Homeಮುಖಪುಟಜನಪ್ರಿಯ ಸಿನಿಮಾಗಳ ಗುಣಮಟ್ಟದ ಜೊತೆಗೇ ಪಾತಾಳಕ್ಕೆ ಕುಸಿದ ಸಿನಿಮಾ ಬರೆಹಗಳು

ಜನಪ್ರಿಯ ಸಿನಿಮಾಗಳ ಗುಣಮಟ್ಟದ ಜೊತೆಗೇ ಪಾತಾಳಕ್ಕೆ ಕುಸಿದ ಸಿನಿಮಾ ಬರೆಹಗಳು

- Advertisement -
- Advertisement -

ಅತಿ ಜನಪ್ರಿಯ ವ್ಯಕ್ತಿಗಳ ಬಗೆಗಾಗಲೀ, ಅತಿ ಜನಪ್ರಿಯ ಸಿನಿಮಾಗಳ ಬಗೆಗಾಗಲೀ ಮಾಡುವ ವಿಮರ್ಶೆ ’ಅಪ್ರಿಯ’ವಾಗಿ ಕಾಣುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆ ಅಪ್ರಿಯತೆ ಅಸಹನೆಗೆ ದಾರಿಮಾಡಿಕೊಡುವ ಕಾಲವೂ ಇದು. ನಾಯಕನೊಬ್ಬನನ್ನು ಪ್ರಶ್ನಾತೀತ ಎಂದು ಒಪ್ಪಿಕೊಂಡ ಸಮಾಜದ ಒಂದು ವರ್ಗ, ಆತನ ಬಗ್ಗೆ ಎತ್ತುವ ಪ್ರತಿ ಪ್ರಶ್ನೆಯನ್ನೂ ಡಿಸ್ಮಿಸ್ ಮಾಡಲು, ಪ್ರಶ್ನೆ ಎತ್ತುವವರ ಜಾಯಮಾನವನ್ನು ಜಾಲಾಡಲು ಕಾದಿರತ್ತೆ. ಇದು ಸಿನಿಮಾಗಳಿಗೆ ವಿಸ್ತರಿಸುತ್ತಿರುವುದು ದುಃಖಕರ ಸಂಗತಿ. ವಿಮರ್ಶೆಯನ್ನು ತಿರಸ್ಕರಿಸುವ, ತಿರಸ್ಕರಿಸುವುದಕ್ಕೂ ಒಂದು ಕೈ ಮುಂದೆ ಹೋಗಿ, ವಿಮರ್ಶಿಸಿ ಪ್ರಶ್ನೆಗಳನು ಎತ್ತಿದವರ ಚಾರಿತ್ರ್ಯಹರಣಕ್ಕೆ ಮುಂದಾಗುವ ವಿದ್ಯಮಾನದ ಹಿಂದೆ ಕೆಲಸ ಮಾಡುವ  ’ಪ್ರೈಡ್’ ಮನಸ್ಥಿತಿ ಎರಡೂ ಬಗೆಯ ಸಂಗತಿಗಳಲ್ಲಿ ಒಂದೇ ತೆರನಾದದ್ದು.

