Homeಮುಖಪುಟನಟಿ ಸಂಜನಾರಿಗೆ ಅಶ್ಲೀಲ ಮೆಸೇಜ್‌‌: ಆ್ಯಡಂ ಬಿದ್ದಪ್ಪ ಅರೆಸ್ಟ್‌

ನಟಿ ಸಂಜನಾರಿಗೆ ಅಶ್ಲೀಲ ಮೆಸೇಜ್‌‌: ಆ್ಯಡಂ ಬಿದ್ದಪ್ಪ ಅರೆಸ್ಟ್‌

- Advertisement -
- Advertisement -

ಬೆಂಗಳೂರು: ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಬಿದ್ದಪ್ಪ ವಿರುದ್ಧ ಬಹುಭಾಷಾ ನಟಿ ಸಂಜನಾ ಗಲ್ರಾನಿಯವರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಕೊಡಗಿನ ಆಡಂ ಬಿದ್ದಪ್ಪನನ್ನು ಬಂಧಿಸಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪೂರ್ವ ಪೊಲೀಸ್ ಉಪ ಆಯುಕ್ತ ಭೀಮಾಶಂಕರ್ ಎಸ್.ಗುಳೇದ್, ”ಆ್ಯಡಂನಿಂದ ಅಶ್ಲೀಲ ಸಂದೇಶಗಳು ಬರುತ್ತಿರುವುದಾಗಿ ಮಹಿಳೆಯೊಬ್ಬರು ದೂರು ನೀಡಿದ್ದರು. ಹೀಗಾಗಿ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ ಪ್ರಕರಣ ದಾಖಲಾಗಿದೆ” ಎಂದು ತಿಳಿಸಿದ್ದಾರೆ.

ಆಶ್ಲೀಲ ಮೆಸೇಜ್‌ಗಳು ಬರುತ್ತಿರುವ ಕುರಿತು ನಟಿ ಸಂಜನಾ ಗಲ್ರಾನಿಯವರು ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದರು.

 ಸಂಜನಾ ಅವರ ಪತ್ರಿಕಾ ಹೇಳಿಕೆ

ನಮಸ್ಕಾರ, ನನಗೆ ಸುಮಾರು ಜನ ಮಾಧ್ಯಮ ಮಿತ್ರರು ಕರೆ ಮಾಡುತ್ತಿದ್ದೀರಿ.. ಕ್ಷಮೆ ಇರಲಿ.. ನಾನು ಯಾವುದೇ ಅಗ್ಗದ ಪ್ರಚಾರ ಅಥವಾ ಬೇಡದ ವಿಚಾರಕ್ಕೆ ಸುದ್ದಿ ಆಗಲು ಬಯಸುವುದಿಲ್ಲ..”

“ನಾನು ನನ್ನ ಕುಟುಂಬ ಸದ್ಯ ಈ ಪ್ರಕರಣದಿಂದ ವಿಚಲಿತರಾಗಿದ್ದೇವೆ. ವಿವಿಐಪಿ ಒಬ್ಬರ ಪುತ್ರ ನನಗೆ ಕಳೆದ ಶುಕ್ರವಾರ ಮಾರ್ಚ್ 25ರ ರಾತ್ರಿ 11 ಗಂಟೆ ಸುಮಾರಿಗೆ ವಾಟ್ಸ್ ಆ್ಯಪ್ ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದಾನೆ.”

“ಆ ವ್ಯಕ್ತಿಯ ವಿರುದ್ಧ ನಾವು ಈಗಾಗಲೇ ಕಾನೂನು ರೀತಿಯ ಕ್ರಮಕ್ಕೆ ಮುಂದಾಗಿದ್ದೇವೆ. ನನಗೆ ಕಳಿಸಿದ್ದ ಸಂದೇಶವು ಅಸಹ್ಯ, ಅಶ್ಲೀಲಕರವಾಗಿತ್ತು. ಅದನ್ನು ನಾನು ಹೇಳಲು ಸಾಧ್ಯವಿಲ್ಲ. ಕಳೆದ ಒಂದು ವಾರದಿಂದ ಈ ರೀತಿಯ ಸಂದೇಶದಿಂದ ನಾನು ಭಾರೀ ನೊಂದಿದ್ದೇನೆ.‌ ಹಾಗೂ ನನಗೆ ಇಂತಹ ಪ್ರಕರಣಗಳಿಂದ ವ್ಯತಿರಿಕ್ತ ಪರಿಣಾಮವಾಗದಿರಲಿ ಎಂಬ ಕಾರಣಕ್ಕೆ ದೂರ ಉಳಿದಿದ್ದೇನೆ. ಜೀವನದಲ್ಲಿ ಅನೇಕ ಏರಿಳಿತಗಳನ್ನು ನೋಡಿದ್ದೇನೆ.”

