Homeಕರ್ನಾಟಕಡಾ.ಕೆ.ಸುಧಾಕರ್‌ಗೆ ಬಿಜೆಪಿ ಟಿಕೆಟ್‌ ನೀಡಿರುವುದು ಪ್ರಜಾಪ್ರಭುತ್ವದ ಸಾವಿಗೆ ಮುನ್ನಡಿ: ಪ್ರದೀಪ್ ಈಶ್ವರ್ ವಾಗ್ದಾಳಿ

ಡಾ.ಕೆ.ಸುಧಾಕರ್‌ಗೆ ಬಿಜೆಪಿ ಟಿಕೆಟ್‌ ನೀಡಿರುವುದು ಪ್ರಜಾಪ್ರಭುತ್ವದ ಸಾವಿಗೆ ಮುನ್ನಡಿ: ಪ್ರದೀಪ್ ಈಶ್ವರ್ ವಾಗ್ದಾಳಿ

- Advertisement -
- Advertisement -

ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ. ಕೆ.ಸುಧಾಕರ್ ಅವರಿಗೆ ಬಿಜೆಪಿಯವರು ಲೋಕಸಭೆ ಟಿಕೆಟ್ ನೀಡಿದ್ದಾರೆ. ಪ್ರಜಾಪ್ರಭುತ್ವದ ಸಾವಿಗೆ ಈ ಟಿಕೆಟ್ ನೀಡಿರುವುದು ಮುನ್ನಡಿಯಾಗಿದೆ. ಕೋರೊನಾ ಸಮಯದಲ್ಲಿ 2200 ಕೋಟಿ ಹಗರಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. 40 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ ಆರೋಪ ಮಾಡಿದ್ದಾರೆ. ಆದರೂ ಬಿಜೆಪಿ ಅವರಿಗೆ ಟಿಕೆಟ್ ನೀಡಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಒಬ್ಬ ಸಾಮಾನ್ಯ ವ್ಯಕ್ತಿ ಮೇಲೆ ಸೋತ ವ್ಯಕ್ತಿಗೆ, ಟ್ಯೂಷನ್ ಟೀಚರ್ ವಿರುದ್ಧ ಸೋತ ವ್ಯಕ್ತಿಗೆ ಏಕೆ ಟಿಕೆಟ್ ನೀಡಿದರು ಎನ್ನುವುದೇ ಆಶ್ವರ್ಯ. ರಾಜ್ಯದ ಕೆಲವು ಬಿಜೆಪಿ ನಾಯಕರಿಗೆ ಸಹಾಯ ಮಾಡಿರುವ ಕಾರಣ ಟಿಕೆಟ್ ದೊರೆತಿದೆ. ಹಿರಿಯ ನಾಯಕರಿಗೆ ಸೂರ್ಯ ನಮಸ್ಕಾರ, ಶವಾಸನ, ಕಪಾಲಿಪಾತಿ, ಧೀರ್ಘ ದಂಡ ನಮಸ್ಕಾರ ಈ ರೀತಿಯ ಸೇವೆಯನ್ನು ಮಾಡಿರುವ ಕಾರಣ ಟಿಕೆಟ್ ಸಿಕ್ಕಿರಬಹುದು ಎಂದು ಹೇಳಿದ್ದಾರೆ.

