬೆಳಿಗ್ಗೆ ಕಾಂಗ್ರೆಸ್ ಪಕ್ಷವು, “ನರೇಂದ್ರ ಮೋದಿಯವರೇ, ಗೊಬ್ಬರವಿಲ್ಲದೆ ಗಡ್ಡ ಬೆಳೆಸಬಹುದೇ ಹೊರತು ಬೆಳೆ ಬೆಳೆಸಲಾಗುವುದಿಲ್ಲ!! ಗೊಬ್ಬರದ ಬೆಲೆ ಇಳಿಸಿ, ರೈತರನ್ನು ಉಳಿಸಿ” ಎಂದು ಗೊಬ್ಬರ ಬೆಲೆ ಹೆಚ್ಚಳದ ಬಗ್ಗೆ ವ್ಯಂಗ್ಯವಾಗಿ ಪ್ರಧಾನಿಗೆ ತಿಳಿಸಿತ್ತು.

ಇದನ್ನೂ ಓದಿ: ದಿಲ್ಲಿಯಲ್ಲೊಬ್ಬ ಪಾಳೆಯಗಾರ, ಕರ್ನಾಟಕದಲ್ಲೊಬ್ಬ ಮಾಂಡಲಿಕ; ಭಲೇ ಜೋಡಿ: ಸಿದ್ದರಾಮಯ್ಯ

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯು, “ಕಾಂಗ್ರೆಸ್ ಆಡಳಿತದಲ್ಲಿ A ಯಿಂದ Z ವರೆಗೂ ಭ್ರಷ್ಟಾಚಾರ ಹಗರಣ ನಡೆದಿದ್ದವು. ಮೋದಿ ಆಡಳಿತದಲ್ಲಿ ಗಡ್ಡ, ಬಿಸ್ಕೆಟ್, ಪೇಟ ಮೊದಲಾದವುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆಲೂಗಡ್ಡೆಯಿಂದ ಚಿಪ್ಸ್ ಮಾಡಬಹುದೇ ಹೊರತು ಚಿನ್ನದ ಬಿಸ್ಕೆಟ್ ತಯಾರಿಸಲಾಗುವುದಿಲ್ಲ ಎನ್ನುವುದನ್ನು ಯುವರಾಜನಿಗೆ ಅರ್ಥೈಸಿ. ಕಾಂಗ್ರೆಸ್‌ ಪಕ್ಷದ ಹತಾಶೆ ನಮಗೆ ಅರ್ಥವಾಗುತ್ತಿದೆ” ಎಂದು ಹೇಳಿತ್ತು.

ಇದನ್ನೂ ಓದಿ: ಬೀದಿಬದಿ ವಾಸಿಸುವ ಬಾಲಕಿಯರಿಗೆ ಸಿಎಎ, ಎನ್‌ಆರ್‌ಸಿ ಪಾಠ ಮಾಡಿದ್ದಕ್ಕೆ ದೇಶದ್ರೋಹ ಪ್ರಕರಣ ದಾಖಲು!

ಇದೀಗ ಟ್ವಿಟರ್‌ನಲ್ಲಿ ಬಿಜೆಪಿಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, “ಬಿಜೆಪಿಯವರೇ
ಹತಾಶೆಗೊಂಡಿದ್ದು ಈ ದೇಶದ ಮತ್ತು ರಾಜ್ಯದ ಜನತೆಯಾಗಿದ್ದಾರೆ. ಫೇಕ್ ಫ್ಯಾಕ್ಟರಿ ಎಂದೇ ಕುಖ್ಯಾತಿ ಗಳಿಸಿದ ನಿಮಗೂ ನಿಮ್ಮ ಮೋದಿಗೂ ಒಂದಷ್ಟು ಮಾನಸಿಕ ಚಿಕಿತ್ಸೆಯ ಅಗತ್ಯವಿದೆ, ಮೊಡದಿಂದ ರಾಡರ್ ಕಣ್ತಪ್ಪಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ರಫೆಲ್ ಖರೀದಿ ಹಗರಣವನ್ನೂ ಮುಚ್ಚಿಡಲಾಗುವುದಿಲ್ಲ ಎನ್ನುವುದು ಅರ್ಥವಾಗಬೇಕಿದೆ” ಎಂದು ತಿರುಗೇಟು ನೀಡಿದೆ.

ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆಯೊಂದರಲ್ಲಿ, “ಒಂದು ಯಂತ್ರದಲ್ಲಿ ಒಂದು ಕಡೆಯಿಂದ ಆಲೂಗಡ್ಡೆ ಹಾಕಿದರೆ ಇನ್ನೊಂದು ಕಡೆಯಿಂದ ಚಿನ್ನ ಬರುತ್ತದೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ” ಎಂದು ಪ್ರಧಾನಿಯನ್ನು ಉಲ್ಲೇಖಿಸಿ ಹೇಳಿದ್ದರು.

ಆದರೆ ಬಿಜೆಪಿ ಮತ್ತು ಅವರ ಬೆಂಬಲಿಗರು ಅದರಲ್ಲಿ ಪ್ರಧಾನಿಯ ಉಲ್ಲೇಖವನ್ನು ಕತ್ತರಿಸಿ, “ಒಂದು ಯಂತ್ರದಲ್ಲಿ ಒಂದು ಕಡೆಯಿಂದ ಆಲೂಗಡ್ಡೆ ಹಾಕಿದರೆ ಇನ್ನೊಂದು ಕಡೆಯಿಂದ ಚಿನ್ನ ಬರುತ್ತದೆ” ಎಂದು ರಾಹುಲ್ ಗಾಂಧಿ ಹೇಳುತ್ತಿರುವಂತೆ ವಿಡಿಯೋ ತಯಾರಿಸಿ ವೈರಲ್ ಮಾಡಿದ್ದರು. ಈ ಬಗ್ಗೆ ಹಲವಾರು ಫ್ಯಾಕ್ಟ್‌ಚೆಕ್‌ಗಳು ನಡೆದರೂ ಬಿಜೆಪಿಯು ಅದೇ ಸುಳ್ಳನ್ನು ಇನ್ನೂ ಹೇಳಿಕೊಳ್ಳುತ್ತಿದೆ.

ಇದನ್ನೂ ಓದಿ: ಲಾಕ್‌ಡೌ‌ನ್‌ನಲ್ಲಿ ಹೆಚ್ಚಾದ ಬಾಲ್ಯವಿವಾಹ: ವರದಿ ಮುಚ್ಚಿಡಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....