ಮೊದಲಿಗೆ, ಇತ್ತೀಚೆಗೆ ಒಟಿಟಿ ವೇದಿಕೆಯಲ್ಲಿ ನೋಡಿದ ಆರು ಕಂತುಗಳ ಧಾರಾವಾಹಿ ’ಅನಾಟಮಿ ಆಫ್ ಎ ಸ್ಕ್ಯಾಂಡಲ್’ ಬಗ್ಗೆ ಕೆಲವು ಮಾತುಗಳು; ಜೇಮ್ಸ್ ವೈಟ್‌ಹೌಸ್ ಎಂಬ ಬ್ರಿಟಿಷ್ ಸಂಸದ-ಮಂತ್ರಿಯ ವಿರುದ್ಧ ಅತ್ಯಾಚಾರದ ಆರೋಪ ಬಂದಾಗ ನಡೆಯುವ ಕೋರ್ಟ್ ವಿಚಾರಣೆ ಮತ್ತು ಆತನ ವೈವಾಹಿಕ ಜೀವನದಲ್ಲಾಗುವ ಏರುಪೇರಿನ ಕಥಾಹಂದರ ಹೊಂದಿರುವ ಮಿನಿ ಸೀರೀಸ್ ಇದು. ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತೆ ಆಲಿವಿಯಾ ಲಿಟ್ಟನ್ ವೈಟ್‌ಹೌಸ್‌ನ ಕೈಕೆಳಗೆ ಕೆಲಸ ಮಾಡುವ ಯುವತಿ. ಕಥೆ ಎಲ್ಲಿ ಸಂಕೀರ್ಣಗೊಳ್ಳುತ್ತದೆ ಎಂದರೆ, ಈ ಇಬ್ಬರೂ ಕೆಲಕಾಲ ಪರಸ್ಪರ ಸಮ್ಮತಿಯಿಂದ ಅಫೇರ್ ಇಟ್ಟುಕೊಂಡಿದ್ದವರು. ನಂತರ ಒಂದು ದಿನ ಅದು ಕೊನೆಯಾಗಿರುತ್ತದೆ. ಅದಾದನಂತರ ಲಿಟ್ಟನ್ ಸಮ್ಮತಿಸದೆ ಇದ್ದರೂ ವೈಟ್‌ಹೌಸ್ ಬಲವಂತಿಸಿ ಅತ್ಯಾಚಾರ ಮಾಡಿರುತ್ತಾನೆ. ಪ್ರಿವಿಲೆಜ್ ಮತ್ತು ಅಧಿಕಾರ ಮಹಿಳೆಯರ ವಿರುದ್ಧ ಎಷ್ಟು ಬಲಶಾಲಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಈ ಧಾರಾವಾಹಿ, ಜನಪ್ರಿಯ ದೃಷ್ಟಿಕೋನದಿಂದ, ಇಬ್ಬರ ನಡುವಿನ ಸೆಕ್ಸ್‌ಗೆ ಪೂರ್ವಷರತ್ತಾದ ಸಮ್ಮತಿ-ಅಸಮ್ಮತಿಯ ತೆಳುಗೆರೆಯನ್ನು ಪುರುಷಾಹಂಕಾರ ಬ್ಲರ್ ಮಾಡುವ, ಕಡೆಗಣಿಸುವ, ನಂತರ ತಪ್ಪನ್ನು ಒಪ್ಪಿಕೊಳ್ಳದಿರುವ ಬಗ್ಗೆ ಬೋಲ್ಡ್ ಆದ ಸ್ಟೇಟ್ಮೆಂಟ್ ಮಾಡತ್ತೆ. ಪ್ರಿವಿಲೆಜ್ ಮತ್ತು ಅಧಿಕಾರದ ಮದದಲ್ಲಿ ಮೈಮರೆತು ತಮ್ಮ ಗೆಳತಿಯರು, ಸಹೋದ್ಯೋಗಿ ಮತ್ತು ಕೈಕೆಳಗೆ ಕೆಲಸ ಮಾಡುವ ಮಹಿಳೆಯರನ್ನು ಲಘುವಾಗಿ ಪರಿಗಣಿಸದೆ, ಪರಸ್ಪರ ಘನತೆಯನ್ನು ಮತ್ತು ದೇಹವನ್ನು ಗೌರವಿಸುವ ಬಗ್ಗೆ ಚಿಂತಿಸುವಂತೆ ಮಾಡುತ್ತದೆ.