ಸಾಮಾನ್ಯ ಮನುಷ್ಯನಾದ ನಾನು ನನ್ನ ಎಲ್ಲಾ ವ್ಯವಹಾರ, ಗಳಿಕೆ, ಖರ್ಚು ಸೇರಿದಂತೆ ನನ್ನ ಸಂಪೂರ್ಣ ಆದಾಯದ ಬಗ್ಗೆ ನಾಳೆಯೇ ಲೆಕ್ಕ ನೀಡಲು ಸಿದ್ದನಿದ್ದೇನೆ. ನೀವು ನನ್ನ ಮೇಲೆ ಐಟಿ, ಇಡಿ ಬಿಡುವ ಪ್ರಮೇಯವೇ ಬೇಡ. ನೀವು ಪ್ರಾಮಾಣಿಕರಾಗಿದ್ದರೆ ನಿಮ್ಮ ಆದಾಯದ ಮೂಲವನ್ನು ಘೋಷಣೆ ಮಾಡುತ್ತೀರಾ. ನಿಮಗೆ ಆ ಧೈರ್ಯ ಇದೆಯೇ? ಸಂಸತ್ತು ಘನತೆಯನ್ನು ಹೊಂದಿರುವ ಸ್ಥಳ, ಅಲ್ಲಿಗೆ ನಿಮ್ಮನ್ನು ನಾವು ಹೋಗಲು ಬಿಡುವುದಿಲ್ಲ. ಇಡೀ ಕೇಂದ್ರ ಸರ್ಕಾರವೇ ಬಂದು ನಿಂತುಕೊಂಡರೂ ಸುಧಾಕರ್ ಅವರು ಸಂಸತ್ತಿನ ಮೆಟ್ಟಿಲನ್ನು ತುಳಿಯಲು ಬಿಡುವುದಿಲ್ಲ. ಇದು ಆಕ್ರೋಶದ ಮಾತಲ್ಲ ಮಧ್ಯಮ ವರ್ಗದ ಹುಡುಗನೊಬ್ಬನ ಮಾತು. ಸಾರ್ವಜನಿಕ ಜೀವನದಲ್ಲಿ ನಿಮ್ಮನ್ನು ನೂರಾರು ಜನ ತೆಗಳುತ್ತಾರೆ, ಹೊಗಳುತ್ತಾರೆ ಆದನ್ನು ಸ್ವೀಕರಿಸುವ ಮನೋಭಾವ ಇರಬೇಕು. ನನಗೂ ಸಹ ಅನೇಕ ಜನ ಕೆಟ್ಟದಾಗಿ ಬೈಯ್ಯುತ್ತಾರೆ. ಆದರೆ ನಾನು ಅದನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುತ್ತೇನೆ. ನನ್ನ ಮೇಲೆ 22 ಪ್ರಕರಣ ದಾಖಲಿಸಿದರು. 10 ಸಾವಿರ ಜನ ಬಂದು ನನ್ನನ್ನು ಬಿಡುಗಡೆ ಮಾಡಿಸಿದರು. ನನ್ನ ಮೇಲೆ ಇಲ್ಲ ಸಲ್ಲದ ಕೇಸ್ಗಳನ್ನು ಹಾಕಿಸಿದರು. ನಾನು ಜೈಲಿನಲ್ಲೇ ಉಪವಾಸ ಸತ್ಯಾಗ್ರಹ ಮಾಡಿ ಬೇಲ್ ದೊರೆಯುವಂತೆ ಮಾಡಿಕೊಳ್ಳುತ್ತೇನೆ. ಕಾನೂನನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ ವ್ಯಕ್ತಿ ಅಚಾನಕ್ ಆಗಿ ಗೆದ್ದರೆ ಎಂದು ಸಾಂದರ್ಬಿಕವಾಗಿ ಹೇಳುತ್ತಿದ್ದೇನೆ. ಈ ವ್ಯಕ್ತಿ ಗೆಲ್ಲಲ್ಲ, ಗೆಲ್ಲಬಾರದು ಎಂದು ಹೇಳಿದ್ದಾರೆ.

