ಗೃಹ ಸಚಿವಾಲಯದ ಅಧಿಕೃತ ಫೇಸ್‌ಬುಕ್ ಖಾತೆಯಿಂದ ಮದ್ಯ ಬಾಟಲಿಗಳ ಚಿತ್ರ ಪೋಸ್ಟ್ ಮಾಡಿ, ತಕ್ಷಣವೇ ಅದನ್ನು ಡಿಲೀಟ್ ಆಗಿದೆ. ಅಷ್ಟರಲ್ಲಿ ಅದರ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟ್ಟರ್‌ನಲ್ಲಿ ಟ್ರೋಲ್ ಆರಂಭವಾಗಿದೆ.
ಎರಡು ವಿಸ್ಕಿ ಬಾಟಲಿಗಳು ಮತ್ತು ಚಿಪ್ಸ್‌ಗಳಿರುವ (ಕುಡಿಯುವ ಮೇಜಿನ ಮೇಲಿವೆ) ಚಿತ್ರವನ್ನು ಪಶ್ಚಿಮ ಬಂಗಾಳದಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಎರಡು ಚಿತ್ರಗಳ ಜೊತೆ ಸೇರಿ ಫೇಸ್‌ಬುಕ್‌ನಲ್ಲಿ ಇಂದು ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಪೋಸ್ಟ್ ಮಾಡಲಾಗಿದೆ. ಸುಮಾರು 30 ನಿಮಿಷಗಳ ನಂತರ ಅದನ್ನು ಡಿಲೀಟ್ ಮಾಡಲಾಗಿದೆ.
ನಂತರ ಗೃಹ ಸಚಿವಾಲಯವು ಈ ಕೃತ್ಯಕ್ಕಾಗಿ ಕ್ಷಮೆ ಕೇಳಿದೆ. ಸಾಮಾಜಿಕ ಜಾಲತಾಣ ನಿರ್ವಹಿಸುವ ವ್ಯಕ್ತಿಯು ತನ್ನ ವಯಕ್ತಿಕ ಫೋಟೊಗಳನ್ನು ಗೃಹ ಸಚಿವಾಲಯಕ್ಕೆ ಸಂಬಂಧಿಸಿದ ಫೋಟೊಗಳ ಜೊತೆಗೆ ಗೊತ್ತಿಲ್ಲದೇ ಪೋಸ್ಟ್ ಮಾಡಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದೆ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಗೃಹ ಸಚಿವಾಲಯದ ಮೇಲೆ ಟ್ರೋಲ್‌ಗಳ ಸುರಿಮಳೆಯಾಗಿದೆ. ಬಹಳಷ್ಟು ಜನ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
Who's handling Ministry of Home Affairs Facebook page? Post deleted. pic.twitter.com/3jlr9OjZRt
— Mohammed Zubair (@zoo_bear) May 28, 2020
ಅವಘಡಕ್ಕಾಗಿ ಕ್ಷಮೆಯಾಚಿಸಿದ್ದಾಕಿ, ಸಾರಿ ಏನೂ ಬೇಕಾಗಿಲ್ಲ. ಆಲ್ಕೋಹಾಲ್ ನಮ್ಮ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿದೆ, ಇರಲಿ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.
ಬಂಗಾಳದಲ್ಲಿ ಸೈಕ್ಲೋನ್‌ನಿಂದಾಗಿ ಕುಸಿತ ಕಂಡ ಆರ್ಥಿಕತೆಯನ್ನು ಮೇಲೆತ್ತಲು ಗೃಹ ಸಚಿವಾಲಯ ಜಾಹೀರಾತು ನೀಡುತ್ತಿದೆ ಎಂದು ಕೆಲವರು ಕಿಚಾಯಿಸಿದ್ದಾರೆ.