ಈ ಸೀರೀಸ್ ನೆಟ್‌ಫ್ಲಿಕ್ಸ್ ವೇದಿಕೆಯಲ್ಲಿ ಏಪ್ರಿಲ್ ಮಧ್ಯಭಾಗದಲ್ಲಿ ಬಿಡುಗಡೆಯಾದಾಗಲಿಂದಲೂ ಅತಿ ಹೆಚ್ಚು ವೀಕ್ಷಕರನ್ನು ಸೆಳೆದು ನಂಬರ್ 1 ಸ್ಥಾನದಲ್ಲಿದೆ. ತಾಂತ್ರಿಕವಾಗಿ ಉತ್ತಮವಾಗಿರುವ ಮತ್ತು ಜನಪ್ರಿಯವಾಗಿ ಸಮಾಜಕ್ಕೆ ಉಪಯುಕ್ತವಾಗಿರುವಂತಹ ಕಥೆಯನ್ನೇ ಹೇಳಿರುವ ಈ ಧಾರಾವಾಹಿ, ಹಲವು ಮಾರ್ಕೆಟಿಂಗ್ ತಂತ್ರಗಾರಿಕೆಯಿಂದ ಜಾಗತಿಕವಾಗಿ ಅಪಾರ ಮನ್ನಣೆ ಪಡೆದಿದೆ ಎಂಬ ಕಾರಣಕ್ಕೆ ಇದರ ಬಗ್ಗೆ ಅಪಸ್ವರ ಎತ್ತಬಾರದು ಅನ್ನಲಾದೀತೇ? ಈ ಧಾರಾವಾಹಿಯ ಕುಂದುಕೊರತೆಗಳ ಬಗ್ಗೆ ಜೆನಿಯನ್ ಆದ ವಿಮರ್ಶೆ ಮಾಡುವವರನ್ನು ಲೇವಡಿ ಮಾಡಿ ಅವರ ಮಾತುಗಳನ್ನು ಕಟ್ ಮಾಡಬೇಕೇ?

ಖಂಡಿತಾ ಇಲ್ಲ; ಈ ಧಾರಾವಾಹಿಯಲ್ಲಿ ರೇಪ್ ಕಥೆಯೊಂದನ್ನು ಹೇಳುವಾಗ, ರೇಪ್ ದೃಶ್ಯಗಳನ್ನು ಡೀಟೇಲ್ ಆಗಿ ಚಿತ್ರಿಸಿ, ಅದನ್ನು ಸ್ಲೋ ಮೋಷನ್‌ನಲ್ಲಿ ರಿಪೀಟೆಡ್ ಆಗಿ ಕಟ್ಟಿಕೊಡುವ ಸೆನ್ಸೇಷನಲಿಸಂ ಬಗ್ಗೆ ಹಲವು ವಿಮರ್ಶಕರು ಅಪಸ್ವರ ಎತ್ತಿದ್ದಾರೆ. ರೇಪ್ ಹಿನ್ನೆಲೆಯಿಂದಲೇ ಕಥೆ ಮುಂದುವರೆಯಬೇಕಿದ್ದರೂ, ಆ ದೃಶ್ಯಗಳನ್ನು ವೈಭವೀಕರಿಸುವ ಅಗತ್ಯತೆ ಇಲ್ಲ. ಅಂತಹ ದೃಶ್ಯಗಳು ವೀಕ್ಷಕರ ಮೇಲೆ, ಧಾರಾವಾಹಿ ಒಟ್ಟಾರೆಯಾಗಿ ವ್ಯಕ್ತಪಡಿಸುತ್ತಿರುವ ಆಶಯಕ್ಕೆ ವ್ಯತಿರಿಕ್ತವಾದದ ಭಾವನೆಗಳನ್ನು