ಸುಧಾಕರ್ ಅವರು ಗೆದ್ದರೆ ಕೇಂದ್ರದ ಬಿಜೆಪಿಯ ಮಂತ್ರಿಗಳಿಗೂ ಇವರು ಒಂದಷ್ಟು ಆಸನಗಳನ್ನು ಕಲಿಸುತ್ತಾರೆ. ಒಂದಷ್ಟು ಜನರ ಆತ್ಮ ಸಂತೋಷ, ಆತ್ಮ ತೃಪ್ತಿಗೆ ಕೆಲಸ ಮಾಡುತ್ತಾರೆ. ಇದಾದ ನಂತರ ರಾಜ್ಯದಲ್ಲಿ ವಿಜಯೇಂದ್ರ ಸೇರಿದಂತೆ ಯಾರೂ ಇರುವುದಿಲ್ಲ. ಸುಧಾಕರ್ ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅದಕ್ಕೆ ನಾನು ಹೇಳಿದೆ ಮಾನ ಇದ್ದವರು ನಷ್ಟವಾಗಿದೆ ಎಂದು ಕೇಸ್ ಹಾಕಬೇಕು ಇವರು ಏಕೆ ಹಾಕಿದರು? ಅವರಿಗೆ ಮಾನ ಇದೆ ಎಂದು ಸಾಬೀತು ಮಾಡಲಿ ನಾನು ಹೇಳಿದಂತೆ ಕೇಳುತ್ತೇನೆ.

ಕೆ. ಸುಧಾಕರ್ ವಿಚಿತ್ರವಾದ ರಾಜಕಾರಣಿ. ಬಿಜೆಪಿಯ ಕೆಲವು ನಾಯಕರು ಹೇಳಿದರು ಸುಧಾಕರ್ ತುಂಬಾ ಕ್ರಿಮಿನಲ್ ಮನುಷ್ಯ ನಿನ್ನ ಅವನು ಬಿಡುವುದಿಲ್ಲ ಎಂದು, ಆದರೆ ನಾನೇ ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದೇನೆ. ಸುಧಾಕರ್ ಅವರು ಮಾಡಿದ ಭ್ರಷ್ಟಾಚಾರದ ವಿರುದ್ದ ನನ್ನ ಹೋರಾಟ. ಒಂದೇ ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳದ ವ್ಯಕ್ತಿ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಭಾಗದ ಯುವಕರು, ಜನತೆ ನನ್ನ ಮಾತನ್ನು ಗಮನವಿಟ್ಟು ಕೇಳಬೇಕು. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡಿದರು ನೀವು ಬೆಂಬಲ ನೀಡಬೇಕು. ಸುಧಾಕರ್ ಗೆದ್ದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಆತ ಭ್ರಷ್ಟಾಚಾರಿ ಎಂದು ಅವರ ಪಕ್ಷದ ಯಲಹಂಕ ಶಾಸಕ ವಿಶ್ವನಾಥ್ ಹೇಳಿದ್ದಾರೆ. ಅವರ ಅಹಂಕಾರದ ಬಗ್ಗೆ ಅವರ ಪಕ್ಷದ ಜನರೇ ಮಾತನಾಡುತ್ತಾರೆ. ನೀವು ನನ್ನ ವಿರುದ್ದ ಧೈರ್ಯವಾಗಿ ಮಾತನಾಡಿ ನಾನು ಕೋರ್ಟಿಗೆ ಹೋಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸಹಿಸಿಕೊಳ್ಳುವ ಶಕ್ತಿ ಇದ್ದರೆ ಮಾತ್ರ ರಾಜಕಾರಣಕ್ಕೆ ಬರಬೇಕು. ಮೆಡಿಕಲ್ ಕಾಲೇಜು, ಕ್ರಷರ್ ಸೇರಿದಂತೆ ಅನೇಕ ವಿಚಾರದಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪವಿದೆ. ನೀವು ಸಾರ್ವಜನಿಕ ಚರ್ಚೆಗೆ ಬರುವಿರಾ?ನಾನು 10 ಆಂಬ್ಯುಲೆನ್ಸ್ ಗಳನ್ನು ಉಚಿತವಾಗಿ ಜನರ ಸೇವೆಗೆ ಬಿಟ್ಟಿದ್ದೇನೆ. ತಾವು ಆರೋಗ್ಯ ಸಚಿವರಾಗಿದ್ದವರು ಏನು ಕೆಲಸ ಮಾಡಿದ್ದೀರಾ ಹೇಳಿ? ಉತ್ಸವ ಮಾಡಿ ಎಲ್ಲಾ ಸೂಪರ್ ಸ್ಟಾರ್ಗಳನ್ನು ಕರೆದುಕೊಂಡು ಬಂದಿರಿ, ಆದರೆ ಸಾಮಾನ್ಯ ಹುಡುಗನ ವಿರುದ್ದ ಸೋತು ಹೋದಿರಿ. ಸೆಲೆಬ್ರಿಟಿ ಬಂದರೆ ಮತ ಹಾಕುವ ಕಾಲ ಹೋಯಿತು ಎಂದು ಹೇಳಿದ್ದಾರೆ.

