Homeಮುಖಪುಟನಾವೇನು ಪ್ರಾಣಿಗಳೆ? : ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಪ್ರತಿಭಟನೆ

ನಾವೇನು ಪ್ರಾಣಿಗಳೆ? : ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಪ್ರತಿಭಟನೆ

ಈ ಮೊದಲು ಆಗ್ರಾದ ಆಸ್ಪತ್ರೆಯಲ್ಲಿಯೂ ಕೂಡ ಕೊರೊನಾ ಸೋಂಕಿತರ ಬಸ್‌ ಅನ್ನು ಹೊರಗೆ ನಿಲ್ಲಿಸಿ, ದಾಖಲು ಮಾಡಿಕೊಳ್ಳದೇ ಗಂಟೆಗಟ್ಟಲೇ ಗೇಟಿನಿಂದ ಆಚೆ ಕಾಯಿಸಿದ್ದ ಘಟನೆ ಜರುಗಿತ್ತು.

- Advertisement -
- Advertisement -

ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ಸರ್ಕಾರ ಆಸ್ಪತ್ರೆಯ ಎದುರಿಗೆ ಹಲವಾರು ಕೊರೊನಾ ಸೋಂಕಿತರ ಗುಂಪು ಒಟ್ಟುಗೂಡಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪ್ರಯಾಗ್‌ರಾಜ್‌ನ ಕೋಟಾ ಬನಿ ಕ್ಯಾಟಗರಿ ಎಲ್ ಕೋವಿಡ್‌-19 ಆಸ್ಪತ್ರೆಯಲ್ಲಿ ಈ ಘಟನೆ ಜರುಗಿದ್ದು, ನಾವು ಪ್ರಾಣಿಗಳೆ ಎಂದು ಕೊರೊನಾ ಸೋಂಕಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಗುರುವಾರ ಸತತ ಎರಡು ಗಂಟೆಗಳಾದರೂ ಆಸ್ಪತ್ರೆಗೆ ನೀರು ಸರಬರಾಜು ಆಗದ ಕಾರಣ ಸಿಟ್ಟಿಗೆದ್ದ ಸೋಂಕಿತರು ಪ್ರತಿಭಟನೆ ನಡೆಸಿದ್ದಾರೆ.

ಆಸ್ಪತ್ರೆಯ ಅಧಿಕಾರಿಗಳು ಸೋಂಕಿತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಸೋಂಕಿತರು ನಾವೇನು ಪ್ರಾಣಿಗಳೆ? ನಮಗೆ ಆಹಾರ ನೀರು ಬೇಡವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್‌ ವಿಡಿಯೋದಲ್ಲಿ ವಿಡಿಯೋ ಮಾಡಿದವರು ಅಲ್ಲಿನ ಸೋಂಕಿತರನ್ನು, ಆಸ್ಪತ್ರೆಯ ಪ್ರವೇಶದ್ವಾರವನ್ನು ಮತ್ತು ನಾಮಫಲಕವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಆತ ನಿಮಗೆ ಸಮರ್ಪಕವಾಗಿ ಆಹಾರ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಎಲ್ಲಾ ಸೋಂಕಿತರು ಇಲ್ಲ, ಇಲ್ಲ ಎಂದು ಉತ್ತರಿಸಿದ್ದಾರೆ. ಅರ್ಧ ಬೇಯಿಸಿದ ಆಹಾರಗಳನ್ನು ನೀಡುತ್ತಿದ್ದಾರೆ ಎಂದು ಹಿರಿಯ ವ್ಯಕ್ತಿಯೊಬ್ಬರು ದೂರಿದ್ದಾರೆ.