ಮೂಡಿಸುತ್ತಿರುತ್ತವೆ ಎಂಬ ಚರ್ಚೆಗಳಾಗಿದೆ. ಈ ಧಾರಾವಾಹಿಗೆ ಪ್ರತಿಯಾಗಿ, ಅದೇ ವೇದಿಕೆಯಲ್ಲಿ ಸಿಕ್ಕುವ ’ಅನ್‌ಬಿಲೀವೆಬಲ್’ ಸೀರೀಸ್‌ಅನ್ನು ಗಮನಿಸಬಹುದು. ಅದು ಕೂಡ ರೇಪ್ ಸಂತ್ರಸ್ತೆಯರ ಕಥಾಹಂದರ ಹೊಂದಿರುವ ಡಿಟೆಕ್ಟಿವ್ ಕಥೆ. ಅಲ್ಲಿ ಎಲ್ಲಿಯೂ ರೇಪ್ ದೃಶ್ಯಗಳನ್ನು ವೈಭವೀಕರಿಸಲಾಗಿಲ್ಲ. ಬದಲಾಗಿ, ರೇಪ್ ಸಂತ್ರಸ್ತೆಯನ್ನು ಪುರುಷ ತನಿಖಾಧಿಕಾರಿಗಳು ನಡೆಸಿಕೊಳ್ಳುವ ದುರುಳತನಕ್ಕೆ ಎದುರಾಗಿ ಮಹಿಳಾ ತನಿಖಾಧಿಕಾರಿಗಳು ನಡೆಸಿಕೊಳ್ಳುವ ರೀತಿಯಲ್ಲಿನ ವ್ಯತ್ಯಾಸವನ್ನು ಅತ್ಯುತ್ತಮವಾಗಿ ಕಟ್ಟಿಕೊಡಲಾಗಿದೆ. ಅಲ್ಲದೆ, ’ಅನಾಟಮಿ ಆಫ್ ಎ ಸ್ಕ್ಯಾಂಡಲ್’ನಲ್ಲಿ ಕಥೆ ಬಹುತೇಕ ತೆರೆದುಕೊಳ್ಳುವುದು ಅತ್ಯಾಚಾರ ಮಾಡಿದ ವೈಟ್‌ಹೌಸ್ ಮತ್ತು ಆತನ ಹೆಂಡತಿ ಸೋಫಿಯ ದೃಷ್ಟಿಕೋನದಲ್ಲಿ. ಕೋರ್ಟ್‌ನಲ್ಲಿ ಸಾಕ್ಷಿ ಹೇಳುವ ಸಂತ್ರಸ್ತೆ ನೆಪಮಾತ್ರಕ್ಕೆ ಎಂಬಂತೆ ಕಟ್ಟಿಕೊಡಲಾಗಿದೆ. ವೈಟ್‌ಹೌಸ್ ವಿರುದ್ಧ ಕ್ರೌನ್ ಅಥವಾ ಸರ್ಕಾರದ ಪರವಾಗಿ ವಾದ ಮಾಡುತ್ತಿರುವ ವುಡ್‌ಕ್ರಾಫ್ಟ್ ಕೂಡ ಆತನಿಂದ ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತೆಯೇ. ಆ ಕಥೆಯನ್ನು ಹೇಳುವಾಗಲೂ ಕೂಡ ಪಿಓವಿ (ಪಾಯಿಂಟ್ ಆಫ್ ವ್ಯೂ) ವೈಟ್‌ಹೌಸ್ ಪತ್ನಿಯದ್ದೇ ಮುಂದಾಗುತ್ತದೆ.