ಸುಧಾಕರ್ ಅವರು ಕುರಿ ಮೇಯಲಿ ಎಂದು ಬಿಟ್ಟಿದ್ದೇನೆ, ಅಲ್ಲಿಯ ತನಕ ನಾವು ಕಡಲೇಕಾಯಿ ತಿನ್ನುತ್ತಾ ಕುಳಿತಿರುತ್ತೇವೆಯೇ? ಕೊರೋನಾ ತನಿಖೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ತನಿಖೆಯಿಂದ ತಪ್ಪಿಸಿಕೊಳ್ಳಲು ಯಾರ, ಯಾರ ಕಾಲಿಗೆ ಬಿದ್ದು ಕಾಪಾಡಿ ಎಂದು ಕೇಳಿಕೊಂಡಿದ್ದೀರಿ ನೆನಪಿದೆಯೇ? ನೀವು ನನಗೆ ತೊಂದರೆ ನೀಡಿದಾಗ ಎದೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಭಾದೆ, ನೋವು, ಕಣ್ಣೀರು ಹೊರಗೆ ಬಂದ ಕಾರಣ ನಾನು ಶಾಸಕನಾದೆ. ಸುಧಾಕರ್ ಕಾಂಗ್ರೆಸ್‌ಗೆ ತೊಂದರೆಯಲ್ಲ, ಬಿಜೆಪಿಗೆ ತೊಂದರೆ, ಇವರು ಕೋವಿಡ್ ಹಗರಣ ಮಾಡಿದ ಕಾರಣ ಬಿಜೆಪಿ ಸೋಲು ಕಂಡಿತು. 40 ರೂಪಾಯಿ ಮಾಸ್ಕ್‌ನ್ನು 400 ರೂಪಾಯಿಗೆ ಬಿಲ್ ಮಾಡಿದ ವ್ಯಕ್ತಿ ಈತ. ಒಂದಲ್ಲ ಒಂದು ದಿನ ನನ್ನ ಮೇಲೆ ಐಟಿ, ಇಡಿ ದಾಳಿ ಮಾಡಿಸುತ್ತೀರಾ ಎಂದು ನನಗೆ ಗೊತ್ತಿದೆ. ಒಂದೇ ಒಂದು ರೂಪಾಯಿ ಲಂಚ ತೆಗೆದುಕೊಂಡಿಲ್ಲ ಎಂದು ಭೋಗನಂದೀಶ್ವರ ದೇವಸ್ಥಾನದಲ್ಲಿ ಆಣೆ ಮಾಡುತ್ತೇನೆ. ಅವರು ಕೊರೋನಾ ಸಮಯದಲ್ಲಿ ಲಂಚ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಲಿ. ಆಗ ನಿಮ್ಮ ವಿರುದ್ದ ಮಾತನಾಡುವುದನ್ನೇ ನಿಲ್ಲಿಸುತ್ತೇನೆ. ಆದಾಯದ ಮೂಲ ಕೇಳಿದರೆ ಎಲ್ಲರಿಗೂ ಬೈಯ್ಯುತ್ತಾರೆ. ಜ್ಯೋತಿಷಿಗಳು ಅವರಿಗೆ ಹೇಳಿದ್ದಾರಂತೆ ಮೂರು ಬಾರಿ ಸೋಲುತ್ತೀರಿ ಎಂದು. ಈಗ ಒಂದು ಬಾರಿ ಮುಂದೆ ನನ್ನ ಮೇಲೆ ಎರಡು ಬಾರಿ ಸೋಲುತ್ತಾರೆ. ಇನ್ನು ಒಂದು ತಿಂಗಳು ನನಗೂ, ಸುಧಾಕರ್ ಅವರಿಗೆ ನಿರಂತರ ಯುದ್ದ ನಡೆಯುತ್ತದೆ. ನಾವು ಚಿಕ್ಕಬಳ್ಳಾಪುರ ಲೋಕಸಭೆಯಲ್ಲಿ ಗೆದ್ದೇ ಗೆಲ್ಲುತ್ತೇವೆ. ಕೆ.