“ಕಳೆದ ಎರಡು ವರ್ಷಗಳಿಂದ ನಾನು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇನೆ. ನನ್ನ ಪ್ರಾಮಾಣಿಕ, ಆಧ್ಯಾತ್ಮಿಕ ಪ್ರಯತ್ನದಿಂದ ನನ್ನ ಕುಟುಂಬದ ಸಹಕಾರದೊಂದಿಗೆ ಜೀವನ ಸಾಗುತ್ತಿದೆ.”

“ನನಗೆ ಅಶ್ಲೀಲ ಸಂದೇಶ ಕಳಿಸಿರುವ ವಿವಿಐಪಿ ಪುತ್ರನ ವಿರುದ್ಧ ನನಗೆ ಆಕ್ರೋಶವಿದೆ. ಅವರ ತಂದೆಯನ್ನು ನಾನು ಗೌರವಿಸುತ್ತೇನೆ. ನನಗೆ ಈ ಯುವಕನ ವರ್ತನೆಯಿಂದಾಗಿ ಬೇಸರವಾಗಿದೆ. ಅನಿವಾರ್ಯವಾಗಿ ಆತನ ವಿರುದ್ಧ ದೂರು ಕೊಡುತ್ತಿದ್ದೇನೆ.”

“ಯೂಟ್ಯೂಬ್, ಫೇಸ್ಬುಕ್, ಟ್ವಿಟ್ಟರ್, ವಾಟ್ಸ್ ಆ್ಯಪ್, ಇನ್ಸ್ಟಾಗ್ರಾಮ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳಿಸುವುದು ಕಾನೂನಿನ ಪ್ರಕಾರ ಅಪರಾಧ. section 66 ಪ್ರಕಾರ ಇದಕ್ಕೆ 3 ವರ್ಷಗಳ ಕಾಲ ಜಾಮೀನು ರಹಿತ ಕಾರಾಗೃಹ ಶಿಕ್ಷೆಗೆ ಒಳಪಡಿಸಲಾಗುತ್ತದೆ. 354ರ ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ.”

“ಇನ್ನೂ ನಾನು ಪೋಷಕರಲ್ಲಿ ಮನವಿ ಮಾಡುವುದು ಏನೆಂದರೆ ನಿಮ್ಮ ಮಕ್ಕಳ ಅಂತರ್ಜಾಲ ಬಳಕೆ ಕಡೆ ಗಮನವಿಡಿ. ಯಾಕೆಂದರೆ ನಮ್ಮ ಸೈಬರ್ ಕ್ರೈಂ ವಿಭಾಗದಲ್ಲಿ ಪೊಲೀಸರು ಕ್ಷಣಮಾತ್ರದಲ್ಲಿ ನಿಮ್ಮ ಹೆಡೆಮುರಿ ಕಟ್ಟುತ್ತಾರೆ. ಹೀಗಾಗಿ ಇಂತಹ ಅಶ್ಲೀಲಕರವಾದ ಚಟುವಟಿಕೆಗಳಿಂದ ದೂರು ಇರಿ.”

ಕರ್ನಾಟಕ ಪೊಲೀಸರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಈ ಪ್ರಕರಣದಲ್ಲಿ ಪೊಲೀಸರು ನಮಗೆ ನ್ಯಾಯ ಕೊಡಿಸಿದ್ದಾರೆ.

– ಸಂಜನಾ ಗಲ್ರಾನಿ, ಬಹುಭಾಷಾ ನಟಿ


ಇದನ್ನೂ ಓದಿರಿ: ನಿಮ್ಮಿಂದಾಗಿ ನಾನು ನೇಣು ಹಾಕಿಕೊಳ್ಬೇಕಾ? ಸುವರ್ಣ ಟಿ.ವಿ. ವಿರುದ್ಧ ನಟಿ ಸಂಜನಾ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...