Homeಕರ್ನಾಟಕಮುಖ್ಯಮಂತ್ರಿ ಉದ್ದಟತನ ಬಿಟ್ಟು ಸಾರಿಗೆ ನೌಕರರ ಮನವೊಲಿಸಲಿ: ಕುಮಾರಸ್ವಾಮಿ ವಾಗ್ದಾಳಿ

ಮುಖ್ಯಮಂತ್ರಿ ಉದ್ದಟತನ ಬಿಟ್ಟು ಸಾರಿಗೆ ನೌಕರರ ಮನವೊಲಿಸಲಿ: ಕುಮಾರಸ್ವಾಮಿ ವಾಗ್ದಾಳಿ

ಇದೇ ರೀತಿ ನಿಮ್ಮ ಉದ್ಧಟತನ ಮುಂದುವರೆದರೆ ಇಡೀ ದೇಶದಲ್ಲಿ ಬಿಜೆಪಿ ಮುಕ್ತ ಆಗುವ ದಿನಗಳು ದೂರ ಇಲ್ಲಾ ಎಂದು ಅವರು ಹೇಳಿದ್ದಾರೆ

- Advertisement -
- Advertisement -

ಮುಖ್ಯಮಂತ್ರಿ ತಮ್ಮ ಉದ್ಧಟತನ ಬಿಟ್ಟು ಸಾರಿಗೆ ನೌಕರರ ಮನವೊಲಿಸಬೇಕು. ಯಾರು ಮೇಲಿಂದ ಇಳಿದು ಬಂದಿಲ್ಲಾ. ಇದು ಯಾರಿಗೂ ಶಾಶ್ವತವಲ್ಲಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬೀದರ್‌ನಲ್ಲಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ಬಸವ ಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಯಡಿಯೂರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ತಮ್ಮ ಉದ್ಧಟತನ ಬಿಟ್ಟು ಸಾರಿಗೆ ನೌಕರರ ಮನವೊಲಿಸಬೇಕು. ಸಿಎಂ ಆಗಲಿ, ಸಚಿವರಾಗಲಿ ಯಾರು ಮೇಲಿಂದ ಇಳಿದು ಬಂದಿಲ್ಲಾ. ಯಾರಿಗೂ ಇದು ಶಾಶ್ವತವಲ್ಲಾ. ಇವರ ಉದ್ಧಟತನದ ನಡುವಳಿಕೆಳಿಗೆ ಮುಂದೆ ದೊಡ್ಡ ಪ್ರಾಯಶ್ಚಿತ್ತವನ್ನು ಅನುಭವಿಸುತ್ತಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೀದಿಬದಿ ವಾಸಿಸುವ ಬಾಲಕಿಯರಿಗೆ ಸಿಎಎ, ಎನ್‌ಆರ್‌ಸಿ ಪಾಠ ಮಾಡಿದ್ದಕ್ಕೆ ದೇಶದ್ರೋಹ ಪ್ರಕರಣ ದಾಖಲು!

“ಇಂಥದಕ್ಕೆಲ್ಲಾ ಅವಕಾಶ ಕೊಡಬಾರದು. ಸಾರಿಗೆ ನೌಕರರು ಕೂಡಾ ಕಷ್ಟದಲ್ಲಿ ಇರುವಂತಹ ಶ್ರಮಜೀವಿಗಳೇ. ಸರ್ಕಾರದ ಪರಿಸ್ಥಿತಿಗಳನ್ನು ಅವರಿಗೆ ಅರ್ಥ ಮಾಡಿಸಿ, ಸಾರಿಗೆ ನೌಕರರ ಮನವೊಲಿಸಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ತಪ್ಪಿಸಬೇಕಿರುವುದು ಸರ್ಕಾರ ಜವಾಬ್ದಾರಿಯಾಗಿದೆ” ಎಂದು ಹೇಳಿದ್ದಾರೆ.

“ಸರ್ಕಾರ ಇರೋದು ಯಾಕೆ..? ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಡುತ್ತಿದೆ, ಜನರು ರಸ್ತೆಯಲ್ಲಿ ನೋವನ್ನು ಅನುಭವಿಸುತ್ತಿದ್ದಾರೆ. ಈಗಲೂ ಇವರು ಮಾತುಕತೆಗೆ ಕರೆಯದೆ ಉದ್ದಟತನ ತೋರಿಸುತ್ತಾರೆಂದರೆ, ಇವರು ಮತ್ತೆ ಯಾಕೆ ವಿಧಾನಸೌಧದಲ್ಲಿ ಇದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದಿಲ್ಲಿಯಲ್ಲೊಬ್ಬ ಪಾಳೆಯಗಾರ, ಕರ್ನಾಟಕದಲ್ಲೊಬ್ಬ ಮಾಂಡಲಿಕ; ಭಲೇ ಜೋಡಿ: ಸಿದ್ದರಾಮಯ್ಯ

“ಜನರ ತೆರಿಗೆ ಹಣವನ್ನು ಲೂಟಿ ಹೊಡೆದುಕೊಂಡು, ಅದನ್ನು ಯಾವ ರೀತಿ ಬಳಕೆ ಮಾಡಿದ್ದಾರೆ ಎಂಬುವುದು ಗೊತ್ತಿರುವ ವಿಚಾರವೆ ಆಗಿದೆ. ಖಜಾನೆ ಖಾಲಿಯಾದೆ ಎನ್ನುತ್ತಿದ್ದಾರೆ ಆದರೆ ಖಜಾನೆ ಖಾಲಿ ಆಗಿಲ್ಲ, ಬಿಜೆಪಿ ಸರ್ಕಾರ ಖಾಲಿ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಇದೇ ರೀತಿ ನಿಮ್ಮ ಉದ್ಧಟತನ ಮುಂದುವರೆದರೆ ಇಡೀ ದೇಶದಲ್ಲಿ ಬಿಜೆಪಿ ಮುಕ್ತ ಆಗುವ ದಿನಗಳು ದೂರ ಇಲ್ಲಾ. ಈ ಉದ್ಧಟತನ ಬಿಟ್ಟು ಮೊದಲು ಸಾರಿಗೆ ನೌಕರ ಸಮಸ್ಯೆಗೆ ಮುಖ್ಯಮಂತ್ರಿ ಮತ್ತು ಸಚಿವರುಗಳು ಬಗೆಹರಿಸುವ ಕಡೆ ಗನ ಹರಿಸಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿ: ವಿಡಿಯೋ ನೋಡಿ: ನೈಟ್ ಕರ್ಫ್ಯೂ ಬಗ್ಗೆ ಮುಖ್ಯಮಂತ್ರಿ ಹೇಳಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಕೊಲೆಗೆ ರಾಜಕೀಯ ಬಣ್ಣ ಬಳಿದ ಅಣ್ಣಾಮಲೈ: ಪ್ರಕರಣ ದಾಖಲು

0
ಮಹಿಳೆಯೋರ್ವರ ಸಾವಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪಕ್ಕಿರಿಮಣಿಯಂ...