ಇಂತಹ ಚರ್ಚೆಗಳು ಯಾವುದೇ ಸಾಹಿತ್ಯ-ಸಿನಿಮಾ ಅಥವಾ ಕಲಾಕೃತಿಯನ್ನು ಅರ್ಥ ಮಾಡಿಕೊಳ್ಳಲು, ಅವುಗಳು ಸಮಾಜದಲ್ಲಿ, ಜನರ ಮೇಲೆ ಬೀರುವ ಪ್ರಭಾವವನ್ನು ಅರ್ಥ ಮಾಡಿಕೊಳ್ಳಲು ಟೂಲ್ಸ್ ಆಗಬಲ್ಲವು. ಇಂತಹ ವಿಮರ್ಶಾ ದೃಷ್ಟಿಕೋನ ಇನ್ನಷ್ಟು ಆರೋಗ್ಯಕರ ಕಲಾಕೃತಿಗಳಿಗೆ, ಇನ್ನಷ್ಟು ಆರೋಗ್ಯಕರ ಸಮಾಜಕ್ಕೆ ದಾರಿ ತೋರಬಹುದು. ಅಂತಹ ಸಿನಿಮಾ ಬರಹಗಳು ಕನ್ನಡದ ಮಟ್ಟಿದೆ ದುರ್ದೈವ ಅನ್ನುವಂತಾಗಿದೆಯಲ್ಲವೇ?

ಕಟ್ ಟು ಕೆಜಿಎಫ್; ಅಥವಾ ಆರ್‌ಆರ್‌ಆರ್ ಆರ್ ಬಾಹುಬಲಿ ಆರ್ ಪುಷ್ಪ. ಪ್ಯಾನ್ ಇಂಡಿಯಾ
ಸಿನಿಮಾ, ಸಾವಿರಾರು ಸ್ಕ್ರೀನ್‌ಗಳಲ್ಲಿ ಏಕಕಾಲಕ್ಕೆ ಬಿಡುಗಡೆ, ನೂರಾರು ಕೋಟಿಗಳನ್ನು ಅತಿ ಕಡಿಮೆ ಸಮಯದಲ್ಲಿ ಬಾಚಿದಂತ ಸಿನಿಮಾ- ಹೀಗೆ ತರಹೇವಾರಿ ಹಣೆಪಟ್ಟಿಗಳ ಜೊತೆಗೆ ಕಾಣಿಸಿಕೊಳ್ಳುವ ಈ ಸಿನಿಮಾಗಳ ಕಂಟೆಂಟ್ ಜನಪ್ರಿಯ ಮಾನದಂಡದ ದೃಷ್ಟಿಯಲ್ಲಿ ನೋಡಿದರೂ, ಮೇಲೆ ಚರ್ಚಿಸಿದ ಧಾರಾವಾಹಿಯ ಕಾಳಜಿ-ಕಳಕಳಿ ಅವುಗಳಲ್ಲಿ ಕಾಣುವುದಿಲ್ಲ. ಆದರೆ ಅದರ ಸುತ್ತ ಪತ್ರಿಕೆಗಳಲ್ಲಿ, ಟಿವಿ ಶೋಗಳಲ್ಲಿ ಹೆಣೆಯಲಾಗುವ ವರದಿಗಳು, ಕಥಾನಕಗಳು ಭಯಂಕರ ಮೋಡಿ ಮಾಡುವಂತಹವು. ಚಿಂತನೆ ಅಥವಾ ತಿಳಿವಳಿಕೆಗೆ ಎಡೆಮಾಡಿಕೊಡುವಂತಹವಲ್ಲ.