ಎಸ್.ಈಶ್ವರಪ್ಪ ಅವರನ್ನು ಬಿಜೆಪಿ ಎಂದಿಗೂ ನಾಯಕ ಎಂದು ಒಪ್ಪಿಕೊಂಡಿಲ್ಲ. ದಯವಿಟ್ಟು ಗೀತಾ ಶಿವರಾಜ್ ಕುಮಾರ್ ಅವರ ಬಗ್ಗೆ ಮಾತನಾಡಬೇಡಿ. ನೀವು ನಾಯಕರಾಗಿದ್ದರೆ ನಿಮಗೆ ಮತ್ತು ಮಗನಿಗೆ ಟಿಕೆಟ್ ತಪ್ಪಿಸುತ್ತಿರಲಿಲ್ಲ. ಇಂಡಿಯಾದಲ್ಲಿ ಇರುವ ಅನೇಕ ಮೂಲಭೂತ ಸೌಕರ್ಯಗಳನ್ನು ತಂದಿದ್ದು ಕಾಂಗ್ರೆಸ್ ಪಕ್ಷ. ಆಸ್ಪತ್ರೆ, ಸರ್ಕಾರಿ ಶಾಲೆ, ರಸ್ತೆ ಎಲ್ಲಾ ತಂದಿದ್ದು ಕಾಂಗ್ರೆಸ್. ಕೇವಲ ತಾರಸಿ ಹಾಕಿ 10 ವರ್ಷದಲ್ಲಿ ನಾವೇ ಮಾಡಿದ್ದೇವೆ ಎಂದು ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿ ಅವರನ್ನು ದುರ್ಗೆ ಎಂದು ಕರೆದಿದ್ದಾರೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಮಲ ಭಾರತ್ ಅಭಿಯಾನ ತಂದರೆ ಬಿಜೆಪಿಯವರು ಅದನ್ನೇ ಸ್ವಚ್ಚ ಭಾರತ್ ಎನ್ನುತ್ತಾರೆ. ಭೇಟಿ ಬಚಾವೋ, ನಗರ ಮನೆ ನಿರ್ಮಾಣ ಯೋಜನೆ, ಜನೌಷಧಿ ಯೋಜನೆ, ಈ- ಆಡಳಿತ ಯೋಜನೆಗಳನ್ನು ಹೆಸರು ಬದಲಾಯಿಸಿ ಜನರ ಮುಂದೆ ತಂದಿದ್ದಾರೆ. 60 ಲಕ್ಷ ಸಣ್ಣ ಕೈಗಾರಿಕೆಗಳನ್ನು ಮುಚ್ಚಿ ಹಾಕಿದ್ದು ಬಿಜೆಪಿ. ಬಿಜೆಪಿಯವರು ಯಾವುದೇ ಚರ್ಚೆಗೆ ಬರುವುದಿಲ್ಲ, ಕಷ್ಟಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಗಾಝಾದಲ್ಲಿ ತಕ್ಷಣ ಕದನ ವಿರಾಮಕ್ಕೆ ಆಗ್ರಹಿಸಿ ವಿಶ್ವ ಸಂಸ್ಥೆಯಲ್ಲಿ ನಿರ್ಣಯ ಅಂಗೀಕಾರ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...