ಹಲವಾರು ವ್ಯಕ್ತಿಗಳು ಉತ್ತಮ ಆಹಾರಕ್ಕಾಗಿ ಅಲ್ಲಿನ ಅಧಿಕಾರಿಗಳಿಗೆ ಹಣ ನೀಡಿರುವುದಾಗಿ ತಿಳಿಸಿದ್ದಾರೆ. ಬೇಕಾದರೆ ಹಣ ತೆಗೆದುಕೊಳ್ಳಿ, ಆದರೆ ಇಂತಹ ಅಸಹ್ಯ ಪರಿಸ್ಥಿತಿಯಿಂದ ನಮ್ಮನ್ನು ಬಿಡುಗಡೆಗೊಳಿಸಿ. ನಾವು ನಮ್ಮ ಮನೆಗಳಿಗೆ ಹೋಗುತ್ತೇವೆ ಎಂದು ಮಹಿಳೆಯೊಬ್ಬರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತ ಪ್ರಯಾಗ್‌ರಾಜ್‌ನ ಮುಖ್ಯ ಆರೋಗ್ಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಇಲ್ಲಿ ಯಾವಾಗಲೂ ನೀರು ಇರುತ್ತದೆ. ಇಂದು ಕೇವಲ ಎರಡು ಗಂಟೆಗಳ ಕಾಲ ಶುದ್ದ ನೀರು ಸರಬರಾಜು ಆಗಲು ವಿಳಂಬವಾಗಿದ್ದಕ್ಕೆ ಈ ಘಟನೆ ಜರುಗಿದೆ. ವಿದ್ಯುತ್‌ ಸಮಸ್ಯೆಯಿಂದಾಗಿ ನಾವು ಶುದ್ಧ ನೀರು ಸರಬರಾಜು ಮಾಡುವುದು ತಡವಾಯಿತು. ಕೂಡಲೇ ಮೆಕಾನಿಕ್‌ ಕರೆಸಿ ವಿದ್ಯುತ್‌ ಸಮಸ್ಯೆ ಸರಿಪಡಿಸಿ ನೀರಿನ ವ್ಯವಸ್ಥೆ ಮಾಡಿದೆವು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರನ್ನು ಸಮರ್ಪಕವಾಗಿ ನಡೆಸಿಕೊಳ್ಳುತ್ತಿಲ್ಲ ಎಂಬುದಕ್ಕೆ ಇದು ಎರಡನೆಯ ಉದಾಹರಣೆಯಾಗಿದೆ. ಈ ಮೊದಲು ಆಗ್ರಾದ ಆಸ್ಪತ್ರೆಯಲ್ಲಿಯೂ ಕೂಡ ಕೊರೊನಾ ಸೋಂಕಿತರ ಬಸ್‌ ಅನ್ನು ಹೊರಗೆ ನಿಲ್ಲಿಸಿ, ದಾಖಲು ಮಾಡಿಕೊಳ್ಳದೇ ಗಂಟೆಗಟ್ಟಲೇ ಗೇಟಿನಿಂದ ಆಚೆ ಕಾಯಿಸಿದ್ದ ಘಟನೆ ಜರುಗಿತ್ತು.


ಇದನ್ನೂ ಓದಿ: ಉತ್ತರ ಪ್ರದೇಶ ಆಸ್ಪತ್ರೆಯ ಹೊರಗೆ ಫುಟ್‌ಪಾತ್‌ನಲ್ಲಿ ಗಂಟೆಗಟ್ಟಲೆ ಕಾದ 69 ಕೊರೊನಾ ಸೋಂಕಿತರು 


ಇನ್ನು ಕಳೆದ ವಾರ ಉತ್ತರ ಪ್ರದೇಶ ಸರ್ಕಾರವು ಕೋವಿಡ್‌ -19 ಐಸೋಲೇಸನ್‌ ಲೆವಲ್‌2 ಮತ್ತು ಲೆವೆಲ್‌ 3 ವಾರ್ಡ್‌‌ಗಳಲ್ಲಿ ಮೊಬೈಲ್‌ ಬಳಕೆ ನಿಷೇಧಿಸುವಂತೆ ಆದೇಶ ಹೊರಡಿಸಿತ್ತು. ಆದರೆ ತೀವ್ರ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಆ ಆದೇಶವನ್ನು ಹಿಂಪಡೆದಿತ್ತು.


ಇದನ್ನೂ ಓದಿ: ಆಸ್ಪತ್ರೆಯ ಎದುರಲ್ಲೇ ಕುಸಿದು ಬಿದ್ದರೂ 25 ನಿಮಿಷಗಳವರೆಗೂ ಬಿಸಿಲಲ್ಲಿ ಬಳಲಿದ ಆರೋಗ್ಯ ಕಾರ್ಯಕರ್ತ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...