ಕೆಜಿಎಫ್ ಉದಾಹರಣೆಯನ್ನೇ ತೆಗೆದುಕೊಳ್ಳಿ; ಅದು 100 ಕೋಟಿಯಿಂದ 1200 ಕೋಟಿಯೋ 1500 ಕೋಟಿಯೋ ಗಳಿಸುವ ಪ್ರತಿ ಹಂತದಲ್ಲಿ ಅದರ ಸುತ್ತ ಹತ್ತಾರು ವರದಿಗಳನ್ನು ಹೆಣೆದು ಕನ್ನಡದ ಪತ್ರಿಕೆಗಳು ಓದುಗರಿಗೆ ಉಣಬಡಿಸಿದವು. ಅತಿ ಹೆಚ್ಚು ಹಣಗಳಿಸಿದ್ದು ಮಾನದಂಡವಾಯಿತೇ ಹೊರತು ಸಿನಿಮಾವನ್ನು ಕ್ರಿಟಿಕಲ್ ಆಗಿ ನೋಡುವುದರ ಬಗ್ಗೆ ವೀಕ್ಷಕರ ಜೊತೆ ಚರ್ಚಿಸುವ ಅಗತ್ಯವೇ ಮಾಧ್ಯಮಗಳಿಗೆ ಬೀಳಲಿಲ್ಲ. ಕಿರಿಕಿರಿ ಎನ್ನುವಷ್ಟು ’ಹೈಯೆಸ್ಟ್ ಗ್ರಾಸ್’ ಪದ ಹರಿದಾಡಿತು. ಹಣದ ಮೌಲ್ಯ ಕಾಲದ ಹಲವು ಘಟ್ಟಗಳಲ್ಲಿ ಬದಲಾಗುವ ಬಗ್ಗೆಯಂತೂ ಇವರ್‍ಯಾರೂ ಪ್ರಶ್ನಿಸಿಕೊಳ್ಳಲೇ ಇಲ್ಲ. ಅಂದರೆ ಇಂದು 1000 ಕೋಟಿ ಗಳಿಸಿದ ಒಂದು ಫಿಲ್ಮ್ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂದು ಹೇಳುವುದಕ್ಕೆ ಮಾನದಂಡ ಸರಿಯಾದುದಲ್ಲ ಎಂಬುದನ್ನೂ ಪ್ರಶ್ನಿಸಿಕೊಳ್ಳಲಿಲ್ಲ. ಈ ಅಪಾರ ಗಳಿಕೆಗೆ ತಂತ್ರಜ್ಞಾನ ಬೆಳೆದಿರುವ ರೀತಿ, ಬಂಡವಾಳಶಾಹಿ ಜಗತ್ತಿನ ಮಾರ್ಕೆಟಿಂಗ್ ತಂತ್ರಗಳು ಕಾರಣವಾಗಿರುವುದನ್ನು, ಈ ಹಿಂದೆ ಹೆಚ್ಚು ಕಾಲದವರೆಗೆ ಜನ ವೀಕ್ಷಿಸಿದ ಸಿನಿಮಾಗಳಿಗೆ ತುಲನೆ ಮಾಡಿ ಚರ್ಚಿಸುವ ಪರಿಪಾಠವೂ ಬೆಳೆದೇ ಇಲ್ಲ. ಇನ್ನು ಕನ್ನಡದ ಒಂದು ಸಿನಿಮಾ ಹಲವು ಇಂಡಸ್ಟ್ರಿಗಳ ಸಿನಿಮಾಗಳನ್ನು ಮಕಾಡೆ ಮಲಗಿಸಿತು ಎಂಬ ’ಕಾಂಪಿಟಿಟಿವ್ ಪ್ರೆಸ್ಟೀಜ್’ನಲ್ಲಿಯೂ ಕಥಾನಕಗಳನ್ನು ಹೊಸೆಯಲಾಯಿತು. ಇದೇ ಕಾಂಪಿಟೆಟಿವ್ ಪ್ರೆಸ್ಟೀಜ್‌ನಲ್ಲಿ ಕಟ್ಟಲಾಗುತ್ತಿರುವ ನ್ಯಾಷನಲಿಸಂ ಇಂದು ಇಡೀ ದೇಶಕ್ಕೆ ಅಪಾಯವೊಡ್ಡಿದೆ ಮತ್ತು ಈ ಎರಡೂ ಸಂಗತಿಗಳ ’ಕಾಂಪಿಟಿಟಿವ್ ಪ್ರೆಸ್ಟೀಜ್’ ಭಾವನೆ ಒಂದೇ ಎಂಬುದನ್ನು ಇಲ್ಲಿ ಮರೆಯಬಾರದು.

