76ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ 954 ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಪದಕಗಳನ್ನು ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ಪ್ರಕಟಿಸಿದೆ.
ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ(ಪಿಪಿಎಂಜಿ) ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಹಾಯಕ ಕಮಾಂಡೆಂಟ್ ಲೌಕ್ರಕ್‌ಪಾಮ್ ಇಬೊಮ್ಚಾ ಸಿಂಗ್ ಅವರು ಆಯ್ಕೆಯಾಗಿದ್ದಾರೆ ಎಂದು ಗೃಹ ಇಲಾಖೆ ತಿಳಿಸಿದೆ.
ಶೌರ್ಯ ಪ್ರಶಸ್ತಿಯನ್ನು(ಪಿಎಂಜಿ) 229 ಪೊಲೀಸ್ ಸಿಬ್ಬಂದಿಗೆ ನೀಡಲಾಗುತ್ತದೆ.ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು(ಪಿಪಿಎಂ) 82 ಪೊಲೀಸ್ ಸಿಬ್ಬಂದಿಗೆ ಮತ್ತು ಶ್ಲಾಘನೀಯ ಸೇವೆಗಾಗಿ ಪೊಲೀಸ್ ಮೆಡಲ್‌ನ್ನು(ಪಿಎಂ) 642 ಜನ ಸಿಬ್ಬಂದಿಗೆ ನೀಡುವುದಾಗಿ ಗೃಹ ಇಲಾಖೆ ಘೋಷಿಸಿದೆ.
230 ಶೌರ್ಯ ಪ್ರಶಸ್ತಿಗಳಲ್ಲಿ ನಕ್ಸಲ್ ಕೇಂದ್ರೀಕೃತ ಪ್ರದೇಶದ 125 ಪೊಲೀಸ್ ಸಿಬ್ಬಂದಿಗೆ, ಜಮ್ಮು ಮತ್ತು ಕಾಶ್ಮೀರ ಪ್ರದೇಶದ 71 ಸಿಬ್ಬಂದಿಗೆ ಮತ್ತು ಈಶಾನ್ಯ ಪ್ರದೇಶದ 11 ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿ ನೀಡಲಾಗುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಶೌರ್ಯ ಪ್ರಶಸ್ತಿಗಳನ್ನು ಪಡೆದ ಸಿಬ್ಬಂದಿಗಳಲ್ಲಿ 28 ಸಿಆರ್‌ಪಿಎಫ್, 33 ಮಹಾರಾಷ್ಟ್ರ, 55 ಜಮ್ಮು ಮತ್ತು ಕಾಶ್ಮೀರ ಪೊಲೀಸ್, 24 ಛತ್ತೀಸ್‌ಗಢ, 22 ತೆಲಂಗಾಣ ಮತ್ತು 18 ಆಂಧ್ರಪ್ರದೇಶದಿಂದ ಉಳಿದವರು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಸಿಬ್ಬಂದಿಗಳು, ಕೇಂದ್ರ ಶಸಸ್ತ್ರ ಪಡೆಯ ಸಿಬ್ಬಂದಿಗಳು ಸೇರಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.
ಇದನ್ನು ಓದಿ: ದಲಿತರಿಗೆ ಅವಮಾನ: ಬಂಧನ ಭೀತಿಯಿಂದ ತಲೆಮರಿಸಿಕೊಂಡಿದ್ದಾರಾ ನಟ ಉಪೇಂದ್ರ?