ಒಬ್ಬ ನಾಯಕನಟನ ಹೀರೋಯಿಸಂಅನ್ನು ವೈಭವೀಕರಿಸಿ ಸಿನಿಮಾದಲ್ಲಿ ಕಟ್ಟಿಕೊಡುವಾಗ ಅದು ಯಾವ ಉದ್ದೇಶಕ್ಕಾಗಿ ಎಂಬುದು ಸ್ಪಷ್ಟವಾಗಿದೆಯೇ? ಅದು ಏಕವ್ಯಕ್ತಿಯ ಸರ್ವಾಧಿಕಾರಿ ಧೋರಣೆಯನ್ನು ಜನರ ಮನಸ್ಸಿನ ಆಳದಲ್ಲಿ (ಸರ್ವಾಧಿಕಾರಿ ವಿರುದ್ಧ ಎಂದು ಹೇಳಿಕೊಳ್ಳುತ್ತಲೇ) ಟೂಲ್ ಆಗಿ ಬಳಕೆಯಾಗಬಹುದೇ? ಮಹಿಳೆಯನ್ನು ರಸ್ತೆಯಲ್ಲಿ ಛೇಡಿಸುವುದನ್ನು, ಬೆದರಿಸುವುದನ್ನು ಅತಿಯಾದ ಸ್ಟೈಲಿಶ್ ದೃಶ್ಯಗಳ ಮೂಲಕ ಹೆಣೆಯುವುದರಿಂದ ಅದು ವೀಕ್ಷಕರ ಮೇಲೆ ಯಾವ ಪರಿಣಾಮ ಬೀರಬಹುದು; ಬಿಡಿ ದೃಶ್ಯಗಳನ್ನು ಹೊರತುಪಡಿಸಿದರೂ ಒಟ್ಟಾರೆಯಾಗಿ ಸಿನಿಮಾ ಧ್ವನಿಸುವ ಸಂಗತಿಗಳಲ್ಲಿ ಸಮಸ್ಯೆ ಇರಬಹುದೇ? – ಇಂತಹ ಚರ್ಚೆಗಳು ವಿರಳಾತಿವಿರಳ ಆಗಿಹೋದವು. ಆರ್‌ಆರ್‌ಆರ್, ಕೆಜಿಎಫ್, ಪುಷ್ಪಾ ಅಂತಹ ಸಿನಿಮಾಗಳು ಪ್ರತಿನಿಧಿಸುತ್ತಿರುವ ಅತಿಯಾದ ಹೀರೋಯಿಸಂ, ಮಹಿಳಾ ಪಾತ್ರಗಳನ್ನು ನಡೆಸಿಕೊಳ್ಳುವ ರೀತಿ, ಸೆಕ್ಸಿಸಂ, ಏಕವ್ಯಕ್ತಿ ’ಸರ್ವಶಕ್ತ’ನಾಗುವ ಸಂಕೇತಗಳು ಜಪ್ರಿಯ ಸಿನಿಮಾಗಳಲ್ಲಿ ಹೇರಳವಾಗುತ್ತಿರುವ ಸಮಯದಲ್ಲಿ ಅವುಗಳನ್ನು ವಿಮರ್ಶಿಸುವ ಬರಹಗಳು ಹೆಚ್ಚಿರಬೇಕಿತ್ತು. ಆದರೆ ಆ ಜಾಗದಲ್ಲಿ ಈಗ ಕೋಟಿ ಕ್ಲಬ್‌ಗಳ ಸಂಭ್ರಮಾಚರಣೆ ಮಾಡುವ ಮೂಲಕ ಪತ್ರಿಕಾ ಲೋಕ ಮೈಮರೆತಿದೆ.

ತೆಲಂಗಾಣದಲ್ಲಿ 2019ರಲ್ಲಿ ನಡೆದ ಒಂದು ಅತ್ಯಾಚಾರ ಮತ್ತು ಕೊಲೆಯ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಸುಪ್ರೀಂ ಕೋರ್ಟ್ ನೇಮಿಸಿದ್ದ ಆಯೋಗ, ಅದು ನಕಲಿ ಎನ್‌ಕೌಂಟರ್ ಎಂದು ಬಗೆದು ಪೊಲೀಸರ ವಿರುದ್ಧ ಕೊಲೆ ಪ್ರಕರಣಗಳನ್ನು ದಾಖಲಿಸಲು ಶಿಫಾರಸ್ಸು ಮಾಡಿದೆ. ಭಾರತೀಯ ಸಿನಿಮಾಗಳು ಪೊಲೀಸರನ್ನು, ಪೊಲೀಸ್ ನಡತೆಯನ್ನು ವಿಜೃಂಭಿಸಿ ಬಿಂಬಿಸಿದ್ದೇ ಹೆಚ್ಚು. ಹಾಗೆಯೇ ಮಹಿಳೆಯರ ಜೊತೆಗೆ ವರ್ತಿಸುವ ಅನುಚಿತತೆಯನ್ನು ನಾರ್ಮಲೈಸ್ ಮಾಡಿದ್ದು ಕೂಡ ಇದೇ ಮುಖ್ಯವಾಹಿನಿ ಜನಪ್ರಿಯ ಸಿನಿಮಾಗಳು. ಜನಪ್ರಿಯ ಸಿನಿಮಾಗಳ ಪ್ರಭಾವ ಸಮಾಜದ ಮೇಲೆ ಗಾಢವಾಗಿ ಬೀರಿರುವ ಬಗ್ಗೆ ಗಂಭೀರ ಅಧ್ಯಯನಗಳಾಗಬೇಕಿದ್ದರೂ, ಅಂತಹ ಸಿನಿಮಾಗಳನ್ನು ವಿಮರ್ಶಿಸಿ-ಪ್ರಶ್ನಿಸಿ ತಿಳಿವಳಿಕೆ ಮೂಡಿಸಬೇಕಿದ್ದ ವಿಮರ್ಶಾಲೋಕ ದನಿಯಿಲ್ಲದ ಗುಂಪಾಗಿ ಉಳಿದುಹೋಯಿತು. 2019ರ ನಕಲಿ ಎನ್‌ಕೌಂಟರ್ ಒಳಗೊಂಡಂತೆ ಅಂತಹ ಹಲವು ಎನ್‌ಕೌಂಟರ್‌ಗಳನ್ನು ವಿವೇಚನೆಯಿಲ್ಲದೆ ಜನಸಾಮಾನ್ಯರು ಸಂಭ್ರಮಿಸಿದ್ದಿದೆ. ಇಂತಹುದರ ವಿರುದ್ಧವಾಗಿ ವಿವೇಕ ಮೂಡಿಸಲು, ಸಾಹಿತ್ಯ-ಸಿನಿಮಾಗಳು ತಮ್ಮ ಮಾಧ್ಯಮದ ಮೂಲಕ ಮುಂದಾಗಬೇಕು. ಭಾರತದ ಜನಪ್ರಿಯ ಸಿನಿಮಾಗಳು ಸೆನ್ಸೇಶನಲೈಸ್ ಮಾಡುವುದರಲ್ಲಿ ಮುಳುಗಿರುವಾಗ, ಅವುಗಳ ಹೊಗಳುಭಟ್ಟರಾಗಿ ವಿಮರ್ಶಕರು ಬದಲಾಗಿದ್ದಾರೆ. ಜನಪ್ರಿಯ ಸಿನಿಮಾಗಳನ್ನು ಚಿಕಿತ್ಸಕ ದೃಷ್ಟಿಯಲ್ಲಿ ವಿಮರ್ಶಿಸುವ ಬರಹಗಳು ಹೆಚ್ಚಬೇಕಿದೆ ಎಂಬ ಕೂಗು ಇನ್ನಷ್ಟು ಗಟ್ಟಿಯಾಗಬೇಕಿದೆ.


ಇದನ್ನೂ ಓದಿ: Film Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...